Thursday, April 23, 2009

ಜಾನಿ ಅಂದ್ರೆ ಸುಮ್ನೆ ಅಲ್ಲ, ಮಾಸ್ಟ್ರು ಗುರು ಮಾಸ್ಟ್ರು


ಹಾಸನ ಅಂದ್ರೆ ಗೊತ್ತಲ್ಲ ಭಯಂಕರ ಇಂಟರಸ್ಟಿಂಗ್ ಜಾಗ ಅಲ್ಲಿ ನಾನು ಎರಡು ವರ್ಷ ರಿಪೋರ್ಟರ್ ಆಗಿದ್ದೆ , ಕ್ರೈಂ, ಪೋಲಟಿಕ್ಸ್ ನನ್ನ ಆಸಕ್ತಿ ಕ್ಷೇತ್ರಗಳು, ಈ ಎರಡಕ್ಕೂ ಅಲ್ಲಿ ಬರಗಾಲ ಇಲ್ಲ ಮತ್ತು ಇರಲ್ಲ. ನನ್ನ ಗೆಳಯರು ಕೆಲವರು ಪೋಲಿಸ್ ಇಲಾಖೆಗೆ ಸೇರಿ ಸಬ್ಇನ್ಸ್ಪೆಕ್ಟರ್ ಆಗಿದ್ರು ಹಾಗಾಗಿ ಪೋಲಿಸ್ ಇಲಾಖೆಯಲ್ಲಿ ಯಾರಾದ್ರೂ ಊಸಿದ್ರು ನನ್ನ ಗಮನಕ್ಕೆ ಬರಬೇಕು ಇಲ್ಲಾಂದ್ರೆ ಕಷ್ಟ ನೋಡಿ ಅಂತ ನನ್ನ ಗೆಳೆಯರಿಗೆ ಹೆದರಿಸಿದ್ದೆ. ಹಾಗಾಗಿ ನನ್ನ ಸಂಪರ್ಕದ ವ್ಯಾಪ್ತಿ ದೊಡ್ಡದಿತ್ತು.
ಒಂದು ದಿನ ಬೆಳಗ್ಗೆ ಮಲ್ನಾಡ್ ಎಂಜಿನಿಯರಿಂಗ್ ಕಾಲೇಜಿನ ಎದುರಿನ ಕಂಪ್ಯೂಟರ್ ಶ್ಯಾಪ್ ಗೆ ಕನ್ನ ಬಿದ್ದಿದೆ ಅಂಥ ಗಣೇಶ ಅನ್ನೋ ಗೆಳೆಯ ಹೇಳಿದ ನಾನು ಕ್ಯಾಮರಮೆನ್ ಜೊತೆ ಅಲ್ಲಿಗೆ ಓಡಿದೆ ಅಲ್ಲಿ ಸಾಕಸ್ಟು ಜನ ಸೇರಿದ್ರು ಆದ್ರೆ ಒಬ್ಬೆ ಒಬ್ಬ ಪೋಲಿಸು ಇರಲಿಲ್ಲ ಆದ್ರೆ ಕಾರಿನಿಂದ್ದ ಇಳಿದು ಬಂದ ವ್ಯಕ್ತಿಯೊಬ್ಬ ತಕ್ಷಣ ತನಿಖೆ ಶುರು ಮಾಡಿದ, ಅಲ್ಲಿದ್ದವರಿಗೆಲ್ಲ ನೋಡಿ ಕ್ರೈಂ ಹೀಗೆ ಆಗಿದೆ, ಹಾಗೆ ಆಗಿದೆ, ಇದನ್ನ ಒಡೆದು ಅದನ್ನ ತಗೊಂಡಿದ್ದಾರೆ, ಆ ರಾಡನ್ನ ಟಚ್ ಮಾಡಬೇಡಿ, ಅದು ಇನ್ವೆಸ್ತಿಗೀಶನ್ನಿಗೆ ಬೇಕು ಅಂಥ ಹೇಳತೊಡಗಿದ ನಾನು ಯಾರಪ್ಪಾ ಇವನು ಅಂದುಕೊಳ್ಳುಥ್ಲೇ ಕಾರಿನಿಂದ ಒಂದು ಡೈರಿ ತೆಗೆದು ಪೋಲೀಸರಿಗೆ ಬೈದುಕೊಳ್ಳುತ್ತಲೇ ಅವರಿಗೆ ಕಾಲ್ ಮಾಡತೊಡಗಿದ ನನಗೋ ಕುತೂಹಲ, ೩೩ ವಯಸ್ಸಿಗೆ ಹತ್ತಿರವಿದ್ದ, ತಲೆಯ ಮುಂಬಾಗ ಬೋಳಾಗಿದ್ದ ವಿಚಿತ್ರ ಹಾವಬಾವದ ವ್ಯಕ್ತಿ ಯಾರಪ್ಪ ಇವನು ಅಂಥ. ಕುತೂಹಲ ತಡೆಯಕ್ಕೆ ಆಗಲಿಲ್ಲಾ ಅಲ್ಲೇ ಇದ್ದ ನನ್ನ ಗೆಳೆಯ ಗಣೇಶನನ್ನ ಕೇಳಿದೆ ಆಗ ನನಗೆ ಗೊತ್ತಾಗಿದ್ದು ಅವನ ಹೆಸರು comproo ಜಾನಿ(compro jhaani)ಕುತೂಹಲಕ್ಕೆ ಅಂತ ಅವನ ಬಗ್ಗೆ ಅಲ್ಲಿ ಇಲ್ಲಿ ವಿಚಾರಿಸಿದಾಗ ಗೊತ್ತಾಗಿದ್ದು, ಅವನು ಹಾಸನದಲ್ಲಿ ವರ್ಲ್ಡ್ ಫೇಮಸ್ ಅಂತ. ಕಾಲೇಜಲ್ಲಿ ಜಗಳ, ಪ್ರೇಮ ಪ್ರಕರಣದಲ್ಲಿ ಜಗಳ, ಜಮೀನು ವ್ಯಾಜ್ಯ ವ್ಯಾಪಾರದಲ್ಲಿ ಜಗಳ ಏನೇ ಪೋಲೀಸ್ ಕೇಸ್ ಇದ್ರೂ ಕಾಮ್ಫ್ರೋ ಜಾನಿ ಇದ್ರೆ ಸಾಕು ಡೀಲ್ ಫಿಕ್ಸ್.
ಯಾರಿಗೂ ತೊಂದ್ರೆ ಆಗದಂತೆ ಎಲ್ಲ ಡೀಲ್ ಮಾಡಿ ಪೋಲೀಸ್ ಕೇಸ್ ಇಲ್ಲದಂಗೆ ಮಾಡಿ ಪೋಲೀಸರನ್ನು ಸೆಟಲ್ ಮಾಡಿ ಬಿಡ್ತಾ ಇದ್ದ. ನೇರವಾಗಿ ಕಾಸು ಕೇಳಲು ಆಗದ ಪೋಲೀಸರಿಗೆ ಜಾನಿ ಬಂದ ಅಂದ್ರೆ ಬಿಸಿ ಬಿಸಿ ಬಿರುಯಾನಿ, ಅವನಿಗೂ ಬಿರಿಯಾನಿ.
ಅವನ ಕೆಲಸವೇ ಅದು. ಹಾಸನಕ್ಕೆ ಯಾರೇ ಹೊಸ ಆಪಿಸರ್ ಬಂದ್ರು ಸಂಭಂದ ಬೆಳೆಸಿ, ಅವರ ಮನೆಗೆ ಟೀಕ್ ಮರದ ಪೀಠೋಪಕರಣ ಮಾಡಿಸಿ ಅವರ ತಲೆ ಕೆಡಿಸಿ, ಅಮ್ಮಾವರನ್ನಾ ಬಲೆಗೆ ಹಾಕಿಕೊಂಡು ತನ್ನ ಕೆಲಸ ನಿರಾತಂಕ ಮಾಡ್ತಾ ಇದ್ದ. ಅವನ ಡೈರಿ ಇಲ್ಲದ ನಂಬರೇ ಇಲ್ಲ . ಸುಳ್ಳೇ ಅಪಘಾತ ಮಾಡ್ಸಿ ಇನ್ಸುರೆನ್ಸೆ ಪಡೆಯಬಲ್ಲ ಚಾಲಾಕು ಅವನದು. ನನಗೆ ತಿಳಿದಂತೆ ಅವನು ಡೀಲ್ ಮಾಡದೆ ಇರೋದು ಮರ್ಡರ್ ಕೇಸ್ ಮಾತ್ರ.
ಈಗ ಬಂದ ಸುದ್ದಿ: ಹುಡುಗಿಯೊಬ್ಬಳನ್ನು ಹಾರಿಸಿಕೊಂಡು ಹೋದ ಕಾರಣಕ್ಕಾಗಿ .....ಅಲಿಯಾಸ್ ಕಾಮ್ಫ್ರೋ ಜಾನಿ ಯನ್ನು ಹಾಸನ ಪೊಲೀಸರು ಭಂದಿಸಿ , ಇನ್ನು ಒಂದು ಹೆಜ್ಜೆ ಮುಂದೆ ಹೋಗಿ ಅವನನ್ನ ಚೆನ್ನಾಗಿ ಥಳಿಸಿ ಚಿತ್ರಾನ್ನ ಮಾಡಿ ಜೈಲಿಗೂ ಕಳಿಸಿದರಂತೆ. ಯಾಕಂದ್ರೆ ಸ್ಟ್ರಿಕ್ಟ್ ಪೋಲಿಸ್ ಆಪಿಸರ್ರ್ ಒಬ್ಬನ ಮುಂದೆ ನನಗೆ SP , IG, DIG ಎಲ್ಲ ಗೊತ್ತು ಏನು ಕಿತ್ಕಳಕೆ ಆಗಲ್ಲ ಅಂದಂತೆ ಅದಕ್ಕೆ .
ಉಕ್ತಿ: ಯಾರನ್ನಾದರೂ ನಂಬು ನಿಮ್ಮಪ್ಪ ಪೋಲಿಸಾದರು ನಂಬಬೇಡ.5 comments:

 1. paap compro jaanigenu gottu polisinavarella kadaege tannane hididu kesu haaki olage haaktaare antha.......cheating case gowdre idu compro jaanido polisinavarado thilitilla......

  ReplyDelete
 2. Antavanobba Vichitra mattu Vishesha iro Character na Compro Jhonny yanna priti kuda compro madlilla annodu vishesha..papa adelli enu sketch haktiddanoo...

  ReplyDelete
 3. Gowda,
  I always find your writings very interesting. you and your friend Abhinanda are good narrators of personal experiences. I still remember what you wrote when you were asked to write your first few days' experiences in Maharaja's College. You mistook name of a girl as Rathina and followed her wherever she went those days. Of course finally you were disappointed as she found someone else.
  I request you to keep updating the blog regularly. You can recall your experiences as a journalist in Hyderabad, Hassan, Bangalore and now in Delhi. I have special liking for autobiographical sketches. Find some lighter moments in your experiences and peg your write-ups on them. Of course narrating the lighter moments alone should not be your goal.
  I am sure, one-day your write-ups will serve as wonderful memoirs of a journalist. You can do that.

  ReplyDelete
 4. did you know one thing, now he come out side and started a that same old job. that same get's car .

  ReplyDelete
 5. maga nijavaglu chenagi edy

  ninu gangothri LEDIS and BOYS HOSTEL

  Jotege ninu, ninna bike nalli drop taganda HUDUGIYARA kuchu-kuchu ota hai STORY bari maga

  ReplyDelete