skip to main |
skip to sidebar
ಟ್ರಾಫಿಕ್ ಜ್ಯಾಮ್ ನಲ್ಲಿ ಮುಗಿದು ಹೋದವರು...
ಕೋಲಾರದ ಕಡೆಯಿಂದ ಬೆಂಗಳೂರು ಕಡೆಗೆ ಬರುವ ನ್ಯಾಷನಲ್ ಹೈವೇ ನಾಲ್ಕನ್ನು ಘನ ಸರ್ಕಾರದವರು ನಾಲ್ಕು ಪಥದ ರಸ್ತೆಯನ್ನಾಗಿ ರೂಪಿಸುತ್ತಿದ್ದಾರೆ ಅಂತ ನನಗೆ ಗೊತ್ತಾಗಿದ್ದು ಮೊನ್ನೆ ನಾನು ಬೆಂಗಳೂರಿಗೆ ಬಂದಾಗ, ನನಗೆ ಯಾವಾಗಲೂ ಹೊಸ ರಸ್ತೆ ಆಗುತ್ತಿದೆ, ಇನ್ನೇನು ಆರಾಮಾಗಿ ಸಂಚರಿಸಬಹುದು ಅಂತ ಆದಾಗ ಒಂಥರಾ ಖುಷಿಯಾಗುತ್ತೆ, ಯಾವಾಗ ಸಿದ್ದ ಆಗುತ್ತೋ ಅಂತ ಕುತೂಹಲದಿಂದ ಕಾಯುತ್ತಿರುತ್ತೇನೆ, ಅದರಲ್ಲೂ ಬೆಂಗಳೂರಿಗೆ ಹೊಂದಿಕೊಂಡಂತೆ ಯಾವುದಾದರು ರಸ್ತೆ ಸಿದ್ದವಾದರೆ ಈ ಊರಿನ ಮಂದಿಗೆ ಆಗೋ ಖುಷಿನೇ ಬೇರೆ ಬಿಡಿ...
ಹೊಸ ರಸ್ತೆ ರೆಡಿ ಏನೋ ಆಗುತ್ತಿದೆ ಆದರೆ ಅದನ್ನು ನಿರ್ಮಿಸುತ್ತಿರರುವ ರೀತಿ ಮಾತ್ರ ರಕ್ಕಸವಾಗಿದೆ ಅಂತ ಮಾತ್ರ ಹೇಳಬಲ್ಲೆ ಕೆ.ಆರ್.ಪುರಂ ಬಿಟ್ಟ ನಂತರ ಸ್ವಲ್ಪದದರಲ್ಲೇ ಆರಂಭವಾಗಿರುವ ತುಂಡು ತುಂಡು ಕಾಮಗಾರಿಗಳು ಹಳೆ ರಸ್ತೆಯ ವಾಹನ ಸಂಚಾರವನ್ನೇ ದಿಕ್ಕೆಡಿಸಿಬಿಟ್ಟಿದೆ, ಕಾಮಗಾರಿ ನಡೆಯುವ ಒಂದು ಸ್ಥಳದಲ್ಲಿ ಚಾಲಕರಿಗೆ ಎಚ್ಚರಿಸುವ ಒಂದೇ ಒಂದು ಸೂಚನಾ ಪಲಕವಿಲ್ಲ, ಎಲ್ಲೆಂದರಲ್ಲಿ ಹಳೆ ರಸ್ತೆ ಯನ್ನ ದಿಕ್ಕು ಬದಲಾಸಲಾಗಿದೆ, ಮನುಷ್ಯರ ಮೇಲೆ ಕಿಂಚಿತ್ತೂ ಕಾಳಜಿ ಇಲ್ಲದ ಮಂದಿ ಮಾತ್ರ ಹೀಗೆ ಮಾಡಬಹುದು ಅನಿಸುತ್ತೆ,
ನಾನೇ ಗ್ರಹಿಸಿದ ಲೆಕ್ಕದಲ್ಲಿ ಅ ರಸ್ತೆ ಕಾಮಗಾರಿ ಮುಗಿಯುವ ವರೆಗೆ ಕನಿಷ್ಠ ನೂರು ಮಂದಿ ರಸ್ತೆಯ ಹೆಸರಲ್ಲಿ ಬಲಿಯಾಗುವುದರಲ್ಲಿ ಅನುಮಾನವೇ ಬೇಡ ಅಂದುಕೊಂಡೆ.. ಇದಕ್ಕೆ ಇಂಬುಕೊಡುವಂತೆ ಅದಾಗಲೇ ಹತ್ತಕ್ಕೂ ಹೆಚ್ಚು ಜನ ಇದೇ ರಸ್ತೆಯಲ್ಲಿ ಇತ್ತೀಚೆಗೆ ಅಪಘಾತಗಳಲ್ಲಿ ಸತ್ತಿದ್ದಾರಂತೆ. ಇನ್ನೂ ಜನ ಸಾಯುವುದರಲ್ಲಿ ಅನುಮಾನವೇ ಬೇಡ.
ಸರ್ಕಾರದ ಅಧಿಕಾರಿಗಳು ಇರುವ ನಿಯಮಗಳನ್ನು ಗುತ್ತಿಗೆದಾರರ ಮೇಲೆ ಯಾಕಾಗಿ ಹೇರುವುದಿಲ್ಲವೂ ನನಗೆ ಗೊತ್ತಾಗುವುದಿಲ್ಲ , ಇವರು ಮಾಡುವ ಪಾಪದಿಂದ ಮತ್ಯಾರೋ ಸಾಯುವುದನ್ನು ನೆನೆಸಿಕೊಂಡರೆ ನನಗೆ ಕಳವಳ ಆಗುತ್ತೆ ನಾನಂತೂ ಇಂತದೊಂದು ಪರಿಸ್ಥಿತಿಗೆ ಸಿಕ್ಕಿ, ಯಾರೋ ಮಾಡಿದ ತಪ್ಪಿನಿಂದ ಅನ್ಯಾಯವಾಗಿ ಸಾಯುವುದನ್ನು ಕಲ್ಪಿಸಿಕೊಳ್ಳಲಾರೆ....
ಹೀಗೆಲ್ಲ ಆಗೋದನ್ನ ನೋಡಿದಾಗ ಒಳಗೆ ಆಕ್ರೋಶ ಮೂಡುತ್ತೆ, ಹೀಗೆಲ್ಲಾ ಆಗೋಕೆ ಕಾರಣರಾದವರನ್ನ ಸಾಮೂಹಿಕವಾಗಿ ಗುಂಡಿಕ್ಕೆ ಕೊಲ್ಲ ಬೇಕು ಅನಿಸುತ್ತೆ , ಸ್ವಲ್ಪವೇ ಹೊತ್ತಿನಲ್ಲಿ ನನ್ನನ್ನು ಸೇರಿದಂತೆ ಎಲ್ಲಾರನ್ನ ಕೊಲ್ಲಬೇಕಾಗುತ್ತೆ ಅಂತಾ ಸುಮ್ಮನಾದೆ..
ಇನ್ನೂ ಒಂದು ಬೆಂಗಳೂರು ಮೆಟ್ರೋ ಹೆಸರಿನಲ್ಲಿ ಕಾಮಗಾರಿ ನಡೀತಾ ಇದೆ , ಅದಕ್ಕಾಗೇ ಬೆಂಗಳೂರನ್ನ
ಮತ್ತಷ್ಟು ನರಕ ಮಾಡಿದ್ದಾರೆ, ನಾನು ಗುರುತಿಸಿದಂತೆ ಮೆಟ್ರೋ ಕೆಲಸ ಎಲ್ಲೂ ಕೆಲಸ ವೇಗವಾಗಿ ನಡೀತಾ ಇಲ್ಲ, ಅಲ್ಚರ್ ನೇಟ್ ರಸ್ತೆಗಳು ಕೆಟ್ಟದಾಗಿವೆ. ಈ ಮೆಟ್ರೋ ಹೋಗುತ್ತಿರುವ ವೇಗ ನೋಡಿದರೆ ಇನ್ನು ಹತ್ತು ವರ್ಷಕ್ಕೂ ರೈಲು ಬಿಡುವ ಸಾದ್ಯತೆ ಇಲ್ಲ, ಬೆಂಗಳೂರಿನ ಜನ ತಮ್ಮ ಜೀವಮಾನದ ಬಹುಮುಖ್ಯ ಸಮಯವನ್ನ ಟ್ರಾಫಿಕ್ ನಲ್ಲಿ ಕಳೆಯಬೇಕಲ್ಲಾ... ಇರೋ ಐವತ್ತೋ ಚಿಲ್ಲರೆ ವರ್ಷದಲ್ಲಿ ಅರ್ದ ಬದುಕು ಟ್ರಾಪಿಕ್ ಜಾಮ್ ನಲ್ಲೇ ಕಳೆದು ಹೋಗುತ್ತಾಲ್ಲ ಅನ್ನೋದನ್ನ ನೆನೆಸಿಕೊಂಡರೆ ಎಲ್ಲಾದರೂ ಓಡಿ ಹೋಗೋಣ ಅಂತ ಅನಿಸುತ್ತದೆ.....
ಮೆಟ್ರೋ ವಿಷಯದಲ್ಲಾಗಲಿ, ರಸ್ತೆ ಸಂಚಾರದ ಬಗ್ಗೆ ಆಗಲಿ, ನಮ್ಮ ಸರ್ಕಾರ, ಮತ್ತು ನಾಗರೀಕರು ದೆಹಲಿಯಿಂದ
ಸಾಕಷ್ಠು ಕಲಿಯಬೇಕಿದೆ ಅಂತ ಹೇಳಿ ಮುಗಿಸುತ್ತೇನೆ...
ಕಡೆ ಮಾತು...
ಗೆಳೆಯರೇ ಸದ್ಯಕ್ಕೆ ದೆಹಲಿಯಿಂದ ನನ್ನೂರು ಮಲ್ಲಸಂದ್ರಕ್ಕೆ ಬಂದಿದ್ದೇನೆ ಜುಲೈ ತಿಂಗಳ 5 ರವರೆಗೆ ಬೆಂಗಳೂರು, ಮೈಸೂರು, ಹಾಸನ, ಕೋಲಾರ, ಕೊಡಗು, ಹುಬ್ಬಳ್ಳಿ ನಗರಗಳ ನಡುವೆ ಗಿರಕಿ ಹೊಡೆಯುತ್ತಿರುತ್ತೇನೆ ಸಿಗೋಣ...
ಟ್ರಾಪಿಕ್ ಜಾಮಿನ ಬಗ್ಗೆ ಓದಿದೆ ಬೆಂಗಳೂರಿನಲ್ಲಿ ವಾಸವಾಗಿರುವ ಪ್ರತಿಯೊಬ್ಬ ಜೀವಿಗೂ (ಪ್ರಾಣಿಗಳ ಸಮೇತ) ಎಲ್ಲಾರಿಗೂ ಆಗುವ ಪ್ರಸ್ಟ್ರೇಶನ್ ಕನ್ನಡಿ ಹಿಡಿದಂತಿದೆ. ಇಲ್ಲಿನ ಮನುಷ್ಯರು ಹಾಗೇನೆ ಹಾರನ್ ಮಾಡಿ ಮಾಡಿ ನಮ್ಮಂತವರ ಪ್ರಾಣ ಹಿಂಡ್ತಾರೆ, ಬೆಂಗಳೂರಿನಿಂದ ದೂರ ಓಡಿ ಹೋಗೋಣ ಅನ್ನಸುತ್ತೇ.... ಸರಿಯಾಗಿ ಹೇಳಿದ್ದೀಯ...
ReplyDelete