Wednesday, May 6, 2009

ಗೋಲಿ ಹೊಡೆವಾ ಹುಡುಗಾ...
ದೇವೇಗೌಡ ಆ ಪತ್ರಕರ್ತನ ಪ್ರಶ್ನೆಗೆ ಅವಕ್ಕಾಗದೆ ಅವನನ್ನೇ ನೇರವಾಗಿ ದಿಟ್ಟಿಸುತ್ತಾ ತಮ್ಮ ಎಡಗೈ ತೋರುಬೆರಳನ್ನು ಮುಂದು ಮಾಡಿ ಗೋಲಿ ಹೊಡೆಯುವವರ ರೀತಿ ಎರಡು ಮೂರೂ ಬಾರಿ ಸಂಜ್ಞೆ ಮಾಡಿ "do u think I am here to play goli " ಎಂದು ಹೇಳಿದರು. ದೆಹಲಿಯ ಮಾಸಿಕವೊಂದರ ವರದಿಗಾರನಾಗಿದ್ದ ಆತ ದೇವೇಗೌಡರ ಉತ್ತರಕ್ಕೆ ತಡಬಡಾಯಿಸಿ ಮತ್ತೆ ಪ್ರಶ್ನೆ ಕೇಳಲು ಹೋಗಲಿಲ್ಲ.
ಆಗತಾನೆ ದಾಬಸ್ ಪೇಟೆಯಲ್ಲಿ ಥರ್ಡ್ ಫ್ರಂಟ್ ಸಮಾವೇಶ ಮುಗಿಸಿಕೊಂಡು ಉತ್ಸಾಹದಲ್ಲಿ ಬಂದಿದ್ದ ದೇವೇಗೌಡರಿಗೆ ಆತ ಕೇಳಿದ ಪ್ರಶ್ನೆ ಏನೆಂದರೆ " ಮಿಸ್ಟರ್ ದೇವೇಗೌಡ ವೇರ್ ಈಸ್ ಥರ್ಡ್ ಫ್ರಂಟ್, ದಟ್ ಈಸ್ ನಾಟ್ ವಿಸಿಬಲ್ ಎನಿವೇರ್, ಹೌ ಮೆನಿ ಸೀಟ್ ಯು ಆರ್ ಗೋಯಿಂಗ್ ಟು ವಿನ್" ಎಂದು ವಿಚಿತ್ರವಾಗಿ ಮುಖ ಮಾಡಿ ಕೊಂಡು ಕೇಳಿದ ಆತನಿಗೆ ದೇವೇಗೌಡ ಅನಿರೀಕ್ಷಿತವಾಗಿ ಕೊಟ್ಟ ಉತ್ತರದಿಂದ ಬೆದರಿದ, ಆತ ಮತ್ತೆ ಪ್ರಶ್ನೆ ಕೇಳಲಿಲ್ಲ.

ದೇವೇಗೌಡರ ಉತ್ತರದಿಂದ ಎಚ್ಚೆತ್ತುಕೊಂಡ ಉಳಿದ ಮಾಸಿಕಗಳ ಪತ್ರಕರ್ತರು ತಣ್ಣಗಿನ ಧಾಟಿಯಲ್ಲಿ ಪ್ರಶ್ನೆ ಕೇಳುವುದನ್ನು ಮುಂದುವರೆಸಿದರು ಎಲ್ಲಿ ನಮ್ಮ ಮೇಲೆ ಗೋಲಿ ಬಿಟ್ಟಾನು ಈ ದೇವೇಗೌಡ ಎಂಭ ಭಯ ಅವರಲ್ಲಿತ್ತು.

ಸಾಮಾನ್ಯವಾಗಿ ದೆಹಲಿಯ ಪತ್ರಕರ್ತರು ದೇವೇಗೌಡರನ್ನು ಕೆಣಕುವುದರಲ್ಲಿ ಖುಷಿ ಪಡುತ್ತಾರೆ ದೇವೇಗೌಡರಿಗೆ ಪತ್ರಕರ್ತರ ಕೆಣಕು ಅರ್ಥವಾದರೂ ಜಾಣ ಪೆದ್ದನಂತೆ ಉತ್ತರ ಕೊಡುತ್ತಿರುತ್ತಾರೆ.

ಕೆಣಕುವುದರಲ್ಲಿ ನಿಸ್ಸಿಮರೊಬ್ಬರಿದ್ದಾರೆ ದಿ ಹಿಂದೂ ಪತ್ರಿಕೆಯವರು, ಅವರು ಅಷ್ಟೆ ದೇವೇಗೌಡರನ್ನು ಕೆಣಕುತ್ತಲೇ ಇರುತ್ತಾರೆ, ಒಂದೊಮ್ಮೆ ಅವರ ಪ್ರಶ್ನೆ ಗೆ ಸಿಟ್ಟು ನೆತ್ತಿಗೇರಿ ನೀನು ಯಾವ ಪೇಪರ್ ನಲ್ಲಿ ಕೆಲಸ ಮಾಡ್ತಿಯಲ್ಲ ಅದರ ಓನರ್ ನನಗೆ ದಿನಾಲು ಫೋನ್ ಮಾತಾಡ್ತಾರೆ ಗೊತ್ತಾ ಅಂದಿದ್ದ್ರಂತೆ ದೇವೇಗೌಡ.

ಇದೆ ರೀತಿ ಆಗಿದ್ದು ಟೈಮ್ಸ್ ನೌ ಚಾನಲ್ ನವರ ಮೇಲೆ, ಥರ್ಡ್ ಫ್ರಂಟ್ ಬಗ್ಗೆ ಏನೋ ತಪ್ಪು ವರದಿ ಕೊಟ್ಟಿದ್ದಾರೆ ಎಂದು ಕೆಂಡಾಮಂಡಲವಾಗಿದ್ದ ದೇವೇಗೌಡ ಟೈಮ್ಸ್ ನೌ ನ ವರದಿಗಾರ ಅನೂಪ್ ತಮಗೆ ಚೆನ್ನಾಗಿ ಗೊತ್ತಿದ್ದರು, ನಾನು ನಿಮಗೆ ಬೈಟ್ ಕೊಡಲ್ಲ, ನೀನು ತಪ್ಪು ಮಾಡಿಲ್ಲ ಅಂತ ಗೊತ್ತು ನಿಮ್ಮಲ್ಲಿ ಯಾರು ತಪ್ಪು ಸುದ್ದಿ ಕೊಟ್ರೋ ಅವರನ್ನೇ ಕಳಿಸು ನಾನು ಮಾತಾಡ್ತೇನೆ ಅಂದಿದ್ದರು....

ಕಳೆದ ವಿಧಾನಸಭಾ ಚುನಾವಣೆಗಳ ಸಮಯದಲ್ಲಿ ಈಟಿವಿಯಲ್ಲಿ ಸರ್ಕಾರ್ ಅನ್ನೋ ತಮಾಷೆ ಕಂ ಸಿರಿಯಸ್ ಕಾರ್ಯಕ್ರಮ ಬರ್ತಾ ಇತ್ತು, ಸಿನೆಮಾದ ಹಾಡುಗಳನ್ನು ರಾಜಕೀಯ ಸಂದರ್ಭಕ್ಕೆ ಹೋಲಿಸಿ ದೇವೇಗೌಡರನ್ನು ಗಿರಿಗಿರಿ ಸುತ್ತಿಸಿಬಿಟ್ಟಿದರು.
ಇದರಿಂದ ಸಿಟ್ಟಿಗೆದ್ದ ದೇವೇಗೌಡ ಮರುದಿನ ಅವರ ಮನೆಗೆ ಹೋಗಿದ್ದ ಈ ಟಿವಿ ವರದಿಗಾರ ವಿಜಯ್ ನನ್ನು ಮನೆ ಬಾಗಿಲಲ್ಲೇ ತಡೆದು ಗೆಟ್ ಔಟ್ ಮಿಸ್ಟರ್ ವಿಜಯ್ ......ಗೆಟ್ ಔಟ್. ಅಂತ ಹೊರಗೆ ಕಳಿಸಿಬಿಟ್ಟಿದ್ದರು,
ದೇವೇಗೌಡರಿಗೆ ತುಂಬಾ ಹತ್ತಿರದವನು ಎಂದು ಹೆಸರಾಗಿದ್ದ ಅವನು ಕಕ್ಕಾಬಿಕ್ಕಿಯಾಗಿಬಿಟ್ಟಿದ್ದ. ದೇವೇಗೌಡ ಯಾವತ್ತು ಹಾಗೆ ಇರುತ್ತಾರೆ ಹತ್ತಿರ ಇದ್ದವರಿಗೂ ಅವರನ್ನು ಅರ್ಥ ಮಾಡಿಕೊಳ್ಳೋಕೆ ಸಾದ್ಯವೇ ಇಲ್ಲದ ಮನುಷ್ಯ, ನಿಗೂಢ ಮನುಷ್ಯ, ಅವರ ಶಕ್ತಿ ಅವರ ನಿಗೂಢ ನಡೆಯಲ್ಲಿದೆ ಅಂತ ನಗೆ ಯಾವಾಗಲು ಅನ್ನಿಸುತ್ತದೆ.

ಮೇಲಿನ ವಿಷಯಗಳನ್ನು ಪಕ್ಕಕೆ ಇಟ್ಟು ನೋಡಿದರೆ ದೆಹಲಿಗೆ ಕರ್ನಾಟಕದ ಮುಖ್ಯಮಂತ್ರಿ ಯಡಿಯೂರಪ್ಪ ಬಂದರೂ ಇಲ್ಲಿನ ಯಾವ ಪತ್ರಿಕೆಗಳು, ಚಾನಲ್ ಗಳು ತಲೆಕೆಡಿಸಿಕೊಳ್ಳುವುದಿಲ್ಲ(ಪಬ್ , ಚರ್ಚ್ ಘಟನೆಗಳ ಹೊರತಾಗಿ) ಆದರೆ ತಮಿಳುನಾಡಿನ ಜಯಲಲಿತಾ, ಕರುಣಾನಿಧಿ, ಕೇರಳದ ಅಚ್ಯುತಾನಂದನ್, ಆಂಧ್ರದ ರಾಜಶೇಖರ ರೆಡ್ಡಿ ಬಂದರೆ ಎಲ್ಲ ಮೀಡಿಯಾದವರು ಓಡಿ ಬರುತ್ತಾರೆ. ಆದರೆ ನಮ್ಮ ರಾಜಕಾರಣಿಗಳು ಯಾರು ಬಂದರೂ ಇಲ್ಲಿನವರಿಗೆ ಮುಖ್ಯವಾಗುವುದಿಲ್ಲ.

ಆದರೆ ದೇವೇಗೌಡ ಮಾತ್ರ ತಮ್ಮ ನಿಗೂಢ ನಡೆಗಳಿಂದ ಇಲ್ಲಿಯೂ ಆಗಾಗ ಸುದ್ದಿಯಲ್ಲಿ ಮುಂಚೂಣಿಯಲ್ಲಿ ಇರುತ್ತಾರೆ.
ದೇವೇಗೌಡರ ಪಕ್ಷಕ್ಕೆ ಇರೋದು ಎರಡೇ ಸೀಟು, ಒಂದು ಸ್ವತಾ ದೇವೇಗೌಡರದು, ಎರಡನೇದು ಕೇರಳದ ವೀರೇಂದ್ರ ಕುಮಾರ್, ಚಾಮರಾಜನಗರದ ಶಿವಣ್ಣ ಪಕ್ಷ ಬಿಟ್ಟು ಹೋಗಿದ್ದಾರೆ, ಕೇವಲ ಎರಡು ಸೀಟು ಇಟ್ಟುಕೊಂಡು ಇಷ್ಟು ಆಟ ಆಡುವ ರಾಜಕಾರಣಿ ದೇಶದಲ್ಲಿ ಎಲ್ಲೂ ಇರಲಿಕ್ಕೆ ಇಲ್ಲ ಅನಿಸುತ್ತೆ.

ದೆಹಲಿ ಎಂಬ ಮಾಯಾ ನಗರದ ಎ ಬಿ ಸಿ ಡಿ ಬಲ್ಲ ಏಕೈಕ ಕನ್ನಡದ ರಾಜಕಾರಣಿ ದೇವೇಗೌಡ ಸಾಂಧರ್ಬಿಕ ರಾಜಕಾರಣದಲ್ಲಿ ಅವರು ನಿಸ್ಸೀಮರು, ಯಾವ ಸಂದ್ರಭಕ್ಕೆ ಯಾರನ್ನು ಭೇಟಿ ಮಾಡಿ ಏನು ಮಾತುಕತೆ ಮಾಡಬೇಕು, ಜೆ ಡಿ ಎಸ್ ಪ್ರಣಾಳಿಕೆಯನ್ನು ದೆಹಲಿಯಲ್ಲಿ ಯಾಕೆ ಬಿಡುಗಡೆ ಮಾಡಬೇಕು, ಥರ್ಡ್ ಫ್ರಂಟ್ ಅನ್ನು ಯಾಕೆ ದಾಬಸ್ ಪೇಟೆಯಲ್ಲಿ ಆರಂಭ ಮಾಡಬೇಕು, ಜಾಪರ್ ಷರೀಫ್ ಅವರನ್ನು ಯಾವಾಗ ಮನೆಗೆ ಕರೆಸಿಕೊಳ್ಳಬೇಕು, ಕುಮಾರಸ್ವಾಮಿ ಯಾವಾಗ ಸೋನಿಯಾ ಭೇಟಿ ಮಾಡಬೇಕು, ಚಂದ್ರಬಾಬುನಾಯ್ಡು, ಎ.ಬಿ,ಬರ್ಧನ್ ಅವರನ್ನು ರಾತ್ರಿ ಹೊತ್ತು ಯಾಕೆ ಭೇಟಿ ಮಾಡಬೇಕು ಎಂಬುದು ದೇವೇಗೌಡರಿಗೆ ಮಾತ್ರ ಗೊತ್ತು.ಅದಕ್ಕಾಗಿ ದೇವೇಗೌಡ ಆಗಾಗ ಸುದ್ದಿಯಾಗುತ್ತಿರುತ್ತಾರೆ ವರದಿಗಾರರು ಅವರ ಬಗ್ಗೆ ಕುಹಕದ ಮಾತಾಡುತ್ತಲೇ, ಯಾಮಾರಿದರೆ ಕಷ್ಟ ಮಾರಾಯ, ಮುದುಕ ಏನ್ ಮಾಡ್ತಾನೋ ಅನ್ನೋದು ಕೆಲವರ ಅಭಿಪ್ರಾಯ.

ದೆಹಲಿಯ ಹಿಂದಿ ಪತ್ರಕರ್ತರಿಗೆ ಮುಲಾಯಂ ಸಿಂಗ್ ಯಾದವ್ , ಅಮರ್ ಸಿಂಗ್, ದಿಗ್ವಿಜಯ್ ಸಿಂಗ್, ಮಾಯಾವತಿ,ಪ್ರಕಾಶ್ ಕಾರಟ್. ರಾಮ್ ವಿಲಾಸ್ ಪಾಸ್ವಾನ್, ಕರಣ್ ಸಿಂಗ್, ಅಡ್ವಾಣಿ, ರಾಜನಾತ್ ಸಿಂಗ್, ಅರುಣ್ ಜೇಟ್ಲಿ. ಲಾಲು ಯಾದವ್ ಮಾತ್ರ ರಾಜಕಾರಣಿಗಳು, ರಾಷ್ಟ್ರೀಯ ನಾಯಕರು, ಅವರು ಹೇಳಿದ್ದೆಲ್ಲ ರಾಷ್ಟ್ರೀಯ ಸುದ್ದಿ ನಮ್ಮವರು ಕಾಂಜಿ.. ಪಿಂಜಿಗಳು...
ಅದೆಲ್ಲಕ್ಕೆ ಹೊರತು ಈ ಗೋಲಿ ಆಡುವ ಹುಡುಗ....

8 comments:

 1. gowda one weak read madalu agiralilla. today onde usurige ellavannu odide. bahala kushi aitu maraya. dinga emba vishmaya nodiye guess madidde sakhath kushi sigalide ninna barahagallind antha. ok all the best. dinavu suddi matthu manaranjane ninninda sigli .........by santhu

  ReplyDelete
 2. Bahushaha devegowdara nnu matrave media jana prashne madtare:yakandre avara takattu yava samayadalli enu bekadru maduvantaddu, adakke! Mattu obba gowda matra tannage utra kottu nantara bisi muttisuttane. Adu Avara nadeya Vismaya! Ene agali avara manadalli samaja virodhi allada manava priti mattu secular idea galiveyalla, ashtu saku...ella madodu ade rajakeeya..avru madli...siddhantha chennagirli ashte...

  ReplyDelete
 3. gowdre, good.dattha, venkteshmurthy, kodihally, kenchegowda, ithyadi jana enuanthare?

  ReplyDelete
 4. ಅದೇ ಮಣ್ಣಿನ ಮಗನ ತಾಕತ್ತು ಗೌಡ್ರೆ, ಕೇವಲ ಎರಡು ಎಂಪಿ ಗಳನ್ನು ಇಟ್ಟುಕೊಂಡು ಗೌಡ ದೆಹಲಿ ರಾಜಕಾರಣ ನಿಭಾಯಿಸುತ್ತಾರೆ ಅಂದ್ರೆ ಅದು ವಿಶೇಷವೇ ಬಿಡಿ. ಹೋಗಲಿ ಅಂತಹ ತಾಕತ್ತು ಹೆಚ್ಚಿನ ಪ್ರಮಾಣದಲ್ಲಿ ಆರಿಸಿ ಹೋಗಿರುವ ಬಿಜೆಪಿ ಚಡ್ಡಿಗಳಿಗೆ ಮತ್ತು ಕಾಂಗ್ರೆಸ್ ನ ಪುಡಾರಿ ಎಂ.ಪಿಗಳಿಗೆ ಯಾಕಿಲ್ಲ??? ಅಷ್ಟೇ ಅಲ್ಲ ತಾವು ಅಧಿಕಾರದಲ್ಲಿರಲಿ ಬಿಡಲಿ ದೇವೇಗೌಡ ಹಾಸನ ಜಿಲ್ಲೆಯ ಜನರ ಅಭಿವೃದ್ದಿಗೆ ಸಾವಿರಾರು ಕೋಟಿ ರೂಪಾಯಿಗಳ ಕೆಲಸ ಮಾಡಿಸಿದ್ದಾರೆ, ಬಂಡವಾಳ ಹೂಡಿಕೆಗೆ ಅವಕಾಶ ಮಾಡಿದ್ದಾರೆ ಜೊತೆಗೆ ಹಾಸನವನ್ನೇ ರಾಜಕೀಯ ಶಕ್ರಿ ಕೇಂದ್ರವಾಗಿ ರಾಷ್ಟ್ರ ಮಟ್ಟದಲ್ಲಿ ಬಿಂಬಿಸಿದ್ದಾರೆ. ಇದೆಲ್ಲ ಸರಿ ಆದರೆ ಪತ್ರಕರ್ತರನ್ನು ದೇವೇಗೌಡ ಬಾಯಿಮುಚ್ಚಿಸುವುದು ಹೊಸದೇನಲ್ಲ.. ಬಿಡಿ ಯಾಕೆಂದ್ರೆ ಕಳೆದ ವಿಧಾನ ಸಭಾ ಚುನಾವಣೆ ಸಂಧರ್ಭದಲ್ಲಿ ಪಕ್ಷದ ವಿರುದ್ದ ಸುದ್ದಿ ಪ್ರಸಾರ ಮಾಡಿ ಸೋಲಿಗೆ ಕಾರಣರಾದರೂ ಎಂದು ಆರೋಪಿಸಿ ಚುನಾವಣೆ ನಂತರದ ಪತ್ರಿಕಾಗೋಷ್ಠಿಯಲ್ಲಿ ಟಿವಿ9 ವಾಹಿನಿಯ ವರದಿಗಾರನನ್ನು ಸಾರಸಗಟಾಗಿ ಹೊರಗೆ ಕಳುಹಿಸಿದ್ದು ನೆನಪಿದೆಯಲ್ಲ? ಆದರೂ ನಮ್ಮ ಪ್ರಶ್ನೆಗಳನ್ನು ಕೇಳುವ ಪತ್ರಕರ್ತರು ದೇವೇಗೌಡರ ಬೆದರಿಕೆಗೆ ಜಗ್ಗದೆ ಬಗ್ಗಿಸುವ ಪ್ರಯತ್ನವನ್ನು ಮಾಡಬೇಕು. ನೀವು ಹಾಗೆ ಪ್ರಯತ್ನ ಮಾಡ್ತಿರ ಅಂತ ನಿರಿಕ್ಷಿಸುತ್ತೀನೆ. ಸಿ. ಜಯಕುಮಾರ್, ಅರಕಲಗೂಡು, ಹಾಸನ ಜಿಲ್ಲೆ

  ReplyDelete
 5. ದೇವೇಗೌಡರ ನಿಗೂಡತನದ ಬಗ್ಗೆ ನಿನ್ನ ಗ್ರಹಿಕೆ ಸರಿಯಾಗಿದೆ. ನಿಜ ಹೇಳಬೇಕೆಂದರೆ ಕೇವಲ ರಾಜಕೀಯ ಮಾಡಬೇಕು ಅಂತ ಡಿಸೈಡ್ ಮಾಡಿದರೆ ಹೆಂಗೆಲ್ಲ ಮಾಡಬಹುದು ಅನ್ನೋದನ್ನ ದೇವೇಗೌದರಿಂದಲೇ ಕಲಿಯಬೇಕು. ಆದ್ರೆ ನಿಜವಾಗಿ ಹೇಳಬೇಕು ಅಂದ್ರೆ ನಮ್ಮ ಪತ್ರಕರ್ತರು ದೇವೇಗೌಡರಿಂದ ಅವಮಾನಕ್ಕೆ ಈಡಾದರೂ ಮತ್ತೆ ಅವರ ಹಿಂದೆ ಬೀಳೋದು ಎಷ್ಟರ ಮಟ್ಟಿಗೆ ಸರಿ? ಸುದ್ದಿಗಿಂತ ಸ್ವಾಭಿಮಾನ ದೊಡ್ದದಲ್ವಾ? ದೇವೇಗೌಡ ಕುಟುಂಬದ ಕರುಳು ಬಳ್ಳಿಯಂತವರು.. ಅವರಿಂದ ಬೇರೆ ಬೇರೆ ರೀತಿಯಲ್ಲಿ ಉಪಕೃತರದವರ್ರು ಪತ್ರಕರ್ತರ ವೇಷದಲ್ಲಿರುವುದು ಬಳಸಿಕೊಂಡು ಯಾವ ಪತ್ರಕರ್ತನನ್ನು ಗೆಟ್ ಔಟ್ ಮಾಡಿಯೂ ತಮಗೆ ಬೇಕಾದವರನ್ನು ಬಳಸಿಕೊಂಡು ಬೇಕಾದಾಗ ಅವರು ಸುದ್ದಿಯಾಗಲು ಸಾದ್ಯ ಎನ್ನುವನ್ತಗಿರುವುದು ಅವರು ಅಷ್ಟು ಧೈರ್ಯ ಮಾಡಲು ಕಾರಣ ವಾಗಿರೋದು ನಿಜ... ಪತ್ರಕರ್ತ ಮಿತ್ರರೇ ಅನ್ನುವ ರಾಜಕಾರಣಿಗಳ ಮುಂದೆ ಅವರನ್ನು ಗೆಟ್ ಔಟ್ ಅಂದು ಓಡಿಸುವ ಒಬ್ಬನೇ ರಾಜಕಾರಣಿ ದೇವೇಗೌಡ ಮಾತ್ರ. ಇನ್ನು ಡೆಲ್ಲಿ ಮಟ್ಟಿಗೆ ವ್ಯಂಗ್ಯ ಮಾಡೋ ಇಂಗ್ಲಿಷ್ ಪತ್ರಕರ್ತರಿಗೆ ಗೌಡರ ಉತ್ತರ ಸರಿಯಾಗೆಯೇ ಇದೆ.

  ReplyDelete
 6. ರಾಜಕೀಯ ನಾಯಕರು ಹಲವರಿದ್ದಾರೆ ಆದರೆ ರಾಜಕೀಯ ಧುರಿಣತೆ ಕೆಲವೇ ಕೆಲವರಿಗೆ ಮಾತ್ರ ಅಂತ ಕೆಲವರಲ್ಲಿ ದೇವೇಗೌಡರು ಒಬ್ಬರು ಎಂಬುದು ಎಲ್ಲರು ಒಪ್ಪುವಂತ್ತದ್ದೆ.ಆ ದೇವೇಗೌಡ ಉಂಡು, ಮಲಗಿ,ಎದ್ದು,ಕೂತು,ಆಕಳಿಸಿ ಯಾವಾಗಲು ರಾಜಕಿಯನೆ ಯೋಚನೆ ಮಾಡೋದರಿಂದ ಅವರಿಗಿರೋ ಚತುರತೆಯ ವಿರೋದಿಸಿದರು ಸಾಲಮು ಓಡಿಬೇಕು!!!

  ReplyDelete
 7. This comment has been removed by the author.

  ReplyDelete
 8. ಅದ್ಬುತವಾಗಿ ಮೂಡಿ ಬರ್ತಾ ಇದೆ ಗೌಡ. ಸುಮಾರು ದಿನಗಳ ನಂತರ ಏನೋ ನೆನಪಾದವನ ಹಾಗೆ ಇಣುಕಿ ನೋಡಿದರೆ ತುಂಬಿ ನಿಂತಿರುವ ನಿನ್ ಬ್ಲಾಗ್ ನೋಡಿ ಒಂದೇ ಉಸಿರಿಗೆ ಎಲ್ಲ ಲೇಖನ ಓದಿ ಮುಗಿಸಿದೆ. ನಿನ್ನ ಅನುಭವಗಳ ಬುತ್ತಿಯನ್ನ ತೆರೆದಿಟ್ಟಿರುವ ರೀತಿ ತುಂಬಾ ಮನೋಜ್ಞವಾಗಿದೆ.

  ReplyDelete