Monday, April 27, 2009

ಅಕ್ಕ ಮಾಯಾವತಿಯ ಬೆವರಿನ ವಾಸನೆ
ನೇರವಾಗಿ ವಿಷಯಕ್ಕೆ ಬಂದುಬಿಡುತ್ತೇನೆ ಮಾಯಾವತಿ ಗೊತ್ತಲ್ಲ ಅಖಂಡ ಭಾರತದ ಅತೀ ದೊಡ್ಡ ರಾಜ್ಯ ಉತ್ತರಪ್ರದೇಶದ ಅನಬಿಷಿಕ್ತ ರಾಣಿ, ನನ್ನ ಪ್ರಕಾರ ಮಾಯಾವತಿ ನಿಜವಾದ ರಾಣಿಯೇ ಸರಿ ಪಾದಯಾತ್ರೆ ಮಾಡಿ, ಸೈಕಲ್ ಹೊಡೆದು ಬೆವರು ಸುರಿಸಿ ಆನೆಯೇರಿ ಹಾಗೆ ಲಕ್ನೂದ ಸಿಂಹಾಸನ ಏರಿದ ದಲಿತ ಮಹಿಳೆ, ಭಾರತದಂತ ದೇಶದಲ್ಲಿ ಬಡವರಿಗೆ ಜನಸಾಮಾನ್ಯರಿಗೆ ನಿಲುಕದ ರಾಜಕೀಯದಲ್ಲಿ ಸೈ ಎನಿಸಿಕೊಂಡಾಕೆ. ಅದರಲ್ಲಿ ಜಾತಿ ವ್ಯವಸ್ಥೆಯಿಂದ ಹೊರಬರದ, ಸವರ್ಣೀಯ, ಅಸವರ್ಣಿಯ, ಅಸ್ಪರ್ಶ ಎಂಬ ಧರಿದ್ರಗಳಿಂದ ಕೂಡಿದ ಜಾಜಕಾರಣ ಮದ್ಯೆ ಎದ್ದು ಬಂದು ರಾಜಕೀಯಕ್ಕಿಳಿದ just school teacher.....!

ಮಾಯಾವತಿಯ ರಾಜಕೀಯ ಗುರು ಕಾನ್ಕ್ಷಿ ರಾಮ್ ಇರಬಹುದು ಆದರೆ ಮಾಯಾವತಿಯ ಶಕ್ತಿಗೆ ಅವಳೊಬ್ಬಳೆ ಸಾಟಿ ಅಂತ ಗುರುವೇ ಒಪ್ಪಿಕೊಂಡಿದ್ದರು, ಇಲ್ಲಿ ನಡೆಯುವ ದಟ್ಟ ದರಿದ್ರ ರಾಜಕಾರಣದ ನಡುವೆಯೂ ರಾಜಕ್ಕೀಯಕ್ಕಿಳಿದು ನೊಂದು ಬೆಂದು ನಾಲಕ್ಕು ಬಾರಿ ಸೋತು ಸುಣ್ಣವಾದರು ತಲೆಬಾಗದೆ ತನ್ನ ೩೩ ನೇ ವಯಸ್ಸಿನಲ್ಲಿ ಉತ್ತರ ಪ್ರದೇಶದ ಅಜಂಗಢದಿಂದ 1989 ರಲ್ಲಿ ಲೋಕಸಭೆಗೆ ಆಯ್ಕೆಯಾಗುತ್ತಾಳೆ.

ಯಾವ ಶ್ರೀಮಂತನ ಮಗಳೂ ಅಲ್ಲದ, ರಾಜವಂಶದ ಕುಡಿಯಲ್ಲದ, ರಾಜಕಾರಣಿಯೊಬ್ಬನ ವಿಧವೆ ಅಲ್ಲದ, ಶೋಕಿಲಾಲನ ಗೆಳತಿಯಲ್ಲದ ಕೇವಲ ಧಲಿತ ಮಹಿಳೆ.
ಇಂಥ ಮಾಯಾವತಿ ಲೋಕಸಭೆಗೆ ಬಂದರೆ ಸುಮ್ಮನಿರುತ್ತಾಳ ಅಕ್ಕ, ತನ್ನ ದಲಿತ ಬಂದುಗಳಿಗೆ ಅನ್ಯಾಯವಾದಾಗಲೆಲ್ಲ ಎದ್ದು ನಿಂತು ಅರಚುತ್ತಿದ್ದಳು, ತಾನು ಮೊದಲ ಬಾರಿಗೆ ಲೋಕಸಭೆಗೆ ಬಂದೆ ಎಂಬುದನ್ನೇ ಮರೆತು ಲೋಕಸಭೆಯ ಹಿರಿಯರು ಹುಬ್ಬೇರಿಸುವಂತೆ ಮಾಡಿದಾಕೆ. ಆಗ ತಾನೇ ರಾಜ್ಯ ರೈಲ್ವೆ ಸಚಿವನಾಗಿದ್ದ ಅಜಯ್ ಸಿಂಗ್ ಜೈಪುರದಲ್ಲಿ 26 ಧಲಿತ ಮಹಿಳೆಯರನ್ನ ರೇಪ್ ಮಾಡಿದ್ದಾನೆ, ಆತನನ್ನ ಸಂಪುಟದಿಂದ ಕಿತ್ತು ಹಾಕಿ ಎಂದು ದಲಿತ್ ಕಿ ಬೇಟಿ ಮಹಿಳೆಯರಿಗೆ ಧನಿಯಾಗುತಾಳೆ ಆದರೆ ಲೋಕಸಬೆಯಲ್ಲಿ ಇರುಸುಮುರಿಸಿಗೆ ಸಿಕ್ಕ ಮಂತ್ರಿ ಕೊಟ್ಟ ಉತ್ತರ ಏನು ಗೊತ್ತ,
"ನೋಡಿ ಮಾಯಾ ನನಗೆ ಒಬ್ಬಳೇ ಹೆಂಡತಿ ಅವಳನ್ನು ಸಂಬಾಳಿಸೋದೆ ಕಷ್ಟ ಅಂತದರಲ್ಲಿ ಎರಡು ಡಜನ್ ಮಹಿಳೆಯರನ್ನು ನಾ ಹೇಗೆ ರೇಪ್ ಮಾಡಲಿ ನೀವೇ ಹೇಳಿ" ಅಂತ.
ಈ ದೇಶದಲ್ಲಿ ಕೈಲಾಗದವ್ರ ಮೇಲೆ ಶಕ್ತಿ ವಂತರು ಮಾಡೋ ಜೋಕ್ ಗಳೇ ಹಾಗಿರುತ್ತವೆ....., ಹೌದಲ್ಲ..

ತಲೆಗೆ ಎಣ್ಣೆ ಹಚ್ಹಿಕೊಂಡು, ಹಳೆ ಬಟ್ಟೆ ಉಟ್ಟುಕೊಂಡು, ಸುಗಂಧದ್ರವ್ಯದ ಬಗ್ಗೆ ಗೊತಿಲ್ಲದ ಮಾಯಾವತಿಯನ್ನ ಅದೇ ಲೋಕಸಭೆಯ ಮಹಿಳಾ ಮಣಿಯರು ಮಾಯಾವತಿ ಸಕ್ಕತ್ ಬೆವರುತ್ತಾಳೆ, ಅವಳ ಹತ್ರ ನಿಂತುಕೊಳ್ಳಕು ಆಗಲ್ಲ ಅಂತ ಮೂಗು ಮುರಿತಿದ್ರಂತೆ, ಇನ್ನು ಒಂದು ಹೆಜ್ಜೆ ಮುಂದೆ ಹೋಗಿ ಮಾಯಾವತಿ ಬೆವರಿನ ವಾಸನೆ ತಡೆಯಕ್ಕೆ ಆಗಲ್ಲ ಅವಳಿಗೆ ಹೇಳಿ ಒಳ್ಳೆ ಬಾಡಿ ಸ್ಪ್ರೇ ಮಾಡಿಕೊಳ್ಳೋಕೆ ಅಂತ ಹಿರಿಯ ರಾಜಕಾರಣಿಯೊಬ್ಬನ ಮೂಲಕ ಸಲಹೆ ನೀಡಿದರಂತೆ ರಾಯಲ್ ಫ್ಯಾಮಿಲಿಯಿಂದ ಬಂದಿದ್ದ ಮಹಿಳಾಮಣಿಗಳು.
1989 ರ ಮೊದಲ ಲೋಕಸಭೆಯ ನಂತರ, 1995 ರಲ್ಲಿ 132 ದಿನ, 1997 ರಲ್ಲಿ 6 ತಿಂಗಳು 2002 ರಲ್ಲಿ ಮತ್ತೊಮ್ಮೆ ಮುಖ್ಯಮಂತ್ರಿಯಾಗಿ
2007 ರಲ್ಲಿ ವಿಧಾನಸಭೆಯ 272 ಸೀಟುಗಳಲ್ಲಿ 206 ಸೀಟು ಗೆದ್ದು ಯಾವ ರಾಷ್ಟ್ರೀಯ ಪಕ್ಷದ ಹಂಗ್ಗಿಲ್ಲದ ಉತ್ತರ ಪ್ರದೇಶದ ಅನಭಿಷಿಕ್ತ ರಾಣಿಯಾದಳು,

ಲಕ್ನೋದ ಗದ್ದುಗೆ ಏರಿದ ಕೆಲವೇ ತಿಂಗಳಲ್ಲಿ ಉತ್ತರ ಪ್ರದೇಶವನ್ನು ಇನ್ನಿಲ್ಲದಂತೆ ಕಾಡುತ್ತಿದ್ದ ಗೂಂಡಾಗಳು, ಡಾಕುಗಳು, ಡಾನ್ ಗಳು, ಕಳ್ಳಕಾಕರನು ಊರೇ ಬಿಟ್ಟು ಹೋಗುವಂತೆ ಮಾಡಿದವಳು ಅಕ್ಕ ಮಾಯಾವತಿ.

ಮಾಯಾವತಿಯ ಬೆವರಿನ ವಾಸನೆ ಹಿಡಿದು ಕುಹಕದ ಮಾತಾಡಿದ್ದ ರಾಯಲ್ ಫ್ಯಾಮಿಲಿಯ ಮಹಿಳೆಯರು ಈಗ ಎಲ್ಲಿದಾರೋ ಗೊತ್ತಿಲ್ಲ ಆದರೆ ಮಾಯಾವತಿಯ ಆನೆ ದೆಹಲಿ ಗದ್ದುಗೆ ಎದೆಗೆ ಮುಖ ಮಾಡಿ ನಿಂತಿದೆ.

ದಲಿತ್ ಕಿ ಬೇಟಿ ಮಾಯಾವತಿ ಬಳಿ ಈಗ ಬೆವರಿನ ವಾಸನೆ ಬರಲ್ಲ ಅಧಿಕಾರದ ವಾಸನೆ ಬರುತ್ತೆ....ಅಲ್ಲವಾ ಗೆಳೆಯರೇ...!!

11 comments:

 1. ಗೌಡ್ರೆ ರಾಜಕೀಯದಲ್ಲಿ weak ನಾನು... ಚೆನ್ನಾಗಿದೆ writing...Title for the topics are catchy dude....

  ReplyDelete
 2. ಎಂಥದು ಗೌಡ್ರೆ...ಮಾಯಾವತಿ ನಮ್ಮ ದೇಶದ ಪ್ರಧಾನಿ ಎಲ್ಲಾದ್ರೂ ಆದ್ರೆ...ಅವರ ಬೆವರು ಮಾತ್ರ ಅಲ್ಲ...ಇಡೀ ದೇಶ ಕೊಳೆತು ನಾರ್ಬೋದು...

  ಅಂದಹಾಗೆ ಇವತ್ತು ಎಲ್ಲಿ ಟೈಪ್ ಮಾಡಿದ್ರಿ?

  ReplyDelete
 3. maja ethhu gowdre.. DHYAN POONACHA. note my no 99805 47777 VIJAYA KARNATAKA

  ReplyDelete
 4. hi, I saw ur blog just now....
  ur writeup's r nice.... I just got ur message
  thru my mobile, keep on writing about delhi, culture, politics and etc., I liked very much ur blog.
  Jayakumar.C., 9341703518, Arkalgud

  ReplyDelete
 5. gowdre, realy bevarina baragara! nivu mayavathi bagge baredilla, tumkur or kolara jilleya KADAK AKKANDIRA bagge barediruviri enisithu! lankeshara AKKA novel tumbanu bari bevaru!
  MAYA namagella AKKANA thara, dalitharige AMMANA thara... E madye e sarma yaru godre?

  ಎಂಥದು ಗೌಡ್ರೆ...ಮಾಯಾವತಿ ನಮ್ಮ ದೇಶದ ಪ್ರಧಾನಿ ಎಲ್ಲಾದ್ರೂ ಆದ್ರೆ...ಅವರ ಬೆವರು ಮಾತ್ರ ಅಲ್ಲ...ಇಡೀ ದೇಶ ಕೊಳೆತು ನಾರ್ಬೋದು...
  intha mathu bareyuva manasugal kolethu sathamanagle kaledive....

  ReplyDelete
 6. ಮಾಯಾ ಅಕ್ಕ ಆಗಿನ್ನೂ ತನ್ನ ಓದನ್ನು ಮುಗಿಸಿ ಲಕ್ನೋದ ಹತ್ತಿರದ ಯಾವುದೋ ಹಳ್ಳಿಯಲಿ ಟೀಚರ್ ಆಗಿ ಕೆಲಸ ಮಾಡ್ತಾ ಇರೋವಾಗ ಉತ್ತಮ ಭಾಷಣ ಮಾಡ್ತಾ ಇದ್ದರಂತೆ. ಅದರಲ್ಲೂ ಮಹಿಳೆಯರ ಶೋಶನೆಗಳನು ಖಂಡಿಸೋ ಮಾತುಗಾರಿಕೆಯಲಿ ಪರಿಣಿತೆ. ತಾನು IAS ಮಾಡಿ ಸಾಮಾಜ ಸೇವೆಯಲಿ ತೊದಗಬೇಕೆಬ ಹಂಬಲವಿದ್ದವಳ ಭಾಷಣವನ್ನು ಆಲಿಸಿದ ಅವಳ ಗುರು ಕಾನ್ಶಿರಾಮ್ ಕರೆದು ಕೇಳಿದನಂತೆ ನೀನು ಯೇನಾಗಬೇಕೆನ್ದಿದ್ದಿಯ ಎಂದು ಮಾಯಾ ತನ್ನ ias ಕನಸನ್ನು ಹೇಳಿದಾಗ ನನ್ನ ಜೊತೆ ಪಕ್ಷಕ್ಕಾಗಿ ದುಡಿ ಅಂತ ನೂರಾರು IAS OFFICERS ನಿನ್ನ ಹಿಂದೆ ಮುಂದೆ ಓಡಾಡೋ ರೀತಿ ಮಾಡುತೆನೆಂದು ಕರೆದುಕೊಂಡು ಹೋದ. ಅಂದು ಕಾನ್ಶಿರಾಮ್ನ ಭವಿಷ್ಯಕ್ಕೆ ನಾವುಗಳು ವರ್ತಮಾನದ ಸಾಕ್ಷಿಗಳಗಿದ್ದೇವೆ....ಅಲ್ಲವಾ ಗೌಡ ಅದ್ಭುತವಾದ ನಿನ್ನ ಬತ್ತಳಿಕೆಯ ಬಾಣಗಳು ನಮ್ಮೆಡೆಗೆ ಚಿಮ್ಮಲಿ ......

  ReplyDelete
 7. sakath agi bardidera, elli etidira entha topics nella.

  ReplyDelete
 8. tumba chennagide riparvagila talent jasti ide namma kolar hudugarigu.politics tumba hesige ansudru devegowdara bagge jokes yavaglu kushi ansutte matte revanna innobba mahashaya na bagge yavaglu kutuhala.nanage ondu yavaglu yelli yadru hudukadodu andre revanna bagge avana dinachari.profile illadale iro manushya adu andre yenu antane gottildale ironu hege yellarnu hiditadali itkontane anta.avanu yaglu nanage ansodu 'he-man" anta.

  ReplyDelete
 9. le baga bereyavdadru blog nalli bariyo i think u r silent for a while

  ReplyDelete