Wednesday, April 29, 2009


ಅಹಾ....ಈ ಹುಡುಗೀರು....!
ಬಹುತೇಕ ಮದುವೆ ವಯಸ್ಸಿಗೆ ಬಂದಿರುವ, ಇಲ್ಲ ಮದ್ವೆ ವಯಸ್ಸನ್ನು ಮೀರುತ್ತಿರುವ ನನ್ನ ಕೆಲವು ಮೈಸೂರು, ಬೆಂಗಳೂರಿನ ಗೆಳೆಯರು ಮಚ್ಚಾ ಡೆಲ್ಲಿ ಹುಡುಗಿಯರ ಬಗ್ಗೆ ಬರೆಯೋ ಅಂತ ಸಿಕ್ಕಾಪಟ್ಟೆ ಒತ್ತಡ ತರುತ್ತಿದ್ದಾರೆ, ಯಾರಿಗೂ ಏನನ್ನು ಇಲ್ಲ ಎನ್ನಲು ಆಗದ ನಾನು ಪ್ರಾಯದ ನನ್ನ ಗೆಳೆಯರ ಆಸೆಯನ್ನ ನಿರಾಸೆಗೊಳಿಸುವುದು ಅಕ್ಷಮ್ಯ ಅಪರಾಧ ಎಂದು ಬಗೆದು ಡೆಲ್ಲಿಯಲ್ಲಿ ಕಂಡ ನೀಲೂಗಳ ಬಗ್ಗೆ ನನ್ನ ಟಿಪ್ಪಣಿಯನ್ನ ಇಲ್ಲಿ ಹಾಕಿದ್ದೇನೆ ಓದಿ.

ನಾನು ನೆವೆಂಬರಿನ ಚುಮು ಚುಮು ಚಳಿಯಲ್ಲಿ ಡೆಲ್ಲಿಗೆ ಬಂದಾಗ ಏಕಾಂಗಿಯಾಗಿದ್ದೆ, ಹೊಸ ಊರಿಗೆ ಬಂದಾಗೆ ಎಲ್ಲಾರಿಗೂ ಹುಟ್ಟಿಕೊಳ್ಳುವ ಕುತೂಹಲ ನನಗೂ ಇತ್ತು, ಈ ಊರಿನ ವಿಶೇಷ ಏನು ಎಂಬ ಕುತೂಹಲಿ ಹುಡುಕಾಟದಲ್ಲಿದ್ದೆ, ಆಗ ನನ್ನ ಕಣ್ಣಿಗೆ ಬಿದ್ದಿದ್ದು ಎತ್ತರದ ನಿಲುವಿನ, ಕೆಂಪು ಬಣ್ಣದ ನೀಳ ಕಾಯದ, ಕೆಂಪು ಕೆಂಪು ಬಣ್ಣದ ಬೆಡಗಿಯರು.

ಮೆಟ್ರೋ ರೈಲು ನಿಲ್ದಾಣಗಳಲ್ಲಿ , ಬ್ಲೂಲೈನ್ ಬಸ್ಸುಗಳಲ್ಲಿ, ಶಾಪಿಂಗ್ ಮಾಲಗಳಲ್ಲಿ, ಕಾರುಗಳಲ್ಲಿ, ನಿಂತಲ್ಲಿ, ಕುಂತಲ್ಲಿ ಎಲ್ಲಿ ಕಂಡರಲ್ಲಿ ಅಬ್ಬಾ ಹುಡುಗೀರು....

ನಾನು ನೋಡಿದ್ದನ್ನು ನಾನೊಬ್ಬನೇ ಸವಿದರೆ ಹೇಗೆ ಅದಕ್ಕೆ ನನ್ನ ಗೆಳೆಯರಿಗೆ ಕಾಲ್ ಮಾಡಿ ಲೈವ್ ಕಾಮೆಂಟರಿ ಕೊಡುತ್ತಿದ್ದೆ, ಸೀರಿಯಸ್ಸಾಗಿ ಏನಾದ್ರೂ ಪೋನಿನಲ್ಲಿ ಹೇಳಿದರೆ ಪಾಪಿ ನನ್ಮಗ ಗೌಡ ತಲೆ ತಿಂತಾನೆ ಅನ್ನುತ್ತಿದ್ದ ಗೆಳೆಯರು ಹೌದಾ... ಹಂಗಾ... ಅಯ್ಯೋ ನಾವು ಬರ್ತಿವಿ, ಇಗೋ ಟಿಕೆಟ್ ಬುಕ್ ಮಾಡಿದ್ವಿ, ಅಂತ ಹೇಳೋರು ಆದ್ರೆ ಯಾರು ಬರಲೇ ಇಲ್ಲ. ನಾನಾದರು ನೋಡಿದವನ ರೋಮಾಂಚನಕ್ಕು ಕೇಳಿದವನ ಪುಳಕಕ್ಕು ವ್ಯತ್ಯಾಸ ಇಲ್ಲವಾ.... ಅಂತ ಸುಮ್ಮನಾದೆ.

ದೆಹಲಿ ಇದೆಯಲ್ಲ ಅದು ವಲಸಿಗರ ನಗರ, ದೇಶದ ನಾನಾ ಭಾಗಗಳಿಂದ ಬಂದವರು ಒಂದೆಡೆ ಕಲೆತು, ಅವರೆಲ್ಲ ಮತ್ತೆ ಮತ್ತೆ ಕಲೆತು, ಏನೇನೋ ರಾಡಿ ಆಗಿ ಇದೀಗ ಸುಂದರ ಲೋಕ ನಿರ್ಮಾಣ ಆಗಿದೆ...!

ಕಾಶ್ಮೀರದ ಆಪಲ್ ಬಣ್ಣದ ಬೆಡಗಿಯರು, ತುಂಬು ದೇಹದ, ಗೋಲಿ ಗೋಲಿ ಕಣ್ಣಿನ ಬೆಂಗಾಲಿಗಳು, ಮಣಿಪುರದ ಶರ್ಮಿಳೆಯರೂ, ಅಸ್ಸಾಮಿನ ಚಿಂಕಿಗಳು, ಕುಳ್ಳಗೆ ಗುಂಡು ಗುಂಡಾಗಿರುವ ಬಿಹಾರಿಗಳು, ಜಿಲೇಬಿ ಬಣ್ಣದ ಪಂಜಾಬಿಗಳು...ಎತ್ತರಕ್ಕೆ ಬಿಗಿ ಬಿಗಿ ನಿಲುವಿನ ದೆಹಲಿ ಮೂಲದವರು ಅಹಾ.... ಹಬ್ಬ.

ಡಿಸೆಂಬರ್, ಹಾಗು ಜನವರಿಯ ಚಳಿಗೆ ದೆಹಲಿ ಜನರ ಉಡುಗೆಗಳೇ ಬೇರೆ, ಹಿಮಾಲಯಕ್ಕೆ ಹಿರೋ ಮತ್ತು ಹಿರೋಯಿನ್ನು ಹನಿಮೂನಿಗೆ ಹೋದ ಸೀನಿನಲ್ಲಿ ಕಾಣುವ ಉಡುಗೆ ಚಳಿಗಾಲದಲ್ಲಿ ಹಾಕಿಕೊಳ್ಳುತ್ತಾರೆ, ಹಳ್ಳಿ ಕಡೆಯಿಂದ ಬಂದ ನನಗಂತೂ ಅಹಾ ರೋಮಾಂಚನ.
ಮೇ, ಎಪ್ರಿಲ್ , ಜೂನ್ ತಿಂಗಳ ಸೆಕೆಗೆ ಉಡುಗೆಗಳೇ ಬೇಡಪ್ಪ ಅನ್ನೋ ಪರಿಸ್ಥಿತಿ. ಎಲ್ಲಾ ತುಂಡು, ತುಂಡು, ಮೈಮೇಲೆ ಬಟ್ಟೆಯೇ ಬೇಡ ಅನ್ನೋ ಸೆಕೆಯಲ್ಲಿ ಹೆಂಗಸರ ಡ್ರೆಸ್ಸು ಹಾಗೆ.. ಇರತ್ತೆ.
ಬರೆ ಬಟ್ಟೆ ಅಲ್ಲ ಇಲ್ಲಿನ ಹೆಂಗಳೆಯರ ಸೌಂದರ್ಯ ಪ್ರಜ್ಞೆ ಕೂಡ ಚೆಂದ, ಬೆಳ್ಳಗೆ ಎತ್ತರದ ಹೆಂಗಳೆಯರು ಅವರು ವಿಶೇಷ ವೈಯಾರಗಳಿಂದ ಗಮನ ಸೆಳೆಯುತ್ತಾರೆ.
ಬಾಲಿವುಡ್ಡಿನ ಹಿರೋಯಿನ್ನುಗಳು ನೇರವಾಗಿ ನಿಮ್ಮ ಹೆಗಲ ಮೇಲೆ ಕೈ ಹಾಕಿದರೆ ಹೇಗೆ ಆಗಬೇಡ ಹಾಗೆ... ಎತ್ತರಕ್ಕಿರುವ ನೀಳಕಾಯದ ನೀಲೂಗಳಂತೂ ನಿಮ್ಮ ಹೊಟ್ಟೆ ಚರುಕ್ ಅನ್ನಿಸಿಬಿಡ್ತಾರೆ ತಿಳ್ಕೊಳ್ಳಿ.

ಕರ್ನಾಟಕದಲ್ಲಿ ಸುಂದರಿಯರು ಇಲ್ಲ ಅನ್ನೋದು ನನ್ನ ವಿಚಾರವಲ್ಲ... ನೋಡುವ ಕಣ್ಣಿಗೆ, ಮತ್ತು ಆಸಕ್ತಿಗೆ ಇಲ್ಲಿ ಹಬ್ಬ, ಇಂಟರೆಸ್ಟ್ ಇರುವ ಗೆಳೆಯರಿಗೆ ನನ್ನ ಸಲಹೆ ಚಳಿಗಾಲದಲ್ಲಿ ಇಲ್ಲಿಗೆ ಬನ್ನಿ, ಬಹು ಸಂಸ್ಕ್ರತಿ ದೇಶದ ಮೂಲೆ, ಮೂಲೆಯ ತರಾವರಿ ತಳಿ ಹಾಗು ಮಿಶ್ರ ತಳಿಗಳು, ಬಣ್ಣ ಬಣ್ಣ ಜನರನ್ನ ನೋಡೋಕೆ ಚೆನ್ನ....ಉಳಿದ ವಿಚಾರ ನನಗೆ ಗೊತ್ತಿಲ್ಲ....
ಈ ಎಲ್ಲದರ ಮದ್ಯೆ ನಂಗೆ ವಿಚಿತ್ರ ಅನ್ನಿಸಿದ್ದು, ಉತ್ತರಪ್ರದೇಶ, ಹರಿಯಾಣ, ಜಾರ್ಕಂಡನ ಹೆಂಗಸರಿಗೆ ಇರುವ ಲಿಪ್ಸ್ಟಿಕ್ ಶೋಕಿ, ಮತ್ತು ಗಾಡ ಬಣ್ಣದ ಸೀರೆಗಳ ಸೆಳೆತ.
ಕಡು ಕೆಂಪು ಬಣ್ಣ, ಕಾಪಿಬಣ್ಣ, ಗುಲಾಭಿ ಬಣ್ಣ, ನೀಲಿ ಬಣ್ಣದ ಲಿಪ್ಸ್ಟಿಕ್ ಗಳ ನ್ನು ಹಚ್ಚಿಕೊಂಡಿರುತ್ತಿದ್ದ ಹೆಂಗಸರು ನಂಗೆ ಯಾಕೋ ಅಸಹನೆ ಹುಟ್ಟಿಸುತ್ತಿದ್ದರು, ಇಂತಹ ಗಾಡ ಬಣ್ಣದ ಹುಚ್ಚು ಯಾಕೋ ನನಗೆ ಅರ್ಥ ಆಗಲ್ಲ.

ವಿಶೇಷ ಅಂದರೆ ನಾನು ವಾಸ ಮಾಡೋ ರಾಜೇಂದ್ರ ನಗರ ಭಾರತ, ಪಾಕಿಸ್ತಾನ ವಿಭಜನೆ ಆದಾಗ ಸಿಕ್ಕರ ಪುನರ್ವಸತಿಗೆ ಕಟ್ಟಿದ ಏರಿಯಾ.
ಹೆಜ್ಜೆ , ಹೆಜ್ಜೆಗೂ ಪಂಜಾಬಿಗಳು...ದುಂಡಗೆ ಸಂಪಾಗಿರುವ ಅವರನ್ನು ನೋಡುವುದೇ ಖುಷಿ. ಆದರೆ ಈ ಪಂಜಾಬಿಗಳ ಬಗ್ಗೆ ಇಲ್ಲಿನ ಕಾಲೇಜು ಹುಡುಗರು ಹೇಳೋ ಜೋಕ್ ಬೇರೆ ತರದ್ದು " ಸರ್ದಾರ್ ಜಿ ಕಾ ಬಚ್ಚಾ..ಔರ್ ಗಧೆ ಕೀ ಬಚ್ಚಾ ಜಬ್ ಚೋಟಾ ಹೋ ತಾಹೆ ಜಬ್ ಅಚ್ಚಾ ರೆಹ್ತಾಹೆ..." ಇದನ್ನು ಕೇಳಿ ನಾನು ಹೆದರಿ ಹೋದೆ. ನಾನು ಮತ್ತು ನನ್ನಂತೆ ಬ್ಯಾಚುಲರ್ ಆಗಿರುವ ನನ್ನ ಜೋತೆಗಾರನೂಬ್ಬನಿಗೆ ಹಿರಿಯ ಪತ್ರಕರ್ತ ಒಬ್ಬರು ಕೊಟ್ಟ ಸಲಹೆ ಹಾಗೆ ಇತ್ತು ಬೆಳ್ಳಗೆ ಅವ್ರೆ ಅಂತ ಬಿದ್ರಿ ಮಕ್ಳಾ ಕೆಟ್ರಿ....ಅಂತ.

ಹುಡುಗೀರ ಬಗ್ಗೆ ಬರೆದು ಇಲ್ಲಿನ ಸಾರ್ವಜನಿಕ ಪಾರ್ಕುಗಳ ಬಗ್ಗೆ, ಪ್ರೇಮಿಗಳ ಹಾಟ್ ಸ್ಪಾಟ್ ಗಳ ಬಗ್ಗೆ ಹೇಳದೆ ಹೋದ್ರೆ ಮೋಸ ಮಾಡಿದಂತೆ ಸರಿ.
ಇಲ್ಲಿನ ಇಂದ್ರಪ್ರಸ್ತ ಪಾರ್ಕ್, ಬುದ್ಧ ಗಾರ್ಡನ್, ನೆಹರು ಪಾರ್ಕ್, ಡಿಯರ್ ಪಾರ್ಕ್ . ಸಂಜಯ್ ಪಾರ್ಕ್, ಸಂಜೆಯಾದ ಮೇಲೆ ಇಂಡಿಯಾಗೇಟ್ ಗಳಿಗೆ ಬಂದರೆ ಅಬ್ಬಾ ನಂಗೆ ಏನು ಹೇಳಕ್ಕೆ ಆಗಲ್ಲ, ಇಲ್ಲಿನ ಪೊಲೀಸರು ಬುದ್ಧ ಗಾರ್ಡನ್ನಿನ ಬುದ್ಧರಂತೆ... ಅಕಸ್ಮಿಕವಾಗೆನಾದರು ಶ್ರೀರಾಮಸೇನೆ ಮುತಾಲಿಕ ಏನಾದ್ರೂ ಇಲ್ಲಿಗೆ ಬಂದ್ರೆ ಆತ್ಮಹತ್ಯೆ....!
ನಾನು ಮೊದ್ಲೇ ಹೇಳಿದಂತೆ ನಾನು ಕಂಡಿದ್ದನೆಲ್ಲ ನನ್ನ ಗೆಳೆಯರಾದ ಈಶ, ಗೋವಿಂದ, ಗಿರಿ, ಅರುಣ್, ರಾಗು, ಸುಬ್ಬು, ವಿಜಿ, ಬನವಾಸೆ ಮಂಜು ಇವರಿಗೆಲ್ಲ ಲೈವ್ ಕಾಮೆಂಟರಿ ಕೊಟ್ಟಿದ್ದಕೆ ನಾನು ತೆತ್ತ ಬೆಲೆ ಒಂದೇ ತಿಂಗಳಿಗೆ ೪೫೦೦ ರುಪಾಯಿ ಮೊಬೈಲ್ ಬಿಲ್ಲು...

13 comments:

  1. ಗೌಡ್ರೆ.. ದೆಹಲಿಗೆ ಬಂದ ಹೊಸದರಲ್ಲಿ ನನಗನಿಸಿದ್ದನ್ನೂ ಅಕ್ಷರಶಃ ಅಕ್ಷರಕ್ಕಿಳಿಸಿದ್ದೀರಿ... ಬಿಳಿ ತೊಗಲಿಗೆ ಮರುಳಾದ್ರೆ ನಿಮ್ ಕಥೇ ಅಷ್ಟೇ ಅನ್ನೋದನ್ನ ನನಗೂ ದೆಹಲಿಯ ಅನುಭವಸ್ಥರೊಬ್ಬರು ಹೇಳಿದ್ರು... ನೆಕ್ಟ್ಸ್ ಇಂದ್ರಪ್ರಸ್ಥದ ಬಗ್ಗೆ ಬರೀರೀ ಗೌಡ್ರೆ... ಅದರ ಮಹಾತ್ಮೇನೂ ಗೊತ್ತಾಗ್ಲಿ.. ;)

    ReplyDelete
  2. ಗೌಡ್ರೆ ಸಖತ್ ಆಗಿದೆ ನಿಮ್ಮ ಬರಹ ಹಾಗೂ ದೆಹಲಿ ಹುಡುಗಿರ ಕಥೆ ಕೂಡ. ಮೊನ್ನೆ ನೀವು ಕಲ್ಕಾಜಿಗೆ ಕಾಲಿಟ್ಟ ಕೂಡಲೇ ಮಾವಿನ ಹಣ್ಣಿನ ಹಾಗಿದ್ದ 2 ಹುಡುಗೀರನ್ನು ನೋಡಿ ನಾವಿಬ್ಬರೂ ನಕ್ಕಿದ್ದು ನೆನಪಿದೆಯಲ್ಲಾ...!!

    ಆ ಪಂಜಾಬಿ ಕುಡಿಗಳ ಬಗ್ಗೆಯಂತೂ ಎರಡು ಮಾತಿಲ್ಲ ಬಿಡಿ. ಮಾರ್ಕೆಟ್ಟು, ಮಾಲು, ಪಾರ್ಕು, ಹೋಟೆಲ್ಲು, ಬಸ್ಸು, ಕಾರು ಬೈಕು..ಎಲ್ಲೆಲ್ಲೂ ಕಲರ್ ಗಳು ತುಂಬಿರೋದ್ರಿಂದ್ಲೇ ನಮಗೆ ದೆಹಲಿ ಬೇಜಾರ್ ಬಂದಿಲ್ಲ ಅಲ್ವಾ..

    ಚಳಿಗಾಲದಲ್ಲಿ ಮಾತ್ರ ಯಾಕ್ರೀ ಬೇಸಗೆಯಲ್ಲೂ ಬರಕ್ಕೆ ಹೇಳಿ... ಆವಾಗ್ಲೂ ಇಲ್ಲಿನ ಹುಡುಗೀರು ಹೇಗಿರ್ತಾರೆ ಅನ್ನೋದನ್ನು ನಮ್ಮ ಸ್ನೇಹಿತರು ತಿಳ್ಕೊಳ್ಳಿ..

    ಅದೇನೇ ಹೇಳಿ...ಇದೆಲ್ಲಾ ನೋಡಕ್ಕೆ ಮಾತ್ರ...ಹಿರಿಯ ಪತ್ರಕರ್ತರು ಹೇಳಿದಂತೆ ಮುಟ್ಟಿದ್ರೆ ಕೆಟ್ರಿ...!!!!!

    ReplyDelete
  3. hudugiyara varnane chennagide jothe ge beli charma nodkondu hodre enaguthe anno seniour journalist tips chennagide.gud one yaar

    ReplyDelete
  4. ಎಲ್ಲೋ ಅಪರಿಚಿತರ ನೆಲೆಯಲಿ
    ಕಾಣುವ ಹೊಸ ಸೋಜೀಗಕ್ಕೆ
    ಬೆರಗಾಗುತ,ತನದಲ್ಲ ಎಂಬ
    ಮನದ ತೊಳಲಾಟದಲಿನ
    ಒಂಟಿತನದ ಜೀವ ಜೀಕಾಟಕೆ
    ಕೊರೆವ ಚಳಿಯ ನೀರವ ಮೌನ
    ನಡು ರಾತ್ರಿಯ ನಿದ್ದೆಯನು
    ಕಂಗೆಡಿಸಿ, ಏಕಾಂತದ ಬೇಗೆಯಲಿ
    ನಿಡುಸುಯುವ ಮನ
    ಬಯಸುವುದು ಮೈತಾಕುವ
    ಮೋಹಕ ಮೈಮಾಟದೊಳಗಿನ
    ಬಿಸಿಯುಸಿರು ನೀಡುವ ಬೆಚ್ಚನೆ
    ಸ್ಪರ್ಶವ!!!!
    ಈ ಸಾಲುಗಳನು ಬರೆಯಲು ಗೌಡ ನನಗೆ ದೆಲ್ಲಿಯ ಚಳಿಯ ಕಾಟ ಮತ್ತು ಹುಡುಗಿಯರ ಸೆಳೆತದ ಬಗ್ಗೆ ತನ್ನ ಒಡಲಾಳದ ಮಾತುಗಳೇ ಸ್ಫೂರ್ತಿ ಎಂದರೆ ಸೋಗಿಗವಲ್ಲ.......

    ReplyDelete
  5. ಅಹಾ ಎಂಥ ಕಾಮೆಂಟು ಈಶ, ಬ್ಲಾಗು ಬರೆಯುವ ನನ್ನ ಕಾಯಕ ಧನ್ಯ...
    ನಿನ್ನ ಪ್ರೀತಿಗೆ, ಅದ್ರ ಸೊಬಗಿಗೆ ನಾನು ಋಣಿ,
    ಥ್ಯಾಂಕ್ಸ್....
    srinivasagowda

    ReplyDelete
  6. sakkat agide sir, neevu barita irodu nodire dina odona anisutte

    ReplyDelete
  7. ಹುಡುಗಿಯರನ್ನ ಇಷ್ಟ ಪಡದ ಹುಡುಗರು ಎಲ್ಲು ಇಲ್ಲ ಅಲ್ವ ಗೌಡ್ರೆ . "Beauty is too see, Not to touch:)"

    ReplyDelete
  8. hi 'SG'.... u r too naughty boy...!
    Naavu allige bandu nododakkintha
    Nimma varnane Oduttha iddarene my pulakavaaythu..,thanks for giving such
    feeling, some how u plz write more abt
    human interest stories......bye
    Jayakumar.C., Arkalgud# Hassan District.

    ReplyDelete
  9. ಕನ್ನಡದ ಹಳ್ಳಿ ಮಣ್ಣಲ್ಲಿ ಬಿರಿದ ನನ್ನ ನೈದಿಲೆಯೊಂದು ದೂರದ ದೆಹಲಿ ಸೇರಿದೆ. ಪಂಜಾಬಿ, ಬಂಗಾಳಿ ಹಾಗೂ ಕಾಶ್ಮೀರಿ ಹುಡುಗಿಯರ ನಡುವೆ ಅವಳು ಇನ್ನಷ್ಟು ತುಸು ಭಿನ್ನವಾಗಿ ನಿಮ್ಮ ಕಣ್ಣಿಗೆ ಕಾಣಬಹುದು. ದೆಹಲಿ ಎಂಬ ಸುಂದರ ಲೋಕದಲ್ಲಿ ಅವಳೇನಾದರೂ ನಿಮ್ಮ ಕಣ್ಣಿಗೆ ಬಿದ್ದರೆ ಅವಳ ವರ್ಣನೆಯ ಧಾರೆಯನ್ನು ಹರಿಸಿ. ನಿರೀಕ್ಷೆಯಲ್ಲಿರುತ್ತೇನೆ.
    -ಮಧುಸೂದನ್.ವಿ

    ReplyDelete
  10. ತಮಗೆ ಒಂದು ಪ್ರಶ್ನೆ ತಮ್ಮ ಅವ ಭಾವಕ್ಕೆ ದೆಹಲಿಯ ಯಾವ ಬಾಲಕಿಯು ದಾರಿ ತಪ್ಪಿಲ ಅಂದುಕೋತೀನಿ . ತಾವು ಹುಡುಗಿಯರ ಬಗ್ಗೆ ವರ್ಣನೆ ತುಂಬಾ ಚೆನ್ನಾಗಿ ಮಾಡಿದಿರಿ .

    ReplyDelete
  11. blog anno bavanegala vyaktha padiso avismaraniya lokakke modaliganagi snehitha gowda kaalitaddu kushiya vishaya.Gowda if you have a camara pls post the photos (girls) because some of the non married guys are eagrly waiting.

    ReplyDelete
  12. Delhi chalige ninu mai kayisi koldidru at least bechchage agidiya adre..nammantavrige pugsatte (nijavaglu puksatte alla cell bill jasti agide) matalle mattu tarisi...kamanegala male surisi...tale kedisi mana kedisi summanagisidiya...

    ReplyDelete