Monday, July 20, 2009

ಥ್ರೀ ಸೆವೆಂಟಿ ಸೆವೆನ್.......!!!


ಡೆಲ್ಲಿ ಹೈಕೋರ್ಟ್ ಹೋಮೋ ಸೆಕ್ಸುಯಲ್ ಗಳ ಬಗ್ಗೆ ತೀರ್ಪು ಕೊಟ್ಟಮೇಲೆ ಡಾ.ಲೀಲಾಸಂಪಿಗೆ ಮೇಂಡಂ ಮಾತನಾಡುತ್ತಾ , 'ರೀ ಶ್ರೀನಿವಾಸ್ ಈ ಕೇಸ್ ಬಗ್ಗೆ ಪಾಲೋ ಮಾಡ್ರಿ ಏನಂತೆ ಇವರ ಕತೆ' ಅಂತ ಕೇಳಿದ್ರೂ ಸಬ್ಜೆಕ್ಟ್ ಕುತೂಹಲ ಇದ್ದರಿಂದ ನಾನೂ ಇದೇನು ಅಂತ ತಿಳ್ಕೊಳ್ಳೇ ಬೇಕಲ್ಲಾ ಅಂತ ತೀರ್ಮಾನಿಸಿ ನಮ್ಮ ಚಾನಲ್ಲಿಗೊಂದು ಸ್ಟೋರಿ ಕೂಡಾ ಆಗುತ್ತೆ ಮಾಡೋಣಾ ಅಂತಾ ತೀರ್ಮಾನಿಸಿದೆ.

ದೆಹಲಿಯ ಪ್ರತಿಷ್ಠಿತ ಅಪೋಲೊ ಆಸ್ಪತ್ರೆಯ ಸೈಕಾಲಜಿಸ್ಟ್ ಸಂದೀಪ್ ಓರಾ ಅವರನ್ನ ಭೇಟಿ ಮಾಡಬೇಕಾದರೆ ನಂಗೆ ಸಾಕು ಬೇಕಾಗಿತ್ತು. ಯಾಕಾದ್ರೂ ಈ ಹೋಮೋಸೆಕ್ಸುಯಲ್ ಗಳ ಹಿಂದೆ ಬಿದ್ದೆನಪ್ಪಾ ಅಂಥ ಅಂದುಕೊಂಡೆ. ಆ ಹೊತ್ತಿಗೆ ಸಂದೀಪ್ ಓರಾ ನನಗೆ ಬೈಟ್ ಕೊಡಲು ಒಪ್ಪಿಕೊಂಡರು. ಅಪೋಲೋ ಆಸ್ಪತ್ರೆ ಒಳ್ಳೇ ಪೈವ್ ಸ್ಟಾರ್ ಹೋಟೆಲ್ ಇದ್ದಂಗೆ ಇತ್ತು. ಈ ಪಾಪಿ ಟೆರರಿಸ್ಟ್ ಗಳ ಕಾಟದಿಂದ ಆ ಆಸ್ಪತ್ರೆಯಲ್ಲೂ ಎಕೆ 47 ಹಿಡಿದುಕೊಂಡಿದ್ದ ಭದ್ರತಾ ಪಡೆಯವರಿದ್ದರು. ಅವರಿಂದ ನಾವು ಕ್ಯಾಮರಾ ಸ್ಟಾಂಡ್ ಎಲ್ಲಾ ಚೆಕಪ್ ಮಾಡಿಸಿಕೊಂಡು ಡಾಕ್ಟರ್ ಚೇಂಬರಿಗೆ ತಪುಪಿದೆವು.

ಸಂದರ್ಶನ.


ಯಾರು ಸಾರ್ ಈ ಹೋಮೋಸೆಕ್ಸುಯಲ್ ಗಳು..?
ಡಾಕ್ಟರ್.
ಅವರೇನೂ ಬೇರೆಯವರಲ್ಲ ನಮ್ಮ ಮದ್ಯೆಯೇ ಇರ್ತಾರೆ. ನಮ್ಮಂತೆ ಇರ್ತಾರೆ. ಆದರೆ ಅವರ ಸೆಕ್ಸುಯಲ್ ಓರಿಯಂಟೇಷನ್ ಬೇರೆದಾಗಿರುತ್ತೇ ಈಗ ಒಬ್ಬ ಗಂಡಸು ಇನ್ನೊಬ್ಬ ಗಂಡಸನ್ನ ಇಷ್ಟ ಪಟ್ಟರೆ, ಅವರೊಂದಿಗೆ ಬೆರೆತರೆ 'ಗೇ 'ಅಂತ ಕರೀತೀವಿ. ಹೆಣ್ಣೊಬ್ಬಳಿಗೆ ನಂಗೆ ಹೆಣ್ಣೇ ಬೇಕು ಅಂತ ಅನಿಸಿದರೆ 'ಲೆಸ್ಬಿಯನ್ ' ಅಂತೀವಿ.
ಕೆಲವರಿಗೆ 'ಗಂಡಸೂ' ಬೇಕು 'ಹೆಂಗಸೂ' ಬೇಕು ಅಂತ ಅನ್ನಿಸುತ್ತೆ ಅವರನ್ನ "ಬೈಸೆಕ್ಸುಯಲ್ಸ್" ಅಂತೀವಿ. ನೋಡೋಕೆ 'ಹೆಣ್ಣಿನಂತೆ' ಇದ್ದರೂ ಮನಸು 'ಗಂಡಾಗಿಯೂ, 'ಗಂಡಿನಂತೆ 'ಕಂಡರೂ ಮನಸು 'ಹೆಣ್ಣಿನಂತೆ' ವರ್ತಿಸೋರನ್ನ, ಅದಕ್ಕೆ ತಕ್ಕಂತೆ ಬಯಕೆ ಆಗೋರನ್ನ 'ಟ್ರಾನ್ಸೆಕ್ಸುಯಲ್ಸ್' ಅಂಥ ಕರೀತೀವಿ . 'ಇಟ್ ಈಸ್ ಜಸ್ಚ್ ಎ ಮ್ಯಾಟರ್ ಆಪ್ ವಾಟ್ ಸೆಕ್ಸ್ ಓರಿಯಂಟೇಷನ್ ದೆ ಹ್ಯಾವ್'. ಅಂದರು.

ಸಾರ್ ಈ ಹಿಜಿಡಾ ಗಳು, ಚಕ್ಕಾಗಳು, ಡಬಲ್ ಡೆಕ್ಕರ್ ಗಳು ಅಂದರೇ ಇವರೇನಾ...?
ನೋಡಿ ಹಿಜಿಡಾಗಳಿಗೂ, ಚಕ್ಕಾಗಳು ಬೇರೆ ಇವರಿಗೂ ಹೋಮೋಗಳಿಗೂ ಸಂಭಂದವೇ ಇಲ್ಲ. ಹಿಜಿಡಾಗಳ ಅಂಗರಚನೆಯೇ ಬೇರೆ ತರನಾಗಿರುತ್ತೆ. ಅವ್ರಿಗೆ ಇಂಥದೇ ಅಂತ ಸ್ಪಷ್ಟವಾಗಿ ಹೇಳಕ್ಕೆ ಆಗದಂತ ಲಿಂಗರಚನೆಇರತ್ತೆ. ಅವರನ್ನ ಹೋಮೋಸೆಕ್ಸುಯಲ್ ಗಳ ಜೊತೆ ಸೇರಿಸಬಾರದು, ಜನಾ ಮಾಡೋ ತಪ್ಪೇ ಅದು ನೋಡಿ. ಈ ಹೋಮೋ ಸೆಕ್ಸುಯಲ್ ಗಳು ನಮ್ಮ ,ನಿಮ್ಮಂತೆ. ಹೆಣ್ಣು ಅಥವಾ ಗಂಡಿನಂತೆ ಕಾಣಿಸುತ್ತಾರೆ. ಗುರುತು ಮಾಡೋದು ಕಷ್ಟ.
ಯಾಕೆ ಸಾರ್ ಹೋಮೋ ಸೆಕ್ಸುಯಲ್ ಆಗ್ತಾರೆ.?
ಯಾಕೆ ಆಗ್ತಾರೆ ಅನ್ನೊದರ ಬಗ್ಗೆ ಸಾಕಷ್ಟು ಥಿಯರಿಗಳಿವೆ. ಹೆಚ್ಚಿನ ಪ್ರಕರಣಗಳಲ್ಲಿ ಅವರ ಜೀನ್ಸ್ ನಲ್ಲಿಯೇ ಅಂಥಾ ಸ್ವಭಾವ ಬಂದಿರುತ್ತೆ. ಹಾರ್ಮೋನುಗಳ ವ್ಯತ್ಯಾಸ ಕೂಡ ಈ ಸ್ವಭಾವಕ್ಕೆ ಕಾರಣ. ಜೊತೆಗೆ ಚಿಕ್ಕವರಿದ್ದಾಗ ಬೆಳೆಯುವ ಪರಿಸರ ಪ್ರಭಾವ ಬೀರಬಹುದು. ಕೆಲವು ಪ್ರಕರಣಗಳಲ್ಲಿ ಅನಿವಾರ್ಯವಾಗಿ ಮತ್ತೊಬ್ಬರ ಒತ್ತಡಕ್ಕೆ ಸಿಲುಕಿ ಹೋಮೋಗಳಾಗಿ ನಂತರ ಬದಲಾಗುವ ಸಾದ್ಯತೆ ಇದೆ.
ಇದು ಮೆಂಟಲ್ ಅಥವಾ ಪಿಸಿಕಲ್ ಡಿಸ್ ಆರ್ಡರ್ರಾ...?
ನೋ ನಾಟ್ ಅಟ್ ಆಲ್ . ಅದು ಮೆಂಟಲ್ ಡಿಸ್ ಆರ್ಡರ್ ಅಲ್ಲಾ ಅಥವಾ ಆರೋಗ್ಯದ ಸಮಸ್ಯೆಯೂ ಅಲ್ಲಾ.. ನ್ಯಾಚುರಲ್ ಆದ ಡೊಂಕು. ದೈವ ಮಾಡಿದ ಕಿತಾಪತಿ...

ಹೋಮೋಸೆಕ್ಸುಯಲ್ ಗಳನ್ನ ಚಿಕಿತ್ಸೆಯಿಂದ ಸರಿಮಾಡ ಬಹುದಾ?
ಯಾವುದೇ ಕಾರಣಕ್ಕೂ ಸಾದ್ಯವಿಲ್ಲಾ.
ಕಾಮನ್ ಮ್ಯಾನ್ ಹೋಮೋಸೆಕ್ಸುಯಲ್ ಆಗಿ ಬದಲಾಗಬಹುದಾ...?
ಇಲ್ಲವೇ ಇಲ್ಲಾ, ನಾರ್ಮಲ್ ಮನುಶ್ಯರಿಗೇ ಆಪೋಸಿಟ್ ಸೆಕ್ಸ್ ಬೇಕೆ ವಿನಾ ಸೇಮ್ ಸೆಕ್ಸ್ ಬೇಕಿಲ್ಲ, ಹಾಗೆ ಆಗೋಕೆ ಸಾದ್ಯವೇ ಇಲ್ಲ.
ಮುಂದೇ..
ನೋಡ್ರೀ, ಈ ಹೋಮೋಗಳು ಹಿಂದೇನೂ ಇದ್ರೂ, ಈಗಲೂ ಇದಾರೆ, ಮುಂದೇನೂ ಇರ್ತಾರೆ. ಪ್ರಶ್ನೆ ಏನಂದ್ರೆ ಕಾನೂನು ಪ್ರಕಾರ ಅವರು ಸೇರುವುದು ಕಾನೂನಿನ ಪ್ರಕಾಕ ಕೈಂ, ಅಥವಾ ಅಲ್ಲವಾ ಈಗ ಇರೋ ಕಾನೂನು ಅದನ್ನ ಕ್ರೈಂ ಅನ್ನುತ್ತೆ. ಮುಂದೆ ಬರೋ ಕಾನೂನು ತಪ್ಪಲ್ಲ ಅನ್ನಬಹುದು.
ಅದು ಕಾನೂನಿಗೆ ಸಂಭಂದಿಸಿದ ವಿಷಯ.

ಥ್ಯಾಂಕ್ಸು ಸಾರ್ ಅಂಥ ಹೇಳಿ ಪ್ಯಾಕಪ್ ಆದೆವು....

ಇದನ್ನೆಲ್ಲಾ ಕೇಳಿ ಆದಮೇಲೆ, ಹೋಮೋ ಸೆಕ್ಸುಯಲ್ ಗಳ ಬಗ್ಗೆ ಪಾಪ ಅನ್ನಿಸಿತು. ಪಾಪ ಅವರದೇನು ತಪ್ಪಿಲ್ಲಾ ಎಲ್ಲಾ ದೈವಾನುಗ್ರಹ. ಆಸೆ ಆಗಿದ್ದನ್ನ ಮಾಡಿದ್ರೆ ಕ್ರಿಮಿನಲ್ ಅಪರಾಧ ಆಗುತ್ತೆ .ಹತ್ತು ವರ್ಷ ಜೈಲಿಗೂ ಹೋಗಬೇಕಾಗುತ್ತೆ.
ಈಗಿರೋ ಕಾನೂನಿನ ಪ್ರಕಾರ ಇಬ್ಬರೂ ಹೋಮೋಸೆಕ್ಸುಯಲ್ ಸ್ವ ಇಚ್ಚೆಯಿಂದ ಒಪ್ಪಿ ಸೇರಿದ್ರೂ ದಂಢನೀಯ ಅಪರಾದ ಆಗುತ್ತೆ. ಇದೇ ಹೋಮೋಗಳು ಸಾಮಾನ್ಯನೊಬ್ಬನನ್ನ ಪೀಡಿಸಿ ದುರುಪಯೋಗ ಮಾಡಿದ್ರೆ, ಏನೂ ಅರಿಯದ ಮಕ್ಕಳನ್ನ ತಮ್ಮ ತೀಟೆಗೆ ಬಳಸಿಕೊಂಡ್ರೆ ಮರಣದಂಡನೆ ಬೇಕಾದ್ರೋ ಕೊಡಲಿ ಆದರೆ ನೇಚರ್ ಮಾಡಿದ ತಪ್ಪಿಗೆ, ಅದರಿಂದಾಗಿ ಅವರವರು ತೀರಿಸಿಕೊಳ್ಳೋ ತೀಟೆಗೆ ಶಿಕ್ಷೆ ಕೊಡೋದು ತಪ್ಪಾಗಬಹುದು ಅಂತ ಅನ್ನಿಸಿತು.

ದೆಹಲಿ ಹೈಕೋರ್ಟ್ ತೀರ್ಪು ಬಂದಾಗ ಅಹೋ ರಾತ್ರಿ ಫೇಮಸ್ಸಾಗಿದ್ದು ಸಂಸ್ಥೆ ದೆಹಲಿಯ ನಾಜ್ ಪೌಂಡೇಶನ್. ಕೋರ್ಟ್ ನಲ್ಲಿ ದಾವೆ ಹೂಡಿದ್ದೇ ಈ ನಾಜ್ ಪೌಂಡೇಶನ್. ಅಲ್ಲಿಗೆ ಹೋಗಬೇಕು ಅಂಥ ತೀರ್ಮಾನಿಸಿದಾಗ ನಂಗೂ ದಿಗಿಲಾಗಿತ್ತು. ಅಲ್ಲೆಲ್ಲಾ ಹೋಮೋಸೆಕ್ಸುಯಲ್ ಗಳೇ ಇರ್ತಾರೇ. ಪರಿಸ್ಥಿತಿ ಹೇಗೋ ಏನೋ ಅಂಥ ಅಂದುಕೊಂಡು ಅದರ ಅಧ್ಯಕ್ಷೆ ಅಂಜಲಿ ಗೋಪಾಲನ್ ಗೆ ಕರೆಮಾಡಿದಾಗ ಅವರು ದಕ್ಷಿಣಾ ಆಪ್ರೀಕಾದಲ್ಲಿದ್ದರು.
ಬಂದ ಮೇಲೆ ಸಿಕ್ತೇನೆ, ಅಂದರು. ಎರಡು ದಿನ ಕಳೆದ ಮೇಲೆ ಈಸ್ಟ್ ಕೈಲಾಶ್ ನಲ್ಲಿರುವ ನಾಜ್ ಪೌಂಡೇಶನ್ನಿಗೆ ಹೋದೆ. ಮೂರು ಅಂತಸ್ಥಿನ ಹಸಿರು ಹೊದಿಸಿದಂತೆ ಕಾಣಿಸುವ ಬಿಲ್ಜಿಂಗ್ ಅದು. ಮೂರು ನಾಲ್ಕು ಧಡೂತಿ ನಾಯಿಗಳು ಅಲ್ಲಿದ್ದವು. ಬಿಲ್ಡಿಂಗಿನ ತುಂಬಾ ಚಿಕ್ಕ, ಚಿಕ್ಕ ಮಕ್ಕಳೂ ಆಟ ಆಡುತ್ತಿದ್ದರು. ಅಲ್ಲೊಂತರಾ ಸ್ಕೂಲಿನ ವಾತಾವರಣ ಇತ್ತು.

ಕಂಪ್ಯೂಟರ್ ರೂಮಿನಲ್ಲಿ ಪಿಯುಸಿ, ಇಲ್ಲಾ ಡಿಗ್ರಿ ಓದುತ್ತಿರಬಹುದಾದ ನಾಲ್ಕಾರು ಹುಡುಗಿಯರಿದ್ದರು. ಯಾರೋ ಹುಡುಗನಿಗೆ ಸೋಶಿಯಲ್ ನೆಟ್ ವರ್ಕ್ ವೆಬ್ ಸೈಟ್ ಆರ್ಕುಟ್ ನಲ್ಲಿ
ಸ್ಕ್ಯ್ರಾಪ್ ಮಾಡಿ ನಗುತ್ತಾ ಕುಳಿತಿದ್ದರು, ಅಲ್ಲೇ ಹತ್ತಿರದಲ್ಲಿದ್ದ ಆಕರ್ಷಕವಾಗಿ ಡಿಸೈನ್ ಮಾಡಿದ ಡ್ರಾಯಿಂಗ್ ರೂಂ ನಲ್ಲಿ ಅಂಜಲಿ ಗೋಪಾಲನ್ ಇದ್ದರು. ಸಣ್ಣ ತಪ್ಪು ಮಾಡಿದ್ದ ಇಬ್ಬರು ಮಕ್ಕಳಿಗೆ ಹೆದರಿಸುತ್ತಾ ಇದ್ದರೂ.

ನಾವು ಕ್ಯಾಮೆರಾ ಆನ್ ಮಾಡಿ ಅವರನ್ನ ಮಾತಿಗೆಳೆದವು.
ನಾನು ಅವರನ್ನ ಸ್ಪಲ್ಪ ಖುಷಿ ಮಾಡೋದಕ್ಕೆ ಅಂತ ಒಂದು ಜಾಕ್ ಹಾಕಿದೆ. ಏನ್ ಮೇಡಂಮ್ ಓವರ್ ನೈಟ್ ಫೇಮಸ್ ಆಯಿತಲ್ಲಾ ನಿಮ್ಮ ನಾಜ್ ಪೌಂಡೇಶನ್ ಅಂದೆ ಅದಕ್ಕೆ ಅಂಜಲಿ ಅವರು 'ಆಲ್ ಪಾರ್ ದಿ ರಾಂಗ್ ರೀಸನ್.' ಅಂತ ಅನ್ನುತ್ತಾ, ತಮ್ಮ ಗೆಲುವನ್ನ ತಮ್ಮ ನಗುವಿನಲ್ಲಿ ತೋರಿಸಿದ್ರು.

ನೀವು 377 ವಿರುದ್ಧ ಪೈಟ್ ಮಾಡೋಕೆ ಕಾರಣ ಏನು ಮೇಡಂ.?
'ನೋಡಿ ಹೋಮೋ ಸೆಕ್ಸುಯಲ್ ಗಳು ಪಾಪಿಗಳಲ್ಲ ,ನೇಚರ್ ಪ್ರಾಬ್ಲಂಮ್ ನಿಂದ ಅವರು ಹಾಗೆ ಆಗಿದಾರೆ, ಅವರವರ ನಡುವೆ ನಡೆಯೋ ಸೆಕ್ಯ್ಸುಯಲ್ ಓರಿಯಂಟೇಶನ್ ಅನ್ನ ಕಾನೂನು ತಪ್ಪು ಅನ್ನುತ್ತೆ. ಅಲ್ಲದೆ, ಅವರವರು ಒಪ್ಪಿ ಬಾಗಿಯಾದ್ರೂ ಅದಕ್ಕೆ 10 ವರ್ಷ ಶಿಕ್ಷೆ, ಇಂದೆಂತಾ ನ್ಯಾಯ, ಇಂತಾ ಕರಾಳ ನ್ಯಾಯವನ್ನೇ ನಾಜ್ ಪ್ರಶ್ನಿಸಿದ್ದು, ಮುಖ್ಯ ವಿಷಯ ಗೊತ್ತಾ ನಾವು ಕಾನೂನನ್ನ ಬದಲಾಯಿಸಿ ಅಂಥ ಕೇಳಲಿಲ್ಲ ಕೇವಲ ಪರಿಶೀಲಿಸಿ ಅಂತ ಕೇಳಿದ್ದೆವು ಈಗ ತೀರ್ಪು ಬರ್ತಾ ಇದೆ.
ಅಲ್ಲಾ ಸುಮಾರು 10 ವರ್ಷದ ಹಿಂದೆ 2001 ರಲ್ಲೇ ನೀವು ಕೋರ್ಟ್ ನಲ್ಲಿ ಇದನ್ನಾ ಪ್ರಶ್ನೆ ಮಾಡಿದ್ದು ಯಾಕೆ.?

ನಾಜ್ ಪೌಂಡೇಶನ್ ಏಡ್ಸ್ ನಿಯಂತ್ರಣ ಮತ್ತು ಪೀಡಿತರ ಸಂಭಂದ ಕೆಲಸ ಮಾಡುತ್ತೆ. ಕೆಲವೊಮ್ಮೆ ನಮ್ಮ ಮೇಲೆ, ಕಾರ್ಯಕರ್ತರ ಮೇಲೆ ಆ ಕಾನೂನನ್ನ ಪೋಲೀಸರು ಬಳಸ್ತಾ ಇದ್ರೂ ಅದಕ್ಕೆ ಪ್ರಶ್ನೆ ಮಾಡಿದೆವು.
ನಿಮ್ಮದು ಹೋಮೋಸೆಕ್ಸುಯಲ್ ರೈಟ್ಸ್ ಸಂಸ್ಥೆ ಅಲ್ಲವಾ ಹಾಗಾದ್ರೆ..?
ಅಲ್ಲಾ, ನಮ್ಮದು ಎಚ್ಐವಿ ಪೀಡಿತರ ಕುರಿತು ಕೆಲಸ ಮಾಡೋ ಸಂಸ್ಥೆ,ಹೋಮೋ ರೈಟ್ಸ್ ಸಂಸ್ಥೆ ಅಲ್ಲ ಈಗೀಗ ಹಿಜಿಡಾಗಳಿಗೆ, ಹೋಮೋಸೆಕ್ಯ್ಸುಯಲ್ ಗಳಿಗೆ ವೈದ್ಯಕೀಯ ಸೇವೆ ತೆರೆದಿದ್ದೇವೆ.
ಯಾಕೆ ಮೇಡಂ ಇಂತಾ ಕಾನೂನು..?
ಇದು ಬ್ರೀಟೀಷರಿಂದ ಎರವಲು ಪಡೆದ ಕಾನೂನು, ಲಾರ್ಡ್ ಮೆಕಾಲೆ ಕಾಲದ್ದು. ಹಿಂದೂ ಸಂಸ್ಕೃತಿಯಲ್ಲಿ ಎಲ್ಲೂ ಇಂಥದಕ್ಕೆ ವಿರೋದ ಇಲ್ಲಾ. ಮಹಾಭಾರತದಲ್ಲಿ ಅರ್ಜುನ ಶಿಕಂಡಿ ಆಗಿದ್ದ, ಅಯ್ಯಪ್ಪ ಶಿವ ಮತ್ತು ವಿಷ್ಣು ಸೇರಿದ್ದರಿಂದ ಹುಟ್ಟಿದವ, ಕಾಮಸೂತ್ರದಲ್ಲಿ ಹೋಮೋಸೆಕ್ಸ್ ಪ್ರಸ್ತಾಪ ಇದೆ.
ಈ ತೀರ್ಪನ್ನ ನಮ್ಮ ದಾರ್ಮಿಕ ಲೀಡರ್ ಗಳು ವಿರೋಧಿಸಿದ್ದಾರಲ್ಲಾ..?
ಇದನ್ನ ನಾವೆಲ್ಲಾ ನಿರೀಕ್ಷಿಸಿದ್ದೆವು. ಅದರಿಂದ ಅಚ್ಚಿರಿ ಆಗುವಂತದ್ದು ಏನೂ ಇಲ್ಲ ಬಿಡಿ. ಈಗಿನ ಎಷ್ಟೋ ಮಂದಿ ಸಾದು, ಸಂತರು. ರೀಲೀಜಿಯಸ್ ಲೀಡರ್ ಗಳು ಹೋಮೋಗಳು ಅಂತಾರಲ್ಲಾ...ಅದಕ್ಕೇನಂತೀರಿ.
ಅದೆಲ್ಲಾ ಇದ್ದದ್ದೆ, ಹಿಂದೆ ಸರ್ಕಾರ ಕೋರ್ಟಿಗೆ 'ಧರ್ಮ' ಇದನ್ನ ವಿರೋಧಿಸುತ್ತೆ ಅಂತ ಹೇಳಿಕೆ ಕೊಟ್ಟಾಗ ಕೋರ್ಟ್ ಬೈದಿತ್ತು, ನಮ್ಮ ಸಂವಿಧಾನ ಧರ್ಮದ ಆಧಾರದ ಮೇಲೆ ರೂಪಿತವಾಗಿಲ್ಲ.
ನಿಮಗೆ ಕೋರ್ಟ್ ಕೊಟ್ಟ ತೀರ್ಪಿನಿಂದ ಸಂತೋಷಾ ನಾ..?
ಸಹಜವಾಗಿ ಸಂತೋಷ ಆಗಿದೆ, ಒಂದು ಐತಿಹಾಸಿಕ ಬೆಳವಣಿಗೆ ನಾಜ್ ಸಾಕ್ಷಿ ಆಯ್ತಲ್ಲಾ ಅಂತ. ಆದ್ರೂ ಕೇಂದ್ರ ಸರ್ಕಾರ, ಸುಪ್ರಿಂ ಕೋರ್ಟ್ ಏನಂತಾವೆ ನೋಡೋಣ.
ಹೇಗಿದೆ ರೆಸ್ಪಾನ್ಸ್.?

ತುಂಬಾ ಚೆನ್ನಾಗಿದೆ, ಗೇ ಕಮ್ಯುನಿಟಿ ಹ್ಯಾಪಿ ಆಗಿದೆ. ದೇವರ ಧಯದಿಂದ ನಮಗೂ ಬದುಕೋ ಹಕ್ಕು ಬಂತಲ್ಲಾ ಅಂತ ಅವರಿಗೆಲ್ಲಾ ಖುಷಿಯಾಗಿದ್ದಾರೆ,ಅವರಿಗೆಲ್ಲಾ ಈಗ ನಿಜವಾದ ಸ್ವಾತಂತ್ರ ಬಂಥಂತೆ ಅಂಥ ನಕ್ಕರು ಅಂಜಲಿ ಗೋಪಾಲನ್..
ಅವರಿಗೂ ಒಂದು ಥ್ಯಾಂಕ್ಸ್ ಹೇಳಿ ಹೊರಡೋಕೆ ಮುಂದಾದೆವು. ಹೊರಡುವ ಮುನ್ನ ನಮ್ಮ ಸಂಸ್ಥೆಯನ್ನ ನೋಡಿ ಹೋಗಿ ಅಂಥ ಹೇಳಿದರು. 'ನೋಡಿ ಇಲ್ಲಿರೋ ಮಕ್ಕಳೆಲ್ಲಾ ಹೆಚ್ ಐ ವಿ ಪೀಡಿತರು, ಟೀಚರ್ ಗಳು ಮತ್ತು ನನ್ನ ಹೊರತಾಗಿ ' ಅಂತ ಗಂಭೀರವಾಗಿ ಹೇಳಿದರು. ಅಲ್ಲಿ ಸ್ವಚ್ಚಂದವಾಗಿ ಆಡಿಕೊಂಡಿದ್ದ ದೇಶದ ವಿವಿಧ ಪ್ರದೇಶದ ಮಕ್ಕಳು ಇದ್ದರು. ಕಿಲಾಕಿಲಾ ಅಂತ ಆಡಿಕೊಂಡಿದ್ದರು. ನಮ್ಮನ್ನ ನೋಡಿ ಹಲೋ, ಹಲೋ ಅಂಕಲ್ ಅಂತ ಅಂತಿದ್ದರು. ನಾನೂ ಅವರನ್ನ ನೋಡಿ ಹಲೋ ಅಂತಿದ್ದೆ. ಯಾಕೋ ಅವರನ್ನ ನೋಡಿ ನೋವಾಗೋದು. ಒಂತರಾ ಕಸಿವಿಸಿ ಆಗೋದು.

ಕಾರು ಹತ್ತಿ ವಾಪಸ್ಸು ಬರುವಾಗ ನಮ್ಮ ಕ್ಯಾಮರಾ ಮನ್ ಪಪ್ಪು "ಆರ್ಕುಟ್ ನೋಡುತ್ತಿದ್ದ ಹುಡುಗಿಯರು ಬಹುತ್ ಅಚ್ಚಾ ತಾ ನಾ... ಅಂದ'. ನಾನು 'ಅಚ್ಚಾತ... ಆದ್ರೆ ಅವರಿಗೆಲ್ಲಾ ಎಚ್ ಐ ವಿ ಇದೆ ಅಂದೆ'. ಹಿಂದಿ ಬಾಷೆಯವನಾದ ಅವನಿಗೆ ನಾನು ಅಷ್ಟೊತ್ತು ಸಂಬಾಷಿಸಿದ್ದ
ಇಂಗ್ಲೀಷ್ ಅರ್ಥ ಆಗಿರಲಿಲ್ಲ. ಯಾವುದೋ ಸ್ಕೂಲ್ ಬಗ್ಗೆ ಸ್ಟೋರಿ ಮಾಡ್ತಾ ಇದ್ದೀವಿ ಅಂತ ತಿಳ್ಕಂಡಿದ್ದ. ಮಕ್ಕಳೆಲ್ಲ ಪೀಡಿತರು ಎಂಬ ವಿಷಯ ತಿಳಿದ ಮೇಲೆ ಗಾಭರಿಯಾದ.

ನಾನು ಏನು ಹೇಳಕ್ಕೆ ಹೊರಟೆ ಅಂತ ಈಗ ಗೊತ್ತಾಯ್ತಾ.. ಆಗಲಿಲ್ಲ ಅಂದ್ರೆ ನಮಗೆ ಅನ್ನಿಸಿದ್ದೇ ಸರಿ ಅಂಥ ತಿಳ್ಕೊಳ್ಳೋದು ತಪ್ಪು. ನಿಮಗೆ ಗೊತ್ತಿರುವ ಡಾಕ್ಟರ್ ಗಳು, ಇಲ್ಲಾ ವಿಷಯದ ಬಗ್ಗೆ ಅರಿತರ ಹತ್ತಿರ ವಿಷಯ ಏನಂತಾ ತಿಳಕೊಂಡು ನಿಮ್ಮದೇ ತೀರ್ಮಾನಕ್ಕೆ ಬನ್ನಿ ಯಾರೋ ಸ್ವಾಮಿ, ಪಾದ್ರಿ, ಮುಲ್ಲಾ ಹೇಳ್ತಾರೆ ಅಂತ ನಾವು ಕನ್ಲೂಕುಶನ್ನಿಗೆ ಬರೋದು ಸೈಂಟಿಫಿಕ್ ಆಗಿ ತಪ್ಪಾಗುತ್ತೇ... ಅಲ್ವಾ...!!



7 comments:

  1. ಮಗ ನಿಜ ಏನು ಅಂತ ತೋರಿಸಿದ್ದಿಯ... ಹುಟ್ಟು, ಪ್ರಕೃತಿ ಎರಡು ತುಂಬ ವಿಚಿತ್ರ.. ಹೀಗೆ ಅಂತ ಏನು ಹೇಳೋಕ್ಕೆ ಆಗಲ್ಲ... When court gave this judgment I was oppose for this.. After knowing the truth, they also human, they need that.. It is a good verdict.. Live and let live...

    ReplyDelete
  2. good write up

    sreeja

    ReplyDelete
  3. gowdre...nice writing to know diffrence..b/w higeda & gay

    ReplyDelete
  4. ಮಾನವೀಯ ಅಂತಃಕರಣ ಮೆರೆದಿದ್ದಿರಲ್ಲ!! ಶ್ರೀನಿವಾಸ್ ನೀವು, ನಿಮ್ಮ ಬಗ್ಗೆ ನಮಗೆ ಹೆಮ್ಮೆ ಅನ್ನಿಸುತ್ತೆ ನಮಗೆ.
    ಸಾಮಾಜಿಕ ಕಾಳಜಿಯುಳ್ಳ ನಿಮ್ಮ ಬರಹಗಳು ಮೌಡ್ಯರ ಕಣ್ಣು ತೆರೆಸಲಿ...ನಿನ್ನ ನಿರುಪಣೆಯು ಸೊಗಸಾಗಿ ಮೂಡಿ ಬಂದಿದೆ.ಕೆಲ ವಿಷಯಗಳು ಹಾಗೆ ಮನಸಿನಾಳದಿಂದ ಹೊರ ಹೊಮ್ಮುತ್ತವೆ ಭಾವಲಹರಿಯಾಗಿ ಏನಂತೀರಿ....

    ReplyDelete
  5. Sandarshana odi thumba kushi aytu,adara jothe nimma manadaalada maatugalu chennagive,ondu kushi nanage enendare vishayada sampoorna arivaagiddu.sada heege hariyutirali nimma barahada hole

    ReplyDelete
  6. thank you for the articles but my request please use the words correctly sir,some words irritates us.i know your telling the right things but tell in the right way with right words.

    ReplyDelete