ಮತ್ತೆ ಬ್ಲಾಗಿಂಗ್ ಶುರುಮಾಡೋದು ಅಂತ ನಾನು ತೀರ್ಮಾನ ಕೈಗೊಳ್ಳುವ ಹೊತ್ತಿಗೆ ಕಳೆದು ಹೋದ ಸುಮಾರು 8 ತಿಂಗಳು ನೆನಪಾಗುತ್ತಿವೆ, ಪರಮ ಸೋಮಾರಿತನದ ದಿನಗಳನ್ನು ಅನುಭವಿಸಿ ಇದೀಗ ಕೊಡವಿಕೊಂಡು ಎದ್ದೇಳೋ ಮನಸು ಮಾಡಿದ್ದೇನೆ, ನಾನೇ ಹಾಕಿಕೊಂಡ ಲೆಕ್ಕಾಚಾರದಂತೆ ದೆಹಲಿಯ ಈ ಟಿವಿ ಕೆಲಸಕ್ಕೆ ಯಾವಾಗಲೋ ರಾಜೀನಾಮೆ ನೀಡಿದ್ದೇನೆ, ಈಗ ನಾನು ಏನು ಮಾಡುತ್ತಿದ್ದೇನೆ ಅಂತ ಕೇಳಿದರೆ, ತುಂಬಾ ಇಂಗ್ಲೀಷ್ ಸಿನೆಮಾ ನೋಡುತ್ತಿದ್ದೇನೆ,ಬೇಕಾದ ಕಡೆಯೆಲ್ಲ ಸುತ್ತಿದ್ದೇನೆ,ಚನ್ನಾಗಿ ನಿದ್ದೆ ಮಾಡುತ್ತೇನೆ,
ಸ್ಪಷ್ಟವಾಗೇ ಹೇಳೋದಾದರೆ ಇದ್ದುದೆಲ್ಲವ ಬಿಟ್ಟು ಇರದುದರೆಡೆಗೆ ಕನಸುತ್ತಿದ್ದೇನೆ,
ಸದ್ಯಕ್ಕೆ ನನ್ನ ಊರು ಕೋಲಾರ ಜಿಲ್ಲೆ ಮಲ್ಲಸಂದ್ರ ಮತ್ತು ಬೆಂಗಳೂರಿನ ನಡುವೆ ಅಡ್ಡಾಡಿಕೊಂಡಿದ್ದೇನೆ.
No comments:
Post a Comment