ಗೆಳೆಯ ಈಶಕುಮಾರ್ ನನ್ನ ಆರ್ಕುಟ್ ಪ್ರೋಪೈಲ್ ನಲ್ಲಿ ಸಂದೇಶ ಕಳಿಸಿ ಕಳ್ಳನಿಗೆ ಪಿಳ್ಳೆನೆವ ಬೇಡಮ್ಮಾ ಏನಾದರು ಬರೆಯಮ್ಮಾ ಅಂತ ಅಧಿಕಾರಯುತ ಶೈಲಿಯಲ್ಲಿ ಹಂಗಿಸಿದ್ದಾನೆ ಒಂದು ತಿಂಗಳಾದರೂ ಏನೂ ಬರೆಯದೇ ಇದ್ದದ್ದಕ್ಕೆ ನಾನು ನೂರು ಮಾತು ಕೇಳಬೇಕಾಗಿದೆ,
ಅದೆಲ್ಲ ಇರಲಿ ಈಗ ಕೇಳಿ ದೆಹಲಿಯನ್ನ ಪ್ರತ್ರಿಕೋದ್ಯಮದ ಮೆಕ್ಕಾ ಅಂತಾ ಕರೀತಾರೆ ಲೋಕಸಭಾ ಚುನಾವಣೆ ಮತ್ತು ತದನಂತರ ನಾನು ರಾಜಕೀಯದ ಮೊಗಸಾಲೆಗಳಲ್ಲಿ ಕಂಡು ಕೇಳಿದ ಸಂಗತಿ ಹೇಳುತ್ತೇನೆ ಇಂಟರಸ್ಚಿಂಗ್ ಆಗಿದೆ, ಎಸ್.ಎಂ.ಕೃಷ್ಣ ಅವರನ್ನ ತಟಕ್ಕನೆ ದೆಹಲಿಗೆ ಕರೆಸಿ ವಿದೇಶಾಂಗ ಖಾತೆ ಸಚಿವರನ್ನಾಗಿ ಮಾಡಿಬಿಟ್ಟರು ಸೋನಿಯಾ ಗಾಂಧಿ ಮತ್ತು ಮನಮೋಹನ್ ಸಿಂಗ್
ದೆಹಲಿ ಪತ್ರಕರ್ತರಿಗೆ ಎಸ್,ಕೃಷ್ಣ ಗೊತ್ತು ಬಿಟ್ಚರೆ ಅವರ ಬಗ್ಗೆ ಹೆಚ್ಚೇನು ಗೊತ್ತಿಲ್ಲ ಹಾಗಾಗಿ ಅವರ ಬಗ್ಗೆ ಒಬ್ಬೋಬ್ಬರು ಒಂದೊಂದು ಗಾಸಿಪ್ ಗಳನ್ನು ಹಬ್ಬಿಸಿಬಿಟ್ಟಿದ್ದರು ತಮಗೆ ತಿಳಿದದ್ದು ಸತ್ಯ ಅಂತ ಬೀಗಿದರು, ಗಾಸಿಪ್ ಏನೆಂದರೆ ಎಸ್.ಎಂ. ಕೃಷ್ಣ ಭಯಂಕರ ಕುಡುಕ ಅಂತೆ, ಮಟ ಮಟ ಮದ್ಯಾನವೇ ಎಣ್ಣೆ ಹಾಕ್ಕೊಂಡೆ ಇರ್ತಾರಂತೆ ಅನ್ನೋದು, ನನಗೂ ಎರಡೂ ಮೂರು ಮಂದಿ ಹೌದಾ ಗೌಡಾಜೀ, ಎಸ್.ಎಂ. ಕೃಷ್ಣ ಎಣ್ಣೆ ಗಿರಾಕಿನಾ ಅಂತ ವಿದೇಶಾಂಗ ಖಾತೆ ರಿಪೋರ್ಟಿಂಗ್ ನಲ್ಲಿರುವ ಗೆಳೆಯರು ಕೇಳಿದರು ನನಗೂ ಎಲ್ಲಿಂದ ನಗಬೇಕೋ ಗೊತ್ತಾಗಲಿಲ್ಲ, ನಾನು ಅವರನ್ನಲ್ಲ ಕನ್ವಿನ್ಸ್ ಮಾಡಬೇಕಾಯಿತು. ಕೃಷ್ಣ ಅಂದರೇ ಸುಮ್ಮನೇ ಅಲ್ಲಪ್ಪಾ ತುಂಬಾ ಹೈ ಪ್ರೋಪೈಲು, ಇಂಗ್ಲೇಂಡಿನಿಂದ ಆ ಕಾಲದಲ್ಲೇ ಪದವಿ ಪಡೆದವರು, ಬೆಂಗಳೂರನ್ನ ಐಟಿ ಸಿಟಿ ಮಾಡಿದವರು, ಹಾಗೆಲ್ಲ ಯಾವಾಗಂದರಾವಾಗ ಗುಂಡು ಹಾಕೋ ತರದವರಲ್ಲ ಅಂದೆ...
ಇನ್ನೊಂದು ತಮಾಶೆ ನಡೆದಿದ್ದು ನಮ್ಮ ಆಪೀಸಿನಲ್ಲೇ ನಮ್ಮ ನ್ಯೂಸ್ ಕೋ ಆರ್ಡಿನೇಟರ್ ಶ್ರೀ ಹರ್ಷ, ಕೃಷ್ಣ ಅವರ ಕೂದಲು ಒರಜಿನಲ್ ಅದು ಟೋಬನ್ ಅಲ್ಲ ಅಂತ ನಮ್ಮ ಕೆಲವು ವರದಿಗಾರರೊಂದಿಗೆ ವಾಧಿಸಿ ಬಾಜಿ ಕಟ್ಟಿಬಿಟ್ಟಿದ್ದರು ಕಡೆಗೆ ನನ್ನ ಹತ್ರ ಕೇಸು ಬಂದಾಗ ನಾನು ಕೃಷ್ಣ ಅವರದ ಒರಜಿನಲ್ ಟೋಬನ್ ಬಿಟ್ಚರೆ ಏನೂ ಇಲ್ಲ ಅಂತ ಅವರಿಗಿದ್ದ ಗೊಂದಲ ನಿವಾರಿಸಿದೆ, ಇದೇ ವಿಷಯವನ್ನ ಪ್ರಜಾವಾಣಿಯ ದಿನೇಶ್ ಅಮೀನ್ ಮಟ್ಟು ಅವರ ಹತ್ತಿರ ಪ್ರಸ್ತಾಪಿಸಿದೆ ಆಗ ಅವರು ಹೇಳಿದರು ಕೃಷ್ಣ ಅವರ ಟೋಬನ್ ಬಗ್ಗೆ ಕರ್ನಾಟಕದ ಎಲ್ಲಾರಿಗೂ ಗೊತ್ತು ಕನ್ನಡದ ಎಲ್ಲಾ ಪತ್ರಿಕೆಗಳಲ್ಲೂ ಅದರ ಬಗ್ಗೆ ಬರೆದು ಜಾಹಿರಾಗಿದೆ ಆದರೆ ರಾಷ್ಠ್ರೀಯ ಮಟ್ಟದಲ್ಲಿ ಒಂದೇ ಬಾರಿಯಾದರೂ ಈ ಬಗ್ಗೆ ಸುದ್ಧಿಯಾಗಿಲ್ಲ, ಯಾವ ಸುದ್ಧಿ ಚಾನಲ್ಲಿಗೂ ವಸ್ತುವಾಗಿಲ್ಲ, ಆ ರೀತಿ ಅವರ ಟೋಬನ್ ಅನ್ನ ಮೈನ್ ಟೈನ್ ಮಾಡಿದ್ದಾರೆ ನೋಡಿ ಅಂದರು.
ಕೃಷ್ಣ ಕ್ಯಾಬಿನೆಟ್ ಸೇರಿ ಮಂತ್ರಿಯಾದ ಕೂಡಲೇ ದೆಹಲಿಯ ನ್ಯಾಷನಲ್ ಮೀಡಿಯಾದವರಿಗೆ ಅವರನ್ನು ಪರಿಚಯಮಾಡಿಕೊಡುವ ಪಸ್ಟ್ ಇಂಟರ್ ವೀವ್ ಮಾಡುವ ಜಿದ್ದಿಗೆ ಬಿದ್ದಿದ್ದರು ಆದರೆ ಈ ಹಿಂದೆ ಈ ಟಿ.ವಿ.ಯಲ್ಲಿದ್ದು ಈಗ ಸಿಎನ್ಎನ್ ಐಬಿನ್ ವರದಿಗಾರನಾಗಿರುವ ಕನ್ನಡಿಗ ಡಿ.ಪಿ. ಸತೀಶ್ ಗೆ ಅವಕಾಶ ಸಿಕ್ಕಿತ್ತು ಕರ್ನಾಟಕ ಭವನಕ್ಕೆ ಬಂದ ಕೃಷ್ಣ ಅವರನ್ನು ಕೈ ಹಿಡಿದುಕೊಂಡೇ ಕರೆದೊಯ್ದ ಅತ ಲೈವ್ ಚೇರ್ ನಲ್ಲಿ ಕೂರಿಸಿಬಿಟ್ಟ ಆ ಕಡೆ ಇದ್ದ ರಾಜ್ ದೀಪ್ ಸರ್ದೇಸಾಯಿ ಕೃಷ್ಣ ಅವರ ಮೊದಲ ಸಂದರ್ಷನ ಮಾಡಿದ ಬೇರೆ ಚಾನಲ್ ನವರಿಗೆ ನಿರಾಷೆ ಆಯಿತು.
ಅದೆಲ್ಲಕ್ಕೂ ಮೊದಲೇ ವಿಶೇಷವಾಗಿ ಕನ್ನಡದ ಚಾನಲ್ ಗಳಿಗೆ ಕೃಷ್ಣ ಸಂದರ್ಷನ ಕೊಟ್ಟಿದ್ದರು ಅದೂ ಅಲ್ಲದೆ ಮಾರನೇ ದಿನ ದೆಹಲಿಯಲ್ಲಿ ಕೆಲಸ ಮಾಡುವ ಕನ್ನಡದ ಪತ್ರಕರ್ತರನೆಲ್ಲಾ ಕರೆಸಿ ಕೃಷ್ಣ ಮಾತನಾಡಿ ಅರ್ಧಗಂಟೆ ಜೋಕ್ ಮಾಡಿ ನಗಿಸಿದ್ದರು ಕೃಷ್ಣ ಎಂತಾ ಸ್ವಬಾವದವರು ಅನ್ನೋದಕ್ಕೆ ಅವರೇ ಹೇಳಿದ ಘಟನೆ ಹೇಳಿ ಮುಗಿಸುತ್ತೇನೆ,
ಬೆಂಗಳೂರಿನಲ್ಲೇ ಇದ್ದ ಕೃಷ್ಣ ಅವರಿಗೆ ದೆಹಲಿಗೆ ದಿಡೀರ್ ಅಂತಾ ಬುಲಾವ್ ಬರುವ ಕೆಲ ನಿಮಿಶಗಳ ಹಿಂದಷ್ಠೆ ತಮ್ಮ ಟೆನಿಸ್ ಆಟದ ಜೊತೆಗಾರ ಗೆಳಯನಿಗೆ ಕರೆ ಮಾಡಿ ಮದ್ಯಾನ ನಾಲ್ಕು ಗಂಟೆಗೆ ಬಂದೇ ಬರುತ್ತೇನೆ ಅಂತ ಪ್ರಾಮೀಸ್ ಮಾಡಿದ್ದರಂತೆ, ದೆಹಲಿಯಿಂದ ಸೋನಿಯಾ ಮತ್ತು ಮನಮೋಹನ್ ಕರೆಮಾಡಿ ಕ್ಯಾಬಿನೆಟ್ ಸೇರಿಕೊಳ್ಳಿ ಅಂತ ಕರೆದಾಗ ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಜೆಟ್ ಲೈಟ್ ವಿಮಾನವೊಂದನ್ನು ೧ ಗಂಟೆ ತಡ ಮಾಡಿಸಿದರಂತೆ...
ಡೆಲ್ಲಿಗೆ ಬಂದವರೇ ಸೀದಾ ಸೋನಿಯಾಗಾಂಧಿ ಅವರ ಮನೆಗೆ ಹೋದ ಅವರು ತಮಾಶೆಯಾಗಿಯೇ ಸೋನಿಯಾಗೆ ನನ್ನನ್ನು ರಾಷ್ಠ್ರಪತಿ ಭವನಕ್ಕೆ ಬರಕ್ಕೆ ಹೇಳಿದಾರೆ, ಓಥ್ ತಗೋಳ್ಳಕ್ಕೆ ಹೋಗ್ತಾ ಇದೇನೆ ಅಂದರಂತೆ, ಅಷ್ಟರಲ್ಲಿ ಸೋನಿಯಾ ಗಾಂಧಿ ಕೂಡ ನನ್ನನ್ನು ಕರೆದಿದ್ದಾರೆ ನಾನೂ ಬರ್ತಿನಿ ಅಂತ ಕೃಷ್ಣ ಹೇಳಿದ ರೀತಿ ಹೇಳಿ ನಕ್ಕರಂತೆ......

ಕೃಷ್ಣರ ಬಗ್ಗೆ ಸರಳವಾಗಿ ಸುಂದರವಾಗಿ ಬರೆದಿದ್ದೀಯ
ReplyDeleteಇದೇ ರೀತಿಯ ಇನ್ನು ಹಲವಾರು ಕೂತುಹಲಗಳು ರಾಜಕಾರಣಿಗಳ ಮೇಲೆ ಹುಟ್ಟುವುದು ಸಾಮಾನ್ಯ.ಅದರಲ್ಲೂ ಡೆಲ್ಲಿ ಪತ್ರಕರ್ತರಿಗಿರೋದು ಕೆಟ್ಟ ಕೂತುಹಲ.ಲಾಲುವನ್ನ ಯಾಗೆ ಅವರು ಭಾರತದ ಕಾರ್ಟೂನ್ ಮಾಡಿಬಿಟ್ಟರು.ಇನ್ನ ನಮ್ಮವರ ಸರದಿ ಸಾಗಲಿ ಕಾತರಿಕೆ ಕಳೆವ ಹುಡುಕಾಟಗಳು.....
ಹಲವು ದಿನಗಳ ನಂತರ ಬಂದ ಬರವಣಿಗೆಯದ್ದರಿಂದ..ಅದರ ತೀವ್ರತೆ ಕಡಿಮೆಯಾಗಿದೆ ಅದು ಎಂದಿನ ಲಯವನ್ನ ಕಂಡುಕೊಳ್ಳಲಿ ಗೆಳೆಯ...ಶುಭ ಸಂಜೆ
Gowdru "GWODRA' bagge bardidirlla
ReplyDeleteLate agi andru...Latest agi bandri...thanx
ReplyDeleteಚೆನ್ನಾಗಿದೆ . ಬರಯುವ ಚಟ ಇರುವವರೆಗೂ ಬರೆಯಪ್ಪ .
ReplyDeleteರೀ ಗೌಡ್ರೆ ಯಾಕ್ರಿ ಹೀಗೆ ನಮ್ಮನ್ನು ಸಾಯಿಸಿಸ್ತೀರಿ, ನಿಮ್ ಬ್ಲಾಗ್ ನ ಪ್ರತಿ ದಿನ ಎರಡೆರಡು ಸಾರಿ ತೆಗೆದು ನೋಡಿ ನೋಡಿ ಸಾಕಾಗಿ ಹೋಯಿತು. ರಾಜಕೀಯದ ಬ್ಯುಸಿ ಮುಗಿದು ಬಹಳ ದಿನವಾಯ್ತು, ಆದರೂ ಬರೆಯೋ ಮನಸ್ಸು ಯಾಕೆ ಮಾಡಲಿಲಿಲ್ಲವೋ ತಿಳೀಲಿಲ್ಲ. ಇರ್ಲಿ ಬರೆಯೋ ಅಬ್ಯಾಸ ನಿಲ್ಲಿಸಬೇಡೀಪ್ಪ.... ಇಲ್ಲಾಂದ್ರೆ ನಮಗೆಲ್ಲ ನಿರಾಶೆ ಆಗುತ್ತೆ. ಕೃಷ್ಣ ರ ಬಗ್ಗೆ ಬರೆದಿರೋ ಬರಹ ತುಂಬಾ ಚೆನ್ನಾಗಿದೆ, ನಮ್ಮ ಅರಕಲಗೂಡು ಸೂರ್ಯ ಪ್ರಕಾಶ್ ಬಗ್ಗೆ ಏನಾದ್ರೂ ಬರೀರಿ...
ReplyDeleteಸಿ. ಜಯಕುಮಾರ್