ಚುಂಬಿಸಿ, ಚುಂಬಿಸಿ, ಚುಂಬಿಸಿ ಕೊಲ್ಲೇ, ನನ್ನನ್ನೇ....
ಏನೂ ಕೆಲಸವೇ ಇಲ್ಲದೆ ಸುಮ್ಮನೆ ಇರೋವಾಗ ಕಿವಿಯೊಳಗೆ ಹತ್ತಿಯ ಬಡ್ ಇಟ್ಟುಕೊಂಡು, ಒಂದೇ ಕಣ್ಣನ್ನು ಮುಚಿಕೊಂಡು, ಆಹಾ ಅಂತ ಕಿವಿಯೊಳಗೆ ತಿರುಚಿಕೊಂಡರೆ ಸಿಗುತ್ತಲ್ಲ ಅವ್ಯಕ್ತ ಮಜಾ...ಅಂತವೇ ಮಜಾಗಳು ಸಾಕಷ್ಟಿವೆ ಅವನ್ನ ಡಿಸ್ಕವರ್ ಮಾಡಬೇಕಷ್ಟೇ...ಅಂತದ್ದೆ ಅನುಭವವನ್ನ ಇಲ್ಲಿ ಹಂಚಿಕೊಂಡಿದ್ದೇನೆ.
ಬ್ಲಾಕ್ ಬಸ್ಟರ್ ನಾಗಾರಾಜ ಎಂದು ಖ್ಯಾತಿ ಎತ್ತಿರುವ ಹಾಸನ ಜಿಲ್ಲೆ ಗಂಡಸಿ ಸಬ್ಇನ್ಸ್ಪೆಕ್ಟರ್ ನಾಗರಾಜ ಹೊನ್ನೂರ್ ಅವ್ರಿಗೆ ಮದ್ವೆ ದಿನ ಫಿಕ್ಸ್ ಆಗಿದ್ದರಿಂದ ನಾವೆಲ್ಲಾ ಹೋಗಬೇಕಾಯಿತು, ನಾವೆಲ್ಲಾ ಕಾಲೇಜಿನಲ್ಲೇ ಪರಿಚಯದವರಾದ್ದರಿಂದ, ಅವಾಗಿನಿಂದ ನಮ್ಮೆಲ್ಲ ಕ್ರಿಮಿನಲ್ ಅಫರಾದಗಳ ಬಗ್ಗೆ ಅರಿವಿದ್ದ ಅವನು ಯಾವಾಗ್ಲಾದ್ರು ಒದ್ದು ಒಳಗೆ ಹಾಕಿಬಿಡುತ್ತಾನೆ ಎಂಭ ಭಯ ಇತ್ತು ಅಂತ ಕಾಣುತ್ತೆ ಎಲ್ಲಾರು ಚಿತ್ರದುರ್ಗದ ಮದುವೆಗೆ ತಪ್ಪದೆ ಬಂದಿದ್ದಿದ್ದರು.
ನಾನು ಧರಣಿ, ಈಶ, ಗೋವಿಂದ, ಭೂಮ, ಬೆಂಗಳೂರಿನಿಂದ ತುಮಕೂರು ಮಾರ್ಗವಾಗಿ ಪ್ರವಾಸಿ ತಾಣಗಳನ್ನೂ ನೋಡುತ್ತಾ ದುರ್ಗ ತಲುಪಲು ಸಿದ್ಧತೆ ಮಾಡಿಕೊಂಡು ಹೊರಟೆವು, ಬೆಂಗಳೂರಿನ ಕರಾಳ ಟ್ರಾಫಿಕ್ ನಲ್ಲಿ ಕಾರು ನುಗ್ಗಿಸಿಕೊಂಡು ಬೆಳಿಗ್ಗೆಯೇ ಹೊರೆಟೆವು, ನನ್ನ ಅಪಾಯಕಾರಿ ಡ್ರೈವಿಂಗ್, ಕಿವಿ ತೂತು ಬೀಳುವ ಮ್ಯೂಸಿಕ್ ನ ಸಹವಾಸದಲ್ಲಿ ಅವರೆಲ್ಲ ಕುಳಿತಿದ್ದರು.
ಅವಾಗ ತಾನೇ ಬಿಡುಗಡೆಯಾಗಿದ್ದ ಕಾಮಿಡಿ ಟೈಮ್ ಗಣೇಶನ ಅರಮನೆ ಚಿತ್ರದ ಕೊಲ್ಲೇ ನನ್ನನೆ ಅಂತ ನೂರಾರು ಬಾರಿ ವಿಚಿತ್ರವಾಗಿ ಹಾಡಲಾಗಿರುವ ಸಾಂಗ್ ಅನ್ನು ಕೇಳಲು ಶುರು ಹಚ್ಚಿಕೊಂಡೆವು. ಸಿ.ಡಿ.ಪ್ಲೇಯರ್ ನಲ್ಲಿ ರಿಪೀಟ್ ಅಂತ ಬಟ್ಟನ್ ಒತ್ತಿದ್ದರಿಂದ ಮತ್ತೆ ಮತ್ತೆ ಅದೇ ಹಾಡು ಬರತೊಡಗಿತು ಹೊಸ ಟ್ರೆಂಡಿನ ಹಾಡಾಗಿದ್ದರಿಂದ ಅರ್ಥದ ಬಗ್ಗೆ ತಲೆ ಕೆಡಿಸಿಕೊಳ್ಳದೆ ಸುಮ್ಮನೆ ಕೊಲ್ಲಿಸಿಕೊಳ್ಳುತ್ತಾ ಮುಂದುವರೆದೆವು...
ಏನೋ ಅವ್ಯಕ್ತ ಭಾವನೆಗಳನ್ನು ಉಕ್ಕಿಸುತ್ತಿದ್ದ ಹಾಡನ್ನು ಕೇಳುತ್ತಾ.. ಕೇಳುತ್ತಾ... ಕೊಲ್ಲಿಸಿ ಕೊಳ್ಳೋದರಲ್ಲಿ ಏನೋ ಒಂತರಾ ಮಜಾ ಇರೋದನ್ನು ಗುರುತಿಸಿದ ನಾನು ಇಡೀ ದಿನ ಒಂದೇ ಹಾಡನ್ನ ಕೇಳಿದ್ರೆ ಹೇಗೆ ಅಂತ ನಂಗೆ ಹೊಳೆದಿದ್ದನ ಹೇಳಿದೆ, ಹಾಡಿನಲ್ಲಿ ಮುಳುಗಿದ್ದ ಅವರೂ ಗೋಣು ಅಲ್ಲಾಡಿಸಿದರು.
ಬೆಂಗಳೂರು ಬಿಟ್ಟು, ತುಮಕೂರ್ ಮಾರ್ಗ ವಾಗಿ ದೇವರಾಯನ ದುರ್ಗ, ವಾಣಿವಿಲಾಸ ಸಾಗರ ನೋಡುತ್ತಾ ಸಾಗಿದೆವು ಆದ್ರೆ ಹಾಡು ಮಾತ್ರ ನಮ್ಮನ್ನ ಮತ್ತೆ ಮತ್ತೆ ಕೊಲ್ಲತೊಡಗಿತು....
ತೆಲುಗು ಸಿನೆಮಾಗಳ ಡಿಗಿ. ಜಿಗಿ, ಹಾಡು ಕೇಳುವ ಹುಚ್ಚಿರುವ ನನ್ನ ತಮ್ಮ ಜಗ ಹಾಕಿಸಿದ್ದ ಭಾರಿ ಬೆಲೆಯ ಮ್ಯೂಸಿಕ್ ಪ್ಲೇಯರ್ ಕಿವಿಗೆ ತೂತು ಬೀಳುವಂತೆ ಕೊಲ್ಲೇ ನನ್ನನ್ನೇ, ಚುಂಬಿಸಿ ಕೊಲ್ಲು, ಅಪ್ಪಿಕೊಂಡು ಕೊಲ್ಲು, ತಬ್ಬಿಕೊಂಡು ಕೊಲ್ಲು,ಪೀಡಿಸಿ ಕೊಲ್ಲು, ಕಣ್ಣಲ್ಲಿ ಕೊಲ್ಲು ಅಂತ ಚಿತ್ರ ವಿಚಿತ್ರವಾಗಿ ಕೊಲ್ಲುತ್ತಿತ್ತು..
ನನ್ನ ಜೊತೆಯಲ್ಲಿದ್ದ ನನ್ನ ಗೆಳೆಯರ ಎದೆಯಲ್ಲಿ ಯಾವ ಸುಂದರಿಯರು ಕೊಲ್ಲುತ್ತಿದ್ದರೋ ಗೊತ್ತಿಲ್ಲ. ಏನು ಮಾಡಿದ್ರು ಅರ್ಥಕ್ಕೆ ನಿಲುಕದ ಅವ್ಯಕ್ತ ಭಾವಗಳು ಅವತರಿಸ ತೊಡಗಿದವು.... ನಾವು ಕೊಲೆ ಆಗುತ್ತಿದ್ದಕೆ ಯಾರ ಮುಖದಲ್ಲೂ ಬೇಸರ ಕಾಣಲಿಲ್ಲ...
ಚುಂಬಿಸಿ ಚುಂಬಿಸಿ ಕೊಲ್ಲೋದು, ತೋಳುಗಳಲ್ಲಿ ಬಿಗಿದಪ್ಪಿ ಕೊಲ್ಲೋದು...ಕಪ್ಪು ಕಪ್ಪು ಕಣ್ಣಲ್ಲೇ ಕೊಲ್ಲೋದು, ಕ್ಷಣಕೊಮ್ಮೆ ಅಷ್ಟೇ ಅಲ್ಲ ಕಣಕೊಮ್ಮೆ ಕೊಲೆಯಾಗೋದು... ಆಹಾ.....ಎಂತಾ ಮರ್ಡರ್, ಮರ್ಡರ್ ಆದ್ರೆ ಹೀಗೆ ಮರ್ಡರ್ ಆಗಬೇಕು ಅಂತ ತೀವ್ರವಾಗಿ ಅನ್ನಿಸತೊಡಗಿತ್ತು.
....ಈಗಲೂ.....!!
ಆ ಹಾಡಿನ ಸಾಲುಗಳು ಹೀಗಿವೆ. "ಕೊಲ್ಲೇ ನನ್ನನೇ ಕಡು ಕಪ್ಪು ಕಣ್ಣಲ್ಲೇ ಕೊಲ್ಲು,ಮುದ್ದಾದ ಮಾತಲ್ಲೇ ಕೊಲ್ಲು ಬಾ ನನ್ನ ಪ್ರೀತಿಲೆ ಕೊಲ್ಲು ಕ್ಷಣಕೊಮ್ಮೆ ಕೊಲ್ಲು,ಕಣಕೊಮ್ಮೆ ಕೊಲ್ಲು ಕಾಡಿಸಿ ಪೀಡಿಸಿ ಮುದ್ದಿಸಿ ಚುಂಬಿಸಿ ಕೊಲ್ಲೆ ನನ್ನನು...
ಹಾಡಿನ ಸಾಹಿತ್ಯದ ಬಗ್ಗೆ ಅಗಲಿ, ಸಂಗೀತದ ಬಗ್ಗೆ ಆಗಲಿ ತಲೆಗೆ ಹಚ್ಚಿಕೊಳ್ಳದ ನಾವು.. ಕಾರು ಹತ್ತಿದ ಒಡನೆ ಕೊಲೆಯಾಗಲು ಕಾತರಿಸುತ್ತಿದ್ದೆವು...
ನಾಗರಾಜ ನ ಮದುವೆಗೆ ಬಂದ್ದಿದ್ದ ನಿರಂಜನ ಕೊಟ್ಟೂರು,ಆನಂದ್ ಋಗ್ವೇಧಿಗೂ ನಾವು ಕೊಲೆಯಾಗುತ್ತಿರುವ ವಿಧಾನಗಳನ್ನು ಹೇಳಿಕೊಟ್ಟೆವು...
ನಾವು ಹತ್ತಿಸಿದ ಚಟಕೆ ಅವರು ಬಿದ್ದರು...ಟಿಪಿಕಲ್ ಕೊಟ್ಟೂರು ಶೈಲಿಯಲ್ಲಿ ನಿರಂಜನ್ ಇನ್ನೂ ಹೆಂಗೆಗೆಲ್ಲ ಕೊಲ್ತಾನೋ ಮಾರಯಾ ಅಂತ ಉದ್ಗಾರ ತೆಗೆದಿದ್ದ...
ಈ ಘಟನೆ ನಡೆದು ಒಂದು ವರ್ಷವೇ ಆಗಿ ಹೋಗಿದೆ ನಾಗನಿಗೆ ಈಗ ಒಂದು ಗಂಡು ಮಗೂ ಕೂಡ ಆಗಿದೆ, ಆದ್ರೆ ಅವನನ್ನು ನೆನೆಸಿಕೊಂಡಾಗಲೆಲ್ಲ ನಂಗೆ ಅದೇ ಹಾಡು ನೆನಪಾಗುತ್ತೆ...ಅವ್ಯಕ್ತ ಪೀಲಿಂಗು ಸುಳಿದು ಹೋಗುತ್ತೆ.
ನಾವು ಪ್ರಯೋಗ ಮಾಡಿದ ಇನ್ನೊದು ಹಾಡು ದೀಪೋತ್ಸವ ಎಂಬ ಭಾವಗೀತೆ ಸಂಕಲನದ ಪರಮೇಶ್ವರ ಭಟ್ಟರು ಬರೆದಿರುವ "ಪೀತಿಯ ಕರೆ ಕೇಳಿ, ಆತ್ಮನ ಮೊರೆ ಕೇಳಿ ನೀ ಬಂದು ನಿಂತಿಲ್ಲಿ ದೀಪ ಹಚ್ಚಾ..." ಅನ್ನೋ ಭಾವ ಗೀತೆ ಎಷ್ಟು ಭಾರಿ ಕೇಳಿದ್ರು ಮತ್ತಷ್ಟು ಹುಚ್ಚು ಹಿಡಿಸುವ ಹಾಡು...
ನಾನಂತು ಇದೆ ಹಾಡನ್ನ ಕೇಳಿ, ಕೇಳಿ, ಕೇಳಿ, ಕೇಳಿ, ಕೇಳಿ, ಕೇಳಿ,
ಕೇಳಿ, ಕೇಳಿ, ಕೇಳಿ, ಕೇಳಿ, ಕೇಳಿ, ಕೇಳಿ, ಕೇಳಿ, ಕೇಳಿ, ಕೇಳಿ,
ಕೇಳಿ, ಕೇಳಿ, ಕೇಳಿ, ಕೇಳಿ, ಕೇಳಿ, ಕೇಳಿ, ನನಗೆ ಇನ್ನೂ ಬೇಜಾರಗಿಲ್ಲ..
ನೀವು ಟ್ರೈ ಮಾಡಿ.

ನಿನ್ನ ಬ್ಲಾಗ್ ನ ಎಲ್ಲಾ ಪೋಸ್ಟ್ ನೋಡಿದೆ, ಇಷ್ಟು ದಿನ ಬ್ಲಾಗ್ ಲೋಕಕ್ಕೆ ಬರದೆ ಎಲ್ಲಿ ಅಡಗಿದ್ದೋ ಮಾರಾಯ ಶ್ರೀನಿವಾಸಗೌಡ , ನಿನ್ನ ಬರಹಗಳನ್ನು ಓದೋದು ಸಕ್ಕತ್ ಖುಸಿ ಕೊಡ್ತಾ ಇದೆ, ಹೀಗೆ ಬರೀರಿ, ದಯವಿಟ್ಟು ನಿಲ್ಲಿಸಬೇಡಿ. ನಿಮ್ಮ ದಿಂಗನ ಕಥೆ ಓದಿ ಬಿದ್ದು ಬಿದ್ದು ನಕ್ಕೆ...
ReplyDeleteನಾನು ನಿಮ್ಮ ಅಭಿಮಾನಿ.
ಶಾಂತಲ
ಮಂಗಳೂರು
ಅದೊಂದು ಮಾಡುವೆ ಪ್ರವಾಸ ಮುಗಿಸೋದರೋಳಗಾಗಿ ನಮ್ಮನೆಲ್ಲ ನೂರಲ್ಲ ಸಾವಿರ ಸಾವಿರ ಸಲ ಕೊಲ್ಲಿಸಿದ್ದ ಗೌಡ
ReplyDeleteಅವನ ವಿರೋದಿಸಿ ಬೇರೆ ಗೀತೆ ಹಾಕಿದರೆ ಎಲ್ಲಿ ಕಾರು ಮಂದಗತಿಯ ವೇಗಕ್ಕೆ ಇಳಿಯುತ್ತೋ ಅನ್ನೋ ಭಯ ಅದು ಅಲ್ಲದೆ ಅವನಲ್ಲದೆ ಬೇರೆ ಯಾರಿಗೂ ಡ್ರೈವಿಂಗ್ ಕರಗತವಾಗಿರಲಿಲ್ಲ ಎಂಬುದು ಮತ್ತೊಂದು ಗಂಭಿರಾವಾದ ವಿಚಾರ.ಏನೇ ಆದರು ನಾಗರಾಜನ ಮದುವೆ,ಆ ಗುಂಡು ಕವಿ ಗೊಸ್ಟಿ,ಸ್ನೇಹಿತರ ಭೇಟಿ,ಮರೆಯದ ದಿನವನ್ನು ಮತ್ತೆ ಕಣ್ಣೆದುರಿಗೆ ತಂದಿಟ್ಟಿತು ಗೌಡ ನನಗೆ
ಗೌಡ ನೀನು ಯಾರನ್ನ ಕೊಲ್ಲಿಸಿಲ್ಲ . ನಾವು ಜೋಗಕ್ಕೆ ಹೋದಗ್ಲು ಪದೇ ಪದೇ ಒಂದೇ ಹಾಡು ಹಾಕಿ ಕೊಲ್ಲಿಸಿದಿಯ . ಪದೇ ಪದೇ ಅದೇ ಹಾಡು ಬೇಡ ಅಂದ್ರೆ ನೀನು ಕೋಗಡುತಿಯ ಅಂತ ಸುಮ್ಮನೆ ಇದ್ದೆ !
ReplyDeleteIts an ever memorable incident.I still remember the incident where Niranjan cracked a joke for which i mad enaother one!!!moreover, i still have not come out from guilty as i created some nuisance at the time of the marriage after drinking...
ReplyDeletechamkayisi chindi udayisidira goudre
ReplyDelete