Sunday, May 3, 2009


ಗೆರೆ... ಗಣೇಶ.. ಗೆರೆ...


ನಾನು ಸರ್ ಕಾಮಿಡಿ ಟೈಮ್ ಗಣೇಶ ಮಾತಾಡ್ತಾ ಇದ್ದೀನಿ, ಈ ಟಿವಿ ರಿಪೋರ್ಟರ್ ಶ್ರೀನಿವಾಸಗೌಡ ಅಲ್ವಾ ಸರ್ ಮಾತಡೋದು ಅಂತ ಆ ಕಡೆ ಇದ್ದವರು ಕೇಳಿದರು, ನಾನು ಹೇಳಿ ಗಣೇಶ್ ಏನ್ ಆಗಬೇಕು ಅಂದೆ, ಸಾರ್ ನಾನು ಉದಯ ಟಿವಿ ಯಲ್ಲಿ ಕಾಮಿಡಿ ಟೈಮ್ ಪ್ರೊಗ್ರಾಮ್ ಕೋಡ್ತೀನಿ ಅಂತ ಬೇಜಾರ್ ಮಾಡ್ಬೇಡಿ ಸರ್, ನೀವು ಈ ಟಿವಿ ಯವರು ನಾನು "ಮುಂಗಾರು ಮಳೆ" ಅಂತ ಹೊಸ ಪಿಕ್ಚರ್ ನಲ್ಲಿ ಹಿರೋ ಆಗಿ ಆಕ್ಟ್ ಮಾಡ್ತಾ ಇದ್ದೀನಿ ಅದಕ್ಕೆ ಕೃಷ್ಣ ಹೋಟೆಲ್ ನಲ್ಲಿ ಪ್ರೆಸ್ ಕಾನ್ಫರೆನ್ಸ್ ಕರೆದಿದ್ದಿನಿ ತಪ್ಪದೆ ಬನ್ನಿ ಸರ್ ಅಂತ ಕರೆದ ಆಯ್ತು ಸರ್ ಬರೋಣ ಬಿಡಿ ಅಂತ ಸುಮ್ಮನಾದೆ.

ಫೋನ್ ಇಟ್ಟಮೇಲೆ ಯಾವನಪ್ಪ ಇವನು ಗಣೇಶ ತಲೆಕೆಟ್ಟು ಹಾಸನದ ಕಡೆ ಬಂದಿದ್ದಾನೆ ಅಂದುಕೊಂಡೆ, ಸಿನೆಮಾಗಳ ಬಗ್ಗೆ ಅಷ್ಟೇನೂ ಆಸಕ್ತಿ ಇರದ ನಾನು"ಮುಂಗಾರು ಮಳೆ" ಅಂತ ಹೆಸರು ಕೇಳಿದ ಒಡನೆ ಎಂತಾ ಡಬ್ಬಾ ಹೆಸರು ಅಂತ ಅಂದುಕೊಂಡು,(ಆರಂಭದಲ್ಲಿ ನನ್ನಂತೆ ಕೆಲವರಿಗೆ ಹಾಗೆ ಅನಿಸಿತ್ತಂತೆ ) ಯಾರೋ ತಲೆಕೆಟ್ಟವರು ಪಿಕ್ಚರ್ ತೆಗಿತಿರಬೇಕು ಅಂದುಕೊಂಡೆ,ಆಗ ಕನ್ನಡದಲ್ಲಿ ದಿನಕೊಂದು ಸಿನೆಮಾ ಆಡ್ ಬರ್ತಾ ಇತ್ತು, ಪ್ರೆಸ್ ಮೀಟ್ ಗೆ ಹೋಗೋದು ಬೇಡ ಅಂದುಕೊಂಡು ಸುಮ್ಮನಾದೆ.

ಹಾಸನದ ಹಲವರು ಪತ್ರಕರ್ತರು ಗಣೇಶನನ್ನು ಮೀಟ್ ಮಾಡಿ ಪತ್ರಿಕೆಗಳಲ್ಲಿ ಬರೆದರು ನಾನು ಓದಿದೆ ಅಷ್ಟೇ ಅದ್ರ ಬಗ್ಗೆ ನಾನು ಮತ್ತೆ ಯೋಚನೆ ಮಾಡಲೇ ಇಲ್ಲ.

ಈ ಘಟನೆ ನಡೆದು ಮೂರೂ ತಿಂಗಳಾಗಿರಬೇಕು ಎಲ್ಲಿ ನೋಡಿದರಲ್ಲಿ ಮುಂಗಾರು ಮಳೆಯೇ ಏನು ನಿನ್ನ ಹನಿಗಳ ಲೀಲೆ.... ಹಾಡು ಸೂಪರ್ ಹಿಟ್ ಆಗಿತ್ತು... ಎಲ್ಲಿ ನೋಡಿದರು ಅದೇ ಹಾಡಿನ ಶಬ್ದ....ಒಂದು ಹಾಡಿಗಿಂತ ಒಂದು ಇಂಪೋ, ಇಂಪೋ...
ಹಾಸನದ ಸಿನೆಮಾ ಥಿಯೇಟರುಗಳಲ್ಲಿ... ಸಿನೆಮಾಕ್ಕೆ ಮುಗಿಬಿದ್ದ ಜನ.
ನನ್ನ ಗೆಳೆಯ ಹಾಸನದ ಇನ್ನೊಬ್ಬ ಗಣೇಶ ಪಿಕ್ಚರ್ ನೋಡಿಕೊಂಡು ಹುಚ್ಚುಹಿಡಿದವಂತೆ ಆಡ್ತ ಇದ್ದ... ಮಾಮ ಸಕಲೇಶಪುರವನ್ನ ತೋರಿಸವ್ನೆ ಅವನಮ್ಮನ್ ಚಿಂದಿ..ಅಂತ ಹೇಳಿದ.
ಪಿಕ್ಚರ್ ರಿಲಿಸ್ ಆದ ಒಂದು ವಾರಕ್ಕೆ ಮತ್ತೆ ಫೋನು ಬಂತು.. ಹಲೋ ಸಾರ್ ನಾನು ಮುಂಗಾರು ಮಳೆ ಪಿಕ್ಚರ್ ಪಬ್ಲಿಕ್ ರಿಲೇಶನ್ ಆಪಿಸರ್ ಮಾತಾಡೋದು..ಇವತ್ತು ಮದ್ಯಾನ ಹೋಟೆಲ್ ಸದರ್ನ್ ಸ್ಟಾರ್ ಹೋಟೆಲ್ ನಲ್ಲಿ ಪ್ರೆಸ್ ಮೀಟ್ ಇದೆ ಗೋಲ್ಡನ್ ಸ್ಟಾರ್ ಗಣೇಶ್ ಸಿಕ್ತಾರೆ ಕವರೇಜ್ ಮಾಡ್ಬೇಕಾದ್ರೆ ಮಾಡಿಕೊಳ್ಳಿ ಸರ್ ಅನ್ನೋದಾ. ಹಿಂದೆ ಅವ್ನೆ ಗಣೇಶ
ಕಾಲ್ ಮಾಡಿ ಕೇಳಿಕೊಂಡರು ನಾನು ಹೋಗಿರಲಿಲ್ಲ, ಇವಾಗ ಇವನಾರೋ ಕರಿತಾ ಇದಾನಲ್ಲ ಅಂದುಕೊಂಡೆ ಮತ್ತೂ ಹೋಗಲಿಲ್ಲ.

ಮುಂಗಾರು ಮಳೆ ಪಿಕ್ಚರ್ ಯಾವ ರೀತಿ ಓಡ್ತಾ ಇತ್ತು ಅಂದ್ರೆ ಎಲ್ಲ್ಲಾರ ಬಾಯಲ್ಲೂ ಅದೇ ಗುನುಗು...ನನ್ನ ಸ್ನೇಹಿತನ ಅಂಗಡಿಯೊಂದರಲ್ಲಿ ದಿನಕ್ಕೆ ೧೦೦ ಸಿಡಿ ಮಾರಾಟ ಆಗ್ತಾ ಇತ್ತು....

ನನಗೋ ತಡೆಯಲಿಕ್ಕೆ ಆಗ್ಲಿಲ್ಲ ಮತ್ತೆ ನಾನು ಸಿನೆಮಾಕ್ಕೆ ಹೋಗಿ ನೋಡಿದೆ... ಸಿನೆಮಾ ನಿಜಕ್ಕೂ ಚೆನ್ನಾಗಿತ್ತು..ಒಂದಲ್ಲ ಎರಡಲ್ಲ ಮೂರೂ ಬಾರಿ ಸಿನೆಮಾ ನೋಡಿದೆ....

ಮುಂಗಾರು ಮಳೆ ಹಾಡುಗಳಂತು ಹುಚ್ಚು ಹಿಡಿದವರಂತೆ ಹಾಕಿಕೊಂಡು ನಾನು, ಸಕಲೇಶ್ ಪುರದದ ಗೆಳೆಯ ಬನವಾಸೆ ಮಂಜು ಸೇರಿಕೊಂಡು ಸಿನೆಮಾದಲ್ಲಿರೋ ಸೀನ್ ಗಳನ್ನ ಅದೇ ಜಾಗಗಳಿಗೆ ಹೋಗಿ ಮತ್ತೆ ಮತ್ತೆ ನೋಡಿಕೊಂಡು ಬಂದೆವು..ಮುಂಗಾರು ಮಳೆ ಚಿತ್ರೀಕರಣದ ಬಗ್ಗೆ ಭಟ್ಟರು ಬರೆದ ಪುಸ್ತಕ ಓದಿದೆ...

ಗಣೇಶ ಓವರ್ ನೈಟ್ ದೊಡ್ಡ ಹಿರೋ ಆಗೋದ... ಎಲ್ಲಿ ನೋಡಿದರು ಗೋಲ್ಡನ್ ಸ್ಟಾರ್ ಗಣೇಶನ ಧ್ಯಾನ.
ಆಮೇಲೆ ಗಾಳಿಪಟ ಬಂತು ಅದು ಸಕ್ಕತ್ ಫಿಲಂ, ಅದನ್ನು ನೋಡಿದೆ,ಅರಮನೆ ನೋಡಿದೆ ನಾನೇ ಗಣೇಶನ ಫ್ಯಾನ್ ಆಗೋದೇ...

ಆದ್ರೆ ಇವತ್ತು ಕೂತು ನೆನೆಸಿಕೊಂಡರೆ ಗಣೇಶ ಕರೆದಾಗ ಹೋಗಬೇಕಾಗಿತ್ತು ಅನಿಸುತ್ತೆ...ಗಾಂಚಾಲಿ ಮಾಡಿದೆ ಅನಿಸುತ್ತೆ.
ನಮ್ಮ ಎದುರೇ ತಮಾಷೆ ಮಾಡ್ತಿದ್ದವ ನಮ್ಮ ಎದುರೇ ಬೆಳೆದು ನಿಂತು... ಆಹಾ ಅಂತ ನಕ್ಕಾಗ ಒಂತರಾ ಅಗುತಲ್ಲಾ ಹಾಗೆ.
ಅದಕ್ಕೆ ಹೇಳಿದ್ದು ಗೆರೆ.. ಗಣೇಶ.. ಗೆರೆ ಅಂತಾ...


4 comments:

 1. ಹೌದು ನೀವು ಹೇಳೊದು ಸರಿಯಾಗಿದೆ..., ಕಾಮಿಡಿ ಟೈಮ್ ನಲ್ಲಿ ಬರೀ ಹೆಂಗೆಳೆಯರ ಜೊತೆ ಮಾತಾಡಿಕೊಂಡು ಕಾರ್ಯಕ್ರಮ ಮಾಡ್ತಿದ್ದ ಗಣೇಶ ರಾತ್ರಿ ಕಳೆದು ಬೆಳಗಾಗೊದ್ರೊಳಗೆ ಹೀರೋ ಆಗಿದ್ದು ಖುಷಿ ಕೊಡೋ ಸಂಗತಿ. ಆದ್ರೆ ಸಿನಿಮಾ ಹಿಟ್ ಆಗಿದ್ದು ಯೋಗರಾಜ ಭಟ್ಟರಂತರಹ ಸಂಭಾಷಣೆಕಾರ, ಗೀತರಚನೆಕಾರ,ನಿರ್ದೇಶಕನ ಕಲ್ಪನೆ, ಗಿರಿಶ್ ಕಾಯ್ಕಿಣಿಯವರ ಸಾಹಿತ್ಯ, ಮನೋಮೂರ್ತಿ ಸಂಗೀತ, ಅನಂತ್ ನಾಗ್ , ಪೊಜಾಗಾಂದಿ.... ಹೀಗೆ ಇನ್ನೂ ಏನೇನೋ... ಓಕೆ ಒಳ್ಳೆ ಲೇಖನ ಕೀಪ್ ಇಟ್ ಅಪ್.

  ReplyDelete
 2. nija, prathibhe, avakasha, adrushta mattu protsaha ivishtoo ottige obbanige agatya veleyalli dorakidare avana baduirali avan naseebe kshana matradlli badalagabahudu embudakke obba Ganesha udaharane..avanu tala mattadinda bandavanu..ulidella natarige avara kutumbada ottase iddittu odare obba Ganesha matra avan naseebu mattu pratibheyannu matrave pannakkittidda..mattu adaralli gedda kuda. navella Ganeshana kathe keli nakkiddu matte matte nenapagi namma baggeye besara agutte..

  ReplyDelete
 3. ಸಾಮಾನ್ಯವಾಗಿ ಪತ್ರಕರ್ತರಿಗಿರೋ ತರಹ ನಿನಗೂ ಸ್ವಲ್ಪ ಉಡಾಫೆ ನನಗು ಇದೆ ಅನ್ನೋದನ್ನ ಮನಬಿಚ್ಚಿ ಹೇಳಿದಕ್ಕೆ ಸ್ವಾಗತ.ನನ್ನದೊಂದು ಅಭಿಲಾಷೆ ನಿಮ್ಮಂತೆ ನಮ್ಮ ಎಲ್ಲ ಪತ್ರಕರ್ತರಿಗೂ ತಮ್ಮ ತಮ್ಮ ತಾಣದ ಬಗ್ಗೆ ಅರಿವಾಗಲಿ ಎಂಬುದು.

  ReplyDelete
 4. nija yara badukalli yavaga hege life turn hagutte gottilla alwa

  ReplyDelete