Tuesday, August 4, 2009

ಶಿವರಾಜ್ ಪಾಟೀಲ್ ಇನ್ ಮೇಕಿಂಗ್..



ಇವತ್ತು ಡಿಫೆನ್ಸ್ ಮಿನಿಸ್ಟ್ರಿಯಲ್ಲಿ ಯುವ ಎಂಪಿ ಗಳಿಗಾಗಿ ಪ್ರಯೋಜಿಸಿದ್ದ ಟೆರಿಟೋರಿಯಲ್ ಆರ್ಮಿಗೆ ಸಂಭಂದಿಸಿದ ಕಾರ್ಯಾಗಾರಕ್ಕೆ ಸೌಥ್ ಬ್ಲಾಕ್ ಗೆ ಹೋಗಿದ್ದೆ, ನಿಮಗೆ ತಿಳಿದಿದೆಯೋ ಇಲ್ಲವೋ ಕೇಂದ್ರ ಸರ್ಕಾರದ ಅತ್ಯಂತ ಪ್ರಮುಖ ಇಲಾಖೆಗಳಾದ, ಪ್ರೈಂ ಮಿನಿಸ್ಟರ್ ಆಫೀಸ್(ಪಿಎಂಓ), ಡಿಪೆನ್ಸ್, ಮತ್ತು ವಿದೇಶಾಂಗ ಖಾತೆ ಸೌಥ್ ಬ್ಲಾಕ್ ನಲ್ಲಿವೆ. ನಾರ್ಥ್ ಬ್ಲಾಕ್ ನಲ್ಲಿ ಅರ್ಥ ಸಚಿವಾಲಯ ಮತ್ತು ಗೃಹ ಖಾತೆಗಳ ಕಚೇರಿಗಳಿವೆ. ಇವು ಕೇಂದ್ರ ಸರ್ಕಾರದ ಅತ್ಯಂತ ಸೂಕ್ಷ್ಮ, ಜವಾಬ್ದಾರಿಯುತ, ಘನತೆ ಉಳ್ಳ ಇಲಾಖೆಗಳು.. ರಾಷ್ಠ್ರಪತಿ ಭವನದ ಎದುರು ಕಾಣುವ ಉದ್ದನೆಯ ರಸ್ತೆಯ ಆಜುಬಾಜಿನಲ್ಲಿ ಹರಡಿರುವ ಸುಂದರ ಕಟ್ಟಡಗಳಲ್ಲಿ ಈ ಇಲಾಖೆಗಳು ಇವೆ. ಸಾಮಾನ್ಯವಾಗಿ ಟಿವಿಯಲ್ಲಿ ದೆಹಲಿ ಸುದ್ದಿಗಳು ಬಂದಾಗ ಇವನ್ನ ನೋಡಿರುತ್ತೀರಿ.

ಈ ಇಲಾಖೆಗಳನ್ನ ನಿಭಾಯಿಸೋದು, ಅಥವಾ ಈ ಇಲಾಖೆಗಳ ಮಂತ್ರಿಗಳಾಗೋದು ಅಷ್ಟೇನು ಸುಲಭದ ವಿಚಾರವಂತೂ ಅಲ್ಲ. ದೇಶವನ್ನು ಮುನ್ನಡೆಸುವ, ಅಥವಾ ಹಿನ್ನಡೆಸುವ ಶಕ್ತಿ ಈ ಇಲಾಖೆಗಳ ಮೇಲಿದೆ. ಆಡಳಿತದಲ್ಲಿ ನಿಪುಣರು, ಅನುಭವಿಗಳು, ಚಾಣಾಕ್ಷ ಮಂದಿ ಇಂತಹ ಇಲಾಖೆಗಳ ಮಂತ್ರಿಯಾಗಿ ಆಯ್ಕೆಯಾಗುವುದು ಹಿಂದಿನಿಂದ ನಡೆದುಕೊಂಡು ಬಂದಿದೆ.

ಗಮನಿಸಿ ನೋಡಿ, ಈ ಬಾರಿ ಇಂತಹ ಪ್ರಮುಖ ಮೂರು ಖಾತೆಗಳನ್ನು ನಿಭಾಯಿಸುತ್ತಿರುವ ಮೂರು ಮಂದಿ ದಕ್ಷಿಣ ಬಾರತೀಯರು, ಇನ್ನೊಬ್ಬರು ಬಂಗಾಳಿ.
ಗೃಹ ಇಲಾಖೆ ತಮಿಳುನಾಡಿನ ಚಿದಂಬರಂ, ಭದ್ರತಾ ಇಲಾಖೆ ಕೇರಳದ ಎ.ಕೆ. ಆಂಟನಿ. ವಿದೇಶಾಂಗ ಖಾತೆ ಕನ್ನಡಿಗ ಎಸ್.ಎಂ.ಕೃಷ್ಣ. ಉಳಿದದ್ದು ಹಣಕಾಸು ಬಂಗಾಳಿ ಪಂಡಿತ ಪ್ರಣಬ್ ಮುಖರ್ಜಿ ಕೈಯಲ್ಲಿದೆ.
ಇಲ್ಲಿ ಉತ್ತರ ಬಾರತದವರು ಯಾರೂ ಇಲ್ಲ ಅನ್ನೊದು ಚರ್ಚೆಯ ವಿಷಯ ಕೂಡ. ಅದೇ ವಿಚಾರಕ್ಕೆ ಉತ್ತರ ಭಾರತದ ಹಲವು ಕಾಂಗ್ರೆಸ್ ನಾಯಕರ ಹೊಟ್ಟೆ ಕೆಂಪಾಗಿರೋದರಲ್ಲಿ ಅಚ್ಚರಿಪಡುವುದೇನೂ ಇಲ್ಲ .

ನಾನು ಹೇಳಬೇಕಾಗಿರುವ ಗುಟ್ಟು ದೆಹಲಿ ರಾಜಕೀಯದ ಕಾರಿಡಾರುಗಳಲ್ಲಿ ಹೊರಳಾಡುತ್ತಿರುವ, ಪತ್ರಕರ್ತ ಸಮೂಹದಲ್ಲಿ ಚರ್ಚೆಗೆ ಒಳಗಾಗಿರುವ ವಿಶಯ ನಮ್ಮವರೊಬ್ಬರಿಗೆ ಸಂಭದಿಸಿದ್ದು. ದೆಹಲಿಯ ಬಿರುಬಿಸಿನಲ್ಲಿ ಆರಂಭವಾದ ಮೊದಲ ಅಧಿವೇಶನ ಇನ್ನೇನು ಮುಗಿಯುತ್ತಾ ಬಂದಿದೆ. ಹೊಸ ಹೊಸ ಮಂತ್ರಿಗಳು ಹೊಸ ಹೊಸ ಬಿಲ್ಲು, ಚರ್ಚೆ. ಅಂತೆಲ್ಲಾ ಮಿಂಚಿದ್ದಾರೆ, ಕೆಲವರು ತಮ್ಮ ಶಕ್ತಿಯನ್ನ, ಬುದ್ದಿವಂತೆಕೆಯನ್ನ ಪ್ರದರ್ಶನ ಇಟ್ಟಿದ್ದಾರೆ. ಕೆಲವರು ಗುಡ್ ಅನಿಸಿಕೊಂಡರೇ ಕೆಲವರೂ ಇನ್ನೂ ವೀಕ್ ಅನ್ನಿಸಿಕೊಂಡಿದ್ದಾರೆ.

ಈ ಮದ್ಯೆ ಎಸ್.ಎಂ. ಕೃಷ್ಣ ಅವರ ಬಗ್ಗೆ ರಾಜಕೀಯದ ಕಾರಿಡಾರುಗಳಲ್ಲಿ ಗುಸು ಗುಸು ಆರಂಭವಾಗಿದೆ, ಅವರನ್ನ ಮುಖ್ಯಮಂತ್ರಿಯಾಗಿ ನೋಡಿದ್ದವರಿಗೆ ಅರ್ಥವೇ ಆಗದಷ್ಟು ಎಸ್.ಎಂ.ಕೃಷ್ಣ ಪೇಲವವಾಗಿ ಕಾಣುತ್ತಾ ಇದ್ದಾರೆ, ಅವರು ಓಥ್ ತೆಗೆದುಕೊಂಡ ದಿನದ ಉತ್ಸಾಹ ಯಾಕೋ ಕಾಣುತ್ತಾ ಇಲ್ಲ. ರಾಜಕೀಯದಲ್ಲಿನ ಅವರ ಅಗಾಧ ಅನುಭವ ಅವರ ನೆರವಿಗೆ ಬಂದಂತೆ ಕಾಣುತ್ತಾ ಇಲ್ಲಾ ಅನ್ನೊದು ಅವರನ್ನು ಬಹಳ ವರ್ಷಗಳಿಂದ ಬಲ್ಲವರ ಅಭಿಪ್ರಾಯ.

ಅದರೇ ಅವರ ವಿರೋಧಿಗಳು, ಅವರನ್ನ ಕಳೆದ ಲೋಕಸಭೆಯಲ್ಲಿ ಗೃಹ ಮಂತ್ರಿಯಾಗಿ ಮುಂಬೈ ದಾಳಿಯ ನಂತರ ರಾಜೀನಾಮೆ ಕೊಟ್ಟ ಶಿವರಾಜ ಪಾಟೀಲರಿಗೆ ಕೃಷ್ಣರನ್ನು ಹೋಲಿಸುತ್ತಿದ್ದಾರ . He is not impressive , he is Shivraaj patil in making ಅಂಥ ಮಾತಾಡಿಕೊಳ್ಳುತ್ತಾ ಇದ್ದಾರೆ.

ಶಿವರಾಜ್ ಪಾಟೀಲರು ಮುಂಬೈ ದಾಳಿ ಆದ ದಿನವೂ ನಾಲ್ಕು ಬಾರಿ ಡ್ರೆಸ್ ಚೇಂಜ್ ಮಾಡಿಕೊಂಡು ಮಾದ್ಯಮದವರೊಂದಿಗೆ ಮಾತನಾಡಿದ್ದರಂತೆ. ಸದಾ ಸುಮಂಗಲಿ ತರಹ ನೀಟಾಗಿ ಡ್ರೆಸ್ ಮಾಡುತ್ತಿದ್ದ ಅವರು ಶೋಕಿವಾಲ. ಮುಂಬೈ ದಾಳಿ ಆದ ದಿನ ಶಿವರಾಜ್ ಪಾಟೀಲರೂ ನಾಲ್ಕು ಬಾರಿ ಬಟ್ಟೆ ಬದಲಾಯಿಸಿದ್ದನ್ನೇ ಸೂಕ್ಷ್ಮ ಗ್ರಹಿಕೆಯ ಪತ್ರಕರ್ತನೊಬ್ಬ ವರದಿ ಮಾಡಿದ್ದ. ಅದೇ ಶಿವರಾಜ್ ಪಾಟೀಲರಿಂದ ಕಾಂಗ್ರೇಸ್ ರಾಜೀನಾಮೆ ಕೇಳಲಿಕ್ಕೆ ಕಾರಣ ಅಂಥ ಕೂಡ ಹೇಳುತ್ತಾರೆ.

ಈಗ ತಾನೆ ಎಸ್.ಎಂ.ಕೃಷ್ಣ ವಿರುದ್ದ ದೆಹಲಿಯಲ್ಲಿ ಅಭಿಪ್ರಾಯ ರೂಪುಗೊಳ್ಳುತ್ತಾ ಇದೆ, ವಿದೇಶಾಂಗ ಖಾತೆಯನ್ನು ಪಡೆದಿರುವ ಅವರು ಈವರೆಗೆ ಒಂದೇ ಒಂದು ಸಾರಿ ಇಂಪ್ರೆಸ್ ಮಾಡುವ ರೀತಿ ಮಾತಾಡಿಲ್ಲ, ಅಹಾ ಕೃಷ್ಣ ಎಷ್ಟು ಚಾಲಾಕು ಗುರು ಅಂತ ಹೇಳುವಂತೆಯೂ ಇಲ್ಲ, ಅನುಭವ ಎಲ್ಲಿ ಹೋಯಿತೋ ಗೊತ್ತಾಗುತ್ತಾ ಇಲ್ಲ.
ಎಲ್ಲಾಪ್ಪಾ ಮಾಯವಾಯಿತು ಇವರ ಅನುಭವ, ಚಾಲಾಕು ತನ ಅನ್ನೊ ಅನುಮಾನ ಬರುವಂತೆ ಆಗಿದೆ.


ಅವರು ಅಧಿಕಾರಕ್ಕೆ ಬಂದ ದಿನ ಕರ್ನಾಟಕ ಭವನದಲ್ಲಿ ಪತ್ರಿಕಾಗೋಷ್ಠಿ ನಡೆಸಿದ್ದರು. ಮೊದಲ ದಿನ ಇಲಾಖೆ ಅಧಿಕಾರಿಗಳು ಬರೆದುಕೊಟ್ಟಿದ್ದನ್ನ ಓದಿ, ನಾನು ಈ ಇಲಾಖೆಗೆ ಹೊಸಬ ಮುಂದೆ ನಿಮ್ಮ ಎಲ್ಲಾ ಪ್ರಶ್ನೆಗಳಿಗೆ ಉತ್ತರಿಸುತ್ತೇನೆ ಅಂದಾಗ ಪತ್ರಕರ್ತರಿಗೂ ಖುಷಿಯಾಗಿತ್ತು. ನಾವು ಅಂದುಕೊಂಡಿದ್ದೆವು ಕೃಷ್ಣ ಅವರಿಗೆ ತಕ್ಕ ಇಲಾಖೆ ಸಿಕ್ಕಿದೆ ಅಂತ, ಆದರೆ ಈಗ ಏನಾಗಿದೆ ನೋಡಿ ಕೃಷ್ಣ ಇನ್ನೂ ಅಧಿಕಾರಿಗಳು ಬರೆದುದ್ದನ್ನೇ ಓದುತ್ತಾ ಇದ್ದಾರೆ, ಪಾರ್ಲಿಮೆಂಟಿನಲ್ಲಿ ಪದೇ ಪದೇ ಇಕ್ಕಟ್ಟಿಗೆ ಸಿಕ್ಕಿಕೊಳ್ಳುತ್ತಾ ಇದ್ದಾರೆ ಕನಿಷ್ಠ ಹತ್ತು ನಿಮಿಶವೂ ಸ್ವಂತಕ್ಕೆ ಸ್ಪಾಂಟೇನಿಯಸ್ ಆಗಿ ಮಾತಾಡೋಕೆ ಆಗಿಲ್ಲ.

ಬಿಜೆಪಿಯ ಘಟಾನು ಗಟಿಗಳು ಈಗ ಕೃಷ್ಣಾ ಅವರ ಮೇಲೆ ಕಣ್ಣಿಟ್ಟಿದ್ದಾರಂತೆ. ಅವರ ತಂತ್ರಕ್ಕೆ ಮೊದಲ ಬಲಿ ಇವರನ್ನೇ ಮಾಡೋಕೆ ತಂತ್ರ ಹೆಣೆದಿದ್ದಾರೆ.

ಹಿಲರಿ ಕ್ಲಿಂಟನ್ ಬಂದಾಗ ಅವರಿಗೆ ಸರಿಸಾಟಿಯಾಗಿ ಕೃಷ್ಣ ಮಿಂಚಲಿಲ್ಲ, ಕಂಡಲೆಲ್ಲ ನಗುತ್ತಾ ಕಾಣಿಸಿಕೊಳ್ಳುತ್ತಿದ್ದ ಹಿಲರಿಯ ಡಿಪ್ಲೋಮಸಿ ಕೃಷ್ಣ ನಡುವಳಿಕೆಯಲ್ಲಿ ಕಾಣಲಿಲ್ಲ ಅಂತ ಪರ್ತಕರ್ತರೂ ಮಾತಾಡಿಕೊಳ್ಳುತ್ತಾ ಇದ್ದಾರೆ. ಯಾವಾಗಲೂ ಕೃಷ್ಣ ಗೆಲುವಿನಿಂದ ಕಾಣಿಸಲೇ ಇಲ್ಲ, ಬಲೂಚಿಸ್ಥಾನದ ಪ್ರಕರಣವನ್ನು ನಿಭಾಯಿಸಲು ಕೃಷ್ಣ ಹೆಣಗುತ್ತಿದ್ದಾರೆ, ಪ್ರಣಬ್ ಈಗ ಕೃಷ್ಣ ನೆರವಿಗೆ ಬರಬೇಕಾಗಿದೆ. ಅಧಿಕಾರಿಗಳು ಬರೆದುಕೊಟ್ಟಿದ್ದನೇ ಬಗ್ಗಿ ಬಗ್ಗಿ ಓದೋಕೆ ಕೃಷ್ಣಾ ಬೇಕಿಲ್ಲ ಅಲ್ಲವಾ..

ವಿದೇಶಾಂಗ ಇಲಾಖೆಯನ್ನ ಅತ್ಯಂತ ಕಠಿಣ ಸಂದರ್ಭದಲ್ಲಿ ನಿಭಾಯಿಸಿದ ಪ್ರಣಬ್ ನಡವಳಿಕೆ ನೋಡಿರಬೇಕು, ಆ ಬಂಗಾಳಿ ಮುದುಕ ಬಾರಿ ಚಾಲಾಕು. ಅಗ್ರೆಸೀವ್, ಮತ್ತು ಅನುಭವಿ . ಮುಂಬೈ ಧಾಳಿ ನಡೆದಾಗ ಪಾಕಿಸ್ತಾನದ ಬಗ್ಗೆ ಪದೇ ಪದೇ ಹೇಳಿಕೆ ನೀಡಿದ್ದನ್ನು ನೀವು ನೋಡಿರಬಹುದು, ಆದರೆ ಅಂತಹದೇ ಸಂದರ್ಭ ಬಂದರೆ ಕೃಷ್ಣ ಹೇಗೆ ನಿಭಾಯಿಸುತ್ತಾರೋ ನೋಡಬೇಕು.

ಅದೇ ಮಲ್ಲಿಕಾರ್ಜುನ ಖರ್ಗೆ ಪಾರ್ಲಿಮೆಂಟಿನಲ್ಲಿ ಮಿಂಚಿದ್ದಾರೆ, ಅವರು ಪಾರ್ಲಿಮೆಂಟಿನಲ್ಲಿ ಸಿಪಿಎಂ ನ ಗುರುದಾಸ್ ಗುಪ್ತಾ ಅವರಿಗೆ ನೀಡಿದ ಉತ್ತರ ಮತ್ತು ಮಾತಾಡಿದ ಪರಿಗೆ ಸೋನಿಯಾಗಾಂದಿ ಕಣ್ಣು ಮಿಟುಕಿಸಿ ಚೆನ್ನಾಗಿದೆ ಅಂದರಂತೆ, ಅದೇ ಅಲ್ಲ ಮನಮೋಹನ ಸಿಂಗ್ ಖರ್ಗೆ ಅವರಿಗೆ ಕರೆ ಮಾಡಿ ಭೇಷ್ ಅಂದರಂತೆ.

ಸದ್ಯಕ್ಕೆ ಅತೀ ಸೂಕ್ಷ್ಮ ವಿಷಯಗಳಾದ ಪಾಕಿಸ್ಥಾನ, ಚೀನಾ. ಅಮೇರಿಕಾ. ಆಸ್ಟ್ರೇಲಿಯಾ ಕುರಿತು ತರೋ ಆಗಿ ತಿಳಿದುಕೊಳ್ಳೊಕೆ ಕೃಷ್ಣ ಅವರಿಗೆ ಎಷ್ಠು ದಿನಬೇಕಾಗಿದೆಯೋ ಗೊತ್ತಿಲ್ಲ.
ಮೀಡಿಯಾಗಳಿಗೆ ಮಾತಾಡುವ ಅವರ ಕಲೆ ಅವರಿಗೆ ಮರೆತುಹೊಯಿತಾ ಗೊತ್ತಿಲ್ಲಾ..

ವಿದೇಶಾಂಗ ಖಾತೆಯನ್ನು ದಿನವೂ ಕವರ್ ಮಾಡುವ ಹಿಂದಿ ಚಾನಲ್ಲಿನ ಗೆಳಯನೊಬ್ಬ ಇವತ್ತು ನನ್ನ ಕೇಳಿದ 'ವಾಟ್ ಹ್ಯಾಪನ್ಡ್ ಟು ಯುವರ್ ಕೃಷ್ಣ, ವೈ ಹಿ ಈಸ್ ಸೋ ಅನ್ ಇಂಪ್ರಸೀವ್, ಹಿ ಈಸ್ ಶಿವರಾಜ್ ಪಾಟೀಲ್ ಇನ್ ಮೇಕಿಂಗ್, ಹಿ ಈಸ್ ಗೋಯಿಂಗ್ ಲೂಸ್ ಇಸ್ ಮಿನಿಷ್ಟ್ರೀ ಶಾರ್ಟಲಿ'. ಅಂದ.

ನಾನು 'ಯಾಕಪ್ಪ' ಅಂದೆ. 'ಅದಕ್ಕೆ ಅವನು ನಾನೇಳೋದನ್ನ ಬರೆದಿಟ್ಟುಕೋ. ಕೃಷ್ಣ ಹಿಂಗೆ ಮುಂದುವರೆದರೆ ನಾಲ್ಕು ತಿಂಗಳಲ್ಲಿ ಮನೆಗೆ ಹೋಗ್ತಾರೆ' ಅಂದ. 'ಇಲಾಖೆಯಲ್ಲಿ ಪಳಗಿರೋ ಅಧಿಕಾರಿಗಳಿಗೇ ಉತ್ಸಾಹ ಹೋಗಿದೆ, ಕೃಷ್ಣ ಅವರ ಬಗ್ಗೆ ಅವರು ಬಂದಾಗ ಇದ್ದ ಒಪಿನಿಯನ್ ಈಗ ಇಲ್ಲವಾಗಿದೆ. ಅವರು ಪಾರಿನ್ ಅಲ್ಲಿ ಕಲಿತದ್ದು ಎಲ್ಲಾ ಎಲ್ಲಿಹೋಯಿತು ಅಂಥ ಅಧಿಕಾರಿಗಳಿಗೆ ತಿಳಿತಾ ಇಲ್ಲಾ' ಅಂದ.

ಕಡೆಗೆ 'ಅದ್ಯಾರೋ ಕೃಷ್ಣಾ ಅವರಿಗೆ ಅಡ್ವೈಸರ್ ಆಗಿ ರಾಘವೇಂದ್ರ ಶಾಸ್ತ್ರಿ ಇದಾರಲ್ಲ ಅವರಿಂದಲೇ ಇದೆಲ್ಲ ಆಗಿರೋದು, ಇಲಾಖೆಯಲ್ಲಿ ಪಳಗಿರೋ ಮಹಾನ್ ಬುದ್ದಿವಂತ ಅಧಿಕಾರಿಗಳನ್ನೇ ಆತ ಕೃಷ್ಣರಿಂದ ದೂರ ಇಟ್ಟಿದ್ದಾನೆ. ಯಾರನ್ನೂ ಕೃಷ್ಣ ಅವರ ಹತ್ತಿರ ಸುಳಿಯೋಕು ಬಿಡುತ್ತಾ ಇಲ್ಲ. ಎಲ್ಲೋ ಪೇಜಸ್ ನಲ್ಲಿದ್ದವ ವಿದೇಶಾಂಗ ಖಾತೆ ನೋಡಿಕೊಂಡ್ರೇ ಏನುಗುತ್ತೇ ಹೇಳಿ. ಆತ ಕೃಷ್ಣ ಅವರ ಒಂದು ಕಿವಿಯನ್ನ ಆತ ಹೈಜಾಕ್ ಮಾಡಿದ್ದಾನೆ. ಇನ್ನೊಂದು ಕಿವಿ ಸರಿಯಾಗಿ ಕೇಳೋಲ್ಲ' ಅಂತ ಹೇಳಿ ನಕ್ಕ. ಜೊತೆಗೆ ರಾಘವೇಂದ್ರ ಶಾಸ್ತ್ರಿ ಯ ಕಾರಣಕ್ಕೆ ಕೃಷ್ಣ ವೈಪಲ್ಯ ಆದರೂ ಅಚ್ಚರಿ ಇಲ್ಲಾ ನೋಡಿ, ಅಂಥ ಹೇಳಿ ಕಡೆಗೆ
ನನ್ನನ್ನೇ ಪ್ರಶ್ನಿಸಿದ ವಾಟ್ ಯ್ಯಾಪನ್ಡ್ ಟು ಕೃಷ್ಣಾ ಅಂತ. ನನಗೂ ಏನು ಹೇಳಬೇಕೋ ತಿಳಿಯದೇ ಐ ಡೋಂಟ್ ನೋ ಅಂದೆ.



10 comments:

  1. ಕೃಷ್ಣ ಪಾಪ ಬಯಸದೆ ಬಂದ ಖಾತೆಯನ್ನ ಚಾಲಾಕಿತನದಿಂದ ನಿಭಾಯಿಸಲಾಗದೆ ಹೆಣಗುತಿದ್ದಾರೆ.ನನಗಿರುವ ಕುತೂಹಲ ಅಂದರೆ.what will happend to him ಅನ್ನೋದಕಿಂತ ಪಕ್ಷದ ವತಿಯಿಂದ what will happen to him ಅನ್ನೋದು ಕಾಯೋಣ....

    ReplyDelete
  2. ಮೊನ್ನೆ ಲೋಕಸಭೆಯಲ್ಲಿ, ಯಶ್ವಂತ್ ಸಿನ್ಹಾ, ಕೃಷ್ಣಾ ಯಾಕೆ ಮಾತಾಡ್ತಾ ಇಲ್ಲಾ.. ವಿದೇಶಾಂಗ ಖಾತೆಗೆ ಸಂಬದ್ಧಪಟ್ಟ ವಿಷಯಗಳಿಗೆ ಪ್ರಣಬ್ ಯಾಕೆ ಉತ್ತರಿಸಬೇಕು? ಎಂದಿದ್ದು ಪತ್ರಿಕೆಗಳಲ್ಲಿ ಪ್ರಮುಖ ಸುದ್ದಿಯಾಗಿ ಪ್ರಕಟವಾಗಿದ್ದನ್ನು ನೋಡಿದ್ದೆ. ನೀವು ಕೄಷ್ಣಾರ ಹಿಂದೆ, ಮುಂದೆ ನಡೆಯುತ್ತಿರುವ ವಿಷಯಗಳನ್ನು ಚೆನ್ನಾಗಿ ತಿಳಿಸಿದ್ದೀರ!

    ReplyDelete
  3. ಗೌಡ ಈಗ ನೀನು ತುಂಬ ಸೂಕ್ಷ್ಮ ವಿಚಾರಗಳನ್ನ ತುಂಬ ಚೆನ್ನಾಗಿ ಬರೆಯುತ್ತಿದ್ದಿಯ.. ದೆಹಲಿ ರಾಜಕೀಯ ನೀನಗೆ ತುಂಬ ಚೆನ್ನಾಗಿ ಅರ್ಥ ಆಗುತ್ತಿದೆ... ನಮಗೂ ಅರ್ಥೈಸುತ್ತಿದ್ದಿಯ...
    ಕೃಷ್ಣನ ರಾಜಕೀಯ ಮುಗಿಯುವ ಅಂತ ತಲುಪಿದೆ ಅನ್ನಿಸುತ್ತಿದೆ. ಕೃಷ್ಣ ಎಲ್ಲಿಯೂ ಕಾಣಿಸುತ್ತಿಲ್ಲ ಅನ್ನೋದು ಕೇಳಿಬರುತ್ತಿದ್ದ ವಿಷಯ... ಉತ್ತರ ಭಾರತದ ಜನ ದಕ್ಷಿಣ ಭಾರತದವರನ್ನ ಬೆಳೆಯಲು ಬಿಡೋಲ್ಲ.. ಕೃಷ್ಣನ ಚಾಲಾಕುತನ ಮುಗಿಯುತ್ತ ಬಂದಿದೆ... ನೋಡೋಣ

    ReplyDelete
  4. ಕೃಷ್ಣರ ಬಗೆಗೆ ತುಂಬ ಆಸೆ ಇಟ್ಕೊಂಡಿದ್ದೆ, ಚಾಲಾಕಿ ವಿದೇಶ ಮಂತ್ರಿ ಆಕ್ತಾರೆ ಅಂತ. ಆದರೀಗ ನಿರಾಸೆ ಆಗಿದೆ.

    ReplyDelete
  5. Hello Srini,

    tumba chennagide nimma baravanige

    Good luck

    ReplyDelete
  6. Super Article ..srinivas.

    -Subodh

    ReplyDelete
  7. ಶ್ರೀ ಕೃಷ್ಣ ದರ್ಶನ ಅಮೋಘವಾಗಿದೆ...
    ಅಂದಹಾಗೆ ಖಾಸಗಿ ಡೈರಿ ಅಂಥ ಹೇಳಿ ಪ್ರಪಂಚ ತೋರಿಸ್ತಾಯಿದ್ದೀರಲ್ಲಾ?
    ಇರಲಿ ಮುಂದುವರೆಸಿ.

    ReplyDelete
  8. Prapanchada bagge Khaasagidiary baraha SIR.Thanks Fr comment.

    ReplyDelete
  9. ಗೌಡ, ಕೃಷ್ಣನ ಬಗ್ಗೆಯಂತೂ ಗೊತ್ತಿಲ್ಲ. ಆದರೆ ಶಾಸ್ತ್ರಿಗೆ ಮಾತ್ರ ಸಿಕ್ಕಾಪಟ್ಟೆ ...ಕ ಗಾಂಚಾಲಿ ಇದೆ. ಕೃಷ್ಣರ ಚೌಲ ಮಾಡಿಸಿದ್ದು, ಸ್ಕೂಲಿನಲ್ಲಿ ಓದಿಸಿದ್ದು, ವಿದೇಶಕ್ಕೆ ಕಳಿಸಿದ್ದು, ರಾಜಕ್ಕೀಯಕ್ಕಿಳಿಸಿದ್ದು, ಸಿ.ಎಂ. ಮಾಡಿದ್ದು ಎಲ್ಲ ತಾನೇ ಎಂಬಂತೆ ಆಡುತ್ತಾನೆ. ಇದನ್ನು ನೋಡಿದರೆ ಎಂತೆಂತಹ ಘಟನಾಘಟಿಗಳು ತಮ್ಮ ಸಲಹೆಗಾರರ ಕಾರಣದಿಂದ ಪರದೇಸಿಗಳಾಗುತ್ತರೆ ಎಂದು ಖೇದವೆನಿಸುತ್ತದೆ.
    -ಸುಘೋಷ್ ಎಸ್. ನಿಗಳೆ.

    ReplyDelete
  10. Dear Gowda,
    ನಿನ್ನ ಬರವಣಿಗೆಯ ಶ್ಯಲಿ ಮತ್ತ್ಹು ವಿಚಾರವನ್ನು ಗ್ರಹಿಸುವ ರೀತಿ ತುಂಬಾ ಚೆನ್ನಾಗಿ ಇದೆ . ನಿನ್ನ ಬರವಣಿಗೆಯಲ್ಲಿ ನುರಿತ & ಅನುಭವಿ ರಾಜಕೀಯ Journalist ge ಇರಬೇಕಾದ ಭಾಷಾ ಪ್ರೌಢಿಮೆ & ಪ್ರತಿಯೊಂದು information ಅನ್ನು ಸಮಗ್ರವಾಗಿ ಕಲೆ ಹಾಕಿ explain ಮಾಡಿರುವ ರೀತಿ ತುಂಬಾ ಚೆನ್ನಾಗಿ ಇದೆ.

    ReplyDelete