Friday, April 24, 2009

ನಂಗಾನಾಚ್ ಶಿವರಾಮೇಗೌಡ ಮತ್ತು ತತ್ವ ಜ್ಞಾನಿ.


"ನೋಡಿ ಗೌಡ್ರೆ ಈ ಡೆಲ್ಲಿ ಐತಲ್ಲ ಇದು ದಿಲ್ ಮಾಡಕ್ಕೆ ಅಂತ ಕಟ್ಟಿರೋ ಊರು, ಈ ಊರಲ್ಲಿ ಬರಿ ಮಜಾ ಮಾಡೋ ಜನ ಇದಾರೆ ಬಿಟ್ರೆ ಇಲ್ಲಿ ಯಾವನೂ ತಿಕ ಬಗ್ಗಿಸಿ ಕೆಲಸ ಮಾಡಲ್ಲ" ಅಂತ ಇದ್ದಕ್ಕಿದಂತೆ ತಮ್ಮ ಟಿಪಿಕಲ್ ಮಂಡ್ಯ ಸ್ಟೈಲ್ ನಲ್ಲಿ ತಮ್ಮ ಮೂತಿ ಮುಂದು ಮಾಡುತ್ತಾ ಹೇಳಿದರು ಶಿವರಾಮೇ ಗೌಡ.
ವರು ದೇಶಾವರಿ ಏನೋ ಹೇಳಿದ್ರಲ್ಲ ಅಂತ ನಾನು ಸುಮ್ಮನಾದೆ. ಆದ್ರೆ ನನಗೆ ಅವರು ಹೇಳಿದ ಮಾತು ಮತ್ತೆ ಮತ್ತೆ ನೆನಪಾಗತೊಡಗಿತು, ನಾನು ದೆಹಲಿಗೆ ಬಂದಾಗಲಿಂದ ನನ್ನ ತಲೆಯಲ್ಲಿ ಕೊರೆಯುತ್ತಿದ್ದ ಹುಳಕ್ಕೆ ಉತ್ತರ ಸಿಕ್ಕಿತ್ತು,
ನನಗೋ ee ಡೆಲ್ಲಿ ಯಾಕೆ ಕಟ್ಟಿದರು, ಯಾಕೆ ಈ ವೈಭೋಗ ಅಂತೆಲ್ಲ ಗೊಂದಲ ಇತ್ತು,
ಗೌಡರ ಮಾತು ಕೇಳಿದ ಮೇಲೆ ನಾನು ಸಂಪೂರ್ಣ ಅವ್ರ ಹೇಳಿಕೆಗೆ ತಲೆ ಬಾಗಿಬಿಟ್ಟೆ. ನಾನು ಎಷ್ಟು ಯೋಚನೆ ಮಾಡಿದ್ರು ಹೌದು ಈ ಊರು ಇರೋದೆ ಮಜಾ ಮಾಡಕ್ಕೆ, ಅದಿಕಾರ ಚಲಾಯಿಸಕ್ಕೆ ಇಲ್ಲಿನ ಪ್ರತಿ ರಸ್ತೆ , ಕಟ್ಟಡ, ಎಲ್ಲವನ್ನು ಮಜಾ ಮಾಡೂ ರಾಜಕಾರಿಣಿಗಳೇ ತಮಗೆ ಬೇಕಾದಂತೆ ಕಟ್ಟಿಕೂಂಡಿದಾರೆ.
ಹಳ್ಳಿಗಳಲ್ಲಿ ಓಟು ಪಡೆದು ಬಂದ ಮಂದಿ ಇಲ್ಲಿ ಬಂದು ಅವರನ್ನ ಸಂಪೂರ್ಣ ಮರೆತು, ಫುಲ್ ಎಂಜಾಯ್ಮೆಂಟ್ ಮಾಡೋಕ್ಕೆ ನಿಂತು ಬಿಡ್ತಾರೆ, ನೋಡಿ ದೆಹಲಿಯನ್ನ ಕೆಲವೇ ಕೆಲವು ಕುಟುಂಭಗಳೇ ಆಳಿವೆ, ಬಡವರ ಅನ್ನ ಸ್ವಿಸ್ಸ್ ಅಕೌಂಟ್ ಗಳಲ್ಲಿ ಸೇರಿದೆ ಇಲ್ಲಿ ಯಾರಿಗೆ ಯಾರು ಕಮ್ಮಿ ಇಲ್ಲ , ಡೆಲ್ಲಿ ರಾಜಕಾರಣಿಗಳ, ವ್ಯಾಪಾರಿಗಳ, ಮದ್ಯವರ್ತಿಗಳ, ಅಧಿಕಾರಿಗಳ ಶ್ರೀಮಂತರ ನಗರ, ಇಲ್ಲಿರೋ ಬಡವರೆಲ್ಲ ಶ್ರೀಮಂತರ ಸೇವೆಗೆ ಬಂದವರು, ನಮಗೆ ಯಾರಿಗೂ ಕಾಣದ ನೆಟ್ವರ್ಕ್ ಕೆಲಸ ಮಾಡ್ತಾ ಇದೆ ಅನ್ನಿಸಕ್ಕೆ ಶುರುವಾಯಿತು ನಾನು ಹೇಗೆಲ್ಲಾ ಯೋಚಿಸಿದರು ಶಿವರಾಮೇ ಗೌಡ್ರ ಸ್ಟೇಟ್ ಮೆಂಟ್ನಿಂದ ಆಚೆ ಏನು ಇಲ್ಲ ಅನ್ನಿಸ್ತಿದೆ. adella
ಇರಲಿ ಮಜಾ ಮಾಡೋ ವಿಷಯದಲ್ಲಿ ಶಿವರಾಮೇ ಗೌಡ ಏನು ಕಡಿಮೆ ಇಲ್ಲ ಅನ್ನೋದು ಊರಿಗೆಲ್ಲ ಗೊತ್ತಿರೋ ಸುದ್ದಿ, ಲೋಕಸಭಾ ಚುನಾವಣೆಗಳಲ್ಲಿ ಮಂಡ್ಯದಿಂದ ಸ್ಪರ್ಧೆಗೆ ಇಳಿಯಲು ಕಾಂಗ್ರೆಸ್ ಟಿಕೆಟ್ ಕೇಳಲು ಬಂದಿದ್ದ ಅವರು ವಿಪರೀತ ಬೆಲೆಯ ಲೀ ಮೆರಿಡಿಯನ್ ಹೋಟೆಲ್ ನಲ್ಲಿ ಬಿಟ್ಟರೆ ಇನ್ನೆಲ್ಲೂ ಉಳಿದುಕೊಳ್ಳುತ್ತಿರಲಿಲ್ಲ, ಅವ್ರು ಹಾಕೋ ಸನ್ ಗ್ಲಾಸು, ಹಾಕೋ ಗರಿ ಗರಿ ಬಟ್ಟೆ, ವಾಚು, ಎಲ್ಲಕ್ಕೂ ಮುಖ್ಯವಾಗಿ ಅವರು ಮಾತಾಡೋ ಸ್ಟೈಲ್ ಚಿತ್ರ ವಿಚಿತ್ರ.
ಶಿವರಾಮೆ ಗೌಡರಿಗೆ ಟಿಕೆಟ್ ಕೊಟ್ಟೆ ಕೊಡಿಸ್ತಿವಿ ಅಂತ ಪಣತೊಟ್ಟು ಅವರನ್ನು ನಂಬಿಸಲು ಯಶಸ್ವಿಯಾಗಿದ್ದ ಕೆಲವರು ಹಿರಿಯ ನಾಯಕರ ಲಕ್ಸಾಂತರ ರುಪಾಯಿ ಹೋಟೆಲ್ ಬಿಲ್ ಶಿವರಾಮೆ ಗೌಡನೆ ಕಟ್ಟಿದ, ಆದ್ರೆ ಯಾವಾಗ ಟಿಕೆಟ್ ಸಿಗಲ್ಲ ಅಂತ ಗೊತ್ತಾಯ್ತೋ "ದಿಲ್ ವಾಲಿ" ನಗರಕ್ಕೆ ಬರುವ ಸೆಳತ ತಡೆಯಲಾಗದೆ ಶಿವರಾಮೆ ಗೌಡ ರಾತ್ರೋ ರಾತ್ರಿ ಬಿಜೆಪಿ ಸೇರಿಬಿತ್ತಿದಾರೆ, ಅವರು ಇಲ್ಲಿಗೆ ಬಂದೆ ದಿಲ್ ವಾಲಿಗಳ ನಗರಕ್ಕೆ ಮತ್ತಷ್ಟು ರಂಗು ಬರುತ್ತೆ ಅಂತ ದೆಹಲಿ ಕರ್ನಾಟಕ ಭವನದ ನೌಕಾರರು ಕಾಯ್ತಾ ಇದಾರೆ.

3 comments:

  1. illiya vishaya gowda ninnanu kevala patrakartanaagiddake kaadiruvudalla,adara melaagi ninna maanava manasu raajakiya vyaktigala dongi aacharaneya baggeyu yochiside aantaryadalli.ninna kaadida vishaya pratiyobbarannu kaaduvantaadare..........then we can see change in ourself and in namma deshadalli....keep it up good one to interprit your own experiences as a socital issue.

    ReplyDelete
  2. gowda tumba chennagide shivaram purana..

    ReplyDelete
  3. hai ur article regarding sivarame gowda is superob the way u narrated the article is really good.

    ReplyDelete