ಸಿಂಗ್ ಈಸ್ ಕಿಂಗ್....ಕಿಂಗ್ ಈಸ್ ಸಿಂಗ್...
ಚುನಾವಣೆಗಳ ಪಲಿತಾಂಶ ಬರುತ್ತಾ ಇವೆ, ಕೆಲಸದ ಒತ್ತಡ ತುಂಬಾ ಇದೆ ಆದರು ಈಗಲೇ ಇದನ್ನು ಈಗಲೇ ಬರೆಯಬೇಕು,ನಿಮಗೆ ಹೇಳಿಬಿಡಬೇಕು ಎಂಬ ಕಾತರ, ಅದಕ್ಕೆ ಅತ್ಯಂತ ಕಡಿಮೆ ಪದಗಳಲ್ಲಿ ಹೇಳಬೇಕಿದ್ದನ್ನು ಹೇಳುತ್ತೇನೆ.
ಈಗ ರಾಜೀನಾಮೆ 'ಕೊಡಬೇಕಿಲ್ಲದ' ಮನಮೋಹನ್ ಸಿಂಗ್ ಇದ್ದಾರಲ್ಲ ಅವರು ೨೦೦೪ ಕ್ಕೂ ಮುಂಚೆ ಹೇಗಿದ್ದರೂ ಏನಾಗಿದ್ದರು ಅನ್ನೋ ಬಗ್ಗೆ ಪತ್ರಕರ್ತ ಗೆಳೆಯ, ಸಹೋದ್ಯೋಗಿ ಪ್ರಶಾಂತ ಹೇಳಿದ ಕತೆಯಿದು.
ಈ ಟಿವಿ ಹಿಂದಿ ವಾಹಿನಿಗಳಲ್ಲಿ ದಿನಾ ರಾತ್ರಿ " ಸುರ್ಕಿಯೋಸೆ ಆಗೇ " ಅನ್ನೋ ಕರಂಟ್ ಅಪೇರ್ಸ್ ಕಾರ್ಯಕ್ರಮ ಬರುತ್ತೆ , ಆ ದಿನದ ಬಹುಮುಖ್ಯ ಸುದ್ದಿಯನ್ನ ಹಿಡಿದು ಅದರ ಮಹತ್ವದ ಬಗ್ಗೆ, ಹಿನ್ನೆಲೆ, ಮುನ್ನೆಲೆ ಬಗ್ಗೆ ಸಂಪೂರ್ಣ ಮಾಹಿತಿ ಕೊಡೋ ಕಾರ್ಯಕ್ರಮ, ಕನ್ನಡದಲ್ಲಿ "ಸುದ್ದಿಗಿಂತ ಆಚೆ" ಅನ್ನೋ ಕಾರ್ಯಕ್ರಮ ಅಂದುಕೊಳ್ಳಿ.
ಈ ಕಾರ್ಯಕ್ರಮದ ಪೂರ್ತಿ ಉಸ್ತುವಾರಿ ಪ್ರಶಾಂತ್ ನದು, ಎಂಥಾ ತಲೆಬಿಸಿಯ ಕೆಲಸ ಅಂದರೆ ದಿನಕ್ಕೆ ಅರ್ಧ ಗಂಟೆ ಕಾರ್ಯಕ್ರಮವನ್ನ ಇಬ್ಬರೇ ತಯಾರು ಮಾಡಬೇಕು, ದೇಶ ಅತ್ಯಂತ ಶಾಂತ ವಾಗಿ, ಸುಖವಾಗಿ ಇರೋ ಕಾಲದಲ್ಲೂ ಏನಾದ್ರೂ ಮಾಡಿ ಪ್ರೋಗ್ರಾಂ ಕೊಡಲೇ ಬೇಕು ತಪ್ಪಿಸಿಕೊಳ್ಳೋಕೆ ಸಾದ್ಯವೇ ಇಲ್ಲದ ಮಾತು ಬಿಡಿ, ಸುದ್ದಿಮನೆಗಳಲ್ಲಿ ಕೆಲವೊಂದು ದಿನ ಏನೂ ಮಹತ್ವದ ಸುದ್ದಿ ಸಿಗದೇ ಒದ್ದಾಡುವುದು ಉಂಟು, ಕಷ್ಟವಾದರೂ ಮಾಡಲೇಬೇಕಲ್ಲ, ಅಂತ ಸಂಧರ್ಭದಲ್ಲಿ ಕಿಲಾಡಿ ಪತ್ರಕರ್ತರು, ಆರ್ಥಿಕ ಹಿಂಜರಿತ, ಪಾಕಿಸ್ತಾನ, ಅಮೇರಿಕಾ ಅರ್ಥಿಕ ಪರಿಸ್ಥಿತಿ ಮತ್ತು ಭಾರತ ಅನ್ನೋ ರೀತಿ ಯಾವುದೋ ಕಿಲಾಡಿ ಐಡಿಯಾ ರೆಡಿ ಮಾಡಿ, ಅತ್ಯಂತ ಸರಳವಾಗಿ ಸಿಗೋ, ಯುನಿವೆರ್ಸಿಟಿ ಪ್ರೊಪೆಸರ್, ರಿಟೈರ್ಡ್ ಆಪಿಸರ್, ರಿಟೈರ್ಡ್ ಪತ್ರಕರ್ತರನ್ನ ಒಟ್ಟಿನಲ್ಲಿ ಖಾಲಿ ಹೊಡೀತಾ ಕುಳಿತವರ ಬೈಟ್ ಗಳನ್ನ ಸೇರಿಸಿ ಸ್ಟೋರಿ ಒಂದನ್ನ ಕೊಟ್ಟು ಅಪ್ಪಯ್ಯಾ ಅಂತ ನಿಟ್ಟುಸಿರು ಬಿಡುತ್ತಾರೆ.
ಇಲ್ಲಿ ಆಗಿದ್ದು ಅದೇ ಅವತ್ತು ಈ ಪ್ರಶಾಂತ ಯಾವುದೋ ಸ್ಟೋರಿ ಮಾಡಬೇಕಿತ್ತು, ಬೈಟ್ ಯಾರದಪ್ಪ ಅನ್ನೋ ಯೋಚನೆ ಮಾಡಿದ ತಕ್ಷಣ ಮಾಜಿ ಅರ್ಥ ಸಚಿವ ಮನಮೋಹನ್ ಸಿಂಗ್ ಇದಾರಲ್ಲ ಅಂತ ನೇರವಾಗಿ ಅವ್ರಿಗೆ ಕರೆ ಮಾಡಿ ಮನೆಗೇ ಬರ್ತೀನಿ ಸಾರ್, ಒಂದು ಬೈಟ್ ಬೇಕು ಆರ್ಥಿಕತೆ ಬಗ್ಗೆ ಅಂದನಂತೆ, ಯಾವಾಗೂ ಖಾಲಿ ಇರುವ ಎಲ್ಲರ ಕೈಗೂ ಸಿಗುವ ಮಾಮೂಲಿಯಾಗಿ ಟಿವಿಯವರಿಗೆ ಇಲ್ಲಾ ಎನ್ನದ ಮನಮೋಹನ್ ಸಿಂಗ್ ಬನ್ನಿ ಪ್ರಶಾಂತ್ ಸಫ್ದರ್ ಜಂಗ್ ರಸ್ತೆ ಮನೆಯಲ್ಲೇ ಇರ್ತಿನಿ ಅಂದರಂತೆ. ಇವನು ಕ್ಯಾಮರಾ ಮ್ಯಾನ್ ನನ್ನ ಕರೆದುಕೊಂಡು ಅವರ ಮನಗೆ ಹೋದಾಗ ಅವರ ಮನೆಯವರು ಹೇಳಿದರಂತೆ ಸಾಹೇಬರು ಇಲ್ಲೇ ಎಲ್ಲೋ ಹೋದರು ಹತ್ತೇ ನಿಮಷದಲ್ಲಿ ಬಂದು ಬಿಡ್ತಾರಂತೆ, ನಿಮಗೆ ಸ್ವಲ್ಪ ಸಮಯ ಕಾಯಕ್ಕೆ ಹೇಳಿ ಅಂತ ಹೇಳಿದಾರೆ ಅಂದರಂತೆ, ಪ್ರಶಾಂತ ಕಾಯುತ್ತಾ ಕೂತು ಒಂದು ಗಂಟೆ ಆಗಿರಬೇಕು.
ಕಮಾಂಡೋ ಪಡೆಗಳು, ಬ್ಲಾಕ್ ಕ್ಯಾಟ್ ಗಳು ಅವರ ಮನೆ ಮುಂದೆ ಬಂದು ಇಳಿದವಂತೆ, ಮನಮೋಹನ್ ಮನೆಯನ್ನ ಸುತ್ತುವರಿದು ಕ್ಲಿಯರೆನ್ಸ್ ಮಾಡಲು ಮುಂದಾದರಂತೆ, ಮನಮೋಹನ್ ಹೆಂಡತಿಗೂ ಗಾಭರಿ ಆಯಿತಂತೆ, ಅಲ್ಲೇ ಬೈಟ್ ಗಾಗಿ ಕಾಯುತ್ತಾ ಇದ್ದ ಇವನಿಗೆ ತಲೆಬಿಸಿ ಆಗಿ ವಿಚಾರಿಸಿದರೆ ಸರ್ ಮನಮೋಹನ್ ಸಿಂಗ್ ಮುಂದಿನ ಪ್ರಧಾನ ಮಂತ್ರಿ, ಈಗ ಇಲ್ಲಿಗೆ ಬರ್ತಾ ಇದಾರೆ ಜಾಗ ಕಾಳಿ ಮಾಡಿ ಅಂದನಂತೆ ಕಮಾಂಡೋ....
ತಲೆ ಕೆಟ್ಟು ಹೋಗಿ ಚೆಕ್ ಮಾಡಿದರೆ, ಹೌದು ಮನಮೋಹನ್ ಸಿಂಗ್ ಪ್ರಧಾನಿ ಅನ್ನೋ ವಿಷಯ ಕನ್ಫರ್ಮ್ ಆಗದ್ದರಿಂದ ಅದೇ ಪ್ರಶಾಂತ ನಮ್ಮ ಈ ಟಿವಿಯಲ್ಲಿ ಬ್ರೇಕಿಂಗ್ ನ್ಯೂಸ್ ಕೊಟ್ಟನಂತೆ, ಎಂತ ಅದೃಷ್ಟ ಅಲ್ಲವಾ, ಇಬ್ಬರದು....
ಪ್ರಶಾಂತ್ ಬೈಟ್ ಗಾಗಿ ಕಾಯದೆ ಜಾಗ ಖಾಲಿ ಮಾಡಿದಂತೆ....
ವಿದೇಶಿ ಮಹಿಳೆ, ವಿದೇಶಿ ಮಹಿಳೆ ಅಂತ ಬಿಜೆಪಿ ಎಬ್ಬಿಸಿದ ಬಿರುಗಾಳಿಯಿಂದ ರೋಸಿಹೋದ ಸೋನಿಯಾ ತನ್ನ ಇಬ್ಬರು ಮಕ್ಕಳಾದ. ಪ್ರಿಯಾಂಕ, ಮತ್ತು ರಾಹುಲ್ ಜೊತೆ ಮಾತನಾಡಿ ತನಗೆ ಯಾಕೋ ಪ್ರಧಾನಿ ಆಗೋಕೆ ಮನಸು ಒಪ್ಪುತಾ ಇಲ್ಲಾ ಅಂದರಂತೆ, ಯಾರನ್ನು ಪ್ರಧಾನಿ ಮಾಡೋದು ಅಂತ ಯೋಚಿಸಿ, ಮೂವರು ಕೂಡಿ ಮನಮೋಹನ್ ಸಿಂಗ್ ಅವರಿಗೆ ಕರೆ ಮಾಡಿ ಮನೆಗೇ ಬನ್ನಿ ಅಂತ ಕರೆದು ನೀವೇ ನಮ್ಮ ಪ್ರಧಾನಿ, ನಾಳೆಗೆ ಒಥ್ ತಗೋಳಿ ಅಂದರಂತೆ. ಯಾರು ನಿರೆಕ್ಷಿಸದ, ಸ್ವತ ಮನಮೋಹನ್ ಸಿಂಗ್ ನಿರೀಕ್ಷಿಸದ, ಮೀಡಿಯಾ ದವರಿಗೆ ಬೈಟ್ ಕೊಡುತ್ತಾ ಖಾಲಿ ಹೊಡೆಯುತ್ತಿದ್ದ ಮಾಜಿ ಅರ್ಥ ಸಚಿವ. ಆರ್. ಬಿ. ಐ ಗವರ್ನರ್ ೨೦೦೪ ರಲ್ಲಿ ಪ್ರದಾನಿಯಾದ ಕತೆ.
ಪದೇ ಪದೇ ವೀಕ್ ಪ್ರೈಂ ಮಿನಿಸ್ಟರ್ , ವೇಸ್ಟ್ ಪ್ರೈಂ ಮಿನಿಸ್ಟರ್ ಅಂತ ರೇಗಿಸುತ್ತಿದ್ದ ಅಡ್ವಾಣಿ ಕತೆ ಈಗ ಅದ್ವಾನವಾಗಿಹೋಗಿದೆ.....ಮನಮೋಹನ ಸಿಂಗ್ ಗೆಲುವಿನ ಜಾದುಗಾರ ಆಗಿ ಹೊರ ಹೊಮ್ಮಿದ್ದಾರೆ....
ಓದಿ ಕಾಮೆಂಟ್ ಮಾಡದೆ ಹಾಗೆ ಹೋದರೆ ನಾನು ನಿಮ್ಮನ್ನ ಕ್ಷಮಿಸೋಲ್ಲ ಆಯ್ತಾ.