Friday, May 8, 2009


ಪಿಎಂ ಮಾಡಿದ ಕಿತಾಪತಿ..

ಏನಪ್ಪಾ ಗೌಡ ದಿನಾ ಬ್ಲಾಗ್ ಬರೀತಿದ್ದೆ, ಇದ್ದಕಿದ್ದಂತೆ ನಿಲ್ಲಿಸಿಬಿಟ್ಟೆ ನಾವೇನು ಓದಿದದನ್ನೇ ಓದಬೇಕಾ ಅಂತ ಪಿ ಮಂಜುನಾಥ್ ಫೋನ್ ಮಾಡಿ ಕೇಳಿದ,ದೆಹಲಿಯಲ್ಲಿ ನಡೆದ ಮತದಾನ ಕವರ್ ಮಾಡೋದರಲ್ಲಿ ಸ್ವಲ್ಪ ಬ್ಯುಸಿ ಆಗಿದ್ದೆ ಕಣಯ್ಯ ಅಂದೆ, ಬ್ಲಾಗ್ ನಲ್ಲಿ ಏನು ಬರಿಲಿ ಅನ್ನೋ ಗೊಂದಲದಲ್ಲಿರುವಾಗಲೇ ಪಿ.ಮಂಜು ಫೋನ್ ಮಾಡಿದ್ದರಿಂದ ನಾವಿಬ್ಬರು ಹಾಸನದಲ್ಲಿ ಒಂದೇ ಕಾಲದಲ್ಲಿ ವರದಿಗಾರರಾಗಿದ್ದಗಿನ ಘಟನೆಯೊಂದು ನೆನಪಾಯಿತು ಅದನ್ನೇ ಇಲ್ಲಿ ಬರೆದಿದ್ದೇನೆ.ದೇವೇಗೌಡರ ಪುತ್ರ ಕುಮಾರಸ್ವಾಮಿ ಕಾಂಗ್ರೆಸ್ ನ ಸಖ್ಯ ಮುರಿದುಕೊಂಡು ಸಾವಿರ ರಾಜಕೀಯ ಬೆಳವಣಿಗೆ ಮಾಡಿ, ಸ್ವತ ಅಪ್ಪನ ಕೋಪಕ್ಕೆ ಗುರಿಯಾಗಿ ಸರ್ಕಾರ ಮಾಡಿದ್ದರು, ಹಿಂದಿನ ಸರ್ಕಾರದಲ್ಲಿ ಲೋಕೋಪಯೋಗಿ ಸಚಿವರಾಗಿ ವಿರಾಜಮಾನರಾಗಿದ್ದ ಎಚ್ . ಡಿ. ರೇವಣ್ಣ ಅವರು ಅಪ್ಪ ಮೆಚ್ಚಿಕೊಳ್ಳದ ಸರ್ಕಾರದಲ್ಲಿ ಭಾಗಿಯಾಗದೆ ಉಳಿದಿದ್ದರು, ಅಪ್ಪ ಯಾವಾಗಾದ್ರೂ ಒಪ್ಪೇ ಒಪ್ತಾರೆ, ಎಲ್ಲಾ ಸರಿಯಾಗೇ ಆಗುತ್ತೆ, ಯಾವತ್ತಾದ್ರು ರೇವಣ್ಣ ಸರ್ಕಾರದಲ್ಲಿ ಬಂದೆ ಬರ್ತಾರೆ ಅಂತ ಲೋಕೋಪಯೋಗಿ ಮತ್ತು ಇಂಧನ ಇಲಾಖೆಯನ್ನು ಯಾರಿಗೂ ಕೊಡದೆ ಬಾಕಿ ಉಳಿಸಿದ್ದರು.

ಹಾಸನದ ಪತ್ರಕರ್ತರು ರೇವಣ್ಣ ಎದುರು ಸಿಕ್ಕಾಗಲೆಲ್ಲ ಯಾವಾಗ ಮಾತ್ರಿ ಆಗೋದು ಅಧಿಕಾರ ಸ್ವೀಕರಿಸೋದು ಅಂತ ಕೇಳಿ ರೇಗಿಸಲು ಯತ್ನಿಸುತ್ತಿದ್ದರು, ಇಂತ ಸಂದರ್ಭಗಳನ್ನೂ ಅತ್ಯಂತ ಜಾಣತನದಿಂದ ತಪ್ಪಿಸಿಕೊಳ್ಳುವ ರೇವಣ್ಣ ಬನ್ನಿ ಬ್ರದರ್ ಕಾಲ ಬಂದಾಗ ಎಲ್ಲಾ ಆಗುತ್ತೆ, ಈಗ ತಿಂಡಿ ತಿನ್ರಿ ಬ್ರದರ್ ಆಮೇಲೆ ಮಾತಾಡೋಣ ಅಂತ ತಪ್ಪಿಸಿಕೊಳ್ತಾ ಇದ್ರು.
ಈ ಮದ್ಯೆ ಮುನಿಸಿನ ಕಾಲ ಮುಗಿಸಿದ ದೇವೇಗೌಡ ಕುಮಾರಸ್ವಾಮಿ ಸರ್ಕಾರದ ಬಗ್ಗೆ ಮೆಚ್ಚುಗೆ ಮಾತನ್ನು ಆಡಲು ಶುರುಮಾಡಿದರು, ದೇವೇಗೌಡರ ಮೆಚ್ಚುಗೆಯಿಂದ ರಂಗಾದ ರೇವಣ್ಣನಿಗೆ ಪಧವಿ ಮತ್ತೆ ಸಿಕ್ಕಿತು ಆಗ ನಡೆದ ಘಟನೆ ಇದು.

ರೇವಣ್ಣ ಮಂತ್ರಿಯಾಗಿ ಅಧಿಕಾರ ಸ್ವೀಕರಿಸುತ್ತಾರೆ ಅಂತ ನಂಗೆ ಸುದ್ದಿ ಸಿಕ್ಕ ತಕ್ಷಣ ನಾನೊಂದು ಸಣ್ಣ ತಪ್ಪು ಮಾಡಿಬಿಟ್ಟೆ, ನಮ್ಮ ಆಪೀಸಿಗೆ ಕರೆ ಮಾಡಿ ರೇವಣ್ಣ ನಿಗೆ ಮಂತ್ರಿ ಪದವಿ, ಹಾಸನದ್ಲ್ಲಿ ವಿಜಯೋತ್ಸವ ಅಂತ ಸುದ್ದಿ ಕೊಟ್ಟುಬಿಟ್ಟಿದ್ದೆ. ಸ್ವಲ್ಪ ಸಮಯಕ್ಕೆ ಫೋನ್ ಮಾಡಿದ ಡೆಸ್ಕ್ ನವರು ತಕ್ಷಣ ವಿಜಯೋತ್ಸವದ ವಿಶುಯಲ್ಸ್ ಕಳಿಸಿ ಎಂದು ಬಿಟ್ಟರು, ಏನೋ ಅಂದಾಜಿನ ಮೇಲೆ ಸುದ್ದಿಕೊಟ್ಟಿದ್ದ ನನಗೆ ಪೀಕಲಾಟಕ್ಕೆ ಇಟ್ಟುಕೊಂಡಿತು, ಹಾಸನದಲ್ಲಿ ಎಲ್ಲೂ ವಿಜಯೋತ್ಸವ ಇರಲಿಲ್ಲ, ಸಂಭ್ರಮ ಇರಲಿಲ್ಲ. ಈ ನಡುವೆ ಅಚಾನಕ್ ಆಗಿ ನನ್ನ ಕಣ್ಣಿಗೆ ಬಿದ್ದ ರೇವಣ್ಣನ ಪಕ್ಕಾ ಶಿಷ್ಯರಾದ, ಚನ್ನಪಟ್ಟಣ ಶಂಕರ್, ಮತ್ತು ಗಣೇಶ್ ಗೆ ಏನ್ರಪ್ಪಾ ನಿಮ್ಮ ಬಾಸ್ ಗೆ ಅಧಿಕಾರ ಬಂದಿದ್ದನ್ನು ಸಂಭ್ರಮಿಸದೆ ಹೋಟೆಲ್ ನಲ್ಲಿ ತಿನ್ನಕ್ಕೆ ಬಂದಿದ್ದಿರಿ, ರೇವಣ್ಣ ಬರಲಿ ಹೇಳ್ತೀನಿ ನಿಮ್ಮ ಬಗ್ಗೆ ಅಂತ ರೇಗಿಸಿದ್ದೆ ತಡ, ಅಪಾಯ ಅರಿತುಕೊಂಡ ಇಬ್ಬರು ತಕ್ಷಣ ಕಾರ್ಯಪ್ರವೃತ್ತರಾಗಿ ಒಂದು ಗಂಟೆಯ ಒಳಗಾಗಿ ಸ್ಲಮ್ ಒಂದರಿಂದ ೧೦೦ ಜನರನ್ನು ಕರೆದುಕೊಂಡು ಹೇಮಾವತಿ ಪ್ರತಿಮೆ ಬಳಿ, ವಿಜಯೋತ್ಸವ ಆಚರಿಸಿದರು. ಪಟಾಕಿ ಹೊಡೆದು ನಾನು ಸಿಕ್ಕಿಕೊಂಡಿದ್ದ ಸಂಕಷ್ಟದಿಂದ ನಾನು ಪಾರಾದೆ ಅವ್ರು ಸಿಕ್ಕಿಕೊಳ್ಳಬಹುದಾಗಿದ್ದ ತೊಂದರೆಯಿದ ಅವರು ಪಾರಾದರು.
ಆದರೆ ಮರುದಿನ ವಿಜಯ ಕರ್ನಾಟಕ ಪತ್ರಿಕೆಯಲ್ಲಿ "ಟಿವಿ ವರದಿಗಾರನೊಬ್ಬನ ಪ್ರೇರಿತ ವಿಜಯೋತ್ಸವ" ಅಂತ ನಡೆದ ಘಟನೆಯ ಸವಿವರಗಳನ್ನು ಬರೆದು ಸುದ್ದಿ ಬರೆದು ಬಿಡೋದೇ ಅಸಾಮಿ ಪಿ. ಮಂಜುನಾಥ್. ಬೆಳಿಗ್ಗೆ ಸುದ್ದಿ ಓದುತ್ತಿದ್ದಂತೆ ನನಗೆ ಎಂತಾ ತೊಂದರೆಗೆ ಸಿಕ್ಕಿಕೊಂಡೆನಪ್ಪಾ ಅನ್ನೋ ಪರಿಸ್ಥಿತಿಗೆ ತಲುಪಿದೆ, ಸುದ್ದಿ ಓದಿದ ಕೆಲವರು ನನಗೆ ಫೋನ್ ಮಾಡಿ ವಿಜಯ ಕರ್ನಾಟಕ ನೋಡಿದ್ರಾ ಸರ್ ಅಂತ ಕೇಳೋಕೆ ಶುರು ಮಾಡಿದ್ರು, ನನ್ನ ಜೊತೆಗೆ ಚನ್ನಾಗೆ ಇದ್ದ ನನ್ನ ಗೆಳೆಯ ನಂಗೇ ಬತ್ತಿ ಇಟ್ಟಿದನ್ನು ತಿಳಿದು ಉರಿತಾ ಇತ್ತು, ಮಗ ಸಿಕ್ಕರೆ ಒದಿಬೇಕು ಅಂತ ಡಿಸೈಡ್ ಮಾಡಿದೆ.
ಸ್ವಲ್ಪ ಹೊತ್ತಗೆ ಅವನೇ ಫೋನ್ "ಅಪ್ಪಿ, ಆಪೀಸಿನಿಂದ್ದ ಕೆಳಗೆ ಇಳಿದು ಬಾ ಅಪ್ಪಿ, ಧಂ ಹೊಡೆಯೋಣ ಅಂತ ಕರೆಯೋದೇ...

ಅಸಾಮಿ ಏನೂ ಕಿತಾಪತಿ ಮಾಡಿಲ್ಲ ಅನ್ನೋತರ ಇದ್ದ, ನಾನು ಯಾಕೆ ಹೀಗೆ ಮಾಡಿದೆ ಅಂತ ಕೇಳಿದೆ, ಅರ್ಧ ಗಂಟೆ ಪಾಠ ಮಾಡಿದ, ಸಿಗರೇಟು ಹೊಗೆ ಬಿಡುತ್ತಾ ನನ್ನ ಸುಮ್ಮನಾಗಿಸಿಬಿಟ್ಟ, ನೋಡು ಗೌಡ
ಪತ್ರಿಕಾ ವರದಿಗಾರರು ತಮಗೆ ತಿಳಿದ ಘಟನೆ ಬಗ್ಗೆ ಬರೆಯುವಾಗ ಸತ್ಯಗಳಿಗೆ ಮೋಸ ಮಾಡಬಾರದು, ಏನು ಘಟನೆ ನಡೆದಿದೆಯೋ ಅದು ಸರಿನೇ ಇದೆ, ನೀನು ಮಾಡಿದ್ದು ಸರಿನೋ ತಪ್ಪೋ ಅನ್ನೋಕ್ಕಿಂತ ಘಟನೆ ಮುಖ್ಯ, ಅದು ಘಟಿಸಿದ ರೀತಿ ಮುಖ್ಯ, ಅಂತೆಲ್ಲ ನನ್ನ ಕನ್ ಪ್ಯೂಸ್ ಮಾಡಿಹಾಕಿದ....
ನನಗೋ ನಾನು ಮಾಡಿದ ತಪ್ಪಿನ ಅರಿವಾಯಿತು... ಪತ್ರಕರ್ತರು, ಅದರಲ್ಲೂ ಇಲೆಕ್ಟ್ರಾನಿಕ್ ಮಾದ್ಯಮದವರು ತಮಗೆ ಬೇಕಾದಂತೆ ಘಟನೆಗಳನ್ನು ಸೃಷ್ಟಿಸುತ್ತಾರೆ ಅನ್ನೋದು ಅವನಿಗೆ ಅರ್ಥ ಮಾಡಿಸಲು ನನಗೆ ಸಾದ್ಯವಾಗಲಿಲ್ಲ... ಆದರೆ ಈಗ ಪಿ. ಮಂಜುಗೆ ಅರ್ಥ ಆಗಿರಬೇಕು ಅನಿಸುತ್ತೆ ಯಾಕಂದ್ರೆ ಅವನೂ ಈಗ ಚಾನಲ್ ಒಂದರ ವರದಿಗಾರ...

5 comments:

  1. TV channel reporters are really in trouble for they have to some how provide some news at least for every othger day..So that they make stories cook up stories and instigate politicians' followers to do one or the other thing despite knowing the fact that its unethical as far as the media ethics are concerned. But for them "its WOrk Ethic or pressure for them". The article is good for the electronic, TV medium reporters what not to do just to tag some stories...

    ReplyDelete
  2. ಚೆನ್ನಾಗಿದೆ..
    ಇಂತಹಾ ಘಟನೆಗಳ ಬಗ್ಗೆ ಸದಾ ಬರೀತಿರಿ...
    ನಾವು ಒದ್ತಾ ಇರ್ತೇವೆ...

    ReplyDelete
  3. ಹೌದು ಗೌಡ್ರೆ ಆ ಘಟನೆ ನನಗೂ ನೆನಪಿದೆ, ವಿಜಯಕರ್ನಾಟಕ ದಲ್ಲಿ ಸುದ್ದಿ ಓದಿ ಬೇಸರಿಸಿಕೊಂಡವರಲ್ಲಿ ನಾನು ಒಬ್ಬ. ಬಹುಶ ಆ ರೀತಿ ಆಗಿದ್ದಕ್ಕೆ ನಾನು ಯೋಚಿಸಿದ ಕಾರಣ ಹೀಗಿದೆ. ನೋಡಿ ಒಂದು ಸುದ್ದಿ ಮಾಡೋಕೆ ನಾನು ತಾನು ಅಂತ ಪತ್ರಕರ್ತರು ಮುಗಿ ಬೀಳ್ತಾರೆ ಮುದ್ರಣ ಮಾದ್ಯಮಕ್ಕೆ ಸುದ್ದಿ ಸಿಗುತ್ವೆ ಆದರೆ ವಿಶುವಲ್ ಮೀಡಿಯಾಗೆ ಎಲ್ಲವನ್ನು ಸುದ್ದಿ ಮಾಡೋಕಾಗಲ್ಲ ಆಗ ಸುದ್ದಿ ಕ್ರಿಯೇಟ್ ಮಾಡೋದು ಅನಿವಾರ್ಯವೂ ಆಗ ಬಹುದು. ಆದರೆ ಅಂತಹ ಸುದ್ದಿಯಿಂದ ಯಾರಿಗೂ ಹಾನಿಯಾಗ ಬಾರದು, ನೀವು ಅಚಾನಕ್ ಆಗಿ ಕ್ರಿಯೇಟ್ ಮಾಡಿದ ಸುದ್ದಿ ಈ ಕೆಟಗರಿಗೆ ಸೇರುತ್ತೆ. ಆದರೂ ನಿಮ್ಮ ವರದಿಗಾರ ಮಿತ್ರನ ಸುದ್ದಿಯ ಹಪಹಪಿಗೆ ನೀವೆ ವರದಿಯಾಗುವಂತಾಗಿದ್ದು ದುರಾದೃಷ್ಠಕರ. ಅಷ್ಟಕ್ಕೂ ಆ ಸಂಧರ್ಭದಲ್ಲಿ ಹಾಸನದಲ್ಲಿ ವಿಕ ಮಂದಿ ಎಡಿಟೋರಿಯಲ್ ವಿಭಾಗ ತೆರೆದಿದ್ದರು,ಅಗತ್ಯಕ್ಕಿಂತ ಹೆಚ್ಚಾಗಿ 5-6ಮಂದಿ ವರದಿಗಾರರು ಇದ್ರು ಅವರಿಗೆ ತಾನೆ ಏನ್ ಕೆಲ್ಸ ಯರ್ಯಾರು ಹೂಸಿದ್ರು ಅನ್ನೋದನ್ನು ಪತ್ರಿಕೆಲಿ ಬರೀತೀದ್ರು, ಒಂದ್ರೀತೀಲಿ ಲೋಕಲ್ ಪೇಪರಲ್ಲಿ ಸುದ್ದಿ ಆಗೋಕೆ ಅನರ್ಹ ಅನ್ನೋಂತಹ ಸುದ್ದಿಗಳನ್ನು ಬರೆದು ಸುದ್ದಿಗಳ ತೂಕವನ್ನೇ ಹಾಳು ಮಾಡಿದ್ರು. ವಿಕ ಪತ್ರಿಕೆ ದರದಲ್ಲಿ ಮಾತ್ರವಲ್ಲ ಸುದ್ದಿಗಳಲ್ಲೂ ತನ್ನ ತೂಕ ಕಳೆದು ಕೊಂಡಿದ್ದು ಹೀಗೆ ಅಷ್ಟೇ ಅಲ್ಲ ವರದಿಗಾರರಿಗಿದ್ದ ಮೌಲ್ಯವನ್ನು ಹಾಳುಮಾಡ್ತು,ಇದು ಪತ್ರಕರ್ತರಿಗೆ ದೊಡ್ಡ ಪಾಠ ಹಾಸನದಲ್ಲಿ... ಬೇರೆ ಕಡೆ ಹೇಗೋ ಗೊತ್ತಿಲ್ಲ.:-)

    ReplyDelete
  4. ಇಲ್ಲಿ ಒಬ್ಬನೇ ಕೂತು ನಗ್ತಾ ಇದ್ದೀನಿ ಮಾರಯ. ನಿಜವಾಗಿ ಪಿ. ಮಂಜು ನಮ್ಮ ಜೊತೆ ಇದ್ದಾಗಿನ ದಿನಗಳು ತುಂಬಾ ಚೆನ್ನಾಗಿದ್ವು. ಅವನೊಂದ್ತರ ಪ್ರೇರಕ ಶಕ್ತಿ ಕಣೋ. ಮಂಜ್ಅಣ್ಣ ಹೋದಮೇಲೆ ನಾವು ಎಲ್ಲರು ಒಟ್ಟಿಗೆ ಸೇರಿ ಏನು ಮಾಡೋಕೆ ಆಗ್ಲೇ ಇಲ್ಲ. ಕಪ್ಪೆ ತರದ ಎಲ್ಲರನ್ನು ಹಿಡಿದುಕೊಂಡು ಒಂದೇ ಕಡೆ ಕೂರಿಸಿ ಅವನು ಜನ ನಾವೂ ಇದ್ದೇವೆ ಅಂತ ನಮ್ಮಣ್ಣ ಹಾಸನದ ವಿಶೇಷ ಸಂಘಟನೆಯಾಗಿ ರೂಪಿಸಿದ್ದು ಮರಿಯೋಕೆ ಆಗಲ್ಲ ಬಿಡು. ನಾನಿಲ್ಲ ನಿಮ್ಮ ರಾತ್ರಿ ಘೋಸ್ಟಿಗಳಲ್ಲಿ ನಾಗನನ್ನು ಕಂಟ್ರೋಲ್ ಮಾಡುತಿದ್ದ ಏಕ ಮಾತ್ರ ವ್ಯಕ್ತಿ ಪಿ. ಮಂಜು. ಬೆಳಿಗ್ಗೆ ಎದ್ದು ನಿಮ್ಮ ರಾತ್ರಿಗಳ ಚರ್ಚೆಯನ್ನು ಕೇಳಿಸಿಕೊಂಡೆ ನಾನು ಬಿದ್ದು ದಿದ್ದು ನಗ್ತಾ ಇದ್ದೆ. ಈವಗ್ಲು ಸಹ.

    ReplyDelete
  5. ಗೌಡ ನೀನು ಅದನ್ನ ತಿಂದು ೧೦೦ ಕೆಜಿ ಆಗಿದ್ದು ? ಹಂದಿ ಬಾಡು ಅಂದ್ರೆ ಗೌಡ ಗೌಡ ಅಂದ್ರೆ ಹಂದಿ ಬಾಡು ಅಂತ ನಿನ್ನ ದೇಹ ನೋಡ್ದಗಲೆಲ್ಲ ಹೆಲ್ಲ್ತ್ತನೆ.

    ReplyDelete