Thursday, April 23, 2009

ಗೂಸಾ ಪ್ರಕರಣ



ನಾನು ಮಹಾರಾಜ ಕಾಲೇಜಿನಲ್ಲಿ ಓದುತ್ತಿದ್ದಾಗಿನ ಸಮಯದ ಒಂದು ಪ್ರಕರಣ ಪದೇ ಪದೇ ನೆನಪಾಗುತ್ತದೆ
ಅಲ್ಲಿ ಓದುತ್ತಿದ್ದ ಮೂರೂ ವರ್ಷವೂ ನನ್ನ ವಾಸ್ತವ್ಯ ಮಹಾರಾಜ ಹಾಸ್ಟೆಲ್. ಅಲ್ಲಿ ನಾವು ಗೆಳೆಯರು ಮಾಡಿದ ಕೀಟಲೆಗಳಿಗೆ ಲೆಕ್ಕವೇ ಇಲ್ಲ ಅನ್ನಬೇಕು ಅಂದೊಂದು ದಿನ ನಾನು, ರಮೇಶ , ಅಭಿ, ಕಲ್ಲ, ದ್ಯಾಮಪ್ಪ ಸೇರಿ ರಾಮಸ್ವಾಮಿ ಸರ್ಕಲ್ ಕಡೆಗೆ ಹೋಗ್ತಾ ಇದ್ವಿ ಹಿಂದಿನ ದಿನ ನೋಡಿದ್ದ ಸಿನೆಮಾದ ಫೈಟ್ ಸೀನ್ ವಿವರಿಸುತ್ತಿದ್ದ ದ್ಯಾಮಪ್ಪ ಈಗ ಯಾವನಾದ್ರು ಸಿಕ್ಕರೆ, ಹಂಗೆ ಒದ್ದು ಬಿಸಾಕ್ಬಿಡ್ತ್ಹಿನಿ ಅಂತ ವಿವಿಧ ಬಂಗಿ ತೋರಿಸ್ತಾ ನಡೀತ್ತಿದ್ದ ನಾವು ಕೂಡ ಅವನಿಗೆ ಸಹಮತಿಸುತ್ತ ನಡಿತಿದ್ವಿ ಅಷ್ಟರಲ್ಲಿ ನಮ್ಮ ಗುಂಪಿನಲ್ಲಿ ವಿಚಿತ್ರ ಸ್ಟಂಟ್ ಗಳಿಗೆ, ಡೈಲಾಗ್ ಡಿಲೆವರಿಗೆ ಹೆಸರುವಾಸಿಯಾಗಿದ್ದ ರಮೇಶ ಸುಮ್ಮನಿರದೆ ಅದೇ ರಸ್ತೆ ಯಲ್ಲಿ ಹೋಗ್ತಿದ್ದ ಆಟೋ ಡ್ರೈವರ್ ಒಬ್ಬನಿಗೆ ಏನೋ ಸನ್ನೆ ಮಾಡಿಬಿಟ್ಟಿದ್ದ, ಅದನ್ನು ಕಂಡ ಆಟೋದವನು ಕೊಂಚವೂ ತಡವರಿಸದೆ ನಮ್ಮ ಕಡೆ ಬರಲಿಕ್ಕೆ ಗಾಡಿ ತಿರುಗಿಸಿದ ನಮ್ಮ ಟೀಂ ಜೋರಾಗಿರೋದನ್ನು ಅರಿತ ನಾನು ದೈರ್ಯದಿಂದ ಯಾಕೋ ಮಗನೆ ಅಂಥ ಕಿಚಾಯಿಸಿದೆ ಮೊದಲೇ ಮಾತುಕತೆಯಲ್ಲಿ ರಂಗಾಗಿದ್ದ ನಮ್ಮ ಟೀಂ ಏನಯ್ಯಾ ನಿಂದು ಅಂತ ಜಗಳಕ್ಕೆ ಇಳಿದೆ ಬಿಟ್ಟಿತ್ತು ಆಟೋ ಡ್ರೈವರ್ ಯಾಕ್ರೋ ಮಕ್ಕಳ ಗಾಂಚಾಲಿ ಮಾಡ್ತಿರಿ ಅಂಥ ಬಂದವನೆ ನೇರ ನನ್ನನೇ ಹಿಡುಕೊಂದು ತದಕತೊಡಗಿದ ತಕ್ಸಣಕ್ಕೆಗಾಬರಿಯಾದ ನಾನು ಅವನಿಗೆ ಏನೋ ಮಾಡ್ತಿಯ ಅಂಥ ಸಮರ್ತನೆ ಮಾಡ್ಕೋತ ನಮ್ಮ ಫೈಟರ್ ಗಳೆಲ್ಲ ಎಲ್ಲಿ ಹೋದ್ರು ಅಂಥ ನೋಡಿದರೆ ಧಡಿಯರಾಗಿದ್ದ ದ್ಯಾಮಪ್ಪ ಡೈಲಾಗ್ ಕಿಂಗ್ ರಮೇಶ್ ಎಲ್ಲ ಪರಾರಿ ಯಾಗಿಬಿಟ್ಟಿದ್ರು ಚಿತ್ರದುರ್ಗದ ಕಲ್ಲೇಶ ಅಲ್ಲೇ ಹತ್ತಿರವೇ ಇದ್ದ ಮರದ ಬದಿ ನಿಂತು ತಮಾಷೆ ನೋಡ್ತಿದ್ದ. ನಮ್ಮೆಲ್ಲ ಫೈಟರ್ ಗಳ ಮದ್ಯೆ ಕಂಪ್ರೋಮೈಸ್ ಸ್ಪೆಷಲಿಸ್ಟ್ ಆಗಿದ್ದ ಅಭಿನಂದ ಮಾತ್ರ , ಬಿಟ್ಬಿಡಿ ಸಾರ್ ಏನೋ ಹಾಸ್ಟೆಲ್ ಹುಡುಗ್ರು ತಪ್ಪು ಮಾಡವ್ರೆ ಅಂತ ಅವನು ಹಾಸ್ಟೆಲ್ ನವನಲ್ಲ ಯಾರೋ ಬೇರೆಯವನು ಅಂತ ನಂಬಿಸುತ್ತಾ ಅವ್ನಿಗೆ ಮಾತ್ರ ಒಂದೇ ಒದೆ ಬೀಳದಂತೆ ಜಾಗ್ರತೆ ವಹಿಸಿ ನನ್ನ ಮೇಲೆ ಬೀಳುತ್ತಿದ್ದ ಗೂಸ ತಪ್ಪಿಸಲು ಯತ್ನಿಸುತ್ತಿದ್ದ.

ಅಸ್ಟರಲ್ಲೇ ಆ ಅಸಾಮಿ ನನ್ನ ಬಟ್ಟೆ ಎಲ್ಲ ಹರಿದಿದ್ದ, ಅಭಿ ಮಾತ್ರ ಕಷ್ಟ ಪಟ್ಟು ನನ್ನನ್ನ ಅವನ ತೆಕ್ಕೆಯಿಂದ ಬಿಡಿಸಿದ. ಅದು ಇದು ಹೇಳಿ ಕಾಂಪ್ರೂ ಮಾಡಿಸಿದ. ಅಷ್ಟರಲ್ಲಿ ಎಲ್ಲೆಲೋ ಓಡಿಹೋಗಿದ್ದ ಫೈಟರ್ ಗಳೆಲ್ಲ ಹತ್ತಿರಕ್ಕೆ ಬಂದು ಅಯ್ಯೋ ಬಿಟ್ಬಿಡಿ ಸಾರ್ ನಿಮ್ಮಂತ ಡಾನ್ ಗಳೆಲ್ಲ ಸ್ಟುಡೆಂಟ್ ಮೇಲೆ ಕೈ ಮಾಡಬಾರದು ಏನೋ ಹುಡುಗ ತಪ್ಪು ಮಾಡವ್ನೆ ಅಂತ ನಾನು ಮಾಡದ ತಪ್ಪನ್ನ ನನ್ನ ತಲೆಗೆ ಕಟ್ಟಿದರು. ಅರೆ ನನ್ಮಕ್ಳ ಅಂತ ನಾನು ಅಲ್ಲಿಂದ ತಪ್ಪಿಸಿಕೊಂಡರೆ ಸಾಕಪ್ಪ ಅಂತ ಸುಮ್ಮನಾದೆ ಆಟೋದವನು ಯಾವನಾದ್ರು ಈ ಏರಿಯದಲ್ಲಿ ತಲೆ ಎತ್ತಿದರೆ ತಗದ್ ಬಿಡ್ತೀನಿ ಅಂತ ಅವಾಜ್ ಹಾಕ್ತ ಜಾಗ ಖಾಲಿ ಮಾಡಿದ ಕಳ್ಳರಂತೆ ನಿಂತ ನನ್ನ ಗೆಳೆಯರು ಮಗ ಹಾಗೆಲ್ಲ ಆಟೋ ಡ್ರೈವರ್ ಗಳನ್ನ ಟಚ್ ಮಾಡಬಾರದು ಅವರೆಲ್ಲ ಅಶೋಕ ಪುರಂ ಏರಿಯಾದೊರು ಅಂತ ಹೇಳಿದ್ರು ಮೊದಲೇ ಕಷ್ಟ ದಲ್ಲಿದ್ದ ನಾನು ತಪ್ಪಿಸಿ ಕೊಂಡರೆ ಸಾಕು ಅಂತ ಅನಿಸಿ ಹಾಸ್ಟೆಲ್ ಹುಡುಗರ ಯಾರೋ ನಮ್ಮ ಮೇಲೆ ಅದ ಹಲ್ಲೆ ನೋಡಿಲ್ಲ ಅಂತ ಖಾತರಿಪಡಿಸಿಕೊಂಡು ವಾಪಸ್ಸು ಬಂದೆವು .

5 comments:

  1. Gowda, nijavagloo neenu namma naduvina achcari kano...Ekendare:Old Bottle nalle neenu new wine ..!!Sakhat Kick Sackat Musti!!!NAve kaleda Aa dinagalu nammannu matte matte badukisuttave andukondare anta nenapugalu nirantaravagi jhari reeti hariyali anta...Ninna Blog Autobio(Bhaya)graphy ninnannu (Neenu eegaagale Nagna)Mattashtu Tereyuvante madali...nenapugala hole hariyali...Idoo kuda Santasa Araluva Samaya...

    ReplyDelete
  2. ಮಗ ನಿನ್ನ ಕೆಲವು ಸಾಲುಗಳಲಿ ತೇಜಸ್ವಿಯ ಸೊಗಡಿದೆ
    ಆಗಂತ ಓದುವಾಗ ಅನಿಸಿತು.ಸಾಮನ್ಯ ಘಟನೆಯನೆ ವಿಡುಮ್ಭಾನೆಯಾಗಿ
    ಹೇಳಿದ ರೀತಿ ಅದ್ಭುತವಾಗಿದೆ. ಆ ದಿನಗಳ ನೆನಪನ್ನು ಕಟ್ಟಿಕೊಟ್ಟಿತು
    ನಿನ್ನ ಬರಹ.ಅಭಿಯ ವರ್ತನೆ,ಕಲ್ಲನ ನಗೆಯಾಟ, ದ್ಯಾಮಿಯ ಗಂಡಸುತನ ಗಳೆಲ್ಲ ಕಣ್ಣ ಮುಂದೆ ಬಂದವು.
    ನಮ್ಮೊಳಗಿನ ಕೂತೂಹಲ ಕರ್ಮಿ ನೀನು ನಿನ್ನ ಕಾಮನೆಗಳು ನಮಗೂ ರಸವತ್ತಾಗಿ ಬರಲಿ ಸದಾ
    ನಿನ್ನ ಬ್ಲಾಗ್ಗೆ ಶುಭಾಶಯಗಳು............

    ReplyDelete
  3. really u rocks yaar the way u narrated ur college day experience is fantastic i wish u all the best for Your blog.............

    ReplyDelete
  4. gowdre, nimma blog poorthi odidhe. thumba chennagidhe. nimma anubava namma anubava annuvastu kusi needithu. nillisabedi. nanaganthu odalu innondhu blog sikkithu ano kusi...p.manjunath,

    ReplyDelete
  5. Snehitarondigina kshanagalu estu sumadhura alva,idannella odtiddare nanna savi nenapugalu muttigeyaki haage kulitubiduttene.odi thumba kushiyaagutte haage a chitravanna kalpisikondu naguttene.

    ReplyDelete