Sunday, September 6, 2009

ಉಳ್ಳವರು ಆಗುವರೇನಯ್ಯಾ....?



ಎಂ.ಪಿ. ಪ್ರಕಾಶರ ಒಡನಾಡಿಯಾಗಿರುವ ನನ್ನ ಗೆಳೆಯ ಅನಿಲ್ ಇವತ್ತು ಬೆಳಿಗ್ಗೆ ನನಗೆ ಪೋನ್ ಮಾಡಿ ಹೇಗಿದ್ದೀರಿ ಗೌಡ್ರೇ ಅಂತ ವಿಚಾರಿಸಿದ, ನೀವೇನಪ್ಪಾ ಪತ್ರಕರ್ತರು ಜೀವಮಾನ ಪೂರ್ತಿ ಪ್ರಶ್ನೆ ಹಾಕಿಕೊಂಡೇ ಮಜವಾಗಿ ಇರ್ತಿರಿ ಅಂದ. ನಾನು ನಕ್ಕು 'ಹೌದು ಅನೀಲ್ ಪತ್ರಕರ್ತರಿಗೆ ಸಿಗೋ ಅತಿದೊಡ್ಡ ಸೌಭಾಗ್ಯವೇ ಪ್ರಶ್ನೆ ಹಾಕೋದು. ಈ ವೃತ್ತಿಯಿಂಜ ಕನಿಷ್ಟ ನಮ್ಮ 'ಇಗೋ' ನಾದರೂ ತೃಪ್ತಿಯಾಗುತ್ತೆ' ಅಂದೆ. ಅದಕ್ಕೆ ಪ್ರತಿಕ್ರಿಯಿಸಿದ ಅನಿಲ್ 'ಮೊನ್ನೆ ದೆಹಲಿಗೆ ಬಂದಿದ್ದಾಗ ನೋಡಿದೆ ಕಣಪ್ಪಾ, ನೀನು ಕ್ಯಾಬಿನೆಟ್ ಧರ್ಜೆಯ ಮಂತ್ರಿಯೊಬ್ಬನಿಗೆ ಕಾಲ ಮೇಲೆ ಕಾಲು ಹಾಕಿಕೊಂಡು ಏನ್ರೀ ಸಮಾಚಾರ ಅಂತ ಕೇಳಿದ್ದು' ಅಂದ. ಅದಕ್ಕೆ ನಾನು ಹೇಳಿದೆ. I am Journalist because I enjoy More Demacracy with in Democracy ' ಅಂಥ.

ಭಾನುವಾರದ ಮುಂಜಾನೆಯೇ ಅನಿಲ್ ನೊಂದಿಗಿನ ನನ್ನ ಸಂಭಾಷಣೆ ನನ್ನೊಳಗೆ ಹಲವು ಪ್ರಶ್ನೆಗಳನ್ನು ಎತ್ತಿದ್ದವು. ಕೆಲವಕ್ಕೆ ಉತ್ತರ ಸಿಗದೆ ಗೊಂದಲಕ್ಕೆ ಬಿದ್ದೆ ಅವನ್ನ ಇಲ್ಲಿ ಹರವಿದ್ದೇನೆ.

ಯಾರಾದರೂ ಉದ್ಯಮಿಗಳ ಮಕ್ಕಳು ಪತ್ರಕರ್ತರಾಗಿದ್ದಾರಾ?
ಯಾರಾದರೂ ರಾಜಕಾರಣಿಗಳ ಮಕ್ಕಳು ಪತ್ರಕರ್ತರು ಇದ್ದಾರಾ?
ತುಂಬಾ ಹೆಸರು ಮಾಡಿದ ಸಿನೆಮಾ ನಟರ ಮಕ್ಕಳು ಪತ್ರಕರ್ತರು ಆಗಿದ್ದಾರಾ?
ಕೈತುಂಬಾ ಹಣ ದುಡಿಯುವ ವ್ಯಾಪಾರಿಗಳ ಮಕ್ಕಳು ಆಗಿದ್ದಾರಾ ?
ಸರ್ಕಾರದ ಆಯಕಟ್ಟಿನ ಉದ್ಯೋಗದಲ್ಲಿ ಇದ್ದವರ ಮಕ್ಕಳು, ಖಾಸಗಿ ಕ್ಷೇತ್ರದಲ್ಲಿ ಸಾಕಷ್ಟು ಸಂಪಾದನೆ ಇರುವ ನೌಕರಿಯಲ್ಲಿ ಇರುವವರ ಮಕ್ಕಳು ಪತ್ರಕರ್ತರು ಆಗಿದ್ದಾರ? ಕಟ್ಟಕಡೆಗೆ ಹಣವಂತರ ಮಕ್ಕಳು ಯಾರಾದರೂ ಪತ್ರಿಕಾ ನೌಕರಿಯನ್ನ ಸೀರಿಯಸ್ಸಾಗಿ ತೆಗೆದುಕೊಂಡಿದ್ದಾರಾ ಎಂಬ ಪ್ರಶ್ನೆಯನ್ನನನಗೆ ನಾನೇ ಕೇಳಿಕೊಂಡೆ.

ಸದ್ಯದ ಪರಿಸ್ಥಿತಿಯಲ್ಲಿ ನಾನು ಬಲ್ಲ, ನನಗೆ ಗೊತ್ತಿರುವ ವಲಯದಲ್ಲಿ ಯಾರೂ ಅಂತಹವರು ಇರುವುದು ನನಗೆ ಗುರುತು ಸಿಗಲಿಲ್ಲ.
ಕಡೆಗೆ ನಾನು ಓದಿದ ಕಾಲೇಜುಗಳಲ್ಲಿ ಜರ್ನಲಿಸಂ ಅನ್ನು ನನ್ನ ಜೊತೆಗೆ ಕಲಿತವರನ್ನು, ವೃತ್ತಿಯ ಬಗ್ಗೆ ಒಂತರಾ ಪ್ಯಾಸಿನೇಟ್ ಆಗಿದ್ದವರ ಬಗ್ಗೆ ಯೋಚಿಸಿದೆ. ಬಹುತೇಕರು ಇಲ್ಲಿ ಸಿಗುವ ಅನುಭವಕ್ಕಾಗಿ ಕೆಲಕಾಲ ಕೆಲಸ ಮಾಡಿ ಬೇರೆ ಕೆಲಸ ಹುಡುಕಿಕೊಂಡರು. ಮತ್ತೆ ಕೆಲವು ಹುಡುಗಿಯರು ವಿದೇಶಗಳಲ್ಲಿ ಕೆಲಸದಲ್ಲಿರುವ ಹುಡುಗರೊಂದಿಗೆ ಮದುವೆಯಾಗಿ ಹೋದರು.

ನನ್ನ ಖಾಸಗಿ ವಲಯದಲ್ಲಿ ಅನುಭವಕ್ಕೆ ಬಂದತೆ ಉಳ್ಳವರು ಮಾದ್ಯಮದ ಉದ್ಯೋಗಗಳಲ್ಲಿ ತೊಡಗುವುದು ಕಡಿಮೆ.
ನಿಮ್ಮ ವಲಯದಲ್ಲಿ ಅಂತವರೂ ಇದ್ದರೂ ಇರಬಹುದು. ಆದರೆ ಅಂತಹ ಉದಾಹರಣೆಗಳು ತೀರಾ ಕಡಿಮೆ ಅನ್ನೊದು ನನ್ನ ನಂಬಿಕೆ.

ಯಾಕೆ ಹೀಗೆ, ಪತ್ರಕರ್ತರು ಕೇವಲ ಬಡವರು, ಮದ್ಯಮ ವರ್ಗದವರು, ರೈತರ ಮಕ್ಕಳು ಮಾಡೋ ಕೆಲಸವಾ. ವ್ಯವಸ್ಥೆಯ ಮೇಲೆ ಕೋಪ ಬೇರೆಯವರಿಗೆ ಯಾಕೆ ಬರೋದಿಲ್ಲಾ ಅಂಥ. ಈ ಸಮಾಜ ಎಲ್ಲರಿಗೂ ಸೇರಿದ್ದು ಅಲ್ಲವಾ. ರಾಜಕಾರಣಿಯ ಮಗ, ಉದ್ಯಮಿಯ ಮಗ ಯಾಕೆ ಪತ್ರಕರಾಗಿ ಅವರ ಅಪ್ಪಂದಿರನ್ನು ಪ್ರಶ್ನೆ ಮಾಡಬಾರದು,
ಆದರೆ ಇವರೇ ಶ್ರೀಮಂತರು, ಮಾದ್ಯಮದ ಉದ್ಯಮಿಗಳಾಗುತ್ತಾರೆ ಯಾಕೆ,

ಇವತ್ತು ಸಣ್ಣದೊಂದು ಮಾದ್ಯಮ ಸಂಸ್ಥೆಯನ್ನು ಹುಟ್ಟುಹಾಕುವುದೂ ನೂರಾರು ಕೋಟಿ ವಿಚಾರ. ಬಡ ಉದ್ಯೋಗಿಗಳು ಇಂತಹ ಸಾಹಸ ಮಾಡುವುದು ಸಾದ್ಯವಾ ಹೇಳಿ, ಸತ್ಯ, ನಿಷ್ಠೆ. ಪ್ರಾಮಾಣಿಕತೆ, ಇವೆಲ್ಲವೂ ಈಗ ಅಶಕ್ತರ ಸ್ವತ್ತುಗಳಾಗಿ ಬದಲಾಗಿದ್ದಾರೂ ಹೇಗೆ. ಯಾವ ಮಾದ್ಯಮದ ಒಡೆಯ ತನ್ನ ಪತ್ರಿಕೆಯ ನೌಕರ ಇಂತ ಕೆಲಸ ಮಾಡಿದ್ದಾನೆ, ಎಷ್ಟು ದೊಡ್ಡ ವ್ಯಕ್ತಿಗೆ ಪ್ರಶ್ನೆ ಕೇಳಿ ದಬಾಯಿಸಿದ್ದಾನೆ ಎಂಬ ಕಾರಣಕ್ಕಾಗಿ ಭಲೆ, ವರದಿಗಾರ ಭಲೆ ಅಂತ ಬೆನ್ನು ತಟ್ಟುತ್ತಾನೆ ಹೇಳಿ.

ಹಾಗೆ ನೋಡಿದರೆ ಮಾದ್ಯಮದಲ್ಲಿ ದುಡಿಯುವ ಮಂದಿಗೆ ಪತ್ರಿಕೋದ್ಯಮ ಆದರ್ಶವಾಗಿದ್ದರೂ, ಅದರ ಓಡೆಯರಿಗೆ ಅದೊಂದು ಲಾಭ ತರುವ ಉದ್ಯಮ ಮಾತ್ರ ಆಗಿರಲಿಕ್ಕೆ ಸಾಕು. ನಮ್ಮೆಲ್ಲ ಪತ್ರಕರ್ತರ ಸತ್ಯ ಆದರ್ಶ, ನಿಷ್ಟೆ, ಸಾಮಾಜಿಕ ಜವಾಬ್ಧಾರಿ, ಎಲ್ಲವೂ ಕೂಡ ಮಾದ್ಯಮ ಉದ್ಯಮಿಯೊಬ್ಬನ ಬಂಡವಾಳದ ಒಂದು ಬಾಗ ಆಗಿರುತ್ತದೆ, ಎಷ್ಟೊಂದು ಒಳ್ಳೆಯ, ಚುರಾಕಾದ, ಪ್ರಕಾಂಡ, ಬುಂದಿವಂತ ಪತ್ರಕರ್ತರು ಇದ್ದಾರೆ ಅನ್ನೊದು ಆಯಾ ಮಾದ್ಯಮದ ಬಂಡವಾಳದ ಪರಿದಿಯಲ್ಲೆ ಅಡಗಿದೆ ಅನಿಸುತ್ತದೆ.

ಕಾನೂನಿನ ಪ್ರಕಾರ ಯಾರೊಬ್ಬರಿಗೂ ಪತ್ರಿಕಾ ಉದ್ಯಮದಲ್ಲಿ ತೊಡಗುವ ಸ್ವಾತಂತ್ರ ಇದೆ, ಆದರೂ ಅದು ವಾಸ್ತವ ಸುಲಭದ ಸಂಗತಿ ಅಲ್ಲ ಅನ್ನೊದನ್ನ ಬಹುತೇಕರು ಒಪ್ಪುವ ಸಂಗತಿ. ಪತ್ರಿಕೊದ್ಯಮವನ್ನು ನೊಬೆಲ್ ಪ್ರೊಫೆಷನ್ ಅನ್ನುವ ಕಾಲ ಕಳೆದು ಹೊಗಿದೆ ಅಂತ ಅನಿಸುತ್ತೆ. ಗಾಂಧಿ, ಅಂಬೇಡ್ಕರರು ಪತ್ರಿಕೊದ್ಯಮವನ್ನು ಹೋರಾಟಕ್ಕೆ ಬಳಸಿಕೊಂಡ ಕಾಲ ಮತ್ತೆ ಬರುತ್ತದಾ ಅನ್ನೊ ಅನುಮಾನಗಳು ಇವೆ.

ಸಮಾಜದ ಅಶಕ್ತರು, ಬಡವರು, ಮದ್ಯಮ ವರ್ಗದವರಿಗೆ ಮಾತ್ರ ಪತ್ರಿಕೊದ್ಯಮವೊಂದು ಪ್ರಭಾವಿ ನೌಕರಿ ಅನ್ನಿಸುತ್ತಿದೆ, ಬೇರೆ ಯಾರಿಗೂ ಅಲ್ಲ ಅನ್ನೊದು ನನ್ನ ಬಲವಾದ ನಂಬಿಕೆ, ಬಹುಶ ನಿಮಗೂ ಹಾಗೆ ಅನ್ನಿಸುತ್ತೆ ಅನ್ನೊದು ನನ್ನ ಗ್ರಹಿಕೆ.
ಯಾವಾಗ ರಾಜಕಾರಣಿಯ ಮಗ, ಉದ್ಯಮಿಯ ಮಗ, ವ್ಯಾಪಾರಿಯ ಮಗ, ಶ್ರೀಮಂತನ ಮಗ ಪತ್ರಕರ್ತರಾಗಿ, ನಮ್ಮೊಂದಿಗೆ ನಿಂತು, ಪ್ರಶ್ನೆಗೆ ಉತ್ತರ ಕೇಳುವ ಪ್ರಸಂಗ ಬರುತ್ತದೋ ಅವತ್ತು ಮಾದ್ಯಮ ವೃತ್ತಿಯನ್ನ ಆದರ್ಶದ ವೃತ್ತಿ ಅಂತ ನಾವೆಲ್ಲ ಒಪ್ಪಬಹುದೇನೋ......!!

9 comments:

  1. One example is you Mr.Gowda !

    ReplyDelete
  2. NENU ETTIRUVA PRASHNE TUMBHA TARKIKAVADDU GOWDA. YARA MAKKALU SYNIKARU AGUUDILAVO HAGE PATRAKATRARU.NAMMGELLA P.LANKESH RE PRERANE, PATRAKATRA AHGABEKENNUVALLI AVARE DRONACHARYA. ADRE IVATTINA ESTU JOURNLISTGE LANKESH GOTTIDDRE HELLU. EEGA JOURNISM SAHA FASION AGIDE.

    ReplyDelete
  3. samaajika kalakali,kaalaji ivakkella dodda dodda manushyara naduve artave illada padagalu gowda.alli ellavu nirdhaaravaaguvudu hanavemba maanyateya mele.ninna prashnege uttara sikkaaga mareyade nanagu tilisu..

    ReplyDelete
  4. Business tycoons like Vijay Mally who incur a great loss in their business may go on an indefinite strike and journalists from the same community will do a by-line story along with a good picture that would tell an a-b-c of the same. No doubt that would turn out to be a topic of centre of discussion. But,it is otherwise if a journalist from opposite section of the society. jornalist from upper-lower or poor class will only unfold the agony and pain of the unfed people who are in large numbers in the society. Also the agony of the discriminated sections. So we are always in need of people from humble background as journos rather the opposites.

    ReplyDelete
  5. ಮಗ ಇರೋವ್ರು ನಾವು ತಗೊಳೋ ಸಂಬಳನ ಟಿಪ್ಸ್ ಹಾಗಿ ಕೊಡುತ್ತಾರೆ... ಇನ್ನ ತಿಂಗಳು ಪೂರ್ತಿ ದುಡಿದು ಇಷ್ಟು ಏಕೆ ತಗೋಬೇಕು.. ಲೇಖನ ಚೆನ್ನಾಗಿದೆ.. ಆದರೆ ಪತ್ರಿಕಾ ರಂಗಕ್ಕೆ ಸೀಮಿತವಾಗಿದೆ ಅನ್ಸಿದೆ ಅಷ್ಟೇ..

    ReplyDelete
  6. ಗೌಡರೇ ನಿಮ್ಮ ಸೂಕ್ಷ್ಮ ಪ್ರಜ್ಞೆಯನ್ನು ಸಮರ್ಥವಾಗಿ ಬರಹ ರೂಪಕ್ಕೆ ಇಳಿಸಿದ್ದೀರಿ, ಉಳ್ಳವರು ಪತ್ರಿಕಾ ರಂಗಕ್ಕೆ ಬಂದರೂ ಅವರ ತೆವಲುಗಳನ್ನು ತೀರಿಸಿಕೊಳ್ಳಲು ಇಲ್ಲವೇ ರಕ್ಷಣೆಗೆ ಪತ್ರಿಕೆಗಳನ್ನು ಆಯ್ಕೆ ಮಾಡಿಕೊಳ್ಳುತ್ತಾರೆ ಅದು ಈಗಾಗಲೇ ಸಾಬೀತಾಗಿರುವ ಸತ್ಯ ಅಲ್ವಾ! ಬಂಡವಾಳಶಾಹಿಗಳು ಪತ್ರಿಕೋದ್ಯಮಿಗಳಾದರೆ ಇವತ್ತು ಆಂದ್ರ-ತಮಿಳುನಾಡಿನಲ್ಲಿ ಪತ್ರಕರ್ತರಿಗೆ ಆಗುತ್ತಿರುವ ಪರಿಸ್ಥಿತಿಯೇ ಇಲ್ಲೂ ತಲೆದೂರಬಹುದು ಸಾರ್. ತಲೆಬುಡ ಗೊತ್ತಿಲ್ಲದೇ ಪ್ರಶ್ನೆ ಕೇಳೋದು, ಗಂಬೀರತೆಗೆ ಧಕ್ಕೆ ಬರುವಂತೆ ನಡೆದುಕೊಳ್ಳುವುದು ಇಂತಹವೆಲ್ಲ ಜರ್ನಲಿಸಂ ಅನ್ನು ಸರಿಯಾಗಿ ಅರ್ಥಮಾಡಿಕೊಳ್ಳದೇ ಎಂಟ್ರಿ ಕೊಡುವವರಿಂದ ಆಗುತ್ತಲೇ ಇರುತ್ತೆ ಅಲ್ವಾ, ಈ ನಡುವೆ ನೀವು ಹೇಳಿದಂತೆ ಶೋಷಿತನ ಮಗ, ರೈತನ ಮಗ, ಮಧ್ಯಮವರ್ಗದವರ ಮಕ್ಕಳು ಪತ್ರಕರ್ತರಾಗಿ ಪ್ರವೇಶ ಮಾಡಿದರೆ ನೈಜ ನೆಲೆಗಟ್ಟಿನಲ್ಲಿ ಕಾರ್ಯ ನಿರ್ವಹಿಸಲು ಸಾಧ್ಯ ಎಂಬುದೇ ನನ್ನ ನಂಬುಗೆ.. ಅಂದಹಾಗೆ ದೆಹಲಿಯಲ್ಲಿ ವಿಭಿನ್ನ ರೀತಿಯ ಪ್ರತಿಭಟನೆಗಳು ನಡೆಯುತ್ತವೆ, ಅದರ ಒಂದು ಮುಖ ಮಾತ್ರ ನಮಗೆ ತಿಳಿಯುತ್ತೆ ಅದರ ಬಗ್ಗೆ ಬರೀರಿ ಸಾರ್...

    ReplyDelete
  7. ರಾಜಕಾರಣಿಗಳನ್ನು ಹತ್ತಿರದಿಂದ ನೋಡುವ ಸೌ(?)ಭಾಗ್ಯ ನನ್ನದು.ಅದೃಷ್ಟವೋ ದುರಾದೃಷ್ಟವೋ ನನ್ನನ್ನು ತೀರಾ ಆತ್ಮೀಯರಾಗಿ ಕಂಡವರು ಅನೇಕ. ಆದ್ರೆ ಒಂದು ಮಾತ್ರ ಸ್ಪಷ್ಟ.ಸ್ಟಾರ್ ಹೊಟೆಲ್ ನಲ್ಲಿ ಕೂತು ಇವರಲ್ಲಿ ಅನೇಕರು ಪತ್ರಕರ್ತರು ಹಾಕುವ ಬಟ್ಟೆ ಚಪ್ಪಲಿಯಿಂದ ಹಿಡಿದು,ಅವರ ಬಡತನ,ಅವರ ಪ್ರಶ್ನೆಗಳು ಎಲ್ಲವನ್ನೂ ಗೇಲಿ ಮಾಡುತ್ತಿರುತ್ತಾರೆ.ತಾವು ನೂರು ಜನರ ನಾಶಮಾಡಿ ದುಡ್ಡು ಮಾಡಿಕೊಳ್ಳೋದ್ರ ಬಗ್ಗೆ ಅವರಿಗೆ ಸ್ವಲ್ಪವೂ ಭಯ,ಬೇಸರ,ಪಾಪಪ್ರಜ್ಞೆ ಇರುವುದಿಲ್ಲ.ಅಂಥವರನ್ನು ನೋಡಿ ನಾನು ಮನಸ್ಸಿನಲ್ಲೇ ನಕ್ಕಿದ್ದೇನೆ..ಇವರು ಇಷ್ಟೆಲ್ಲ ದುಡ್ಡು ಮಾಡುತ್ತಾರಲ್ಲಾ..ಇವರಿಗೆ ಬಡವ್ರು,ಮಕ್ಕಳು,ಬಡ ಹೆಣ್ಣುಮಕ್ಕಳು ಯಾರೂ ಕಾಣಿಸಲ್ವಾ..ಅಂತ ಬಹಳಷ್ಟು ಸಾರಿ ನೊಂದಿದ್ದೇನೆ.
    ನಿಮ್ಮ ವಿಚಾರ ಚೆನ್ನಾಗಿಯೇ ಇದೆ.ಆದ್ರೆ ಹೊಟ್ಟೆ ತುಂಬಿದವರಿಗೆ ಬೇರೆಯವರ ಕಷ್ಟಸುಖದಿಂದ ಆಗೋದೇನಿದೆ ಹೇಳಿ?ನೀವು ನಿಮ್ಮ ಕೆಲಸ ಮಾಡಿ.ಕೆಟ್ಟ ವ್ಯವಸ್ಥೆಯ ಬಗ್ಗೆ ಧ್ವನಿ ಎತ್ತದವರು,ಯಾವುದೇ ಕೊಳಕು ನಾಯಿಗಿಂತ ಕಡಿಮೆಯೇನಲ್ಲ.ಆದ್ರೂ ನಾಯಿಗೆ ನಿಯತ್ತಾದರೂ ಇರುತ್ತೆ..ಅಲ್ವಾ...ದಯವಿಟ್ಟು ನೀವು ಬದಲಾಗಬೇಡಿ.ನಿಮ್ಮ ಕೋಪ ಕಂಟಿನ್ಯೂ ಆಗಲಿ..ಅದು ಕಡಿಮೆ ಆದ ದಿನ ನಿಮ್ಮಲ್ಲಿರೋ ಒಬ್ಬ ಉತ್ತಮ ಮನುಷ್ಯ ಸತ್ತ ಹಾಗೆ..
    ಅಂದ ಹಾಗೆ ನಿಮ್ಮ ಬ್ಲಾಗ್ ನೋಡಿದ್ರೆ ನನಗೆ ಡೌಟ್ ಬರುತ್ತೆ....ಈಟಿವಿ ಬಗ್ಗೂ ಸ್ವಲ್ಪ ಪ್ರೀತಿ ಇರ್ಲಿ ಗೌಡ್ರೇ...

    ReplyDelete
  8. yochanege tallida baraha. nimma yochanaalahari aalavaagide,yaru yava kshethradalli kelasa maadidaru tamma kelasada arividdare aste saaku sari-tappugalu saridoogalu.baraha thumba chennagide.

    ReplyDelete
  9. gowdre nivu heliddu 100kke 100 satya

    ReplyDelete