ಸರ್ವ ರೋಗಾನಿಕಿ ಸಾರಾಯಿ ಮಂದು ರಾ....!
ಒಂದು ವರ್ಷದಿಂದ ಪಾಳು ಬಿದ್ದಿದ್ದ ನಮ್ಮ ಸುಮಾರು ಹತ್ತು ಎಕರೆ ಜಮೀನನ್ನ ಏನಾದ್ರೂ ಆಗಲಿ ಹಸನು ಮಾಡಿ, ಸಮ ಮಾಡಿ ಬಿಡಬೇಕೆಂದು ನಾನು ಮತ್ತು ನಮ್ಮ ಮಾವ ವೆಂಕಟೇಶ್ ಅವತ್ತು ತೀರ್ಮಾನ ಮಾಡಿ ರೆಡಿಯಾದೆವು.
ನಾವು ಹೇಳುವ ಏನೇ ಕೆಲಸಗಳಿಗೆ ರೈಟ್ ಬಿಡಿ ಅಣ್ಣ ಮಾಡಿ ಬಿಸಾಕೋಣ ನಡ್ರಿ ಅಂತ ಸಿದ್ದ ಆಗ್ತಿದ್ದವ ನಮ್ಮ ಮನೆಯ ಅವಿಬಾಜ್ಯ ಅಂಗವಾಗಿದ್ದ ಮುನಿರಾಜ್, ನಮ್ಮೆಲ್ಲ ವ್ಯವಸಾಯದ
ಕೆಲಸಗಳಿಗೆ ಬರುತ್ತಿದ್ದ ಮುನಿರಾಜ್ ನಮ್ಮ ವ್ಯವಸಾಯದ ಮೇಲುಸ್ತುವಾರಿ ನೋಡಿಕೊಳ್ತಾ ಇದ್ದ,
ನಾವು ಮತ್ತು ನಮ್ಮೂರಿನ ಜನ ಅವನನ್ನ "ಪಾಟ" ಅನ್ನೋ ಹೆಸರಿನಿಂದ ಕರೀತಿದ್ದೆವು. .
ನಮ್ಮ ಮನೆಯಲ್ಲಿ ಟ್ರಾ ಕ್ಟರ್ ಇತ್ತು ಬಿಟ್ಟರೆ ಜಮೀನು ಸಮ ಮಾಡಕ್ಕೆ ಬೇಕಾದ ಉಪಕರಣ ಇರ್ಲಿಲ್ಲ ಅದಕ್ಕೊಂದು ಐಡಿಯಾ ಮಾಡಿದೆವು ಟ್ರಾ ಕ್ಟರ್ ಗೆ ಅಗಲವಾದ, ಚಪ್ಪಟೆಯಾದ ಕಲ್ಲೊಂದನ್ನು
ಟ್ರಾಕ್ಟ ರ್ ಗೆ ಕಟ್ಟಿ ತೋಟದಲ್ಲಿ ಅಡ್ಡಾಡಿಸಿದ್ರೆ ಎಲ್ಲ ಸರಿ ಆಗ್ತದೆ ಅಂದುಕೊಂಡು ಭಾರಿ ತೂಕದ ಕಲ್ಲೊಂದನ್ನು ಹುಡುಕಿ ಹಗ್ಗದಿಂದ ಕಟ್ಟಿ ಎಳೆಯಲು ಯತ್ನಿಸಿದೆವು. ನಿಜಕ್ಕೂ ತುಂಬಾ ಬಾರವಾಗಿದ್ದ ಕಲ್ಲನ್ನು ಎಳೆಯಲು ಟ್ರಾ ಕ್ಟರ್ ಪ್ರಾಯಾಸ ಪಡ್ತಾ ಇತ್ತು. ನಾವು ಕೆಲಸ ಮಾಡಿದ ಕೆಲವೇ ಹೊತ್ತಿನಲ್ಲಿ ನಾವು ಕಟ್ಟಿದ್ದ ಹಗ್ಗ ಚಿಂದಿಯಾಗಿ ಕೆಲಸ ಕೈಕೊಟ್ಟಿತು.
ನನ್ನ ಮಾವ ಮತ್ತೆ ರಿಪೇರಿ ಮಾಡಲು ಪ್ರಯತ್ನಿಸಿದರಾದರೂ ಪ್ರಯತ್ನ ವಿಫಲವಾಯಿತು,
ವ್ಯವಸಾಯದಲ್ಲಿ ಇಂತಹ ಪರಿಸ್ಥಿತಿ ಎದುರಾದಾಗಲೆಲ್ಲ ಎನಾದರೋನು ಪರಿಹಾರ ಕೊಡುತ್ತಾ ಇದ್ದ ಪಾಟ ಸುಮ್ಮನಿರದೆ ವೆಂಕಟೇಶಣ್ಣ ಇಳಿ ಕೆಳಕ್ಕೆ ಅಂದವನೇ ಕಟ್ಟಿಂಗ್ ಪ್ಲೇಯರ್ ಹಿಡಿದು ಪಕ್ಕದಲ್ಲೇ ಇದ್ದ ನಮ್ಮ ಊರಿನ ಕೆರೆ ಅಂಗಳದ ವಿದ್ಯತ್ ಕಂಬದ ಬಳಿ ನಡೆದು ವಿದ್ಯತ್ ಕಂಭ ಕೆಳಗೆ ಬೀಳದಂತೆ ಎರಡು ಕಡೆ ಇದ್ದ ಕಂಬಿಯನ್ನು ಕತ್ತರಿಸಿ ನಮ್ಮ ಕೆಲಸಕ್ಕೆ ಬಳಸಿಕೊಳ್ಳೋದು ಅವನ ಘನ ಉದ್ದೇಶವಾಗಿತ್ತು,
ವಿದುತ್ ಕಂಭ ಸರ್ಕಾರದ್ದಾದ್ದರಿಂದ ನಮ್ಮದೇನು ತಕರಾರು ಇರಲಿಲ್ಲ, ಕಂಭ ಹತ್ತಾರು ಯಾರು ಎಂಬ ಯೋಚನೆ ಬರುವ ಮೊದಲೇ ಪೀಚಲು ದೇಹದವನಾಗಿದ್ದ ಪಾಟ ಕಂಭ ಹತ್ತ ತೊಡಗಿದ್ದ, ವಿದ್ಯತ್ ಹರಿಯುತ್ತಿದ್ದರೂ ಹುಷಾರಾಗಿ ಕಂಭಿ ಕತ್ತರಿಸಿಬಿಡೋದು ಅವನ ಉದ್ದೇಶವಾಗಿತ್ತು,
ನಮ್ಮ ಉರಿನ ಜನಕ್ಕೆ ಕರೆಂಟು ಸಂಭಂದಿಸಿದ ಪ್ರಾಬ್ಲಮ್ ಅದಾಗಲೆಲ್ಲ ಇವನೇ ರಿಪೇರಿ ಮಾಡುತ್ತಿದ್ದರಿಂದ ನಮಗೂ ಏನೋ ಭಯ ಅಗಲಿಲ್ಲ, ಇಂತ ಕಂಬಿ ಕತ್ತರಿಸುವ ಕೆಲಸಗಳಲ್ಲಿ ಅವನಿಗೆ ಅನುಭವ ಇತ್ತು ಮೇಲಕ್ಕೆ ಹತ್ತಿದವನೇ ವಿದ್ಯತ್ ಹರಿಯುತ್ತಿದ್ದ ಲೈನ್ ಟಚ್ ಮಾಡದೆ ಕಂಬಿ ಕತ್ತರಿಸಿ ಇನ್ನೇನು ಇಳಿಯಬೇಕು ಅಷ್ಟರಲ್ಲಿ ಅವನ ಯಾವ ಅಂಗ ಲೈನಿಗೆ ತಾಗಿತೋ ಗೊತ್ತಿಲ್ಲ ಪಾಟ ಸಡನ್ನಾಗಿ ಎತ್ತರದಿಂದ್ದ ಕೆಳಗೆ ಬಿದ್ದುಬಿಟ್ಟ. ಈ ರೀತಿ ಅಪಾಯವನ್ನು ನಿರೀಕ್ಷಿಸದಿದ್ದ ನಾವು ಅವನು ಬಿದ್ದೊಡನೆ ಗಾಭರಿಯಾದೆವು, ಇನ್ನೇನು ಸತ್ತೆ ಹೋದನಲ್ಲ ಅಂದುಕೊಳ್ಳುತ್ತಲ್ಲೇ ಕೆರೆಯ ನೀರನ್ನು ಕುಡಿಸಿ ಉಪಚರಿಸಲು ಯತ್ನಿಸಿದೆವು. ಆದ್ರೆ ಪಾಟ ಮಾತ್ರ ಉಸಿರೇ ನಿಂತವನತೆ ಕಂಡ. ನಮಗೋ ಮುಂದೆ ಬರುವ ಸಮಸ್ಯೆಗಳೆಲ್ಲ ಕಣ್ಣ ಮುಂದೆ ಬಂದು ಭಯವಾಗತೊಡಗಿತು.
ಆದರೆ ಒಂದೆರಡು ನಿಮಿಷಗಳ ನಂತರ ಅವನ ದೇಹ ಕೊಂಚ ಅಲುಗಾಡಿದ್ದನ್ನು ಕಂಡು, ತಡ ಮಾಡದೆ ಆಸ್ಪತ್ರೆ ಸೇರಿಸೋಣ ಎಂದು ತಿರ್ಮಾನಿಸಿ ಹತ್ತಿರದ ತಾವರೆಕೆರೆ ಮೋಟು ಡಾಕ್ಟ್ರು ಬಳಿ ಟ್ರಾ ಕ್ಟರ್ ನಲ್ಲೆ ಕರೆದುಕೊಂಡು ಓಡಿದೆವು.
ನಮಗೆ ಚೆನ್ನಾಗೇ ಪರಿಚವಿದ್ದ ಡಾಕ್ಟರ್ ಅವನನ್ನ ನೋಡಿದವರೇ ಏನು ಆಗಲ್ಲ ಬಿಡಿ ಸರಿ ಆಗ್ತಾನೆ ಅಂತ ಹೇಳಿ ಒಂದು ಗ್ಲುಕೋಸ್ ಬಾಟಲ್ ನೇತು ಹಾಕಿ ಚಿಕಿತ್ಸೆ ಕೊಡತೊಡಗಿದರು.
ನನಗೆ ಬುದ್ದಿ ಬಂದಾಗಿನಿದ ಆ ದಾಕ್ತ್ರನ್ನ ನಾನು ನೋಡಿದ್ದೇನೆ, ವಿಷ ಕುಡಿದು ಬಂದವನಿಗೂ ಅವರು ಕೊಡುತ್ತಿದ್ದ ಚಿಕಿತ್ಸೆ ಗ್ಲೂಕೋಸ್.....!
ಅಚ್ಚರಿಯೆಂಬಂತೆ ಪಾಟ ಸುಲ್ಪ ಹೊತ್ತಿಗೆಲ್ಲಾ ಚೇತರಿಸಿಕೊಂಡು ಕಣ್ಣು ಬಿಡತೊಡಗಿದ ಅಷ್ಟರಲ್ಲಿ ಸುದ್ದಿ ಉರಾಲೆಲ್ಲ ಹಬ್ಬಿ ಅವನ ಹೆಂಡತಿ ಮಕ್ಕಳು ಗೋಳಿದತೊಡಗಿದರಂತೆ ಇನ್ನೇನು ಶವ ಬಂದುಬಿಡುತ್ತೆ ಅಂತ ಉರಿನೋರೆಲ್ಲ ಮಾತಾದಿಕೊದ್ದಿದರಂತೆ.
ದಿನಕ್ಕೆ ೬ ರಿಂದ ೮ ಪಾಕೆಟ್ಟು ಸಾರಾಯಿ ಕುಡಿಯುತ್ತಿದ ಪಾಟ ನಿಗೆ ವಿದ್ಯತ್ ಶಾಕ್ ಹೊಡೆದರೆ ಅವನು ಬದುಕುವ ಸಾದ್ಯತೆಯೇ ಇಲ್ಲ ಅಂತ ನಮ್ಮ ಹಳ್ಳಿಯ ಜನ ಅವನು ಬದುಕುವ ಸಾದ್ಯತೆಯನ್ನ ಸಾರಾಸಗಟಾಗಿ ತಳ್ಳಿಹಾಕಿದ್ದರು,
ಸ್ವಲ್ಪ ಚೇತರಿಸಿಕೊಂಡ ಅವನನ್ನು ಮನೆಗೆ ಕರೆತಂದಿದ್ದನ್ನು ಕದ ಜನ ಅಚ್ಹರಿ ವ್ಯಕ್ತಪಡಿಸಿದರು ಅವ್ನು ಬದುಕಿದ್ದು ವಿಪರ್ಯಾಸವೇನೋ ಅಂತ ಮಾತನಾಡುತ್ತಿದ್ರು.
ಡಾಕ್ಟರು ಹೇಳಿದ್ದ ಔಷದಿಗಳನ್ನ ೧೫ ದಿನ ಕೊಟ್ಟರೆ ಸರಿಯಾಗ್ತಾನೆ ಎಂದುಕೊದಿದ್ದ ನಮಗೆ ದಿನಕಳೆದಂತೆ ಅವ್ನು ಮತ್ತಷ್ಟು ಸೊರಗುತ್ತಿದ್ದನ್ನು ಕಂಡು ಭಯವಾಗತೊಡಗಿತು. ಬಡ ಪಾಟ ನನ್ನ ಲೈಟು ಕಂಭ ಹತ್ತಿಸಿದ್ದಕ್ಕೆ ನಮ್ಮನ್ನು ಶಪಿಸುತ್ತಿದ್ದವರ್ಗೆ ಏನು ಕಡಿಮೆ ಇರಲಿಲ್ಲ.
ವಾಸ್ತವ ಏನ್ನೆಂದರೆ ನಮ್ಮ ಮನೆ ಅವಿಭಾಜ್ಯ ಅಂಗವಾಗಿದ್ದ ಅವನನ್ನ ಕಳೆದುಕೊಳ್ಳುವುದೆಂದರೆ ನಮಗೂ ನೋವಿನ ಸಂಗತಿಯಾಗಿತ್ತು. ಆದರೆ ಜನ ಮಾತ್ರ ಬಚ್ಚೇಗೌಡರ ಮನೆಯವರು ಅವ್ನ ಕು ಟುಂಭಕ್ಕೆ ಎಷ್ಟು ಹಣ ಕೊಟ್ಟರೆ ನ್ಯಾಯ ಸಿಗುತ್ತೆ ಅಂತ ಲೆಕ್ಕ ಹಾಕ್ತಾ ಇದ್ರು.
ಈ ಮದ್ಯೆ ಅವನಿಗೆ ಪ್ರಿಯವಾಗಿದ್ದ ಕೋಳಿ ಸಾರು, ತಲೆ ಮಾಂಸ, ಸಾರಾಯಿ ಸಿಗದೇ ಇರೋದೆ ಅವನು ಮತ್ತೆ ಸೊರಗಲು ಕಾರಣ ಅಂತ ಬಗೆದ ನನ್ನ ತಮ್ಮ ಜಗದೀಶ ಯಾರಿಗೂ ತಿಳಿಯದಂತೆ ಅವ್ನಿಗೆ ದಾರಾಳವಾಗಿ ಕೋಳಿ ಸಾರು, ತಲೆ ಮಾಂಸ, ಸಾರಾಯಿ ದೊರೆಯುವಂತೆ ವ್ಯವಸ್ತೆ ಮಾಡಿದ್ದ,
ಹದಿನೈದು ದಿನಕ್ಕೆ ಸತ್ತೆ ಹೋದ ಅಂದುಕೊಳ್ಳುತ್ತಿದ್ದ ಪಾಟ ಅಚ್ಚರಿಯಾಗುವಂತೆ ಒಂದೇ ವಾರಕ್ಕೆ ಮೇಲಕ್ಕೆದ್ದು ನಮ್ಮ ಮನೆ ಹತ್ರ ಬರತೊಡಗಿದ. ತನಗಾಗಿದ್ದ ನೋವೆಲ್ಲ ಮರೆತು ಲವಲವವಿಕೆಯಿಂದ ನಗುತ್ತಿದ್ದ.
ಅದೇ ಅಲ್ಲದೆ ಗೌಡ್ರೆ ಇನ್ನೊಂದು ವಾರಕ್ಕೆ ನಾನು ರೆಡಿ ಆಗ್ತೀನಿ ಮತ್ತೆ ಕೆಲಸ ಶುರು ಮಾಡೋಣ ಅಂತಾ ಹೇಳ್ತಿದ್ದ ಇನ್ನೇನು ಸತ್ತೆ ಹೋದ ಅಂತ ತಿಳಿದಿದ್ದ ನಾನೋ ಈ ಮನುಷ್ಯ ಹೇಗೆ ಬದುಕಿದ ಎಂಬ ರಹಸ್ಯ ತಿಳಿಯದೆ ಗೊಂದಲದಲ್ಲಿದ್ದೆ.
ವಿಷಯ ಗೊತ್ತಾದ ಮೇಲೆ ಅವನ ಸಾರಾಯಿ ಚಟದ ಬಗ್ಗೆ ಅಸಹನೆ ಇದ್ದ ನಾವು ಅವನು ಕುಡಿದ್ರೇನೆ ಬದುಕೋದು ಅಂತ ತೀರ್ಮಾನಕ್ಕೆ ಬಂದೆವು.
ಒಂದೆರಡು ವರ್ಷ ಕಳೆದ ನಂತರ ದಿಡೀರ್ ನಾನು ಅಯ್ಯಪ್ಪ ಸ್ವಾಮಿ ಮಾಲೆ ಹಾಕ್ತೀನಿ, ಮಾಲೆ ಹಾಕಿದ ಮೇಲೆ ಕುಡಿಯೋದನ್ನು ಬಿಟ್ಟು ಬಿಡ್ತೀನಿ ಅನ್ನೋಕೆ ಶುರು ಮಾಡಿದ ನಂಬಲಿಕ್ಕೆ ಕಷ್ಟವಾದರೂ ಅವನ ಮಾತನ್ನು ನಂಬಿದ ನನ್ನ ಅಮ್ಮ , ನನ್ನ ತಂಗಿ ಲಲಿತ ಅವ್ನಿಗೆ ಅಯ್ಯಪ್ಪ ಸ್ವಾಮಿಗೆ ಹೋಗಲು ಹಣ ಕೊಡುವ ಭರವಸೆ ನೀಡಿ ಹಣ ಕೊಟ್ಟರು.
ಭಯಂಕರ ಚಳಿಗಾಲದಲ್ಲಿ ಚಳಿ ಲೆಕ್ಕಿಸದೆ ವ್ರತ ಮಾಡತೊಡಗಿದ ಅವನನ್ನ ಕಂಡ ಜನ ಹುಬ್ಬೆರಿಸತೊದಗಿದರು, ಅಯ್ಯಪ್ಪ ಮಾಲೆ ದರಿಸಿ ವಿಚಿತ್ರವಾಗಿ ಕಾಣತೊಡಗಿದ್ದ, ದಿನವು ನಡೆಯುತ್ತಿದ್ದ ಭಜನೆಗಳಲ್ಲಿ ಅವನ ಕಾಲಿಗೆ ಕೆಲವರು ಬಿದ್ದಿದ್ದರಂತೆ....
ಭಜನೆಯಲ್ಲಿ ಮುಳುಗುತ್ತಿದ್ದ ಅವನನ್ನ ಹತ್ತಿರದಿಂದ ಗಮನಿಸಿದ ಸ್ವಾಮಿಯೊಬ್ಬ ಅಣ್ಣ ಎಣ್ಣೆ ಹಾಕಿಕೊಂಡೆ ಭಜನೆ ಮಾಡುತ್ತಿದ್ದನ್ನು ಕಂಡುಹಿಡಿದುಬಿಟ್ಟಿದ್ದ.
ಅವನ ಕಾಲಿಗೆ ಬಿದ್ದವರೆಲ್ಲ ಸ್ವಾಮಿಯನ್ನು ಶಪಿಸತೊದಗಿದರು.....

ಚೆನ್ನಾಗಿದೆ ಪಟನ ಸಹವಾಸ,ನಿಜಕ್ಕೂ ಮದ್ಯಸಾರಕ್ಕಿರುವ ತಾಕತ್ತು ಅಂತದ್ದು. ಸಾರಾಯಿಯ ನಷೆಯೊಂದು ನಮ್ಮ ಜನಗಳಿಗೆ ಸಿಗದಿದ್ದರೆ ಇಂಥ ಸ್ವಾರಸ್ಯಗಲೇ ಇರುತಿರಲಿಲ್ಲ ಗೌಡ್ರೆ.ನಿನ್ನ ಲಘು ಅಂಕಣದೊಳಗೆ ಇರುವ ವಾಸ್ತವದ ಘಮ್ಬಿರ ಹಾಸ್ಯ ಸೊಗಸಾಗಿದೆ,ನಿಜಕ್ಕೂ ಆ ತಿಳಿ ಹಾಸ್ಯವೇ ಬರಹದ ಜೀವಾಳ. ತೀವ್ರವಾದ ಅನುಭವವನ್ನು ತಿಳಿ ತಿಳಿಯಾಗಿ ಬಿಡಿಸಿಡುವ ನಿನ್ನ ಶೈಲಿ ಹೀಗೆ ಸಾಗಲಿ.........
ReplyDeleteಚೆನ್ನಾಗಿದೆ ಪಟನ ಸಹವಾಸ,ನಿಜಕ್ಕೂ ಮದ್ಯಸಾರಕ್ಕಿರುವ ತಾಕತ್ತು ಅಂತದ್ದು. ಸಾರಾಯಿಯ ನಷೆಯೊಂದು ನಮ್ಮ ಜನಗಳಿಗೆ ಸಿಗದಿದ್ದರೆ ಇಂಥ ಸ್ವಾರಸ್ಯಗಲೇ ಇರುತಿರಲಿಲ್ಲ ಗೌಡ್ರೆ.ನಿನ್ನ ಲಘು ಅಂಕಣದೊಳಗೆ ಇರುವ ವಾಸ್ತವದ ಘಮ್ಬಿರ ಹಾಸ್ಯ ಸೊಗಸಾಗಿದೆ,ನಿಜಕ್ಕೂ ಆ ತಿಳಿ ಹಾಸ್ಯವೇ ಬರಹದ ಜೀವಾಳ. ತೀವ್ರವಾದ ಅನುಭವವನ್ನು ತಿಳಿ ತಿಳಿಯಾಗಿ ಬಿಡಿಸಿಡುವ ನಿನ್ನ ಶೈಲಿ ಹೀಗೆ ಸಾಗಲಿ.........
ReplyDeleteNow i came to know why people have so much craze towards drinking, nice one
ReplyDeleteಜನ ಕುಡಿತ ಇರೋದಿಕ್ಕೆ ಮಲ್ಯ ಕಡೆಯಿಂದ ಟಿಪ್ಪು ಕತ್ತಿ .. ಗಾಂಧಿ ಚಪ್ಪಲಿ ಕನ್ನಡಕ ಎಲ್ಲ ಮತ್ತೆ ಇಂಡಿಯಾಗೆ ಬರ್ತಾ ಇರೋದು...
ReplyDeleteNice experience maga...
Nice writing..... It reveals Poorna Chandra Tejaswi writings.... plz write more experience with comedy touch..k.,
ReplyDeleteJayakumar.C.,Arkalgud
maga super
ReplyDeleteಗುಂಡಿನ ಮತ್ತೇ ಗಮ್ಮತ್ತು.
ReplyDeleteಎಲ್ಲದರ ನಂತರವೂ ಮದ್ಯವೇ ವಾಸ್ತವ, ಮದ್ಯಕ್ಕೆ ಇರುವ ಶಕ್ತಿ ಮತ್ಯಾವುದೇ ಮತ್ತಿಗೂ ಇಲ್ಲ ಅನಿಸುತ್ತೆ.
ಬರಹ ಚನ್ನಾಗಿದೆ. ಮದ್ಯಕ್ಕೆ ಹತ್ತಿರವಾಗುವಷ್ಟು ವಾಸ್ತವವಾಗಿದೆ.
-ಮಧುಸೂದನ್.ವಿ
superb i look forward to get some lessons from Patha....
ReplyDelete