Monday, June 29, 2009

ರಿಪೋರ್ಟ್ ಟಿಲ್ ಡೆತ್...!!!






ಈ ಪ್ರಕರಣ ನೆನೆಸಿಕೊಂಡಾಗಲೆಲ್ಲ ನನಗೆ ಒಂತಾರ ಕಸಿವಿಸಿಯಾಗುತ್ತೆ, ತಪ್ಪು ನಂದಾ, ಮತ್ತೊಬ್ಬರದಾ, ಆತನ ಸಾವಿಗೆ ನಾನು ಹೊಣೆಯಾ ಇಲ್ಲಾ ವಿಜಯಕರ್ನಾಟಕ ಪತ್ರಿಕೆ ಹೊಣೆಯಾ ಎಂಬ ಗೋಜಲು, ಗೋಜಲು ಯೋಚನೆಗಳು ದುತ್ತನೆ ಬಂದು ನಿಲ್ಲುತ್ತವೆ, ಪತ್ರಕರ್ತ ವೃತ್ತಿಯಲ್ಲಿ ಇಂತವೆಲ್ಲ ಸಹಜ ನನಗೆ ನಾನೇ ಹೇಳಿಕೊಂಡು ಸುಮ್ಮನೇ ಇರಲು ಯತ್ನಿಸಿದರು ನನಗೆ ಈ ಪ್ರಕರಣ ಆಗಾಗ ನೆನಪಾಗುತ್ತಾ, ಸರಿ ತಪ್ಪಿನ ಗೋಜಲಿಗೆ ಮತ್ತೆ ಮತ್ತೆ ಸಿಕ್ಕಿಸುತ್ತದೆ.

ನಿಮಗೆ ನೆನಪಿರಬೇಕು ಹಾಸನ ಜಿಲ್ಲೆಯಲ್ಲಿ ಅಕ್ಕಿ ಹಗರಣ ಎಂಬ ಬೃಹತ್ ಹಗರಣವೊಂದು ಬೆಳೆಕಿಗೆ ಬಂದು ಹತ್ತಾರು ಸರ್ಕಾರಿ ಅಧಿಕಾರಿಗಳು ಜೈಲಿಗೆ ಹೋಗಿ ಮತ್ತೆ ಕೋರ್ಟಿನಿಂದ ಕುಲಾಸೆಯಾದರು, ಸಾಮಾನ್ಯವಾಗಿ ಹಾಸನ ಜಿಲ್ಲೆಯಲ್ಲಿ ನಡೆದ ಬಹುತೇಕ ಹಗರಣ ಮತ್ತು ಕೊಲೆ ಕೇಸುಗಳು ಸಾಕ್ಷಾಧಾರಗಳಿಲ್ಲದೇ ಕುಲಾಸೆಯಾಗುತ್ತವೆ, ಅದು ಮೊದಲಿನಿಂದಲೂ ನಡೆದುಕೊಂಡು ಬಂದ ಸಂಪ್ರದಾಯ.

ಅಕ್ಕಿ ಹಗರಣ ನಡೆದು ಹೋಗಿ ರಾಜ್ಯದಾದ್ಯಂತ ಬಾರಿ ಸುದ್ದಿಯಾದಮೇಲೂ ಆ ಅಕ್ಕಿ ಹಗರಣ ಮುಂದುವರೆದಿತ್ತು, ಪೋಲೀಸರು, ಆಹಾರ ಇಲಾಖೆ ಅಧಿಕಾರಿಗಳು, ಎಪ್.ಸಿ.ಐ ಗೋಡೌನಿನ ಅಧಿಕಾರಿಗಳು, ವ್ಯಾಪಾರಿಗಳು, ಲಾರಿ ಮಾಲಿಕರು ಸೇರಿ ಬಡವರಿಗೆ ಸೇರಬೇಕಾದ ಅಕ್ಕಿಯನ್ನ ಅಕ್ರಮವಾಗಿ ಸಾಗಿಸಿ ಗುಳುಂ ಮಾಡುವುದೇ ಅಕ್ಕಿ ಹಗರಣ, ಈ ದಂದೆ ಮತ್ತು ಅದರ ವಿಸ್ತಾರಕ್ಕೆ ಹೋದರೆ ಕಷ್ಠ ಬಿಡಿ,ಕೊಲೆ ಆಗಬಹುದು, ಹಗರಣದ ಅಕ್ಕಿಯನ್ನು ಮಂಗಳೂರು ಬಂಧರಿನ ಮೂಲಕ ವಿದೇಶಕ್ಕೂ ಸಾಗಿಸುತ್ತಾರೆ ಆದರಿಂದ ಇದೊಂದು ಬಾರಿ ಕಳ್ಶರ, ದುರುಳರ ಸಂತೆ.

ಹಳೆ ಹಗರಣ ಬೆಳಕಿಗೆ ಬಂದು ವರ್ಷ ಕಳೆದ ನಂತರ ಮತ್ತೆ ಬಡವರ ಅಕ್ಕಿಯನ್ನ ಕಳ್ಳ ಮಾರ್ಗಗಳಲ್ಲಿ ಲಪಟಾಯಿಸುತ್ತಿರುವ ಮಾಹಿತಿ ಪಡೆದ ನಾನು ದೃಶ್ಯಗಳ ಸಮೇತ ಈ ಟಿ.ವಿ.ಯಲ್ಲಿ ವರದಿ ಮಾಡಿದೆ, ನನ್ನ ತನಿಖೆಯನ್ನು ಒಂದೇ ಪ್ರಕರಣಕ್ಕೆ ಸೀಮಿತಗೊಳಿಸದೆ ಸರಿ ಸುಮಾರು ಒಂದು ತಿಂಗಳು ನಿರಂತರವಾಗಿ ಅಕ್ಕಿ ದಾಸ್ತಾನಿರುವ ಗೋಡೌನುಗಳ ಮೇಲೆ ಅಧಿಕಾರಿಗಳ ಸಮೇತ ಧಾಳಿ ಮಾಡೋದು, ಲಾರಿಗಳನ್ನ ಸಾಕ್ಷ ಸಮೇತ ಹಿಡಿದು ವರದಿ ಮಾಡುವುದು ನಾನು ಮಾಡಿದ ಕೆಲಸ....ಆರಂಭದಲ್ಲಿ ಅನಾಮಿಕ ವ್ಯಕ್ತಿಯಿಂದ ಬಂದ ಮಾಹಿತಿ ಮೇರೆಗೆ ಶುರುವಾದ ನನ್ನ ಕಾರ್ಯಾಚರಣೆಗೆ ನಂತರದ ದಿನಗಳಲ್ಲಿ ಹಗರಣದಲ್ಲಿ ಪಾಲ್ಗೊಂಡಿದ್ದ ಮಂದಿಯೇ ಅವರವರ ನಡುವಿನ ದ್ವೇಷದಿಂದಾಗಿ ಮಾದ್ಯಮಗಳಿಗೆ ಮಾಹಿತಿ ನೀಡುತ್ತಿದ್ದರು. ಹಾಸನ ಸೇರಿದಂತೆ ರಾಜ್ಯದಲ್ಲೇ ಇದು ದೊಡ್ಡ ಸುದ್ದಿಯಾಗಿತ್ತು....

ಬಾರಿ ಹಣ ತೊಡಗಿಕೊಂಡ ಹಗರಣವಾದ್ದರಿಂದ ವರದಿ ಮಾಡಲು ಹೋದ ವರದಿಗಾರರ ಮೇಲೂ ಭ್ರಷ್ಠಾಚಾರದ ಆರೋಪ ಖಂಡಿತಾ ಬರುವುದರಿಂದ ವರಿದಿಗಾರರಿಗೆ ಮಾಹಿತಿ ಸಿಕ್ಕರೂ ಅದರ ತಂಟೆಗೆ ಹೋಗದೆ ಸುಮ್ಮನೆ ಇದ್ದು ಬಿಡುತ್ತಿದ್ದರು.
ಪರಿಸ್ಥಿತಿ ವಿಶಮವಾಗಿದ್ದರು ಅನ್ಯಾಯ ಸಹಿಸಿಕೊಳ್ಳಲಾಗದ ನಾನು ನನಗಿದ್ದ ಸೀಮಿತ ಅವಕಾಶದಲ್ಲೇ ಈ ಹಗರಣಗಳನ್ನ ಮತ್ತೆ ಬೆಳಕಿಗೆ ತಂದೆ, ನನ್ನ ಇಂತಹ ಪ್ರಯತ್ನದಲ್ಲಿ ನನ್ನ ಜೊತೆಗಿದ್ದವರು ವಿಜಯಕರ್ನಾಟಕ ಪತ್ರಿಕೆಯವರು.

ಒಂದು ದಿನ ಏನಾಯಿತೆಂದರೆ ಹಾಸನದ ಸಂತೇಪೇಟೆ ಮೈದಾನದಲ್ಲಿ ವ್ಯಕ್ತಿಯೊಬ್ಬ ಅಕ್ರಮ ದಾಸ್ತಾನು ಮಾಡಿದ್ದಾನೆ ಅಂತ ಸುದ್ದಿ ಸಿಕ್ಕಿದ್ದೇ ತಡ ನಾನು, ವಿಜಯಕರ್ನಾಟಕ ಪತ್ರಿಕೆ ಪ್ರಕಾಶ್ ಸ್ಥಳಕ್ಕೆ ಭಾರಿ ಅಕ್ರಮ ದಾಸ್ತಾನನ್ನು ಹಿಡಿದು ಬಿಟ್ಟವು. ಸ್ಥಳದಲ್ಲೇ ಸಿಕ್ಕಿಕೊಂಡ ವ್ಯಕ್ತಿಯ ಮದ್ಯ ವಯಸ್ಸು ಮೀರಿತ್ತು.
ನಮ್ಮ ಕೈಯಲ್ಲಿ ಸಿಕ್ಕಿಕೊಂಡು ಗಾಬರಿಗೆ ಒಳಗಾಗಿ ನಮಗೆ ಹಣದ ಆಮಿಶ ಒಡ್ಡಿದ, ಅದೆಲ್ಲಕ್ಕೆ ತಲೆಬಾಗದ ನಾವು ವರದಿ ಮಾಡಿದೆವು.

ಹಾಸನದಲ್ಲೆಲ್ಲಾ ದೊಡ್ಡ ಸುದ್ದಿಯಾಯಿತು. ಹಾಸನದಲ್ಲಿ ಬಾರಿ ಶ್ರೀಮಂತರೂ ಮರ್ಯಾದಸ್ಥ ಕುಟುಂಭದವನಾಗಿದ್ದ ಆತನ ದಂದೆ ಇದಾ.... ಅಂತ ಅಲ್ಲಿನ ಜನಕ್ಕೆ ಗೊತ್ತಾಯಿತು. ನಾನು ಎಂದಿನಂತೆ ಪ್ರಕರಣವನ್ನು ವರದಿ ಮಾಡಿ ಸುಮ್ಮನೇ ಆಗಿಬಿಟ್ಟಿ.

ಆದರೆ ವಿಜಯಕರ್ನಾಟಕದವರು ಅಕ್ಕಿ ಗುಳುಂ ಅಂತ ಪ್ರೋಮೋ ಹಾಕಿಕೊಂಡು ಆತನನ್ನ ಅರೆಸ್ಟ್ ಮಾಡುವವರೆಗೆ ದಿನಾ ಸುದ್ಧಿ ಹಾಕುತ್ತಿದ್ದರು,,, ಅಕ್ಕಿ ಕಳ್ಳನನ್ನು 5 ದಿನವಾದರೂ ಬಂಧಿಸದ ಪೋಲೀಸರು....! 15 ದಿನವಾದರೂ ಬಂಧಿಸಿದ ಪೋಲೀಸರು ಅಂತ, ಕಳ್ಳ ಮತ್ತು ಪೋಲೀಸರ ಹಿಂದೆ ವಿಜಯಕರ್ನಾಟಕದವರು ಬಿದ್ದು ಬಿಟ್ಟರು.... ಪ್ರಕರಣ ನಡೆದು ಒಂದು ತಿಂಗಳ ನಂತರ ವ್ಯಕ್ತಿಯ ಬಂಧನವಾಯಿತು ಅದನ್ನೂ ವಿಜಯಕರ್ನಾಟಕದವರು ಪಲಶೃತಿ ಅಂತ ಬರೆದುಕೊಂಡರು...

ಆತ ಬೇಲ್ ಅಪ್ಲಿಕೇಶನ್ ಹಾಕಿದಾಗ... ಮತ್ತೆ ಬಿಡುಗಡೆಯಾದಾಗ ಪಾಲೋ ಅಪ್ ಸುದ್ದಿಗಳನ್ನು ಪತ್ರಿಕೆಯಲ್ಲಿ ಆತನ ದಪ್ಪ ದಪ್ಪ ಪೋಟೋ ಹಾಕಿ ಅಕ್ಕಿ ಕಳ್ಳನ ಚಡ್ಡಿ ಹರಿದರು... ಆದು ಯಾವ ಮಟ್ಟಕ್ಕೆ ಹೋಗಿತ್ತು ಅಂದರೆ ನನಗೇ ಯಾಕೋ ಇವರದು ವಿಕೃತಿ ಅನ್ನಿಸಲಿಕ್ಕೆ ಶುರುವಾಗಿತ್ತು.

ಇದೆಲ್ಲ ನಡೆದು ಎರಡು ತಿಂಗಳಾಗಿರಬೇಕು ನನ್ನ ಸ್ನೇಹಿತ ಗಣೇಶ ನನಗೆ ಬೆಳಿಗ್ಗೆ ಅಷ್ಟೊತ್ತಿಗೆ ಕರೆ ಮಾಡಿ, ಲೋ ಗೌಡ ಅಂತೂ ಇಂತೂ ಅಕ್ಕಿ ಕಳ್ಳನನ್ನೂ ಬಲಿ ತಗೊಂಡ್ರಲ್ಲೋ ಅಂದ. ನಾನು ಗಾಭರಿಯಿಂದ ಯಾಕಪ್ಪಾ ಅಂದೆ ಅದೇ ಕಣೋ ಅಕ್ಕಿ ಹಗರಣದಲ್ಲಿ ದಿನಾಲೂ ಪೇಪರಿನಲ್ಲಿ ಬರ್ತಾ ಇದ್ದನಲ್ಲಾ ಆ ಅಸಾಮಿ, ಆತ ಸತ್ತೋದ ಕಣೋ... ಹೈ ಶುಗರ್ ಇತ್ತಂತೆ.... ಬಿಪಿ ಸಿಕ್ಕಾ ಪಟ್ಟೆ ಹೆಚ್ಚು ಕಮ್ಮಿ ಆಗಿದೆ, ಜೊತೆಗೆ ಹಾರ್ಟ್ ಪೈಲೂರಾಗಿ ಹೋಗಿ ಬಿಟ್ಟಿದ್ದಾನೆ ಗುರೂ..
ನೀವು ಪೇಪರಿನೋರ ಕಾರಣದಿಂದಲೇ ಸತ್ತ ಅಂತ ಜನ ಮಾತಾಡಿಕೊಳ್ತಾ ಇದಾರೆ, ಇದಕ್ಕೆಲ್ಲಾ ಕಾರಣ ವಿಜಯಕರ್ನಾಟಕ ಹಾಸನ ಮುಖ್ಯಸ್ಥ ಮಹೇಶ್ ಚಂದ್ರನಿಗೆ ಈಗ ನೆಮ್ಮದಿ ಸಿಕ್ಕಿರಬೇಕು ಅವನಿಗೆ ಪೋನು ಮಾಡ್ರೋ ಅಂತ ಯಾರೋ ಅವರ ಮನೆ ಹತ್ರ ಮಾತಾಡಿಕೊಂಡರಂತೆ ಅಂತ ಹೇಳಿದ. ಜೊತೆಗೆ ನೀನೂ ಇವತ್ತೊಂದು ದಿನ ಹುಶಾರಾಗಿರು ಗುರು ಯಾಕಂದರೆ ಅವನನ್ನ ಮೊದಲು ಹಿಡಿದೊನೇ ನೀನಲ್ಲವಾ ಅಂದ.

ನನಗೆ ಯಾಕೋ ಬೇಜಾರಾಯಿತು ನಾನು ಆತನನ್ನು ಹಿಡಿದಿದ್ದರಿಂದಲೇ ಅಲ್ವಾ ಆತ ಸತ್ತಿದ್ದು, ಆ ವಿಜಯಕರ್ನಾಟಕದವರು ಆತನನ್ನು ಹುರಿದು ತಿಂದದ್ದು, ಆತ ತಪ್ಪು ಮಾಡಿದ್ದ ನಿಜ ಆದರೂ ಸಾಯೋವಂತಾ ತಪ್ಪಲ್ಲ ಅಂತೆಲ್ಲಾ ಅನ್ನಿಸಲಿಕ್ಕೆ ಶುರುವಾಯಿತು... ಈ ಪ್ರಕರಣದಲ್ಲಿ ನನ್ನ ಪಾತ್ರ ಸರಿನಾ ತಪ್ಪಾ ಅಂತ ಗೊತ್ತಾಗಲೇ ಇಲ್ಲ.

ಅವನ ಸುದ್ಧಿಯನ್ನ ದಿನಾ ಪಾಲೋ ಅಪ್ ಮಾಡುತ್ತಿದ್ದ ವಿಜಯಕರ್ನಾಟಕದವರು ಅವನು ಸತ್ತ ದಿನ ಒಂದೇ ಒಂದು ಶಬ್ಧ ಸುದ್ಧಿ ಬರೆಯಲಿಲ್ಲ ನೋಡಿ.....

3 comments:

  1. ತುಂಬ ಚೆನ್ನಾಗಿದೆ ಗೌಡ..

    ReplyDelete
  2. Gowda,
    what you have written is a serious issue. because you felt for the death of that person, somewhere in the corner of your heart you feel guilty. but many lack a heart to feel.
    i want to recall an incident. i hope you know Prof Mylarappa of Bangalore Univresity. After he was thrown out of the position he held in the University he tried his luck in the elections in 2008. I had an opportunity to interview on the occasion. i happened to ask him about charges levelled against him. he was furious. after bashing media for reports on him, he told me how his son suffered because of the media reports.
    he said, he son studies in a convent, where the school management has the practice of making one of the students read newspapers loud during the morning prayer meetings.
    on one such day it was his son's turn to read newspapers. the teacher concerned had marked a few news-items appeared on page 1 of times of india of the day to be read in the prayer meeting. one of the items marked was about his own father! It was a story accusing his father (prof mylarappa) with serious charges.
    Imagine the plight of that kid. He read the news clipping with tears in his eyes. He went home crying.
    father might have done some mischief. but what did the poor boy do?
    whenever i read such 'breaking', 'sting operation' stories i think how would family members of the accused react.
    recently TV9 caught a senior officer misbehaving with a lady colleague. for a second think, how would the officer's college-going girl would react when she watches the video footage on tv.

    ReplyDelete
  3. ಬೇರೆಯವರ ಮಾನ ಹರಾಜಾಕೊಕೆ ಅಂತ ತಿಳ್ಕೊಂಡಿರೋರೆ ಪತ್ರಕರ್ತರ ಅಂತ ಅನ್ಸತ್ತೆ ಮಾರಾಯ. ನೀನು ನಿನ್ನ ಆತ್ಮ ಸಾಕ್ಷಿಗಾದರು ಹೆದರಿ ಅನ್ನಿಸಿದನ್ನು ಬರ್ದಿದ್ದಿಯ. ಗುಡ್. ಇಲ್ಲಿದಾಗ ಮಹೇಶ್ಚಂದ್ರ ಹಲವಾರು ಪ್ರಕರಣಗಳ ಹಿಂದೆ ತೀರ ಅತಿ ಆಯ್ತು ಅನ್ನೋ ಅಷ್ಟು ಬಿಳ್ತಾ ಇದ್ರೂ. ಅದ್ರಲ್ಲಿ ಅಕ್ಕಿ ಹಗರಣ ಕೂಡ ಒಂದು. ನಿಜ ಎಲ್ಲವೂ ಸುದ್ದಿ. ಅದನ್ನ ವರದಿ ಮಾಡಬೇಕಾದದ್ದು ಪತ್ರಕರ್ತರ ಕರ್ತವ್ಯ. ಆದ್ರೆ ಸ್ಸುದ್ದಿಯನ್ನ ಕೇವಲ ಸುದ್ದಿಯಾಗಿ ನೋಡಿ ವರದಿ ಮಾಡೋದು ಬಿಟ್ಟು ಅಲ್ಲಿ ನಡಿಯೋ ಅಕ್ರಮನೋ ಮತ್ತೊಂದೋ ತಡೆಯೋದು ಕೂಡ ತಮ್ಮದೇ ಕೆಲಸ ಅಂತ ಹೊರಡೋದು ತಪ್ಪಲ್ವಾ?
    ನನಗೂ ಓಡಿ ಹೋಗೋ ಹುಡುಗಿಯರ ಹೆಸರು ಬರೆಯ ಬೇಕೋ ಬೇಡವೋ ಅನ್ನೋ ಜಿಜ್ಞಾಸೆ ಕಡ್ತಾನೆ ಇರತ್ತೆ. ಒಂದ್ ಸಾರಿ ಒಬ್ಳು ಹುಡುಗಿ ಪಿ ಯು ಸಿ ಓದೋಳು ಯಾರೋ ವ್ಯಾನ್ ಡ್ರೈವರ್ ಜೊತೆ ಹೋಗಿ ಮದ್ವೆ ಆಗಿ ೩ ದಿನ ಬಿಟ್ಟು ಬಂದ್ಲು. ಪೋಲಿಸ್ ಸ್ಟೇಷನ್ನಲ್ಲಿ ಪಂಚಾಯತಿ. ಹುಡುಗಿ ಅಪ್ಪ ಅಮ್ಮನ ಜೊತೆ ಒಂದು ರೂಮ್ನಲ್ಲಿ ಮಾತಾಡಿ ಬಂದವಳು ಧಿಡೀರ್ ಅಂತ ತನ್ನ ನಿರ್ದಾರ ಬದಲಿಸಿದ್ದಳು. ಮೋಸ್ಟ್ಲಿ ವ್ಯಾನ್ ಡ್ರೈವರ್ ನೀಡಬಹುದಾದ ಕಂಫುರ್ಟ್ ಏನು ಅಂತ ಅವಳಿಗೆ ೩ ದಿನದಲ್ಲಿ ಗೊತ್ತಾಯ್ತ. ಅಂತ ಕಾಣತ್ತೆ. 'ನಾನು ಅಪ್ಪ-ಅಮ್ಮನ ಜೊತೆ ಹೋಗ್ತೀನಿ ' ಅಂತ ಪ್ಲೇಟ್ ಬದಲಿಸಿದಳು. ಹುಡುಗುನ್ನ ಒಂದು ಸಾರಿ ತಿರುಗಿ ನೋಡದೆ ಹೊಗಿದಲ್ಲೂ. ನಂಗೆ ಆ ವ್ಯಾನ್ ಡ್ರೈವರ್ ಸ್ತಿತಿ ಅಯ್ಯೋ ಅನ್ನಿಸ್ತು. ಸುದ್ದಿ ಬರೆಯುವಾಗ ಆ ಹುಡುಗಿ, ಅವಳ ಅಪ್ಪನ ಹೆಸರು ಊರು ಎಲ್ಲ ಸೇರಿಸಿಬಿಟ್ಟೆ. ಅದು ಟಿಂಟ್ ಸಮೇತ ಪ್ರಕಟ ಆಯ್ತು. ಹುಡುಗಿ ಮನೆಯವರು ತುಂಬಾ ನೊಂದುಕೊಂದ್ರಂತೆ.
    ಮರು ದಿವಸ ನಂಗೆ ತುಂಬಾ ಬೇಜಾರಾಯ್ತು. ಹುಡುಗಿ ಒಬ್ಳು ಅಪ್ರಬುದ್ದ ತೀರ್ಮಾನ ತಗೊಂಡು ಜೀವನ ಹಾಳು ಮಾಡ್ಕೊಳ್ತಾಇದ್ದಿದುನ್ನ ಅಪ್ಪ -ಅಮ್ಮ ತಪ್ಪಿಸಿ ಕರಕೊಂಡು hogidru. ಆ kshanakke paapa annisidda ಆ ವ್ಯಾನ್ ಡ್ರೈವರ್ ಪಿ ಯು ಸಿ ಓದೋ hudugina oodisikondu hodavanu aayogya ಅಂತ ನಂಗೆ ಸುದ್ದಿ ಬರೆಯುವಾಗ annisirle ಇಲ್ಲ. eevattigu nan madid kelsad bagge nachke aagatte. ಹಂಗೆ kaadutte aparaadi ಭಾವ. ನೀನು ಆಗ ಅಕ್ಕಿ ರೈಡ್ ಮಾಡಿದಾಗ ಎಲ್ಲಾದರು ಇವನು ಕಲ ನಂ ಮಕ್ಳು ಕೈಗೆ ಸಿಕ್ಕು ಏನಾದ್ರು ತೊಂದ್ರೆ ಮಾಡ್ಕೊಳ್ತಾನ ಅಂತ ಆತಂಕ ಇತ್ತು. ಆದ್ರೆ ಅವ್ನ ಸಾವು ನಿನ್ನನ್ನ ಕಾಡ್ತಾ ಇರೋದು ಆಶ್ಚರ್ಯ ಅನ್ಸತ್ತೆ ಆದರೂ ನಿನ್ನೊಳಗಿನ ನೀನು ಜೀವಂತ ಇರೋದಕ್ಕೆ ಸಾಕ್ಷಿ.

    ReplyDelete