ಥ್ರೀ ಸೆವೆಂಟಿ ಸೆವೆನ್ ಎಂಬ ತಲೆ ಬರಹ ಇದ್ದ ಖಾಸಗಿ ಡೈರಿಯ ಬರಹಕ್ಕೆ ಬೇರೆ ಬೇರೆ ಮೂಲೆಗಳಿಂದ ವಿವಿಧ ರೀತಿಯ ಪ್ರತಿಕ್ರಿಯೆಗಳು ಬರುತ್ತಿವೆ, ಸಾಮಾನ್ಯವಾಗಿ ಬ್ಲಾಗ್ ಓದುವ ಮಂದಿ ಕಾಮೆಂಟ್ ಬರೆಯುವುದಿಲ್ಲ, ಬೇರೇನೋ ಕೆಲಸದ ಒತ್ತಡ, ಕನ್ನಡದಲ್ಲಿ ಬರೆಯುವ ಹಿಂಸೆ, ಸುಲಭವಾಗಿ ಸ್ಪಂದಿಸದ ಕಂಪ್ಯೂಟರ್ ಏನೇನೂ ಸಮಸ್ಯೆ ಇರ್ತವೇ, ಅದಕ್ಕೆ ಕಿರಿಕಿರಿ ಬೇಡ ಅಂತ ಕೆಲವರು ಮೇಸೆಜು ಕಳಿಸಿ ಇಲ್ಲಾ ಟೆಲಿಪೋನಿನಲ್ಲಿ ಅಭಿಪ್ರಾಯ ಹೇಳ್ತಾರೆ.
ಆದರೆ ಸಿರಿಯಸ್ಸಾಗಿ ಯೋಚಿಸುವ ಕೆಲವು ಮಂದಿ ಕಷ್ಟವಾದರೂ ಬಿಡದೇ ತಮ್ಮ ತಲೆಯನ್ನೆಲ್ಲಾ ಉಪಯೋಗಿಸಿ ಕಾಂಮೆಟಿಸುತ್ತಾರೆ, ಬ್ಲಾಗ್ ಬರೆಯೋರಿಗೆ ಇದು ತುಂಬಾ ಖುಷಿ ಕೊಡುತ್ತೆ, ಈ ಮದ್ಯೆ ಮೋಹನ್ ಕುಮಾರ್ ಎಂಬ ಹೆಸರಿನ ಗೆಳೆಯರೊಬ್ಬರು ಚಿಂತನೆಗೆ ಹಚ್ಚುವ ಕಾಮೆಂಟು ಕಳಿಸಿದ್ದಾರೆ ಓದಿ.
ಮೋಹನ್ ಕುಮಾರ್ said...
ಗೌಡ್ರೆ! ನೀವು ಹೇಳೋದೆಲ್ಲ ಒಪ್ಕಂಡೆ. ಆದ್ರೆ ಅದು ಹಿಂದೂ ಇತ್ತು. ಇಮದೂ ಇದೆ. ಮುಂದೂ ಇರುತ್ತೆ ನಿಜ. ಆದ್ರೆ ನಿಸರ್ಗಕ್ಕೆ ವಿರುದ್ಧವಾಗಿರೋದಕ್ಕೆ ಕಾನೂನಿನ ಮುದ್ರೆ ಬೇಕೇ? ಫೌಂಡೇಷನ್ ಗೆ ಹೋಗಿ ಬಂದ ಬಗ್ಗೆ ಮನ ಕಲಕಿತು ಎಂದಿರಿ! ಆದ್ರೆ ಆ ಫೌಂಡೇಷನ್ ವಿದೇಶದ ಯಾವ ಯಾವ ೇಜೆನ್ಸಿಯಿಂದ ೆಷ್ಟೆಷ್ಟು ಪಂಡ್ ತರಿಸಿಕೊಳ್ತಿದೆ? ಈ ನಾಟಕ ೆಲ್ಲಾ ಏಕೆ ಮಾಡ್ತು ಎಂದು ನಿಜವಾದ ಗಂಡಸು ಪತ್ರಕತ್ತನಾಗಿದ್ರೆ ಮಾಡಿ.
ಹಾಗೆಯೇ ಹೆಣ್ಣು ಗಂಡಿನ ನಡುವೆ ಸೆಕ್ಸ್ ಸಾಮಾನ್ಯ. ಅದು ಸಹ ನೈಸರ್ಗಿಕ. ಹಾಗಂತ ಅಮ್ಮ-ಮಗ, ಅಪ್ಪ-ಮಗಳು, ಅಣ್ಣ-ತಂಗಿ ಸೆಕ್ಸ್ ಮಾಡೋದು ಸಹಜ ಅಂತೀರಾ ನೀವು! ಇಂಥಾ ಇನ್ಸೆಸ್ಟ್ ಗೆ ಕಾನೂನಿನ ಮಾನ್ಯತೆ ಬೇಕು ಎಂದು ಈ ಪವಂಡೇಷನ್, ದುಡ್ಡ ಮಾಡೋಕೆ ಕಾದಿರೋ ಎನ್ ಜಿ ಓ ದವರು ಪ್ರಯತ್ನಿಸಿದರೆ ಅದನ್ನು ಬೆಂಬಲಿಸ್ತೀರಾ? ಇಂತಹ ಪರಿಸ್ಥಿತಿಯಲ್ಲಿ ನಿಮ್ಮನ್ನು ಊಹಿಸಿಕೊಳ್ಳಲು ಸಿದ್ಧರಿದ್ದೀರಾ? ಯಾಕೆಂದರೆ ಅದೂ ಸಹಜ ತಾನೆ! ವೈ ಡೋಂಟ್ ಯೂ ಟ್ರೈ! ಈಗ ಕಾನೂನಿನ ಬಗ್ಗೆ ಮಾತನಾಡಿ ಗೌಡ್ರೆ! ಇದಕ್ಕೂ ಕಾನೂನಿನ ಮನ್ನಣೆ ಕೊಡೋಣವೇ?
ಅಂದಹಾಗೆ ಮತ್ತೊಂದು ಪ್ರಶ್ನೆ! ನಿಮ್ಮ ನಿಮ್ಮ ಅಮ್ಮ , ಅಕ್ಕ, ಸಿಸ್ಟರ್ ಗಳು ಲೆಸ್ಬಿಯನ್, ಅಪ್ಪ , ಅಣ್ಣ ಗೇ ಅಂತ ಗೊತ್ತಾದ್ರೆ ಆಗಲೂ ಇದೇ ರೀತಿ ಬರೀತೀರಾ? ಅಂತದ್ದನ್ನು ಅರಗಿಸಿಕೊಳ್ಳೋಕೆ ನೀವು ಸಿದ್ದರಿದ್ದೀರಾ? ನಿಮ್ಮ ಮನೆ, ಕುಟುಂಬ, ಸಂಸಾರ, ಪ್ರೀತಿ, ವಿಶ್ವಾಸ, ನಿಮ್ಮ ಅಪ್ಪ-ಅಮ್ಮನ ಸಂಬಂಧ ಇವೆಲ್ಲವುಗಳ ಪವಿತ್ರ ಸಂಬಂಧದ ಬಗ್ಗೆ ಮೊದಲು ಯೋಚಿಸಿ. ನಂತರ ಕಾನೂನಿನ ಬಗ್ಗೆ. ಜಿ.ಎನ್.ಮೋಹನ್ ಗೆ ಬಕೆಟ್ ಹಿಡಿಯುವ ನೀವು, ಬುದ್ದಿ ಜೀವಿಯಾಗುವ ಪೋಜ್ ಕೊಡಬೇಕಿಲ್ಲ.
ಪ್ರಿಯ ಮೋಹನ್ ಕುಮಾರ್.
ನಿಮ್ಮ ಕಾಮೆಂಟ್ ಗೆ ಸ್ವಾಗತ ಈ ಪೋಸ್ಟ್ ಅನ್ನು ಬರೆಯುವಾಗಲೇ ತುಂಬಾ ಟೀಕೆ ಬರಬಹುದು, ಚರ್ಚೆ ಆಗಬಹುದು ಅಂಥ ನಿರೀಕ್ಷೆ ಮಾಡಿದ್ದೆ, ಆದರೆ ತುಂಬಾ ಮಂದಿ ಚೆನ್ನಾಗಿದೆ ಅಂದ್ರು, ಕೆಲವರು ಚೆನ್ನಾಗಿ ಬರೀತೀರಿ ಅಂದ್ರು, ಕೆಲವ್ರೂ ನೋ ಕಾಂಮೆಂಟ್ಸ್ ಅಂದರು, ಆದರೆ ನಾನು ನಿರೀಕ್ಷೆ ಮಾಡಿದಂತೆ ನೀವು ಟೀಕೆ ಮಾಡಿದ್ದೀರಿ ಸ್ವಾಗತ.
ಅದರೆ ಕಾಮೆಂಟ್ ಬರೆಯುವಾಗ ಅಲ್ಲಲ್ಲಿ ಸಿಕ್ಕಾಪಟ್ಟೆ ಗಂಡಸುತನ ಪ್ರದರ್ಶನ ಮಾಡಿದ್ದೀರಿ, ಅಪ್ಪ, ಅಮ್ಮ, ತಂಗಿ, ಬಕ್ಕೆಟ್ಟು ಅಂತ ಅಸಂಭದ್ದ ವಾಕ್ಯಗಳನ್ನ ಸೇರಿಸಿ ನನ್ನನ್ನು ಉದ್ರೇಕಿಸುವ ಪ್ರಯತ್ನ ಮಾಡಿದ್ದೀರಿ ಅದ್ಯಾಕೆ ನಿಮಗೆ ನನ್ನ ಮೇಲೆ ಸಿಟ್ಟು ಬಂದ ಹಾಗಿದೆಯಲ್ಲಾ....
ಇದರ ಮದ್ಯ ನೀವು ಕೇಳಿರುವ ಪ್ರಶ್ನೆಗಳಿಗೆ ನನ್ನ ಸಮಾಜಾಯಿಸಿ ಏನು ಎಂಬಂತೆ ಪ್ರಶ್ನಾರ್ಥಕಗಳನ್ನು ಹಾಕಿ 'ಹೀರೋ' ಆಗಿದ್ದೀರಿ, ಅದಕ್ಕೆ ದನ್ಯವಾದ.
ಏಡ್ಸ್ ಪೀಡಿತ ಮಕ್ಕಳಿಗಾಗಿ ಅವರ ಬದುಕಿಗಾಗಿ ವಿದೇಶದ ಪಂಡು ತಗೊಂಡರೇ ನಿಮ್ಮ ಮೇಲೆ ಆಗೋ 'ವ್ಯತಿರಿಕ್ತ' ಪರಿಣಾಮ ಏನಂತ ನಂಗೆ ತಿಳಿಸಿ.
ನಾಜ್ ಪೌಂಡೇಶನ್ ಹಾಕಿರುವ ಕೇಸಲ್ಲಿ ಗೆದ್ದರೆ ಹೊಮೊಸೆಕ್ಸ್ ನಲ್ಲಿ ತೊಡಗೋ ಮಂದಿ ನಾಜ್ ಗೆ ಕಾಸು ಕಳಿಸಿಕೊಡ್ತಾರೇನ್ರಿ, ಏಡ್ಸ್ ಪೀಡಿತ ಮಕ್ಕಳಿಗಾಗಿ ಕೆಲಸ ಮಾಡೋ ಸಂಸ್ಥೆ ಅದು ಅಂಥ ಹೇಳಿದ್ದಿನಲ್ಲಾ...
ಎನ್ ಜಿ ಓ ಗಳಿಗೆ ಪಾರಿನ್ ಪಂಡು ಬರುತ್ತೆ ಅಂತ ಹೇಳುವ ಹಳೆೇ ತಗಡು ಪ್ರಶ್ನೆಯನ್ನ ಕೆಲವರು ಹಾಕ್ತಾರೆ ನೀವೂ ಹಾಕಿದ್ದೀರಿ, ಹಾಗಾದರೆ ಪಂಡನ್ನ ಎನ್ ಜಿ ಒ ಗಳೇ ಪ್ರಿಂಟು ಮಾಡಕೋಬೇಕಾ.
ಆಮೇಲೆ ನಾಜ್ ಕೋರ್ಟ್ ನಲ್ಲಿ ಪ್ರಶ್ನೆ ಮಾಡಿರೋದು ಐಪಿಸಿ 337 ಕಾನೂನನ್ನ ಮರುಪಶೀಲನೆ ಮಾಡಿ ಅಂಥ, ತಿದ್ದಿ, ಅಂತ ಅಲ್ಲ. ಕೋರ್ಟ್ ಗೆ ಹಾಗೆ ಮಾಡೋಕೆ ಬರಲ್ಲ. ಡೆಲ್ಲಿ ಹೈಕೋರ್ಟ್ ಜಡ್ಜ್ ಗಳು ಏನೂ ಪೆದ್ದರೂ ಅಲ್ಲ ಅಥವಾ ಹೋಮೋಸೆಕ್ಸ್ ಳೂ ಅಲ್ಲ, ನಿಮ್ಮಂತರಿಗೆ ಹಾಗೆ ಅನ್ನಿಸಿದರೇ ಯಾರಾದರೂ ಪತ್ರಕರ್ತರಿಗೆ ತನಿಖೆ ಮಾಡಲು ಹೇಳಿ ಇಲ್ಲಾ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಹಾಕಿಸಿ ಪರೀಕ್ಷೆ ಮಾಡಿಸಿ. ನಿಮ್ಮಂತಾ ಕೆಲವರಿಗೆ ಹೀಗೂ ಯೋಚನೆ ಮಾಡುವ ಬ್ರಿಲಿಯನ್ಸಿ ಇರತ್ತೇ.
ನಾರ್ಮಲ್ಲಾಗಿರುವ ನಿಮ್ಮಂತವರೇ ಅನೈಸರ್ಗಿಕವಾದ ರೇಪು, ಅತ್ಯಾಚಾರ, ಕೊಲೆ, ಮಕ್ಕಳ ದುರುಪಯೋಗ ಮಾಡುತ್ತಿರುತ್ತಾರೆ ಅವರನ್ನು ಏನು ಮಾಡೋದು ಸ್ವಾಮಿ. ನಿಸರ್ಗ ಕೂಡ ತಪ್ಪು ಮಾಡಬಹುದಲ್ಲಾ ಹೋಮೋಗಳ ಕೇಸಲ್ಲೂ ಅದೇ ಅಲ್ಲವಾ ಆಗಿರೋದು, ನಿಸರ್ಗ ಮಾಡಿರೋ ಲೋಪವನ್ನ ಹೇಗಪ್ಪಾ ಸರಿಮಾಡೋದು.
ಅಮ್ಮ-ಮಗ, ಅಪ್ಪ-ಮಗಳು, ಅಣ್ಣ-ತಂಗಿ ಸೆಕ್ಸ್ ಮಾಡೋದು ಸಹಜ ಅಂತೀರಾ ನೀವು. ಅಂತ ನೀವು ಪ್ರಶ್ನೆ ಕೇಳಿದ್ದೀರಿ ಇಂತ ಪ್ರಶ್ನೆ ಹಾಕೋ ಮನಸು ವಿಷಯದ ಬಗ್ಗೆ ಗಂಭೀರ ಚರ್ಚೆ ಮಾಡದೆ ಯ್ಯಾಗಾದರೂ ಗೆದ್ದುಬಿಡಬೇಕು ಎಂಬ ಕಿರಾತಕ ಮನಸುಗಳಲ್ಲಿ ಹುಟ್ಟಲಿಕ್ಕೆ ಸಾದ್ಯ, ಅದಕ್ಕೆ ಉತ್ತರಕೊಡೋದಕ್ಕಿಂತ ಕೇಳಿದ್ದು ಸರಿಯಾ ತಪ್ಪಾ ಅಂತ ಮೋಹನ್ ಕುಮಾರ್ ಯೋಚಿಸಬೇಕು.
ಪ್ರಕೃತಿಗೆ ವಿರುದ್ದವಾದ ಕ್ರಿಯೆಗೆ ಕಾನೂನಿನನ ಮುದ್ರೆ ಯಾಕೆ ಸ್ವಾಮಿ ಅನ್ನೊ ಪ್ರಶ್ನೆ ಕೇಳಿದ್ದೀರಿ, ಅದೇ ಚರ್ಚೆ ಅಲ್ಲವಾ ಈಗ ನಡೀತೀರೋದು, ಕಮಾನ್ ಮಹೇಶ್ ಕುಮಾರ್ ಮತ್ತೊಮ್ಮೆ ಮಗದೊಮ್ಮೆ ಪ್ರಶ್ನೆಗಳನ್ನ ಹಾಕಿ.. ಸುಕಾಸುಮ್ಮನೆ ರಕ್ತ ಕಾರಿಕೊಳ್ಳಬೇಡಿ ಸೈಟಿಫಿಕ್ ಆಗಿ ಅದೂ ಕೂಡ ಆರೋಗ್ಯಕ್ಕೆ ಒಳ್ಳೇದಲ್ಲಾ...
ಕೇವಲ ಕಾಮೆಂಟಾಗಿರಬೇಕಿದ್ದ ಮೋಹನ್ ಕುಮಾರ್ ಬರಹವನ್ನು ಬ್ಲಾಗ್ ಗೆ ಹಾಕಿದ್ದೇನೆ, ಚರ್ಚೆ ಆರಂಭವಾದರೆ ಸಂತೋಷ. ಸಿಲ್ಲಿ ಪೈಟ್ಸ್ ಬೇಡ.
ಇಲ್ಲಿ ನಾಜ್ ಸಂಸ್ಥೆ ಏಡ್ಸ್ ರೋಗಿಗಳಿಗೆ ಇರೋ NGO.. ಅದು ಪ್ರಜೆಗಳ ಹಿತಾಸಕ್ತಿಗಾಗಿ ಕಾನೂನು ತಿದ್ದುಪಡಿಗೆ ದಾವೆ ಹೂಡಿದ್ದು.. ಇದು ಹೋಮೋಸೆಕ್ಸ್ ನ ಪರ ಏನು ಅಲ್ಲ.. ಮಾನವಿಕ ಮೌಲ್ಯಗಳ ಅದಾರಾಧ ಮೇಲೆ ಡೆಲ್ಲಿ ಹೈಕೋರ್ಟ್ ತೀರ್ಪನ್ನು ನೀಡಿದೆ.. ಸುಪ್ರೀಂ ಕೋರ್ಟ್ ಕೂಡ ಹೈ ಕೋರ್ಟ್ ತೀರ್ಪಿಗೆ ತಡೆ ನೀಡಲಿಲ್ಲ. ಹೋಮೋಸೆಕ್ಸ್ ಗೆ ಈ ತೀರ್ಪಿಗೆ ಸಂಬಂದ ಇಲ್ಲ. This judgement just for human values. ಇಲ್ಲಿ ಅಪ್ಪ ಮಗ ಅಮ್ಮ ಮಗ ಯಾರ ಪ್ರಶ್ನೆಯೂ ಬರುವುದಿಲ್ಲ...
ReplyDeleteಗೌಡರ ಖಾಸಗಿ ಡೈರಿಯೊಳಗೊಬ್ಬ ತೀರಾ ಖಾಸಗಿಯಾಗಿ ಪ್ರತಿಕ್ರಿಯಿಸಿರುವ ಹಿನ್ನಲೆಯಲ್ಲಿ ಅದು ಅವರ ಮತ್ತು ಇವರ ಹಿಂದಿನ ಬದುಕನ್ನು (ಸಂಬಂಧ, 377 ಅಲ್ಲ..)ಆದರಿಸಿದೆ ಎಂದು ಈ ಏಕಪೀಠ ನ್ಯಾಯಲಯ ತೀರ್ಪನ್ನು ನೀಡಿದೆ.
ReplyDeleteಗೌಡರು ಇದನ್ನು ಯಾವುದೇ ಕಾರಣಕ್ಕಾಗಿ ಮುಂದುವರೆಸದೆ ಇದನ್ನು ಇಲ್ಲಿಗೆ ನಿಲ್ಲಿಸಿ ನಿಮ್ಮ ಬರಹದಲ್ಲಿ ತಲ್ಲೀನರಾಗಬೇಕು,'ಕೊಳ್ಳೆ ಹೊಡೆದ ಮೇಲೆ ದಿಡ್ಡಿ ಬಾಗಿಲನ್ನು ಹಾಕಿದರಂತೆ' ಅನ್ನುವ ಹಾಗೆ ನೀವು ಸ್ವಲ್ಪತಡವಾಗಿ ಈತರದ ವಿಷಯದ ಮೇಲೆ ಬರೆದಿದ್ದು ತಪ್ಪು, ಹಾಗೆ ಆಗದ ಹಾಗೆ ನೋಡಿಕೊಳ್ಳಿ.
ಮೋಹನ್ ಕುಮಾರಗೆ ಯಾವೊದೋ ಹಳೆಯ ದ್ವೇಷವನ್ನು ಇಟ್ಟುಕೊಂಡು ಗೌಡರ ವಿರುದ್ದ ಅದನ್ನ ಕಾರಿದ್ದಾರೆ ಅಂತ ಅನ್ನಿಸುತ್ತದೆ.ಇಲ್ಲಿ ಅವರು ಕೇಳುವ ವಯಕ್ತಿಕ ಪ್ರಶ್ನೆಗಳನ್ನ ಅವರಿಗೂ ತಿರುಗಿಸಬಹುದು ಅವರ ಮನೆಯಲ್ಲೇ ಈರೀತಿಯಾದ ಅನೈಸರ್ಗಿಕ ಅಂತ ಅವರೇ ಹೇಳೋ ವ್ಯಕ್ಥಿಗಲಿದ್ದರೆ?ಡೆಲ್ಲಿ ಕೋರ್ಟ್ ಕೊಟ್ಟಿರುವ ತೀರ್ಪನ್ನು ಯಾಗೆ ಸ್ವೀಕರಿಸುತ್ತಿದ್ದರು ಎಂದು? ಆದರೇ ಪ್ರಶ್ನೆ ಅದಲ್ಲ ವಿಷಯದ ಬಗ್ಗೆ ಆರೋಗ್ಯಕರ ಚರ್ಚೆಯಾಗಬೇಕಲ್ಲವೇ.ಗೌಡ ತೀರ್ಪಿನ ಪರವಗಿದ್ದರೇನು ಇಲ್ಲದಿದ್ದರೇನು ಇದು ನಮ್ಮ ಸಮಾಜದ ಒಂದು ವರ್ಗದವರ ಬಗೆಗಿನ ವಿಷಯ ವಾಗಿರುವುದರಿಂದ ವಯಕ್ತಿಕವಾಗಿ ಮೌಡ್ಯಾರಾಗಿ ಯೋಚಿಸದೆ, ಮುಕ್ತವಾಗಿ ವಿಷಯದ ಬಗ್ಗೆ ಮಾತ್ರ ಚಿಂತಿಸಿದರೆ ಮೋಹನ್ ರವರಿಗೆ ಅದರ ಒಳಿತು ಕೆಡಕುಗಳು ತಿಳಿಯುತ್ತವೆ ಅನ್ನೋದು ನನ್ನ ಅಭಿಪ್ರಾಯ.ಹಾಗಾಗಿ ಮತ್ತೊಮ್ಮೆ ಈ ವಿಷಯದ ಸುತ್ತ ಮುತ್ತಲಿನ pros and cons ನ ಬಗ್ಗೆ ನೀವೇ ಯೋಚಿಸಿ ನಿಮಗೆ ಮಾನವೀಯ ಮೌಲ್ಯವಿದ್ದರೆ ನಿಮಗೆ ಉತ್ತರ ತಿಳಿವುದು?
ReplyDeletei apreciate ur knowledge bro :) i luv to read wat u write.......keep it up :)
ReplyDelete