Saturday, May 2, 2009

ಗುರಾಣಿ ಪತ್ರಕರ್ತೆ....ಆವತ್ತು ಆಂಧ್ರಪ್ರದೇಶದ ಮುಖ್ಯಮಂತ್ರಿ ವೈ.ಎಸ್. ರಾಜಶೇಖರ ರೆಡ್ಡಿ ದೆಹಲಿಯಲ್ಲಿ ಪ್ರೆಸ್ ಕಾನ್ಫರೆನ್ಸ್ ಕರೆದಿದ್ದರು, ಈಗ ನಡೆಯುತ್ತಿರುವ ಚುನಾವಣೆಗಳಿಗೂ ಮುನ್ನ ನಡೆದ ಘಟನೆ ಇದು, ಆಂಧ್ರದಲ್ಲಿ ಎಲ್ಲೆಲ್ಲಿ ಯಾರನ್ನು ಸ್ಪರ್ಧೆಗೆ ಇಳಿಸಬೇಕು ಎಂಬ ಕುರಿತಂತೆ ಸೋನಿಯಾ ಗಾಂಧಿ ಅವರನ್ನು ಕಲೆತು ಮಾತಾಡಿದ ನಂತರ ಆಂಧ್ರ ಭವನದಲ್ಲಿ ಸುದ್ದಿಘೋಷ್ಟಿ ಕರೆದಿದ್ದರು, ಆಗತಾನೆ ಸತ್ಯಂ ರಾಮಲಿಂಗರಾಜು ವಂಚನೆ ಪ್ರಕರಣ ಹೊರಗೆ ಬರುತ್ತಾ ಇತ್ತು, ಸಾಮಾನ್ಯವಾಗಿ ಮುಖ್ಯಮಂತ್ರಿಗಳ ಸುದ್ದಿಘೂಷ್ಟಿಗಳನ್ನು ಕೇರ್ ಮಾಡದ ಇಲ್ಲಿನ ನ್ಯಾಷನಲ್ ಮೀಡಿಯಾದವರು ಅವತ್ತು ಸತ್ಯಂ ಕೇಸ್ ಬಗ್ಗೆ ಪ್ರಶ್ನೆ ಹಾಕಲು ಹೆಚ್ಚು ಮಂದಿ ಬಂದಿದ್ದರು. ಆದರೆ ಆದ್ರೆ ಆಂಧ್ರ ಭವನದಲ್ಲಿ ಪತ್ರಕರ್ತರನ್ನು terarist ಗಳಂತೆ ಶೋಧಿಸಿ, ತನಿಕೆ ನಡೆಸಿ ಒಳಗೆ ಬಿಡುತ್ತಿದ್ದರು, ಕ್ಯಾಮರಾಮೆನ್ಗಳನ್ನು ಸಂಪೂರ್ಣವಾಗಿ ಪರೀಕ್ಷಿಸಿ ಒಳಗೆ ಬಿಡುತ್ತಿದ್ದರು, ಅಲ್ಲಿಗೆ ಬಂದಿದ್ದ ಸೀನಿಯರ್ ಜರ್ನಲಿಸ್ಟ್ ಗಳೆಲ್ಲ ಸುದ್ದಿಯ ಮಹತ್ವ ತಿಳಿದು ಕಿರಿಕಿರಿಯಾದರು ಸುಮ್ಮನಿದ್ದರು.
ಪ್ರೆಸ್ ಕಾನ್ಫರೆನ್ಸ್ ಆರಂಭವಾದಾಗ ಕೆಲಕಾಲ ಮುಖ್ಯಮಂತ್ರಿಗಳು ಅಂದ್ರದಲ್ಲಿ ತಾವು ಮಾಡಿರುವ ಸಾಧನೆಗಳ ಬಗ್ಗೆ ಹೇಳಿದ್ರು, ಆಮೇಲೆ ಅವರ ಬದ್ದ ವೈರಿ ಚಂದ್ರಬಾಬು ಯೂಸ್ ಲೆಸ್ ಪೆಲೋ, ನಾವು ಮಾಡಿರೋ ಅಭಿವೃದ್ದಿ ಕೆಲಸಗಳಿಗೆ ಮತ್ತೆ ಅಧಿಕಾರಕ್ಕೆ ಬಂದೆ ಬರುತ್ತೇವೆ, ಅನುಮಾನವೇ ಬೇಡ ಅಂತೆಲ್ಲ ಹೇಳಿದ್ರು, ನಂತರ ತೆಲುಗು ಪತ್ರಕರ್ತರ ಪ್ರಶ್ನೆ ಶುರುವಾದವು ಕೆಲವು ಪ್ರಶ್ನೆಗಳ ನಂತರ ಅಂದ್ರ ಜ್ಯೋತಿ ಪತ್ರಿಕೆಯ ಕೃಷ್ಣರಾಜು ಏನೋ ಪ್ರಶ್ನೆ ಕೇಳಿದ್ದೆ ತಡ ಮುಖ್ಯಮಂತ್ರಿಗಳು ನೀವು ಯಾವ ಪತ್ರಿಕೆಯವರು ಎಂದಾಗ ನಾನು ಅಂದ್ರ ಜ್ಯೋತಿ ಪತ್ರಿಕೆ ಯವನು ಎಂದಾಗ ತಕ್ಷಣ ನಾನು ನಿಮಗೆ ಉತ್ತರ ಕೊಡಲ್ಲ ಕ್ಷಮಿಸಿ ಎಂದುಬಿಟ್ಟರು, ಇನ್ನೊಬ್ಬ ಪತ್ರಕರ್ತರಿಗೂ ಇದೆ ಉತ್ತರ ಬಂತು.
ನನಗೆ ಅದು ಮೊದಲ ಅನುಭವ ಅದ್ದರಿಂದ ಗಲಿಬಿಲಿ ಆಯಿತು.
ಆಮೇಲೆ ನ್ಯಾಷನಲ್ ಮೀಡಿಯಾದೊರು, ಸತ್ಯಂ ಪ್ರಕರಣದ ಬಗ್ಗೆ ಪ್ರಶ್ನೆ ಕೇಳಿದರು ಮುಖ್ಯಮಂತ್ರಿ ವೈ.ಎಸ್. ರಾಜಶೇಖರ ರೆಡ್ಡಿ ತಮ್ಮ ಟಿಪಿಕಲ್ ಶೈಲಿಯಲ್ಲಿ ಅರ್ಧ ಕಣ್ಣು ಮುಚ್ಚಿಕೊಂಡು ಪ್ರಕರಣದಲ್ಲಿ ನಮ್ಮ ಪಾಲು ಏನು ಇಲ್ಲ, ಸರ್ಕಾರದ ತಪ್ಪು ಏನು ಇಲ್ಲ ಅಂತ ಹೇಳಿ ತನಿಕೆ ಭರವಸೆ ನೀಡಿದರು. ಬರೇ ರಾಜಕೀಯ, ಸತ್ಯಂ ಹಗರಣದ ಪ್ರಶ್ನೆ ಉತ್ತರಗಳಿದ್ದ ಆ ಸುದ್ದಿಘೋಷ್ಟಿಗೆ ಬಂದಿದ್ದ ಪೈನಾಶಿಯಲ್ ಟೈಮ್ಸ್ ನ ಪತ್ರಕರ್ತೆ ಒಬ್ಬಳು ತಾನು ಯಾವುದೋ ಪ್ರಶ್ನೆಯನ್ನ ಕೇಳಬೇಕೆಂದು ಮುಖ್ಯಮಂತ್ರಿಯ ಬಳಿ ಹೋಗಲು ಯತ್ನಿಸಿದಳು, ಆದ್ರೆ ಸುತ್ತ ಮುತ್ತ ಇದ್ದ ಸೆಕ್ಯುರಿಟಿಯವರು ತಡೆದರು, ಇನ್ನೇನು ಕಾನ್ಫರೆನ್ಸ್ ಮುಗಿಯವ ಕಾಲಕ್ಕೆ ಮತ್ತೆ ಆಕೆ ಹತ್ತಿರ ಹೋಗಲು ಯತ್ನಿಸಿದ್ದೆ ತಡ ಸೆಕ್ಯುರಿಟಿ ಆಕೆಯನ್ನು ತಳ್ಳಿದ, ಬೆಂಕಿ ಉಂಡೆಯಾದ ಆಕೆ, ಇಡೀ ಕಾನ್ಫರೆನ್ಸ್ ಬೆಚ್ಚುವಂತೆ ಗುಟುರು ಹಾಕಿದಳು, ಏಕ ವಚನದಲ್ಲಿ ನಿಮ್ಮ ಮುಖ್ಯಮಂತ್ರಿನೆ ಕರೆದಿದ್ದಕ್ಕೆ ಇಲ್ಲಿಗೆ ಬಂದಿದ್ದೇವೆ ಮುಖ್ಯಮಂತ್ರಿ ನಿಮ್ಮಪ್ಪನ ಸ್ವತ್ತಲ್ಲ, ನಾವೇನು ಟೆರರಿಸ್ಟ್ ಅಲ್ಲ, ಮಗನೆ ಮಾನ್ ಹ್ಯಾಂಡಲ್ ಮಾಡಿದ್ರೆ ಚಪ್ಲಿಲಿ ಹೊಡಿತೀನಿ ಅಂತ ಸಿಕ್ಕಾಪಟ್ಟೆ ಸ್ಟ್ರಾಂಗ್ ಆದ ಇಂಗ್ಲಿಷ್ನಲ್ಲಿ ಬೈದುಬಿಟ್ಟಳು ಇದನ್ನು ಕೇಳಿದ ವೈ ಎಸ್ ಆರ್ ಕೊಡ ಬೆಚ್ಚಿದರು, ಆಕೆಯನ್ನ ಕರೆದು ಮೇಡಂ ನಿಮ್ಮ ಎಲ್ಲಾ ಪ್ರಶ್ನೆಗಳಿಗೆ ಉತ್ತರಿಸುತ್ತೇನೆ ಕೇಳಿ, ಅಂದ ಆಕೆ ಆಕೆಗೆ ಬೇಕಾಗಿದ್ದ ಪ್ರಶ್ನೆ ಕೇಳಿದ್ಲು, ಅದು ಯಾವುದೂ ಗೊಬ್ಬರ ಕಾರ್ಖಾನೆ ಸ್ಹಾಪನೆ ಕುರಿತಂತೆ ಆಗಿತ್ತು, ಅವಳ ಪತ್ರಿಕೆಗೆ ಬೇಕಾಗಿದ್ದು ಅದು ಮಾತ್ರ ಬೇರೆದ್ದು ಅಲ್ಲ.
ಈ ಮದ್ಯೆ ಮುಖ್ಯಮಂತ್ರಿಯಿಂದ ಸಾರಿ ಅನಿಸಿಕೊಂಡ ತೆಲುಗು ಪತ್ರಕರ್ತ ತನಗಾದ ಅವಮಾನ ನುಂಗಿಕೊಂಡು ಸುಮ್ಮನಾದ.
ಈ ಪ್ರಕರಣದ ನಂತರ ನನಗೆ ಗೊತ್ತಾಗಿದ್ದು ತೆಲುಗಿನಲ್ಲಿ ಎಲ್ಲೇ ಪಕ್ಷಗಳಿಗೂ ಒಂದೊಂದು ಚಾನಲ್ , ಒಂದೊಂದು ಪತ್ರಿಕೆ ಇವೆ, ಅವ್ರಿಗೆ ಬೇಡದವರ ಬಗ್ಗೆ ಪುಟಗಟ್ಟಲೆ ತಪ್ಪು ಸುದ್ದಿ ಬರೆಯುತ್ತವೆ, ಏನೇನೋ ಆರೋಪ ಮಾಡ್ತಾರೆ, ರಾಜಕೀಯ ಪಕ್ಷಗಳು ಅವ್ರಿಗೆ ಬೇಕ್ಕಾದ ಸುದ್ದಿಯನ್ನ ಅವ್ರ ಚಾನೆಲ್ ನಲ್ಲಿ ಬಿತ್ತರಿಸುತ್ತವೆ.... ತಿಂಗಳಿಗೊಂದು ಚಾನಲ್ ಅಲ್ಲಿ ಬರ್ತಾ ಇದೆ ನನಗೆ ಆಂದ್ರದಲ್ಲಿ ೧೮ ಕ್ಕೂ ಹೆಚ್ಹು ಚಾನೆಲ್ ಇವೆ, ಬಹುತೇಕ ರಾಜಕೀಯ ಚಾನೆಲ್ಗಳು, ಒಂದು ಚಾನಲ್ ನ, ಇಲ್ಲ ಪತ್ರಿಕೆಯ ವರದಿಗಾರನ ಪ್ರಶ್ನೆಗೆ ಉತ್ತರಿಸಲ್ಲ ಅನ್ನೋದು ಅಲ್ಲಿ ಸಾಮಾನ್ಯ ಅಂತೆ.
ರಾಜಕೀಯ ಪಕ್ಷಗಳು ಚಾನಲ್ ಆರಂಬಿಸಿದ್ರೆ ಹೀಗೆ ಆಗುತ್ತೆ ಅಲ್ವಾ...
ಮೊನ್ನೆ ತಾನೇ ಕನ್ನಡ ಕಸ್ತೂರಿ ಚಾನಲ್ಲಿಗೆ ಬೆಂಗಳೂರು ದಕ್ಷಿಣ ಕ್ಷೇತ್ರದ ಅಭ್ಯರ್ಥಿ ಅನಂತಕುಮಾರ್ ನಾನು ನಿಮ್ಮ ಚಾನಲ್ಲಿಗೆ ಮಾತಾಡಲ್ಲ ಅಂದ್ರಂತೆ...ಕನ್ನಡಕ್ಕೆ ಯಾವತ್ತು ಇಂತ ಪರಿಸಿತಿತಿ ಬರಬಾರದು ರಾಜಕೀಯ ಪಕ್ಷಗಳಿಗೆ ಒಂದು ಚಾನಲ್ ಇಲ್ಲ ಪತ್ರಿಕೆ ಶುರು ಮಾಡೋದು ಯಾವ ಲೆಕ್ಕದ ಪ್ರಶ್ನೆ ಅಲ್ಲ..ರಾಜಕೀಯ ಚಾನಲ್ ಗಳು ಪತ್ರಿಕೆಗಳು ಕನ್ನಡದಲ್ಲಿ ಬರದೆ ಇರ್ಲಿ, ಬಂದ್ರೆ ಆಗೋದು ಬೇರೆ ಅನ್ನೋದು ನಮ್ಮವರಿಗೆ ಬೇಗ ಗೊತ್ತಾಗಲಿ.

6 comments:

 1. ninu haage gandasutanada kelasa maadidre yaaradaru gutisutaaro maaraya prayatna maado endaadaru famous aagtiya.....

  ReplyDelete
 2. todays journalism is in no way totally dedicated itself to the social development and for service sake but even to mint money and gain publicity and popularity among commons hence many politicians and parttime business persons venture into doing business in media too which is bad sign for the society and people as well

  ReplyDelete
 3. ನಿಜ... ರಾಜಕಾರಣಿಗಳು ಹಾಗೆ ಮಾಡಬಾರದು, ಹಾಗೇ ಮಾಧ್ಯಮಗಳಿಗೂ ಜವಾಬ್ದಾರಿಯುತವಾಗಿ ಇದ್ದಿದ್ದನ್ನು ಇದ್ದಹಾಗೆ ಹೇಳುವ ಅಭ್ಯಾಸ ಇರಬೇಕು. ಸುದ್ದಿ ಪಾಸಿಟಿವ್ ಇದ್ರೆ ಕಟ್, ನೆಗೆಟಿವ್ ಇದ್ರೆ ಹೈಪ್ ಮಾಡದೇ ಇದ್ದಿದ್ದು ಇದ್ಹಾಗೆ ಕೊಟ್ರೆ ರೇಟಿಂಗೂ ಇರುತ್ತೆ ಎಲ್ರೂ ಸರಿಯಿರ್ತಾರೆ.
  ಆದ್ರೆ ನಂಗೆ ತಿಳಿದಮಟ್ಟಿಗೆ ಅನಂತಕುಮಾರ್-ಗೆ ಕಸ್ತೂರಿಯಿಂದ ಅಂಥದೇನೂ ಅನ್ಯಾಯ ಆಗಿಲ್ಲ ಅನ್ಸುತ್ತೆ.

  ReplyDelete
 4. We always look forward the Blog's new write-up for every other day...but did not find any new one today..may be busy in the weekends!!!!

  ReplyDelete
 5. ನೀವು ಡೆಲ್ಲಿ ಪತ್ರಕರ್ತರಾಗಿ ಆಂಧ್ರ ಸಿಎಂ ವೈಎಸ್ಆರ್ ಪತ್ರಿಕಾಗೋಷ್ಠಿ ಪ್ರಹಸನವನ್ನು ಚೆನ್ನಾಗಿ ಕಟ್ಟಿಕೊಟ್ಟಿದ್ದೀರಿ.ಮುಂದುವರೆದು ಪಕ್ಷಕ್ಕೊಂದು ಪತ್ರಿಕೆ, ಚಾನಲ್ ಬೇಡ ಎಂದಿದ್ದೀರಿ. ಆದರೆ ಕಾಲ ಯಾರ ಮಾತನ್ನು ಕೇಳುವುದಿಲ್ಲ.ಅವೆಲ್ಲಾ ಶುರುವಾಗಿ ಬಹಳ ಕಾಲವೇ ಆಗಿದೆ. ಕನ್ನಡದಲ್ಲೇ ವಿಕ,ಉವಾ,ಹೊದಿ ಇಂಥ ಪತ್ರಿಕೆಗಳು ಹಿಂದಿನಿಂದಲೂ ಆರ್ಎಸ್ಎಸ್, ಬಿಜೆಪಿ ತುತ್ತೂರಿಯಾಗಿವೇ ತಾನೇ? ಅಂದಹಾಗೆ ನೀವು ವೈಎಸ್ಆರ್ ಬಗ್ಗೆ ಬರೆದು ಕೊನೆಗೆ ಬಾಲಂಗೋಚಿ ತರ ಅನಂತಕುಮಾರ್ ಘಟನೆ ಸೇರಿಸಿದ್ದೀರಿ, ಆ ಮೂಲಕ ಮಾಜಿ ಕೇಂದ್ರ ಸಚಿವ ಅನಂತ್ ಕುಮಾರ್ ಅವರನ್ನು ರಾಷ್ಟ್ರನಾಯಕ ಎಂದು ಪರೋಕ್ಷವಾಗಿ ಬಿಂಬಿಸಿದಂತಾಗಿದೆ.ಕನ್ನಡನಾಡಿನಲ್ಲಿ ಅನಂತಕುಮಾರರಂತಹ ಮಾಜಿ ಕೇಂದ್ರ ಸಚಿವರು ಬಹಳಷ್ಟು ಜನ ಇದ್ದಾರೆ. ಅವರೆಲ್ಲಾ ರಾಷ್ಟ್ರನಾಯಕರಂತೆ ಕಾಣದೆ ಕೇವಲ ಅನಂತಕುಮಾರ್ ಯಾಕೆ ರಾಷ್ಟ್ರನಾಯಕರಾಗುತ್ತಾರೋ ಗೊತ್ತಿಲ್ಲ. ಅದೇ ರೀತಿ ಹಿಂದೆ ರಾಮಕೃಷ್ಣ ಹೆಗಡೆ ಬಹಳ ಬೇಗ ರಾಷ್ಟ್ರನಾಯಕರಾಗಿ ಮಾದ್ಯಮಗಳಲ್ಲಿ ಬಿಂಬಿತರಾದರು. ಕೊನೆಗೆ ಏಕೈಕ ಕನ್ನಡಿಗ ದೇವೇಗೌಡ ಪ್ರಧಾನಿಯಾದರು. ನಾವೆಲ್ಲ ಯಾರೋ ಸ್ವಹಿತಾಶಕ್ತಿ, ಸ್ವಜನ ಪಕ್ಷಪಾತಕ್ಕಾಗಿ ಸೃಷ್ಠಿಸಿದ ಸನ್ನಿಗೆ ಒಳಗಾಗಿ ಅನಂತಕುಮಾರರಂತವರನ್ನು ರಾಷ್ಟ್ರಮಟ್ಟದಲ್ಲಿ ಬಿಂಬಿಸುತ್ತೇವೆ. ಅನಂತ್ ನೇತೃತ್ವ ವಹಿಸಿದ್ದರೆ ರಾಜ್ಯದಲ್ಲಿ ಬಿಜೆಪಿ ಮೂರು ಮತ್ತೊಂದು ಸೀಟ್ ಪಡೆದು ಮೂಲೆಗುಂಪು ಆಗುತ್ತಿತ್ತು ಎಂದು ಯಾರಿಗೆ ಗೊತ್ತಿಲ್ಲ ಹೇಳಿ?!
  ನನ್ನ ಕಾಮೆಂಟ್ ಉದ್ದವಾಯಿತು ಅಂತ ಕಾಣುತ್ತೆ, ಮುಗಿಸುವ ಮುನ್ನ ಹೇಳೋದಾದರೆ, ಅನಂತ್ ಕುಮಾರ್ ಕಸ್ತೂರಿ ಚಾನಲ್ ಗೆ ಮಾತಾಡುವುದಿಲ್ಲ ಎಂದು ಹೇಳಿದ್ದೇ ನಿಜವಾಗಿದ್ದರೆ ಕಸ್ತೂರಿ ಚಾನಲ್ ವಿಕ ಪತ್ರಿಕೆಯಂತಲ್ಲ ಎಂದು ಅವರಿಗೆ ಗೊತ್ತಾಗಿದೆ ಎಂದೇ ಭಾವಿಸಿ.ಕಸ್ತೂರಿ ಚಾನಲ್ ಗೆ ಮಾತನಾಡಲು ಅನಂತ್ ರಂತಹ ಕೇಂದ್ರ ಮಾಜಿ ಸಚಿವರು ಬಹಳಷ್ಟು ಇದ್ದಾರೆ.ಅವರೆಲ್ಲಾ ಅನಂತ್ ಕುಮಾರರಷ್ಟು ಮಾದ್ಯಮಗಳ ಪ್ರೋತ್ಸಾಹಿತರಲ್ಲ ಎಂಬುದು ವಿಶೇಷ. ಅನಂತ್ ಕುಮಾರ್ ಗೆ ಬದಲು ಅಂತಹವರ ಮುಖವೇ ಕಸ್ತೂರಿಯಲ್ಲಿ ಹೆಚ್ಚು ಕಾಣಲಿ ಎಂಬುದು ನನ್ನ ಆಶಯ....

  ReplyDelete
 6. ಪ್ರಿಯ ಗೆಳೆಯ ಶ್ರೀನಿವಾಸ್,
  ನಿಮ್ಮ ಬರಹಗಳು ದಿನದಿಂದ ದಿನಕ್ಕೆ ಗಟ್ಟಿತನ ರೂಡಿಸಿಕೊಳ್ಳುವ ಜೊತೆಗೆ, ಗಂಭೀರ ವಿಚಾರಗಳು ಲಘು ಹಾಸ್ಯ ಲೇಪನದಿಂದ ಮೂಡಿ ಬರುತ್ತಿವೆ. ವಿಚಾರಗಳ ಮಂಡನೆ ಆಪ್ತ ಶ್ಯಲಿಯಲ್ಲಿ ರೂಪಿತವಾಗುವುದು ಕಷ್ಟಸಾಧ್ಯ ಾದರೆ ನೀವಿದನ್ನು ಸಾಧಿಸಿದ್ದೀರಿ ಮತ್ತು 1000ಕ್ಕೂ ಹೆಚ್ಚು ಓದುಗರನ್ನು ಗಳಿಸಿದ್ದೀರಿ ಅದಕ್ಕಾಗಿ ಶುಭಕಾಮನೆಗಳು. ಸಂವೇದನಾತ್ಮಕವಾದ ವಿಚಾರಗಳ ಮಂಡನೆ ಹೀಗೆ ಸಾಗಲಿ. ಇನ್ನು ಈ ಲೇಖನದ ಬಗೆಗೆ ನನ್ನದೊಂದು ಮಾತು, ನನಗೆ ತಿಳಿದ ಮಟ್ಟಿಗೆ ಕರ್ನಾಟಕ ಮತ್ತು ದೆಹಲಿಯ ಕೆಲವು ಮಾದ್ಯಮಗಳನ್ನು ಹೊತರು ಪಡಿಸಿದರೆ ಬೇರೆಡೆ ಮಾದ್ಯಮಗಳು ಜಾತಿಯ, ಧಾರ್ಮಿಕ ಪಂಥಗಳ, ರಾಜಕೀಯ ಪಕ್ಷಗಳ ಮುಖವಾಣಿಯಾಗಿವೆ. ಹಿಂದೆ ಪಿ ಲಂಕೇಶ ೊಂದು ಮಾತು ಹೇಳಿದ್ದರು, 'ಪತ್ರಿಕೆಗಳೆಂದರೆ (ಆಗಿನ್ನು ಟಿವಿ ಮಾದ್ಯಮ ಇರಲಿಲ್ಲ)ಜನರ ಭಾವನೆಗೆ ಇಂಬು ನೀಡುವ ಒಳ್ಳೆಯ ವಿಚಾರಗಳ ಮಂಥನವನ್ನು ಚಿಂತನವನ್ನು ಹುಟ್ಟುಹಾಕುವ ಹಾಗೂ ಸಮುದಾಯದ ಮುಖವಾಣಿಗಳು ', ಅವುಗಳಿಗೆ ತನ್ನದೇ ಆದ ಹೊಣೆಗಾರಿಕೆಯಿದೆ ಉತ್ತಮ ಸಮಾಜವನ್ನು ರೂಪಿಸುವ ಸಾಮರ್ತ್ಯವಿದೆ ಎಂದಿದ್ದರು. ಆದರೆ ಮಾದ್ಯಮ ಕ್ಷೇತ್ರಗಳಿಗೆ ಗೂಂಡಾಗಳು, ರಾಜಕೀಯ ಪಕ್ಷಗಳ ನಾಯಕರು, ವಂಚಕರು, ಅಕ್ಷರ ಜ್ಞಾನ ಇಲ್ಲದವರು ತಮ್ಮ ತೀಟೆ ತಿಕ್ಕಲುಗಳನ್ನು ತೀರಿಸಿಕೊಳ್ಳುವ ಸಲುವಾಗಿ ಬಂದು ಪ್ರತಿಷ್ಠಾಪಿತರಾಗಿದ್ದಾರೆ, ಇದು ದುರಂತದ ಸಂಗತಿಯೂ ಹೌದು. ಇಂತಹವರು ಇರುವುದರಿಂದಲು ಇಂದು ಹೊರಗಿನವರು ನಮ್ಮೆಡೆಗೆ ನಿಷ್ಠರದಿಂದ , ಅನುಮಾನದಿಂದ ನೋಡುವ ಕಾಲ ಬಂದಿದೆ. ಇದು ಒಳ್ಳೆಯ ಬೆಳವಣಿಗೆಯಂತೂ ಅಲ್ಲ.. ಇರಲಿ ಒಳ್ಳೆಯ ವಿಚಾರನ್ನು ನೀಡಿದ್ದೀರಿ ಇನ್ನು ನಿಮ್ಮ ಅನುಭವಗಳು ನಿಮ್ಮ ಕಂಪ್ಯೂಟರ್ ನ ಕೀಲಿಮಣೆಯಿಂದ ಮೂಡಿ ಬರಲಿ ಎಂದು ಆಶಿಸುವ . ಸಿ. ಜಯಕುಮಾರ್, ಜನತಾ ಮಾದ್ಯಮ ದಿನಪತ್ರಿಕೆ,ಹಾಸನ ಜಿಲ್ಲೆ

  ReplyDelete