Friday, June 12, 2009ಗೆಸ್ ವರ್ಕರ್ಸ್, ಅಲಿಯಾಸ್ ಜರ್ನಲಿಸ್ಟ್ಸ್.
ಬಹುತೇಕ ಚಾನಲ್ ಗಳು ಮಾಡಿದ ಲೋಕಸಭಾ ಚುನಾವಣಾ ಸಮೀಕ್ಷೆಗಳು ಸತ್ಯದ ಹತ್ತಿರಕ್ಕೂ ಬರದೇ ಹೋದವು ಅಲ್ವಾ, ಯಾವಾಗ ಚುನಾವಣೆ ನಡೆದರು ಅದೇ ಕತೆ, ಟಿ.ವಿ. ಚಾನಲ್ ನವರು ಏನೇನೋ ಸಮೀಕ್ಷೆ ಮಾಡಿ ರಾಜಕೀಯ ಆಸಕ್ತರ ತಲೆಕೆಡಿಸಿಬಿಡುತ್ತಾರೆ, ಈ ಭಾರಿ ಪುಣ್ಯಕ್ಕೆ ಚುನಾವಣೆ ಮತದಾನ ಮುಗಿಯುವ ಮುನ್ನ ಚುನಾವಣಾ ಸಮೀಕ್ಷೆಗಳನ್ನು ಬಿತ್ತರಿಸುವಂತೆ ಇರಲಿಲ್ಲ, ಆದರೂ ಕೆಲವು ಪತ್ರಿಕೆಗಳು, ಚಾನಲ್ಗಳು ಬೇರೆ ಬೇರೆ ಅಢ್ಡ ದಾರಿಗಳನ್ನು ಹಿಡಿದು ಯಾವ ಯಾವ ಪಕ್ಷಕ್ಕೆ ಎಷ್ಠು ಸೀಟು ಬರುತ್ತೆ ಅಂತ ಬರೆದು ತಮಗೆ ಬೇಕಾದ ಪಕ್ಷಗಳಿಗೆ ಹೆಚ್ಚಿನ ಅಂಕ ಕೊಟ್ಟುಕೊಂಡು ಬೀಗಿದರು, ಚಾನಲ್ ಗಳು ಹಾಗು ಪತ್ರಿಕೆಗಳ ನವರ ಈ ಆಟ ಏನೆಂದರೆ ತಮಗೆ ಅನಿಸಿದಂತೆ ಗೆಸ್ ವರ್ಕ್ ಮಾಡಿ ತಮ್ಮ ತಮ್ಮ ಬಾಸುಗಳನ್ನ ಮೆಚ್ಚಿಸೋದು...

ನನಗೆ ತಿಳಿದಿರುವಂತೆ ಬಹುತೇಕ ನ್ಯಾಷನಲ್ ಚಾನಲ್ಲಿನ ಓಡೆಯರು ಯಾವುದಾದರೂ ರಾಜಕೀಯ ಪಕ್ಷಕ್ಕೆ ಸೇರಿದವರಾಗಿರುತ್ತಾರೆ ಇಲ್ಲ ಯಾವುದಾದರೂ ರಾಜಕೀಯ ಸಿದ್ದಾಂತಕ್ಕೆ ಬದ್ದರಾಗಿರಾಗಿರುತ್ತಾರೆ, ಈಗಾಗಲೇ ಜಾಹಿರಾಗಿರುವ ಸಂಗತಿ ಏನೆಂದರೇ ಷೇರು ಮಾರುಕಟ್ಟೆಯಲ್ಲಿರುವ ಚಾನಲ್ ಗಳ ಸಿಂಹ ಪಾಲು ಷೇರುಗಳು ಕೆಲ ಬುಂದಿವಂತ ರಾಜಕಾರಣಿಗಳು ಖರೀದಿಸಿ ನ್ಯಾಷನಲ್ ಚಾನಲ್ ಗಳನ್ನು ಹಿಂಬಾಗಿಲಿನಿಂದ ತಮ್ಮ ಮುಷ್ಠಿಯಲ್ಲಿ ಇಟ್ಚು ಕೊಂಡಿದ್ದಾರೆ. ಅವರಿಗೆ ಬೇಕಾದ ತಾಳಕ್ಕೆ ತಕ್ಕಂತೆ ಪತ್ರಕರ್ತರ ಬಳಿ ಬಜನೆ ಮಾಡಿಸುತ್ತಾರೆ. ಮೊನ್ನೆ ನಡೆದ ಚುನಾವಣೆಗಳಲ್ಲೂ ಇಂತಹ ಸಂಗತಿಗಳ ಡಾಳು ಡಾಳಾಗಿ ಕಾಣಿಸಿಕೊಂಡವು ಆದರೆ ಸಾಮಾನ್ಯ ವೀಕ್ಷಕರಿಗೆ ಇದೆಲ್ಲ ಅರ್ಥ ಆಗೋದೆ ಇಲ್ಲ....ಆ ರೀತಿ ಎಲ್ಲವನ್ನು ಮ್ಯಾನೇಜ್ ಮಾಡಲಾಗಿರುತ್ತೆ,

ಚುನಾವಣೆ ಸಮೀಕ್ಷೆ ಅನ್ನೊದು ಎಷ್ಠು ಗೊಂದಲಕಾರಿ ಆಗಿತ್ತು ಎಂದರೆ ಚುನಾವಣಾ ಪಲಿತಾಂಶಕ್ಕೂ ಮುನ್ನ ಸ್ವತ ಕಾಂಗ್ರೆಸ್ ಪಕ್ಷ ಮಾಡಿಕೊಂಡಿದ್ದ ಅಂತರಿಕ ಸಮೀಕ್ಷೆಯಲ್ಲಿ ಅದು ಗೆಲ್ಲಬಹುದಾಗಿದ್ದ ಸೀಟುಗಳ ಸಂಖ್ಯೆ ಕೇವಲ 167 , ಅದೇ ಬಿಜೆಪಿ ಅಂತರಿಕ ಸಮೀಕ್ಷೆ ಪ್ರಕಾರ ಅದು ಗೆಲ್ಲಬಹುದಾದ ಸೀಟುಗಳ ಸಂಖ್ಯೆ 207, ಆದರೆ ಚುನಾವಣೆ ಪಲಿತಾಂಶ ಬಂದ ಮೇಲೆ ಆಗಿದ್ದೇ ಬೇರೆ ಸ್ವತ ಕಾಂಗ್ರೆಸ್ ಗೆ ನಂಬಲೂ ಆಗದಷ್ಠು ಸಂಖ್ಯೆ ೨೦೬ ಬಂದಿತ್ತು, ಅದೆ ಬಿಜೆಪಿಗೆ ಆಘಾತಕಾರಿ ೧೧೬ ಸೀಟು.
ಚುನಾವಣೆಳಲ್ಲಿ ನೇರವಾಗಿ ತೊಡಗಿ ಗುದ್ದಾಡಿದ ರಾಜಕೀಯ ಪಕ್ಷಗಳಿಗೆ ಗೆಸ್ ಮಾಡಲು ಆಗದ್ದು ಈ ಚಾನಲ್ ದೇಶವ್ಯಾಪಿ ವಿವಿಧ ನಗರಗಳಲ್ಲಿ 15000 ಜನರನ್ನು ಸಮೀಕ್ಷೆಗೆ ಒಳಪಡಿಸಿದರೆ ಆಗುತ್ತಾ ಹೇಳಿ, ಅಷ್ಠಕ್ಕೂ ಇಂಡಿಯಾದ ಮತದಾರ ತಾನು ಯಾರಿಗೆ ಓಟು ಕೊಟ್ಟೆ ಅನ್ನೋದನ್ನು ಯಾರಿಗಾದರೂ ಹೇಳುತ್ತಾನಾ...

ದೆಹಲಿಯಲ್ಲಿ ಚುನಾವಣಾ ಪಲಿತಾಂಶ ಬರುವುದಕ್ಕೂ ಹಿಂದಿನ ದಿನ ಅಂದರೆ ಮೆ 15 ರಂದು ನಾನು ಕುತೂಹಲಕ್ಕೆ ಅಂತ ಎಲ್ಲಾ ರಾಜಕೀಯ ಪಕ್ಷಗಳ ಕಚೇರಿಗೆ ,ಅಡ್ವಾಣಿ ಮತ್ತು ಸೋನಿಯಾ ಗಾಂಧಿ ಮನೆ ಹತ್ತಿರ ಹೋಗಿ ಅಲ್ಲಿನ ಮೂಡ್ ಅರ್ಥ ಮಾಡಿಕೊಳ್ಳಲು ಯತ್ನಸಿದೆ, ವಿವಿಧ ಟಿ.ವಿ. ಚಾನಲ್ ಪತ್ರಿಕೆಯ ಗೆಳೆಯರ ಹತ್ತಿರ ಚರ್ಚೆ ಮಾಡಿದೆ, ತೆಲುಗು, ತಮಿಳು, ಆಂದ್ರ , ಹಿಂದಿ , ಓಡಿಸ್ಸಾ, ಇಂಗ್ಲಿಷ್ ಬಾಷೆ ಸೇರಿದಂತೆ ಸಿಕ್ಕ ಸಿಕ್ಕ ಮಾದ್ಯಮ ಸಂಬಂದಿ ಸ್ನೇಹಿತರನ್ನು ಕೇಳಿದೆ, ಸರ್ಕಾರ ಯಾರು ಮಾಡುತ್ತಾರೆ ಅನ್ನೊ ಪ್ರಶ್ನೆಯನ್ನ ಬಹುತೇಕ ಮಂದಿ ಕೇಳಿದೆ ಅವರೆಲ್ಲ ನನಗೆ ಹೇಳಿದ್ದು ಬಿಜೆಪಿ ನೇತೃತ್ವ ಸರ್ಕಾರ ಖಂಡಿತ ಬರುತ್ತೆ ಅಂತ, ಅವರ ಲೆಕ್ಕಾಚಾರದ ಪ್ರಕಾರ ಕಾಂಗ್ರೇಸ್ ಅಧಿಕಾರಕ್ಕೆ ಬರುವ ಹೊಳಹು ಯಾರಿಗೂ ಇರಲಿಲ್ಲ.
ನನ್ನ ಕಚೇರಿಯ ಡ್ರೈವರ್ ನಿಂದ ಹಿಡಿಡು ಲೈವ್ ವ್ಯಾನ್ ಆಪರೇಟ್ ಮಾಡುವ ಟೆಕ್ನೀಷಿಯನ್ ಗಳ ಬಹುತೇಕರ ಅಭಿಪ್ರಾಯ ಕೂಡ ಅದೇ ಅಗಿತ್ತು,

ಚುನಾವಣಾ ಪಲಿತಾಂಶ ಬಂದ ದಿನ ಬೆಳಿಗ್ಗೆ ಬಹುತೇಕ ಟಿವಿ ಚಾನಲ್ ಗಳ ಓ ಬಿ (ಸ್ಥಳದಿಂದಲೇ ಲೈವ್ ಮಾಡಲು ಬಳಸುವ ವಾಹನ)ಗಳು ಅಡ್ವಾಣಿ ಮನೆ ಹತ್ತಿರ, ಬಿಜೆಪಿ ಕಚೇರಿ ಬಳಿ ನಿಂತಿದ್ದವು ಯಾವಾಗ ಕಾಂಗ್ರೆಸ್ ನ ಮಾರಿ ಕುಣಿತ ಆರಂಭವಾಯಿತೋ ಮತ್ತೆ ಓಬಿ ವ್ಯಾನ್ ಗಳನ್ನು ಕಾಂಗ್ರೆಸ್ ಕಚೇರಿಗೆ ವರ್ಗಾಯಿಸಲಾಯಿತು.

ನನ್ನ ಗ್ರಹಿಕೆಯಲ್ಲಿ ಮಾದ್ಯಮದ ಮಂದಿಯ ಲೆಕ್ಕಾಚಾರಗಳೇ ಯಾವಾಗಲೂ ಉಲ್ಟಾ ಪಲ್ಟಾ ಆಗಿರುತ್ತವೆ., ಈಗಿನ ಮಾದ್ಯಮದ ಮಂದಿ ಸತ್ಯಕ್ಕೆ ಬದಲಾಗಿ ಯಾರ ಪರವಾಗೋ ವ್ಯಾಮೋಹಿಗಳಾಗಿರುತ್ತಾರೆ, ಇಲ್ಲಾ ಯಾರ ಬಗೆಯೋ ಅಸಹನೆಯಿಂದ ಸಿಟ್ಟಾಗಿರುತ್ತಾರೆ ಇಲ್ಲ ಗೆಸ್ ವರ್ಕ್ ಮಾಡುತ್ತಾ ಇರುತ್ತಾರೆ ಅದಕ್ಕೆ ಹೇಳಿದ್ದು ಗೆಸ್ ವರ್ಕರ್ಸ್....ಅಲಿಯಾಸ್ ಜರ್ನಲಿಸ್ಟ್ಸ್.......
ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಬರದೇ ಹೋಗಿದ್ದಕ್ಕೆ ಸಿಟ್ಟಾಗಿದ್ದ ದೆಹಲಿಯ ಚಾನಲ್ ಒಂದರ ಹಿರಿಯ ಪತ್ರಕರ್ತನೊಬ್ಬ ಅತನ ಕಚೇರಿಯ ಚೇರುಗಳನ್ನು ಒದೆಯುತ್ತಾ ಸಿಟ್ಟು ತೋರಿಸುತ್ತಾ ಇದ್ದನಂತೆ ನೋಡಿ.

4 comments:

 1. teera matigetta sthiti.
  kannada channel paristhiti hattiradinda nodi gottittu.....thanks for sharing national channels circus behind the bloody pre poll surveys.....

  Hari

  ReplyDelete
 2. ಪತ್ರಿಕೆಗಳಿಗೆ ಮತ್ತು ಚಾನಲ್ ಗಳಿಗೆ ಅವರದ್ದೇ ಆದ ಭಾದ್ಯತೆಗಳಿರುತ್ತವೆ, ಅದಕ್ಕನುಗುಣವಾಗಿ ಕಾರ್ಯ ನಿರ್ವಹಿಸಬೇಕಾಗುತ್ತದೆ. ಆದರೆ ಇವತ್ತು ಲೆಕ್ಕವಿಲ್ಲದಷ್ಟು ಸಂಖ್ಯೆಯ ಚಾನಲ್ ಗಳು ಪತ್ರಿಕೆಗಳು ಜನ್ಮ ತಾಳಿವೆ, ಅವುಗಳಿಗೆ ಅಂತಹ ಸುದ್ದಿ ಭಾಧ್ಯತೆಗಳ ಅರಿವಿಲ್ಲ. ಸುದ್ದಿಗಾಗಿ ಏನನ್ನೂ ಬೇಕಾದರೂ "ಸುದ್ದಿ" ಯಾಗಿಸಲು ಮತ್ತು ತಮ್ಮದೇ ದೃಷ್ಟಿಕೋನದಲ್ಲಿ ತಮಗನಿಸಿದಂತೆ ಸುದ್ದಿ ಪ್ರಸಾರಿಸುತ್ತವೆ. ಚುನಾವಣೆಗಳ ಸಂಧರ್ಭದಲ್ಲೂ ಕಮಂಗಿಗಳಂತೆ ವರ್ತಿಸುವ ಚಾನಲ್+ಪತ್ರಿಕೆ ಗಳ ವರದಿಗಾರು, ಹಿರಿಯ ವರದಿಗಾರರು ಮಹಾನ್ ಫೋಸು ಕೊಡುತ್ತಾ ತಮ್ಮ ವಿಚಾರಗಳನ್ನು ಪರೋಕ್ಷವಾಗಿ ಪಕ್ಷಪಾತಿಯಾಗಿ ಬಿಂಬಿಸಲು ಯತ್ನಿಸುತ್ತವೆ. ಇದು ಪತ್ರಿಕಾ ಜಗತ್ತಿನ ಕಪ್ಪು ಚುಕ್ಕೆಗಳಲ್ಲೊಂದು. ಚರ್ಚೆಗೆ ಒಳ್ಲೇ ವಿಚಾರ ಕೊಟ್ಟಿದ್ದೀರಿ ಇದು ವಿಸ್ತ್ರತವಾಗಿ ಚರ್ಚೆಯಾಗಲಿ.
  ಸಿ. ಜಯಕುಮಾರ್. ಅರಕಲಗೂಡು

  ReplyDelete
 3. ಪಾಪ ಅವರು ತಾನೇ ಏನು ಮಾಡುತ್ತಾರೆ ಇಪ್ಪತಾನಕು ಗಂಟೆಗಳ ಕಾಲ ಸುದ್ದಿ ಬಿತ್ತರಿಸಬೇಕಾದ ಅನಿವಾರ್ಯತೆ.ಸುದ್ದಿಯನು ಎಕ್ಕುವ ವಿಧಾನ ತಿಳಿಯದ ಮಾಮೂಲು ಪತ್ರಕರ್ತರು.ಆರಾಮಾಗಿ ಎಸಿ ರೂಮ್ನಲ್ಲಿ ಕೂತು ಗೆಸ್ಸ್ ಮಾಡಿ ದೇಶದ ಜನತೆಗೆ ಅಮೂಲ್ಯವಾದ ಸತ್ಯ ಸಂಗತಿಯನು ಬಿತ್ತರಿಸುವ ಗುರುತರವಾದ ಜಾವಾಬ್ದಾರಿ ಅವರ ಮೇಲಿದೆ ಅವರ ಕರ್ತವ್ಯಕ್ಕೆ ಚ್ಯುತಿ ಬರದ ಹಾಗೆ ಅವರು ನಿರ್ವಹಿಸುತ್ತಿದ್ದಾರೆ ನಿಷ್ಪಾಪಿಗಳು ಅದನ್ನ ನೋಡಿ ನೋಡಿ ತಮ್ಮದೇ ದಾಟಿಯಲಿ ಚರ್ಚಿಸುತ ಕಾಲ ಕಳೆಯುತ್ತಿದ್ದಾರೆ.

  ReplyDelete
 4. ಮಿ ಗೌಡ ನೀನು ಅವತ್ತು ಹೇಳಿದ್ದಕ್ಕೆ ಇವತ್ತು ನಿನ್ನ ಬ್ಲಾಗ್ ನೋಡುವ ಘಳಿಗೆ ಕೂಡಿ ಬಂತು. ಪೂರ್ತಿ ಭಾವನಾತ್ಮಕವಾಗುತ್ತಾ ಇರುವ ಬ್ಲಾಗ್್ಗಳ ಮಧ್ಯೆ ಸ್ವಲ್ಪ ಢಿಫರೆಂಟ್ ಅನ್ನಿಸ್ತಾ ಇದೆ.ಪೂರ್ತಿ ಓದಿಲ್ಲ ಓದಿದ ಮೇಲೆ ಹೇಗಿತ್ತು ಅಂತ ಹೇಳ್ತೀನಿ. This is just to inform you you that I saw your blog

  ReplyDelete