Friday, July 31, 2009

ಮಲ್ಯನ ಆತ್ಮಕ್ಕೆ ಶಾಂತಿ ಸಿಗಲಿ...!!



ದೇಶದಲ್ಲಿರೋ ಎಪ್ಪತೈದು ಪರ್ಸೆಂಟು ರೈತರು ನಾವು 6 ತಿಂಗಳೂ ಏನೂ ಬೆಳಿಯೋದಿಲ್ಲ, ವೀ ಆರ್ ಬ್ಲೀಡಿಂಗ್, ವಿ ಆರ್ ಡೈಯಿಂಗ್, ವಿ ಡೋಂಟ್ ಕಾಲಿಟ್ ಯಾಸ್ ಸ್ಟ್ರೈಕ್. ಇಟ್ ಈಸ್ ಜಸ್ಟ್ ಟು ಕಾಲ್ ದ ಅಟೆನ್ ಶನ್ ಆಪ್ ಗೌರ್ನಮೆಂಟ್ ಅಂಥ,
ವಿಶ್ವಕ್ಕೆ ಅರ್ಥ ಆಗೋ ಆಂಗ್ಲ ಭಾಷೆಯಲ್ಲಿ ಹೇಳಿದ್ರೆ ಏನಾಗಬಹುದು ಅಂತ ನಂಗೆ ಯೋಚನೆ ಬಂದಿದೆ.

ಯಾಕಂದ್ರೆ ನಿನ್ನೆ ಕಿಂಗ್ ಫಿಷರ್ ನ ವಿಜಯ್ ಮಲ್ಯ, ಜಟ್ ಏರ್ ವೇಸ್ ನ ನರೇಶ್ ಗೋಯಲ್ ಮುಂಬೈನ ಪತ್ರಿಕಾಗೋಷ್ಠಿಯಲ್ಲಿ ಅದನ್ನೇ ಹೇಳುತ್ತಿದ್ದರು.ಖಾಸಗಿ ವಿಮಾನ ಯಾನ ಸಂಕಷ್ಠದಲ್ಲಿದೆ, ನಾವು ಸಾಯ್ತಾ ಇದ್ದೇವೆ, ದಿನಾ ಕೋಟಿ,ಕೋಟಿ ನಷ್ಟ ಆಗ್ತಾ ಇದೆ .ವಿಮಾನಕ್ಕೆ ಪೆಟ್ರೋಲ್ ಹಾಕಿಸಕ್ಕೆ ಕಾಸಿಲ್ಲ, ಬ್ಯಾಂಕ್ ನಲ್ಲಿ ಸಾಲ ತಂದ್ರೆ ಮಾತ್ರ ವಿಮಾನ ಓಡಿಸೋಕೆ ಇಲ್ಲಾ ಅಂದ್ರೆ ಆಗಲ್ಲ. ಕೇಂದ್ರ ಸರ್ಕಾರ ನಮ್ಮ ಸಹಾಯಕ್ಕೆ ಬರಬೇಕು. ಕನಿಷ್ಠ 10,000 ಕೋಟಿ ಆದ್ರೂ ಪ್ಯಾಕೇಜ್ ಕೊಡಬೇಕು ಇಲ್ಲಾ ಅಂದ್ರೆ. ಆಗಸ್ಟ್ 18 ಕ್ಕೆ ದೇಶದಾದ್ಯಂತ ವಿಮಾನಯಾನ ನಿಲ್ಲಿಸುತ್ತೇವೆ, ಅಂತ ಓಕ್ಕೊರಲಿನಿಂದ ಸರ್ಕಾರಕ್ಕೆ ಧಮಕಿ ಹಾಕಿದ್ದಾರೆ.

ಅವರೆಲ್ಲ ಧಮಕಿ ಹಾಕಿದಂತೆ ದೇಶದ ರೈತರೂ ಯಾವತ್ತಾದರೂ ಧಮಕಿ ಹಾಕಿದ್ದಾರಾ. ಹಾಕಿದ್ರೆ ಏನು ಆಗುತ್ತೆ ಅಂತ ಯೋಚನೆ ಮಾಡ್ತಾ ಇದ್ದೇನೆ.
ನಮ್ಮ ರೈತರದು ಬರೀ ಬ್ಲೀಡಿಂಗ್ ಅಲ್ಲ. ಹುಟ್ಟಿದಾಗಲಿಂದಲೇ ಡೈಯಿಂಗ್, ಸಾಲ ಮಾಡದೇ ನಮ್ಮ ರೈತರು ಎಲ್ಲಿ ಬೆಳೆಹಾಕಿದ್ದಾರೆ ಹೇಳಿ, ನಮ್ಮ ಜೀವನವೇ ಸಾಲ, ಅವ ಸತ್ತ ಮೇಲೆ ಮಕ್ಕಳ ಮೇಲೆ ಸಾಲ, ಸಾಲವೇ ನಮ್ಮ ಬದುಕು, ಸಾಲವೇ ಜೀವನ ಸಾಕ್ಷಾತ್ಕಾರ.

ಇಲ್ಲಿ ಡೆಲ್ಲಿಗೆ ಆಗಾಗ ರೈತರು ನಿಯೋಗ ಮಾಡಿಕೊಂಡು ಬರುತ್ತಾ ಇರುತ್ತಾರೆ, ನಮಗೆ ಪರಿಹಾರ ಕೊಡಿ. ಅಡಿಕೆ ಬೆಲೆ ಕುಸಿದಿದೆ ಬೇರೇ ದೇಶದಿಂದ ಆಮದು ಮಾಡಿಕೊಳ್ಳಬೇಡಿ. ಕೊಬ್ಬರಿಗೆ ಕನಿಷ್ಠ (ಧರ್ಮದ) ಬೆಲೆಕೊಡಿ, ನಮ್ಮ ಷುಗರ್ ಪ್ಯಾಕ್ಟರಿಗಳು ಸಾಯ್ತ ಇವೆ ಸಹಾಯಹಸ್ತಕೊಡಿ. ಕಾಫಿಯನ್ನ ಯಾರೂ ಕೇಳ್ತಾ ಇಲ್ಲ, ನೆರವುಕೊಡಿ ಅಂತ. ಬಂದವರು ತಮಗೆ ಗೊತ್ತಿರುವ ಮಂತ್ರಿಗಳನ್ನು ಹಿಡಿದುಕೊಂಡು, ಸಂಭಂದ ಪಟ್ಟ ಮಂತ್ರಿಗಳನ್ನ ಭೇಟಿಯಾಗಿ ಮನವಿ ಕೊಟ್ಟು ಬರುತ್ತಾರೆ.
ಮಂತ್ರಿಯನ್ನು ಭೇಟಿ ಮಾಡಿ ತಮ್ಮ ಸಂಕಷ್ಠ ಹೇಳಿಕೊಂಡಿದ್ದಕ್ಕೆ, ಆತ ಅದನ್ನು ಸಾವಾಕಾಶವಾಗಿ ಕೇಳಿದ್ದಕ್ಕೆ, ನಮ್ಮ ರೈತ ಮುಖಂಡರು ಅತೀವ ಸಂತೋಷದಿಂದ ಬೀಗುತ್ತಾರೆ. ಮಾದ್ಯಮದವರನ್ನ ಕರೆದು ಹೇಳುತ್ತಾರೆ, ನಮಗೆ ಭರವಸೆ ಸಿಕ್ಕಿದೆ, ಮಂತ್ರಿಗಳು ಇನ್ನೆರಡು ವಾರಗಳಲ್ಲಿ ಸಮಸ್ಯೆ ಪರಿಹರಿಸುತ್ತಾರಂತೆ, ಸಂಭಂದಪಟ್ಟ ಅಧಿಕಾರಿಗಳೊಂದಿಗೆ ಚರ್ಚೆ ಮಾಡಿ ಸೂಕ್ತ ಕ್ರಮ ಜರುಗಿಸುತ್ತಾರಂತೆ. ಅದು ಟಿ.ವಿ ಮತ್ತು ಪೇಪರಿನಲ್ಲಿ ಒಂದು ಸಣ್ಣ ಸುದ್ದಿಯಾಗಿ ಬರುತ್ತೆ.

ಕೆಲವು ತಿಂಗಳ ನಂತರ ಅದೇ ನಿಯೋಗದ ರೈತರು ಮತ್ತೆ ರೈಲು ಹತ್ತಿ ಮತ್ತೆ ಡೆಲ್ಲಿಗೆ ಬರುತ್ತಾರೆ, ಅದೇ ಸಮಸ್ಯೆ, ಅದೇ ಮಂತ್ರಿ, ಅದೇ ಭರವಸೆ, ಮತ್ತು ಅದೇ ಮಾದ್ಯಮ ಮಿತ್ರರಿಗೆ ಪೋನು ಬರುತ್ತೆ ಸಾರ್ ಕರ್ನಾಟಕ ಭವನದಲ್ಲಿ ಪ್ರೆಸ್ ಮೀಟ್ ಮಾಡ್ತೀವಿ ಅಂತ.ನಾವು ಹೋಗುತ್ತೇವೆ, ರೈತಮುಖಂಡರೂ ಹಳೇದನ್ನೇ ಹೆಳುತ್ತಾರೆ.
ಆದರೆ ಅವರು ಕೇಂದ್ರ ಮಂತ್ರಿಗೇ ಆಗಲಿ, ಸರ್ಕಾರಕ್ಕೆ ಆಗಲಿ ಧಮಕಿ ಹಾಕಿದ್ದೇವೆ ಸಾರ್ ವ್ಯವಸಾಯ ಮಾಡೋದನ್ನ ನಿಲ್ಲಿಸ್ತೇವೆ ಅಂತ ಹೇಳಲ್ಲ.

ಆದೇ ಸಂಘಟಿತವಾಗಿರುವ ಈ ವಿಮಾನ ಕಂಪನಿಗಳು, ತಮ್ಮ ತೆವಲಿಗಾಗಿ, ಲಾಭಕ್ಕಾಗಿ ಕಂಪನಿಗಳನ್ನು ತೆಗೆದಿವೆ. ಒಂದಲ್ಲಾ ಹತ್ತು ಬಿಜಿನೆಸ್ ನಲ್ಲಿ ಹಣ ತೊಡಗಿಸಿದ್ದಾರೆ. ಅಲ್ಲಿನ ನೌಕರರಿಗೆ ಲಕ್ಷಾಂತರ ರೂಪಾಯಿ ಸಂಭಳ ಕೊಡ್ತಾರೆ, ತಮ್ಮ ವಿಮಾನಗಳಲ್ಲಿ ಅತಿ ಸುಂದರಿಯರೇ ಬೇಕಂತ ಕಂಪನಿಯ ಒಡೆಯನೇ ಪರ್ಸನಲ್ ಆಗಿ ಏರ್ ಹೋಸ್ಟಸ್ ಆಯ್ಕೆ ಮಾಡಿಕೊಳ್ಳುತ್ತಾನೆ. ಕುದುರೆ ರೇಸು, ಕಾರ್ ರೇಸು, ಕ್ರಿಕೆಟ್ ಟೀಮು, ಕತ್ರೀನ ಕೈಪು, ಅಂತೆಲ್ಲ ಯಾವ್ಯಾವುದೋ ತಲೆಕೆಟ್ಟ ಐಡಿಯಾಗಳಲ್ಲೆ ಹಣ ತೊಡಗಿಸುತ್ತಾರೆ. ಲೋಕದ ಜನ ಇವರನ್ನ ಗ್ರೇಟು ಸಾರ್ ಗ್ರೇಟು ಅಂತಾರೆ, ಜೊತೆಗೆ ಇಂಟರ್ ನ್ಯಾಷನಲ್ ವಲಯದಲ್ಲಿ ಅವರ ಹೆಸರು ರಾರಾಜಿಸುತ್ತೆ.
ಅಲ್ಲಾ ರೀ, ಲಾಭ ಬಂದಾಗ ಯಾರಿಗಾದ್ರೂ ಈ ಜನ ಹಂಚಿದ್ದಾರಾ, ಅಥವಾ ದೇಶದ ಕೃಷಿ ಕ್ಷೇತ್ರ ಸಂಕಷ್ಠದಲ್ಲಿ ಇದೆಯಪ್ಪಾ ಅವರ ನೆರವಿಗೆ ದಾವಿಸೋಣ ಅಂದಿದ್ದಾರಾ...

ಆದರೆ ಈಗ ನಾವು ಕಟ್ಟಿದ ತೆರಿಗೆ ಹಣದಿಂದ ಇವರನ್ನು ರಕ್ಷಿಸಬೇಕಂತೆ, ಬ್ಲೀಡಿಂಗ್ ಆಗ್ತಾ ಇದೆಯಂತೆ, ಸರ್ಕಾರ ಅದನ್ನ ಒರೆಸಬೇಕಂತೆ, ಇದನ್ನೆಲ್ಲ ಕೇಳಿದ್ರೇನೆ ತಲೆಕೆಡುತ್ತೆ, ಲಾಸ್ ಆದ್ರೇ ಬಾಗಿಲು ಹಾಕಲಿ, ಅವರಪ್ಪನ ಹಣನಾ ಅಡ ಇಡಲಿ.
ಇಲ್ಲಾ, ನಮ್ಮ ರೈತರ ಕಡೇ ಅಸ್ತ್ರ ಇದೆಯಲ್ಲಾ 'ಆತ್ಮ ಹತ್ಯೆ' ಅದನ್ನ ಮಾಡಿಕೊಳ್ಳಲಿ ಅಲ್ವಾ...

ವ್ಯವಸಾಯದ ಹಿನ್ನೆಲೆಯಲ್ಲಿ ಬಂದ ನಮ್ಮತವರಿಗೆ ಅದೇ ವ್ಯವಸಾಯದಲ್ಲಿ ಲಾಭ ಇದ್ದಿದ್ದರೇ ಈ ಖಾಸಗೀ ಕಂಪನಿಗಳಲ್ಲಿ ಯಾಕಾಗಿ ಕೂಲಿ ಮಾಡ್ತಾ ಇದ್ದೆವು ಅಂತ ಅನ್ನಿಸುತ್ತೆ. ಯಾಕೋ ಇವರ ಹೇಳಿಕೆಗಳನ್ನೆಲ್ಲಾ ಕೇಳಿಕೆ ಮನಸು ರೋಸಿಹೊಗಿದ್ದಕ್ಕೆ ಇದನ್ನೆಲ್ಲಾ ಬರೀಬೇಕಾಯ್ತು.
ಸರ್ಕಾರ ಏನು ಮಾಡುತ್ತೋ ನೊಡೋಣ.

11 comments:

  1. ಓದುತ್ತಾ ಹೋದ ಹಾಗೆ ನಮ್ಮ ರೈತರ ಬದುಕು ನೆನೆದು ಕಣ್ಣಲ್ಲಿ ನೀರುಬಂತು..:( ಇವತ್ತು ವಿಶೇಷ ಆರ್ಥಿಕ ವಲಯದ ಹೆಸರಿನಲ್ಲಿ ಸರ್ಕಾರ ರೈತರನ್ನು ಹಂತಹಂತವಾಗಿ ನಿರ್ಗತಿಕರನ್ನಾಗಿ ಮಾಡುತ್ತಿದೆ. ಆಧುನಿಕ ಕೃಷಿ ನೀತಿ ಹೆಸರಿನಲ್ಲಿ ಮಣ್ಣಿನ ಪಿಎಚ್ ಮಟ್ಟ ಕುಸಿದು ಹೋಗಿದೆ, ಬೆಳೆ ಇಳುವರಿ ಇಲ್ಲ, ಸೂಕ್ತ ಮಾರುಕಟ್ಟೆ ಇಲ್ಲ, ನಿಗದಿತ ದರ ಇಲ್ಲ, ಮಧ್ಯವರ್ತಿಗಳ ಕಾಟ, ಸೂಕ್ತ ಮಾರ್ಗದರ್ಶನದ ಕೊರತೆ ಎಲ್ಲವೂ ಕಾಡುತ್ತಿದೆ.ಅಗ್ಗದ ಜನಪ್ರಿಯತೆಗೆ ಬೀಳುವ ಸರ್ಕಾರ ಇಂತಹ ಸಮಸ್ಯಗಳನ್ನು ಬಿಟ್ಟು ಸಾಲ ಮನ್ನಾ,ಕಡಿಮೆ ಬಡ್ಡಿ ದರದ ಸಾಲ ಕೊಡುತ್ತಿದೆ. ಈ ಯೋಜನೆಗಳು ಬಡ ಹಾಗೂ ಮದ್ಯಮ ವರ್ಗದ ರೈತರನ್ನು ತಲುಪುತ್ತಿಲ್ಲ. ಭೂ ಒತ್ತುವರಿ ಸಮಿತಿ ಅಧ್ಯಕ್ಷರಾಗಿದ್ದ ಅರಕಲಗೂಡಿನ ಮಾಜಿ ಶಾಸಕ ಎ ಟಿ ರಾಮಸ್ವಾಮಿಯವರು ಇತ್ತಿಚೆಗೆ ಇಂತಹ ಸಾಲಮನ್ನ ಯೋಜನೆಯಡಿ ಬ್ಯಾಂಕ್ ಅಧಿಕಾರಿಗಳು ಮತ್ತು ಶ್ರೀಮಂತ ರೈತರು ಹೇಗೆ ಸರ್ಕಾರವನ್ನು ವಂಚಿಸಿದ್ದಾರೆ ಎಂದು ದಾಖಲೆಗಳ ಸಮೇತ (ಸುಮಾರು 9000ಕೋಟಿ)ಪತ್ರಿಕಾಗೋಷ್ಠಿ ನಡೆಸಿದ್ದಾರೆ, ಈ ಬಗ್ಗೆ ತನಿಖೆಗೆ ಸರ್ಕಾರಗಳು ಸಿದ್ದವಿಲ್ಲ, ಹಾಸನ ಜಿಲ್ಲೆಯಲ್ಲಿ ಬೆಳೆದ 100ಕೋಟಿಗೂ ಹೆಚ್ಚು ಮೌಲ್ಯದ ಆಲೂಗಡ್ಡೆಗೆ ನಯಾ ಪೈಸೆಯನ್ನು ಪರಿಹಾರವಾಗಿ ತ್ವನವನ್ನು ಹೇಳಲಿಲ್ಲ. ಒಂದು ವರ್ಷದ ನಂತರ ಕೇವಲ 20ಕೋಟಿ ಹಣವನ್ನು ಬಿಕ್ಷೆ ನೀಡಿದ್ದಾರೆ. ಅದೇ ಉದ್ಯಮಿಗಳಿಗೆ ತೆರಿಗೆ ರಿಯಾಯ್ತಿ, ಸಹಾಯಾನುದಾನ ಇತ್ಯಾದಿ ನೀಡುತ್ತಾರೆ. ಮಲ್ಯ, ಸತ್ಯಂ, ಅಂಬಾನಿ, ಇತ್ಯಾದಿಗಳು ಕಣ್ಣಿಗೆ ಕಂಡಷ್ಟು ನಮ್ಮ ರೈತರು ಮತ್ತು ಅವರ ಕಣ್ಣಿರು ದರಿದ್ರ ರಾಜಕಾರಣಿಗಳಿಗೆ ಕಾಣುತ್ತಿಲ್ಲ, ಅದಕ್ಕೆ ಕ್ರಾಂತಿ ನಡೀಬೇಕು... ಇಲ್ಲಾಂದ್ರೆ ಇದು ಹೀಗೆ ಮುಂದುವರಿಯುತ್ತೆ. ಮಿತ್ರ ಶ್ರೀನಿವಾಸ್ ಒಂದು ಒಳ್ಳೆ ಓದು ಕೊಟ್ಟಿದ್ದಕ್ಕೆ ಧನ್ಯವಾದಗಳು.

    ReplyDelete
  2. "Ryta deshada bennelubu",a bennelube gattiyagi nilladiddare deshavemba deha sariyaagi nillodikke saadyavaagolla.Rytara bagge avara sankastagala bagge baredirokke thumba kushiyagide.Sarkaara tanna nija karthavyada bagge ecchettukollabeku.Haage rytara makkalaada naavu adara bagge yochisuttirabeku

    ReplyDelete
  3. ನಮ್ಮದೇಶದ ಧನಿಕರ,ವ್ಯಾಪರಗಾರ ಬುದ್ದಿವಂತಿಕೆಗೆ ಹೇಸಿಗೆಯಾಗುತ್ತೆ. ರೈತರ ಜಮೀನು ಕೊಂಡು ಅವರನ್ನೇ ಸುಲಿಯುವ ರೀತಿ,ಕೂಲಿಗಳಾಗಿ ಅವರ ಬಳಸಿಕೊಲ್ಲುತಿರೋ ನೀಚತನ,ತಮ್ಮ ತಮ್ಮ ಜೀವನ ಬದುಕನ್ನು ಮಾತ್ರ ಉತ್ತಮ ಪಡಿಸಿಕೊಂಡು ಸ್ವರ್ತಿಗಳಾಗಿರುವ ಇಂತವರೆಲ್ಲ ನಮ್ಮ ತೆರಿಗೆಯ ಹಣವನ್ನು ಹಕ್ಕು ಬದ್ಧವಾಗಿ ಆಪೆಕ್ಷಿಸುವುದು ನಾಚಿಕೆಗೇಡು.

    ReplyDelete
  4. ninne e international tycoongala pressmeet
    electronic mediagalli breaking news barruthiddanthe frinds mathandikondiddu onnde vichara evaru loss madikollu karanavenu antha.
    e deshada yava samanyannu prayanisalarada e vimanagalli loss yegaithu. allade kevala ivara
    chapalakke harata nedusutidda e vimanagalu nithu hodare bharatha sayudilla

    ReplyDelete
  5. ವಿಷಯ ಮತ್ತು ಬರವಣಿಗೆ ತುಂಬಾ ಚೆನ್ನಾಗಿದೆ ಗೌಡರೆ..... ನಿಮಗೆ ತಿಳಿದಂತೆ ನಾವೆಲ್ಲಾ ನಿಸ್ಸಾಹಯಕರು.... ಇದು ಇಂದು ನಿನ್ನೆಯದಲ್ಲ, ನಾಳೆಯದ್ದು ಸಹ... ಕೋಟ್ಯಾಂತರ ಸಣ್ಣ ಮೀನುಗಳ ನಡುವೆ ಬೆರಳೆಣಿಕೆಯ ದೊಡ್ಡ ಮೀನುಗಳು... ಸಮುದ್ರ ಅವುಗಳದ್ದು...

    ReplyDelete
  6. ರೈತ ಕೋಪ ಅಸಹನೆ ಯಾರ ಕಣ್ಣಿಗೂ ಕಾಣೊಲ್ಲ.. ಶ್ರೀಮಂತಿಗೆಯಾ ಮದದಲ್ಲಿ ತಿನ್ನುವುದು ಎಲ್ಲಿಂದ ಬರಲಿದೆ ಎಂಬುದನ್ನ ಮರೆಯುತ್ತಿದ್ದಾರೆ.. ಮಳೆ ಬರಲ್ಲ.. ಮಳೆ ಬಂದ್ರೆ ಬೀಜ ಗೊಬ್ಬರ ಇರಲ್ಲ.. ಮಳೆ ಬಂದು ಬೀಜ ಗೊಬ್ಬರ ಸಿಕ್ಕಿ ಬೆಳೆ ಬೆಳದರೆ ಅದಕ್ಕೆ ಬೆಲೆ ಇರಲ್ಲ.. ಮಳೆ, ಬೀಜ, ಗೊಬ್ಬರ, ಬೆಲೆ ಇದರಲ್ಲಿ ಒಂದಾದರು ಕೈ ಕೊಟ್ಟೆ ಕೊಡುತ್ತೆ..
    "ಮುತ್ತಿಗೆ ಹಾಕಲಿ ಸೈನಿಕರೆಲ್ಲ
    ಬಿತ್ತುಳುವುದನವ ಬಿಡುವುದೇ ಇಲ್ಲ - ಕುವೆಂಪು"

    ಸರ್ವರಿಗೂ ಸಹ ಬಾಳು
    ಸರ್ವರಿಗೂ ಸಮಪಾಲು - ಈ ದೇಶದಲ್ಲಿ ಸಾದ್ಯಇಲ್ಲ..

    ReplyDelete
  7. ಭೇಷ್...!

    ಪಿ.ಮಂಜುನಾಥ್

    ReplyDelete
  8. ವ್ಯಾಪಾರುಗಳ ಹಾಗು ಮಧ್ಯವರ್ತಿಗಳ ಕೈಯಲ್ಲಿ ಸಿಕ್ಕ ರೈತ ನರಳುತ್ತಿದ್ದಾನೆ. ಈತನನ್ನು ಶೋಶಿಸುವವರು ಬೊಬ್ಬೆ ಹಾಕುತ್ತಿದ್ದಾರೆ. ಸರಿಯಾಗಿ ಬರೆದಿದ್ದೀರಿ. ಆದರೆ ಇದಕ್ಕೆ ಪರಿಹಾರವೇನು?

    ReplyDelete
  9. lekhana tumba chennagide. kannadada yava patrikeyalloo heege baredilla. neevoo nanna haage raita kutumbadavaru adakke heege yochisteevi.

    ReplyDelete