Friday, May 1, 2009


ಸಾವಿರ ಹಿಟ್ ಗೆ... ಧನ್ಯ.
ನಾನು ಬ್ಲಾಗ್ ಶುರು ಮಾಡಿ ಒಂದು ವಾರ ಮಾತ್ರ ಆಗಿದೆ, ನೂರು ಹಿಟ್ ಆದಾಗ ಸಕತ್ ಖುಷಿ ಆಗಿತ್ತು, ಯಾಕೋ ಸಿಕ್ಕಾಪಟ್ಟೆ ಜೋರಾಗಿ ಬ್ಲಾಗ್ ಮೇಲೆ ಹಿಟ್ ಬೀಳ್ತಾ ಇದ್ವು , ೫೦೦ ಹಿಟ್ ತಲುಪಿದಾಗ ಸಂತೋಷಕ್ಕೊಂದು ಥ್ಯಾಂಕ್ಸ್ ಹೇಳೋಣ ಅಂದುಕೊಂಡೆ ಆದರೂ ಅದೇನು ದೊಡ್ಡ ಸಾದನೆ ಅಲ್ಲ ಅಂದುಕೊಂಡು ಸುಮ್ಮನಾದೆ, ಆದ್ರೆ ಈಗ ಸುಮ್ಮನಾದರೆ ಒಳ್ಳೇದಲ್ಲ ಅನಿಸುತ್ತೆ...
ಒಂದು ಸಾವಿರ ಹಿಟ್ ಅದು ಒಂದು ವಾರದಲ್ಲಿ.
ಖುಷಿ ಪಡಲು ಇದಕ್ಕಿಂತ ಕಾರಣ ಬೇಕಾ.
ಎಲ್ಲ ಗೆಳೆಯರಿಗೂ ಥ್ಯಾಂಕ್ಸ್....
ವಿಶೇಷವಾಗಿ ನನ್ನ ಗುರುಗಳು ಆದ "ಅವಧಿ"ಯ ಜಿ.ಎನ್. ಮೋಹನ್ ಪ್ರೀತಿಯಿಂದ್ದ ಕಾಮೆಂಟ್ ಬರೆದು ಲೋ ನಿಂಗೆ ಬರೆಯೋಕೆ ಬರುತ್ತಾ ಅದು ಇಷ್ಟು ಚೆನ್ನಾಗಿ ಅಂದಿದ್ದಾರೆ.
ನಾನು ಮೆಚ್ಚಿಕೊಳ್ಳುವ ಸೂಕ್ಷ್ಮ ಸಂವೇದನೆಯ ಗೆಳೆಯ ಪಿ.ಮಂಜುನಾಥ, ನನ್ನ ಬಹುವಾಗಿ ಹೊಗಳಿದ್ದಾನೆ.
ಡೆಕ್ಕನ್ ಹೆರಾಲ್ಡ್ ನ ಸತೀಶ್ ಶಿಲೆ, ಕನ್ನಡ ಪ್ರಭದ ಮಂಜುನಾಥ ಸ್ವಾಮಿ ಬೆನ್ನುತಟ್ಟಿದ್ದಾರೆ,
ಡಿಂಗ ಅವನ ಬಗ್ಗೆ ಬರೆದಿದ್ದನ್ನ ಅವ್ನೆ ಜೆರಾಕ್ಸ್ ಮಾಡಿಸಿ ಎಲ್ಲಾರಿಗೂ ತೋರಿಸಿತ್ತಿದ್ದಾನೆ.
ಉಳಿದಂತೆ ನಾನು ಬರೆದಿದ್ದನೆಲ್ಲ ಓದುವ ಗೆಳೆಯರಾದ ಈಶಕುಮಾರ್, ಗೋವಿಂದ, ಗಿರಿ,ಬನವಾಸೆ ಮಂಜು. ಪ್ರಸಾದ್, ಸೇರಿದಂತೆ ದೇಶ ವಿದೇಶ ಗಳಿಂದಲೂ ಬ್ಲಾಗ್ ನೋಡುತ್ತಿದ್ದಾರೆ.
ಪ್ರಜಾವಾಣಿಯ ಸಂತೋಷ್ , ಈ ಸಂಜೆ ದಿನೇಶ್ , ಉದಯವಾಣಿ ಧರಣಿ ಪ್ರೀತಿಯ ಮಾತು ಹೇಳಿದ್ದಾರೆ.
ದೆಹಲಿಯ ಸಂಡೇ ಇಂಡಿಯನ್ ನ ಗೆಳೆಯರು ಸಾಥಿಯಾಗಿದ್ದರೆ.... ಎಲ್ಲಾರಿಗೂ ಥ್ಯಾಂಕ್ಸ್....

4 comments:

  1. ಸಾವಿರ ಸಾವಿರಗಳ ಎಲ್ಲೆಗಳನು ಮೀರಿ ಮೀರಿ ಸಾಗಲಿ
    ನಿನ್ನ ನದಿಯ ಪ್ರತಿ ಅಲೆಗಳ ಬದಿತದಲಿ ಮಿಂದೇಳುವ
    ಸಹೃದಯಿಯ ಭಾವಲೋಕ ತಣಿಯುತಿರಲಿ ಅನವರತ.....
    ಹರಿವ ನದಿಗೆ ಹರಿವಲ್ಲದೆ ಮತ್ತಾವ ಸೋಜಿಗವು!!

    ReplyDelete
  2. ನಿಮ್ಮ ಬ್ಲಾಗಿನ ದೋಣಿ ಹೀಗೆ ಸಾಗಲಿ.

    ಶುಭವಾಗಲಿ ನಿಮಗೆ. ಬರಹಗಳು ಅವರತವಾಗಿ ಬರುತ್ತಲೇ ಇರಲಿ.

    ReplyDelete
  3. Ninna barevanige shaili...vasthu vishayavannu vibhinnavagi noduva shakthi adellakanthu migilagi ninu anubhavisida ghataneyanna nave anubhavisidante madisuva ninna skill..blog annu mattooo ettarakke karedoyyutte....no doubt..its a big "Hit"...

    ReplyDelete
  4. ಅಭಿನಂದನೆಗಳು. ಉತ್ಸಾಹ ಹೀಗೇ ಇರಲಿ. ಬಹುಬೇಗ ಈ ಸಾವಿರ ಲಕ್ಷವಾಗಲಿ.

    ReplyDelete