Saturday, April 25, 2009

ಡಿಂಗ ಎಂಬ ವಿಸ್ಮಯ


ವನ ಬಗ್ಗೆ ಬ್ಲಾಗ್‌ನಲ್ಲಿ ಬರೆಯುವುದು ಅಷ್ಟು ಸುಲಭದ ಮಾತಲ್ಲ. ಬ್ಲಾಗ್‌ನ ಲಿಮಿಟೇಷನ್ ಮೀರಿದ ಅಷ್ಟೇಕೆ ಸ್ವತಃ ಅವನೇ ತನ್ನ ಲಿಮಿಟೇಷನ್‌ನ್ನು ಮೀರಿಸಿದ್ದ ವ್ಯಕ್ತಿ. ನನ್ನ ಮೈಸೂರಿನ ಕಾಲೇಜಿನ ದಿನಗಳಲ್ಲಿ ನನ್ನ ನೆರಳಿನಂತೆ ಸದಾ ನನ್ನ ಜೊತೆಗಿದ್ದವದನು. ಕ್ಷಣಕ್ಷಣಕ್ಕೂ ಏನಾದರೊಂದು ಅಪಾಯ ಸೃಷ್ಟಿಸುತ್ತಾ, ಅನಾಹುತ ಮಾಡುತ್ತಾ ಇದ್ದ ‘ಡೋಂಟ್ ಕೇರ್’ ಥರದ ಆಸಾಮಿ ಆತ. ಇವನ ಬಗ್ಗೆ ಬರೆಯಲಿಕ್ಕೆ ನನ್ನ ಬಳಿ ನೂರಾರು ಘಟನೆಗಳಿವೆ. ಅದರಲ್ಲಿ ಒಂದೆರಡಷ್ಟನ್ನೇ ಇಲ್ಲಿ ದಾಖಲಿಸಿದ್ದೇನೆ. ಮಹಾರಾಜ ಕಾಲೇಜಿನಲ್ಲಿ ನನ್ನದು ಮತ್ತು ಡಿಂಗನದು ಒಂದೇ ವಿಷಯ. ಕ್ರಿಮಿನಾಲಜಿ, ಸಾರ್ವಜನಿಕ ಆಡಳಿತ, ಪತ್ರಿಕೋದ್ಯಮ. ವರ್ಷ ಪೂರ್ತಿ ಕಾಲೇಜಿಗೆ ಚಕ್ಕರ್ ಹೊಡೆಯುತ್ತಿದ್ದರೂ ಕಾಲೇಜಿನ ಕ್ಯಾಂಟೀನಿಗೆ ಮಾತ್ರ ಚಕ್ಕರ್ ಹೊಡೆದಿದ್ದ ದಿನ ಮಾತ್ರ ನೆನಪಾಗುವುದಿಲ್ಲ. ದಿನದ ಆದಿ ಮತ್ತು ಅಂತ್ಯ ಅಲ್ಲೆ ಆಗಿರುತ್ತಿತ್ತು. ಆದರೆ ಪರೀಕ್ಷೆಗಳು ಶುರುವಾಗುವ ಕನಿಷ್ಠ ೧೫ ದಿನಕ್ಕೆ ಮುಂಚೆ ನನ್ನ ಮಿತಿಯಲ್ಲೇ ಸೀರಿಯಸ್ ಆಗಿ ಓದೊಕ್ಕೆ ಶುರು ಮಾಡ್ತಿದ್ದೆ. ಆದರೆ ಡಿಂಗ ಮಾತ್ರ ಯಾವತ್ತು ಓದಿದ್ದನ್ನೇ ನೋಡಿಲ್ಲ. ಎಲ್ಲರ ರೂಂಗಳಿಗೆ ಎಡತಾಕುತ್ತಾ ಏನಾದರೂ ಕೀಟಲೇ ಮಾಡುತ್ತಾ ಡಿಂಗ ಕಾಲಾಹರಣ ಮಾಡುತ್ತಿದ್ದ. ಓದೋ ಡಿಂಗ ಪರೀಕ್ಷೆ ಬರ್ತಾ ಇದೆ ಅಂತ ಮರುಕದಿಂದ ಹೇಳಿದ್ರೆ, ‘ಇಲ್ಲ ಮಗಾ ನಾನು ಓದೋಕೆ ಕುಂತ್ರೆ ನನಗೆ ಇರೋ ಓರೆ ಕಣ್ಣಿನ ಸಮಸ್ಯೆ ಬಗ್ಗೆ ಎಲ್ಲರಿಗೂ ಗೊತ್ತಾಗುತ್ತೆ" ಅಂತ ಅವನಪ್ಪನ ಬಳಿ ಇದ್ದ ಹಣವನ್ನ ಡಬಲ್ ಮಾಡುವುದು ಹೇಗೆ ಅಂಥ ಚಿಂತಿಸುತ್ತಿದ್ದ.

ವಿಶೇಷ ಏನಂದ್ರೆ; ಅವನು ಯಾವ ಪರೀಕ್ಷೆಯಲ್ಲೂ ಫೈಲ್ ಆಗಲೇ ಇಲ್ಲ. ಅವನೊಬ್ಬನಿಗೇ ತಿಳಿದಿದ್ದ ಫಾರ್ಮುಲಾ ಒಂದು ಅವನ ರಕ್ಷಣೆಗಿತ್ತು. ಅವನ ಫಾರ್ಮುಲಾ ಯಾವ ರೀತಿಯಾಗಿ ಕ್ಲಿಕ್ ಆಗಿತ್ತು ಎಂದರೆ ನನ್ನ ಬಳಿಯೇ ಹೇಳಿಸಿಕೊಂಡಿದ್ದ ವಿಷಯವೊಂದರಲ್ಲಿ ನನ್ನನ್ನೇ ಮೀರಿಸಿ ಹೆಚ್ಚು ಅಂಕ ಗಳಿಸಿ ಕಿಚಾಯಿಸಿದ್ದ. ಪರೀಕ್ಷೆಯ ಹಿಂದಿನ ದಿನವೂ ಚಿಂತೆ ಇಲ್ಲದೆ ಇರ್ತಿದ್ದ ಡಿಂಗ ಪರೀಕ್ಷೆಗೆ ೧ ಗಂಟೆ ಮುಂಚೆ ನಾನು ಮಾಡಿಕೊಂಡಿರ್‍ತಿದ್ದ ಪಾಯಿಂಟ್ ಬುಕ್ಕನ್ನ ಓದಿಕೊಂಡು ಬಿಡ್ತಿದ್ದ. ಯಾವ ಪಾಯಿಂಟ್‌ಗೆ ಯಾವ ಉತ್ತರ ಬರೆಯಬೇಕೆಂಬ ಕಾಳಜಿ ಅವನಿಗಿರಲಿಲ್ಲ. ಪರೀಕ್ಷೆಯಲ್ಲಿ ಕಾಪಿ ಹೊಡೆಯುವುದಕ್ಕೆ ಯಾವತ್ತು ಯತ್ನಿಸದ ಡಿಂಗ ಆ ಮೂಲಕ ತನಗಿದ್ದ ಕಣ್ಣಿನ ದೋಷವನ್ನ ಮರೆಮಾಚುತ್ತಿದ್ದ. ಜಗತ್ತಿನ ಕ್ಲಿಷ್ಟಕರ ಪ್ರಶ್ನೆಗೂ ಎನಾದರೊಂದು ಉತ್ತರ ಬರೆದು ಬರುವುದು ಅವನ ಶೈಲಿ. ಪ್ರತಿ ಪರೀಕ್ಷೆಯಲ್ಲೂ ನನಗಿಂತ ಹತ್ತು ಹನ್ನೆರಡು ಮಾರ್ಕ್‌ಗಳು ಕಡಿಮೆ ತೆಗೆದುಕೊಳ್ಳುತ್ತಿದ್ದ. ಫೇಲ್ ಅನ್ನೋದು ಅವ ಡಿಕ್ಷ್ನರಿನಲ್ಲೇ ಇರ್‍ಲಿಲ್ಲ. ಇನ್ನೇನು ಡಿಗ್ರಿ ಪಾಸ್ ಮಾಡಿ ಮಾಸ್ಟರ್ ಡಿಗ್ರಿ ಎಂಟ್ರಾನ್ಸ್ ಎಕ್ಸಾಮ್‌ಗೆ ನಾನು ತಯಾರು ಮಾಡುತ್ತಿದ್ದೆ. ಊರಿಗೆ ಹೋಗಿದ್ದ ಡಿಂಗ ಮತ್ತೆ ಹಾಜರಾದ. ಲೋ ಮಗಾ ಎಂಟ್ರೆನ್ಸ್‌ನಲ್ಲಿ ಏನು ಪ್ರಶ್ನೆ ಕೇಳ್ತಾರೋ ನಾನು ಮಾಸ್ಟರ್ ಡಿಗ್ರಿ ಸೇರ್‍ಬೇಕು ಅಂತ ನನ್ ಬಳಿ ತರ್‍ಲೆ ತಗೆದ. ನಾಲ್ಕೈದು ನಾರಿ ಸುಮ್ನೆ ಕೇಳಿಸಿಕೊಂಡ ನಾನು ರೋಸಿ ಹೋಗಿ ಕುರುಡ ನನ್ನ ಮಗನೇ ಹೋಗಿ ನಿನ್ನ ಕಣ್ಣು ಡಾಕ್ಟ್‌ರಿಗೆ ತೋರ್‍ಸು, ಹ್ಯಾಂಡಿಕ್ಯಾಪ್ ಕೋಟಾ ಕೊಡ್ತಾರೆ ಅಂದೆ. ನನ್ನ ಮಾತಿನ ಹಿಂದೆ ನನಗೇನೂ ಉದ್ದೇಶ ಇರಿಲ್ಲ. ನಂತರ ಕೆಲ ದಿನ ಕಾಣೆಯಾಗಿದ್ದ ಡಿಂಗ ಎಂಟ್ರೆನ್ಸ್ ಪರೀಕ್ಷೆ ದಿನ ದಿಢೀರ್ ಹಾಜರಾದ. ಎಲ್ಲರಿಗೂ ಅಚ್ಚರಿಯಾಗುವಂತೆ ಡಿಂಗನ ಹೆಸರು ಮೂರು ನಾಲ್ಕು ಡಿಪಾರ್ಟ್‌ಮೆಂಟ್‌ಗಳಲ್ಲಿ ಆಯ್ಕೆಯಾಗಿತ್ತು. ಕಾರಣ ಏನಪ್ಪಾ ಅಂದರೆ ನನ್ನ ಬೈಗುಳ್ಳಗಳನ್ನೇ ಪಾಸಿಟಿವ್ ಆಗಿ ತೆಗೆದುಕೊಂಡು ನೇರವಾಗಿ ಊರು ಚನ್ನರಾಯಪಟ್ನಕ್ಕೇ ಹೋದವನು ಡಾಕ್ಟರೊಬ್ಬರನ್ನು ಹಿಡಿದು, ೭೦% ಹ್ಯಾಂಡಿಕ್ಯಾಪ್ ಕೋಟಾದೊಂದಿಗೆ ವಾಪಸಾಗಿದ್ದ.

ಬಡ್ಡಿ ವ್ಯವಹಾರಗಳಲ್ಲಿ ಪಳಗಿದ್ದ ಅವರಪ್ಪ ತುಂಬಾ ಚಾಲಾಕು. ಇವನಿಗೆ ದುಡ್ಡು ಕೊಡುವಾಗಲೆಲ್ಲ ಯಾಕೇ, ಏನು, ಎಂಬ ಪ್ರಶ್ನೆಯೆಲ್ಲಾ ಹಾಕಿ ರಶೀದಿ ತೋರಿಸು ಎಂದು ರಗಳೆ ಮಾಡ್ತಿದ್ದ. ಅವರಪ್ಪನಿಗಿಂತ ಕಿಲಾಡಿಯಾಗಿದ್ದ ಡಿಂಗ ಇವನೇ ಎಂತದೋ ರಸೀದಿ ತಯಾರು ಮಾಡಿ ಇಂಗ್ಲೀಷಿನಲ್ಲಿ ವಾಕಿಂಗ್ ಫೀಸ್, ಟಾಕಿಂಗ್ ಫೀಸ್, ಡ್ರಿಂಕಿಂಗ್ ಫೀಸ್, ಕಾರಿಡಾರ್ ಫೀಸ್, ಅಂತೆಲ್ಲಾ ಏನೇನೊ ಬರೆದು ಅವರಪ್ಪನನ್ನ ನಂಬಿಸಿಬಿಟ್ಟಿದ್ದ.

ಮಾಸ್ಟರ್ ಡಿಗ್ರಿಯಲ್ಲಿ ಎಲ್ಲರ ಬಳಿಯೂ ಬೈಕ್ ಇದ್ದುದ್ದನ್ನು ಕಂಡು ರೊಚ್ಚಿಗೆದ್ದ ಡಿಂಗ ಏನಾದರೂ ಮಾಡಿ ಬೈಕ್ ತರಬೇಕೆಂದು ಊರಿಗೆ ಹೋದವನು ಪೂರ್ತಿ ಲಡಾಸ್ ಎದ್ದು ಹೋಗಿದ್ದ ಚಾಸಿ ಮತ್ತು ಬಿಡಿ ಬಿಡಿ ಭಾಗಗಗಳನ್ನು ರೈಲಿನಲ್ಲಿ ಹೊತ್ತು ತಂದಿದ್ದ. ನಾನು ಮತ್ತು ಡಿಂಗ ಸೇರಿ ಪರಿಚಯದವರ ಗ್ಯಾರೇಜ್‌ವೊಂದರಲ್ಲಿ ಹಾಕಿ ಮೈಸೂರಿನ ಗುಜುರಿಗಳಲ್ಲೆಲ್ಲಾ ತಡಕಾಡಿ ಅಗತ್ಯ ಪಾರ್ಟ್‌ಗಳನ್ನ ಜೋಡಿಸಿ ಕಡು ಕಪ್ಪು ಬಣ್ಣದ ಬೈಕೊಂದನ್ನು ರೂಪಿಸುವಲ್ಲಿ ಯಶಸ್ವಿಯಾದೆವು. ಇಂತದ್ದೇ ಕಂಪನಿ ಎಂದು ಹೇಳಲಿಕ್ಕೆ ಆಗದ ಆ ಬೈಕ್ ಬಾರೀ ಶಬ್ದ ಮಾಡುತ್ತಿತ್ತು. ಒಂದು ಲೀಟರ್ ಪೆಟ್ರೋಲ್ ತುಂಬಿದರೆ ೧೫ ಕಿಮಿ ದೂರ ಹೋಗಬಹುದಿತ್ತು. ಮಾನಸಗಂಗೋತ್ರಿಯಲ್ಲಿ ಡಿಂಗನ ಬೈಕ್‌ಗೆ ವಿಶಿಷ್ಟ ಸ್ಥಾನಮಾನಗಳು ಲಭ್ಯವಾಗಿದ್ದವು. ಬೈಕಿನ ಶಬ್ದ ಕೇಳಿದ ಹುಡುಗರು ರಸ್ತೆ ಬದಿಯಲ್ಲಿ ನಿಂತು ಜಾಗ ಬಿಡುತ್ತಿದ್ದರು. ಅವನ ಬೈಕಿಗೆ ಹೆಸರೇ ಇಲ್ಲದ್ದನ್ನು ಕಂಡ ನಾವೆಲ್ಲಾ ಸುನಾಮಿ ಅಂತ ಹೆಸರಿಟ್ಟಿದ್ದೆವು.

ಕಳೆದ ಒಂದು ವರ್ಷದ ಹಿಂದೆ ತಾನು ಮದುವೆಯಾಗಲೇಬೇಕೆಂದು ತೀರ್ಮಾನಿಸಿದ ಡಿಂಗ ಹತ್ತಾರು ಬಯಲುಸೀಮೆಯ ಹೆಣ್ಣುಗಳನ್ನು ನೋಡಿದ್ದ. ಒಂದೊಮ್ಮೆ ನನಗೆ ಕರೆ ಮಾಡಿ ತಾನು ಮೆಚ್ಚ್ಚಿಕೊಂಡ ಹುಡುಗಿಯೊಬ್ಬಳನ್ನ ಅವನದೇ ಶೈಲಿಯಲ್ಲಿ ವರ್ಣಿಸಿದ. ಒಂದೇ ವಾಕ್ಯದ ಆ ವರ್ಣನೆಯನ್ನ ನಾನು ಯಾವತ್ತೂ ಕೇಳಿರಲಿಲ್ಲ. ಒಳ್ಳೇ ಬನ್ನೂರು ಕುರಿ ಇದ್ದಂಗೆ ಅವ್ಳೆ ಮಗಾ...

9 comments:

  1. ಡಿಂಗ ನದು ಅದ್ಭುತ ಲೋಕ. ತನ್ನದೇ ಆದ ಲೋಕದಲ್ಲಿ ವಿಹರಿಸುತ್ತ ಸಹ ಪಾಟಿಗಳ ಜೋಕ್ ಮಾಡುತ್ತ ವಾರಕ್ಕೊಮ್ಮೆ ಮಾತ್ರ ಸ್ನಾನ ಮಾಡುತ್ತಿದ್ದ ಮನುಷ್ಯ. ಹಾಗಂತ ಡಿಂಗ ಅವನ ನಿಜವಾದ ಹೆಸರಲ್ಲ. ಡಿಂಗ ಅನ್ನೋ ಹೆಸರು ಅವನಿಗೆ ಬಂದಿದ್ದು ಒಂಥರಾ ವಿಚಿತ್ರನೇ. ಏನೇ ಅದ್ರು ಗೌಡ ನೀನು ಪ್ರಾರಂಭ ಮಾಡಿರೋ ವಿಷಯ ಬಹಳ ವಿಸ್ತಾರವಾದದ್ದು. ಇನ್ನು ಒಳ್ಳೆಯ ನೆನಪುಗಳು ಹೊರ ಬರಲಿ.. ಬ್ಲಾಗ್ ತುಂಬಾ ಚೆನ್ನಾಗಿದೆ. ಹೀಗೆ ಮುಂದು ವರೆಯಲಿ.

    ReplyDelete
  2. Dinga andre manga ankondorge avnu utra kodtiddane tumba serious agi ondu weekly agazine nalli todagisikondiddane mtte maga, recent developmetn andre avnge hudgi ninni monne gottagi..madve agtioddne....Dinga is a unique creature..

    ReplyDelete
  3. ಭೂತದ ನೆನಪುಗಳನೆತ್ತಿ ನಮ್ಮನು ಮತ್ತೆ ಮತ್ತೆ........ಆ ದಿನಗಳಲಿ ವಿಹಂಗಮಿಸುತ್ತಿದಿಯ ಮಗ ದನ್ಯವಾದ.
    ಯಾವುದೋ ಪರಿಕ್ಸ್ಕ್ಷೆಯಲಿ ೨ ಮಾರ್ಕ್ಸ್ ಗೌಡನಿಗಿಂತ ಹೆಚ್ಚು ತಗೆದು ವರ್ಷವೆಲ್ಲ ಮಹಾರಾಜ ಕಾಲೇಜ್,ಹಾಸ್ಟೆಲ್ ನಲೆಲ್ಲ ಅವನದೇ ಠಿವಿಯಲಿ ಗೌಡನಿಗಿಂತ ನನ್ನದೇ ಮಾರ್ಕ್ಸ್ ಜಾಸ್ತಿ ಕಂಡ್ಲ ಅಂತ ಎಲ್ಲರಿಗು ಅವನ ಸಾದನೆಯ ಬಗ್ಗೆ ಹೇಳಿಕೊಂಡು ಓಡಾಡಿದ್ದ ಬಹುಷಃ ಅವನ ಜೀವಮಾನದ ಸಾಧನೆಯಾಗಿ ಇಂದಿಗೂ ಉಳಿದಿರುವ ಸಾಧನೆಯದು.

    ReplyDelete
  4. ಭೂತದ ನೆನಪುಗಳನೆತ್ತಿ ನಮ್ಮನು ಮತ್ತೆ ಮತ್ತೆ........ಆ ದಿನಗಳಲಿ ವಿಹಂಗಮಿಸುತ್ತಿದಿಯ ಮಗ ದನ್ಯವಾದ.
    ಯಾವುದೋ ಪರಿಕ್ಸ್ಕ್ಷೆಯಲಿ ೨ ಮಾರ್ಕ್ಸ್ ಗೌಡನಿಗಿಂತ ಹೆಚ್ಚು ತಗೆದು ವರ್ಷವೆಲ್ಲ ಮಹಾರಾಜ ಕಾಲೇಜ್,ಹಾಸ್ಟೆಲ್ ನಲೆಲ್ಲ ಅವನದೇ ಠಿವಿಯಲಿ ಗೌಡನಿಗಿಂತ ನನ್ನದೇ ಮಾರ್ಕ್ಸ್ ಜಾಸ್ತಿ ಕಂಡ್ಲ ಅಂತ ಎಲ್ಲರಿಗು ಅವನ ಸಾದನೆಯ ಬಗ್ಗೆ ಹೇಳಿಕೊಂಡು ಓಡಾಡಿದ್ದ ಬಹುಷಃ ಅವನ ಜೀವಮಾನದ ಸಾಧನೆಯಾಗಿ ಇಂದಿಗೂ ಉಳಿದಿರುವ ಸಾಧನೆಯದು.

    ReplyDelete
  5. ಡಿಂಗನದು ಮದುವೆ... ಡಿಂಗನ ಮನೆಯವರು ಡಿಂಗನಿಗಾಗಿ ನೋಡಿದ್ದ ನನ್ನ ಸ್ನೇಹಿತೆದು ಕೂಡ ಮದುವೆ ಹಾಗಿ ಹೋಗಿದೆ:). Goodluck dinga...

    ReplyDelete
  6. ಪ್ರೀತಿಯ ಶ್ರೀನಿವಾಸ್,

    ನಿಮ್ಮ ಬ್ಲಾಗಿನ ಡಿಂಗನ ಬಗೆಗಿನ ಲೇಖನ ಓದಿ ಮನಸ್ಸಿಗೆ ತುಂಬಾ ಹಿತವಾಯಿತು. ನಿಮ್ಮ ಅದ್ಭುತ ಭಾಷೆಗೆ ಹ್ಯಾಟ್ಸ್ ಆಫ್. ತೇಜಸ್ವಿಯವರ ಅಣ್ಣನ ನೆನಪು ಕೃತಿಯನ್ನೂ ನೀವು ನೆನಪಿಸಿದಿರಿ. ಮಹಾರಾಜ ಕಾಲೇಜಲ್ಲಿ ಓದಿದವರಿಗೆ ಮಾತ್ರ ಈ ರೀತಿಯ ರಿಚ್ ಅನುಭವ ಸಿಗೋದು. ಮಹಾರಾಜ ಕಾಲೇಜಿಗೂ ನನ್ನ ಅಡ್ಡಡ್ಡ, ಉದ್ದುದ್ದ ಪ್ರಣಾಮಗಳು! ಮಹಾರಾಜ ಕಾಲೇಜಲ್ಲಿ ಓದಿದವರಿಗೆ ಮಾತ್ರ ಈ ಮಾತಿನ ಅರ್ಥ ಗೊತ್ತಾಗೋದು. ಏನಂತೀರ? ನಿಮ್ಮ ಭಾಷೆ ಅದ್ಭುತವಾಗಿದೆ. ಹೀಗೆ ಮುಂದುವರೆಸಿ.

    ನಿಮ್ಮ ಪ್ರೀತಿಯ,

    ನೇಸರ ಕಾಡನಕುಪ್ಪೆ

    ReplyDelete
  7. Ley Gowda and others
    Yaakro Dingana bagge obitury bardange bardiddira? Paapa avnu innu badukiddane.

    Anyways, ninna baraha oodi tumba dina aythu. U have your own style, odiskondu hogatte. Sadya, mike hidkonda pathrakartharu baravanige kadime madthare antha apavaada ide, sullu maadu. Lekhana chennagide

    ReplyDelete
  8. super maga. edra jote PANTU_MOWLY_DINGA
    Trikona love story baribekittu

    ReplyDelete