ಅಮರಾವತಿಯಲ್ಲಿ ನೋಡ್ಕಂಡು
ಬಂದವರು
....ಇದನ್ನ ಯಾವತ್ತೋ ಬರೆದುಬಿಡಬೇಕು ಅಂತ ಅಂದುಕೊಂಡಿದ್ದೆ ಆದರೆ ಈ ಪ್ರಕರಣ ಕೆಲವರನ್ನ ಬ್ಲಾಕ್ ಮೇಲ್ ಮಾಡಲಿಕ್ಕೆ ಆಗಾಗ ಬಳಸಿಕೊಳ್ಳುತ್ತಿದ್ದ ಕಾರಣಕ್ಕಾಗಿ ತಡವಾಗಿ ಹೇಳುಕತ್ತಿದ್ದೇನೆ, ಈ ಘಟನೆ ನಡೆದದ್ದು ನಾನು ಮಾನಸಗಂಗೊತ್ರಿಯಲ್ಲಿ ಓದುತ್ತಿದ್ದ ಕಾಲದಲ್ಲಿ, ಅಲ್ಲಿ ಎಂಎ ಒದುವ ಕಾಲಕ್ಕೆ ನಾವು ಸೀರಿಯಸ್ಸಾಗಿ ಓದಿದ್ದಕ್ಕಿಂದ ವಿಚಿತ್ರ ಪ್ರಯೋಗಗಳನ್ನ ಮಾಡಿದ್ದೇ ಹೆಚ್ಚು. ತೀರಾ ಪುಂಡು ಸ್ವಾಬಾವದ ಹುಡುಗರೇ ಒಂದೆಡೆ ಅಪೂರ್ವ ಸಂಗಮದಂತೆ ಸೇರಿಕೊಂಡಿದ್ದರಿಂದ ಹುಡುಗಾಟಿಕೆಯ ಪರಾಕಾಷ್ಠೆ ತಲುಪಿದ್ದೆವು ಅನ್ನಿ, ನಮ್ಮ ಓದು ಮುಗಿದು ವರ್ಷಗಳೇ ಕಳೆದು ಹೋದರೂ ಇನ್ನೂ ನಮ್ಮ ಬ್ಯಾಚ್ ಅನ್ನು ಅಲ್ಲಿನ ಉಪಾನ್ಯಾಸಕರೇ ನೆನೆಸಿಕೊಳ್ಳುವ ಮಟ್ಟಕ್ಕೆ ನಾವು ಪೇಮಸ್ಸಾಗಿದ್ದೆವು. ನಮ್ಮನ್ನು ನಾವೇ ಜರ್ನೋ ಬಾಯ್ಸ್ ಅಂತ ಕರೆದುಕೊಳ್ಳುತ್ತಿದ್ದ ನಾವು ಕ್ಲಾಸುಗಳು ಇರಲಿ ಬಿಡಲಿ ದಿನದ ಬಹುತೇಕ ಕಾಲವನ್ನು ಗಾಂಧಿ ಕ್ಯಾಂಟೀನಿನಲ್ಲಿ ಅಥವಾ ಅಥವಾ ಕ್ಯಾಂಪಾಸ್ಸಿನ ಒಳಗೇ ಇದ್ದ ಲೇಡೀಸ್ ಹಾಸ್ಚೆಲ್ ನ ಬೆಚ್ಚಗಿನ ವಾತಾವರಣದಲ್ಲಿ ಕಳೆಯುತ್ತಿದ್ದೆವು. ಲೇಡಿಸ್ ಹಾಸ್ಚೆಲ್ ನ ಎದರು ಇರುತ್ತಿದ್ದ ಕಾಂಪೊಂಡು ನಮ್ಮ ಸಂಜೆ ಹೊತ್ತಿನ ಅಡ್ಡಾ ಆಗಿತ್ತು...
ಮೊದಲೇ ಜರ್ನಲಿಸಂ ಓದುತ್ತಿದ್ದ ನಮ್ಮ ನ್ನು ಬೇರೆ ವಿಶಯ ಓದುತ್ತಿದ್ದ ಹುಡುಗ,ಹುಡುಗಿಯರು ವಿಶೇಷ ಗೌರವದಿಂದ ಕಾಣುತ್ತಿದ್ದರು, ಅದನ್ನೇ ಎಕ್ಸಪ್ಲಾಯ್ಟ್ ಮಾಡಿಕೊಂಡ ನಾವು, ನಾವು ಮಾಡುವುದೆಲ್ಲ ಸರಿ ನಮ್ಮಂತೆ ಎಂಜಾಯ್ ಮಾಡೋರು ಲೋಕದಲ್ಲೇ ಇಲ್ಲ ಅನ್ನೋ ಇಗೋ ದಲ್ಲೇ ಜೀವಿಸುತ್ತಿದ್ದೆವು.
ಅವತ್ತು ಶನಿವಾರ ಅಂತ ಕಾಣುತ್ತೆ, ಯಾವ ಕ್ಲಾಸು ಗಳೂ ಇರಲಿಲ್ಲ ಗಾಂಧಿ ಕ್ಯಾಂಟೀನಿನ ಮುಂದೆ ಪಂಟ್ಟಾಂಗ ಹೊಡೆಯುತ್ತಿದ್ದೆವು, ಸ್ವಲ್ಪ ತಡವಾಗಿ ಬಂದ ನಮ್ಮ ಬ್ಯಾಚಿನಲ್ಲೇ ಪ್ರಳಯಾಂತಕನಂತಿದ್ದ ಪಂಟರ್ ಅಪಾಯಕಾರಿ ಐಡಿಯಾವೂಂದನ್ನು ತಲೆಯಲ್ಲಿಟ್ಚುಕೊಂಡು ಎಕ್ಸಿಕ್ಯೂಟ್ ಮಾಡಲು ಸಿದ್ದವಾಗಿಯೇ ಬಂದಿದ್ದ... ಒಬ್ಬೊಬ್ಬರನ್ನೇ ಪಕ್ಕಕ್ಕೆ ಕರೆದು ನಾನೂರು ರೂಪಾಯಿ ಇದೆಯೇನು ಒಳ್ಳೆ ಮಜಾ ತೋರಿಸ್ತೀನಿ ಅಂತ ಕೇಳುತ್ತಿದ್ದ, ಗುಂಡು ಪಾರ್ಟಿಗಳಿಗಾಗಿ ಸಾಮಾನ್ಯವಾಗಿ ನೂರೋ, ನೂರೈವತ್ತೋ ರೂಪಾಯಿಗಳನ್ನು ಕೇಳುತ್ತಿದ್ದ ಆಸಾಮಿ ಇದ್ದಕ್ಕಿದ್ದಂತೆ ನಾನೂರು ರೂಪಾಯಿ ಕೇಳಿದರೇ ದಂಗಾದ ಗೆಳೆಯರೆಲ್ಲ ಇಲ್ಲಾ ಗುರು ಪಾಪರ್ ಆಗೋಗಿದಿವಿ ಗುರು ರೈಸ್ ಬಾತ್ ಗೂ ಕಾಸಿಲ್ಲ ಅಂತ ಹೇಳಿದರೂ ಬಿಡದ ಆಸಾಮಿ ಇಲ್ಲ ಕಣ್ರೋ ಇಂತ ಚಾನ್ಸ್ ಮತ್ತೆ ಸಿಗಲ್ಲ, ಒಳ್ಳೆ ಪಿಗರ್ ಗಳಂತೆ ನಾರ್ಥ್ ಇಂಡಿಯಾದಿಂದ ಬಂದಿದ್ದಾರಂತೆ ಮಿಸ್ಸಾಯ್ತೂ ಸಿಗೋದಿಲ್ಲ ಅಂತ ಹೇಳಿದ ಇನ್ನು ಕೆಲವರಿಗೆ ಡಗಾರ್ ಗಳ ಮನೆ ಹೆಂಗಿರುತ್ತೋ ಅಂತ ತಿಳುಕೊಳ್ರೋ ಮಕ್ಕಾಳಾ ಅಂತಾ ಕೆಲವರ ಕುತೂಹಲ ಹೆಚ್ಚಿಸಿದ, ನನಗೋ ಇದು ಡೇಂಜರ್ ಐಡಿಯೂ ಅಂತ ಗೊತ್ತಾದ ತಕ್ಷಣವೇ ಜಾಗ ಖಾಲಿ ಮಾಡಿದೆ.
ಪಂಟರ್ ತೋರಿಸಿದ ಆಮಿಶಕ್ಕೆ ಬಿದ್ದ ನಾಲ್ಕೈದು ಮಂದಿ ಯಾಗೋ ಹಣ ಹೊಂದಿಸಿ ಪ್ರಥಮ ಸಹಾಸಕ್ಕೆ ರೆಡೆಯಾಗಿದ್ದಾರೆ, ಟೆರರ್, ಪೆಂಗ, ಪಂಚು, ನೈಸು, ಐಸು ಇತ್ಯಾದಿಗಳು ಕೆಆರ್ಎಸ್ ರಸ್ತೆಯ ಅಮರಾವತಿ ಅತಿಥಿ ಗೃಹಕ್ಕೆ ಹೋಗಿಬಂದಿದ್ದಾರೆ.
ಸೋಮವಾರ ಕ್ಲಾಸಿಗೆ ಬಂದ ಅವರೆಲ್ಲ ಶನಿವಾರ ನಡೆದಿದ್ದನ್ನೆಲ್ಲಾ ನಮಗೆ ಹೇಳದೆ ಕದ್ದು ಮುಚ್ಚಿ ಓಡಾಡುತ್ತಾ ತಪ್ಪಿಸಿಕೊಂಡು ತಿರುಗುತ್ತಿದ್ದರು, ನನಗೂ ಏನಾಗಿರಬಹುದು ಅನ್ನೋ ಕುತೂಹಲ ತಡೆಯಲಾಗದೇ ಒಬ್ಬೊರನ್ನು ವಿಶ್ವಾಸಕ್ಕೆ ತೆಗೆಡುಕೊಂಡು ಬೇರೆ ಬೇರೆ ಸಮಯದಲ್ಲಿ ವಿಚಾರಿಸಿಕೊಂಡೆ..
ಅಗ ತಿಳಿದಿದ್ದೇನಪ್ಪಾ ಅಂದರೆ ಕೆಆರ್ಎಸ್ ಗೆ ಹೋಗುವ ರಸ್ತೆಯಲ್ಲಿರು ಅಮರಾವತಿ ಅತಿಥಿ ಗೃಹಕ್ಕೆ ಹೋದವರೆಲ್ಲ ಅಲ್ಲಿದ್ದ ಕಲರ್ ಕಲರ್ ಹುಡುಗಿಯರಲ್ಲಿ ತಮಗೆ ಬೇಕಾದವರನ್ನು ಅಯ್ಕೆ ಮಾಡಿಕೊಂಡ ತಕ್ಷಣವೇ ಅವರೇ ರೂಮುಗಳೊಳಗೆ ಕರೆದುಕೊಂಡು ಹೋದರಂತೆ...
ಅಮೇಲೇನಾಯಿತು ಅನ್ನೊದೆ ಕುತೂಹಲ ಅಲ್ಲವಾ, ಒಳಗೆ ಹೋದವರೆಲ್ಲಾ ಕೆಲವೇ ನಿಮಿಶಗಳಲ್ಲಿ ಹೋಟೆಲ್ ಹೊರಗೆ ಬಂದು ನಿಂತಿದ್ದರಂತೆ, ಒಬ್ಬರಿಗೊಬ್ಬರು ಕಡಿದು ಕಟ್ಟೆ ಹಾಕಿದವರಂತೆ ಹಾಗಾಯಿತು ಮಗಾ, ಹೀಗಾಯಿತು ಮಗಾ... ಸೂಪರ್ರೂ ಮಗಾ.. ಅಂತ ಹೇಳಿಕೊಳ್ಳುತ್ತಾ ಪೌರುಷದ ಪ್ರದರ್ಶನ ಮಾಡಿಕೊಳ್ಳುತ್ತಾ ವಾಪ್ಪಸ್ಸಾಗಿದ್ದಾರೆ.
ಈ ಅಮರಾವತಿ ಪ್ರಕರಣ ನಡೆದ ಬಹಳ ದಿನಗಳ ಗೊತ್ತಾಗಿದ್ದೇನಪ್ಪಾ ಅಂತರೆ ಮೊದಲೇ ಭಯದಲ್ಲಿದ್ದ ಇವರೆಲ್ಲ ಅತಿಥಿ ಗೃಹದ ಪರಿಸರ ಕಂಡು ಗಾಬರಿಯಾಗಿದ್ದರಂತೆ... ಇವರು ನೋಡು ನೋಡುತ್ತಿದ್ದಂತೆ ಬಟ್ಟೆ ಕಳಚಲು ಆರಂಭಸಿದ ಆ ಹೆಣ್ಣುಗಳನ್ನು ನೋಡಿ ಮತ್ತಷ್ಠು ಗಲಿಬಿಲಿಗೆ ಒಳಗಾಗಿ ಹೆದರಿಹೋಗಿದ್ದಾರೆ, ಕಾಸು ಕೊಟ್ಚಿದ್ದಕ್ಕೆ ಮೋಸ ಆಗಬಾರದು ಅಂತ ಅಮರಾವತಿಗಳನ್ನು ಮುಟ್ಟದೇ ಅವರ ದರ್ಷನ ಮಾಡಿಕೊಂಡು ಬಂದರಂತೆ. ಈ ಪ್ರಕರಣ ಈಗ ರಹಸ್ಯವಾಗೇನು ಉಳಿದಿಲ್ಲ ಅಮರಾವತಿಗೆ ಹೋಗಿ ಬಂದವರೆಲ್ಲ ನಾನು ಏನೂ
ಮಾಡಲಿಲ್ಲಪ್ಪಾ ಸುಮ್ಮನೇ ನೋಡಿಕೊಂಡು ಬಂದೆ ಅಷ್ಠೇ ಹೇಳುತ್ತಿದ್ದಾರೆ.
ಪತ್ರಿಕೊದ್ಯಮಕ್ಕೆ ಕಾಲಿಡುವುದಕ್ಕೂ ಮುನ್ನವೇ ಹೊಸ ಅನುಭವಕ್ಕಾಗಿ ಕಾತರಿಸುತ್ತಿದ್ದ ನನ್ನ ಗೆಳಯರೆಲ್ಲಾ ಸದ್ಯ ರಾಜ್ಯದ ಪ್ರತಿಷ್ಠಿತ ಪತ್ರಿಕೆಗಳಲ್ಲಿ, ಚಾನೆಲ್ ಗಳಲ್ಲಿ ವರದಿಗಾರರಾಗಿ ಹೆಸರು ಮಾಡಿದ್ದಾರೆ, ಅವರು ಸಿಕ್ಕಾಗಲೆಲ್ಲಾ ಎನ್ರಪ್ಪಾ ಅಮರಾವತಿಗಳೂ ಅಂತ ಕಿಚಾಯಿಸುತ್ತಾ ಇರ್ತೇನೆ... ಬಾಲ ಬಿಚ್ಚಿದಿರೋ ನಿಮ್ಮ ನಿಜವಾದ ಹೆಸರುಗಳನ್ನು ಬರೆಯಬೇಕಾಗುತ್ತದೆ ಅಂತ
ಎಚ್ಚrಅ