
ಲೋಕಸಭಾ ಚುನಾವಣೆಗಳು ಮುಗಿದು ಹೊಸ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಸಹಜವಾಗೇ ಡೆಲ್ಲಿ ಬಣಗುಡುತ್ತಿದೆ. ಮಾಹಾಚುನಾವಣೆಯ ರಂಗಿಗೆ ಅಡ್ಡಾಗಿದ್ದ ಊರು ದಿಡೀರ್ ಅಂತ ಕ್ಷೋಬೆಗೆ ಒಳಗಾದಂತೆ ಅನ್ನಿಸುವ ಸಮಯಕ್ಕೆ ಮತ್ತೆ ಬಿಜೆಪಿಯಲ್ಲಿ ಎದ್ದ ಅಂತರಿಕ ಕಲಹದಿಂದ ಮತ್ತೆ ರಾಜಕೀಯ ರಂಗೇರಿತ್ತು.
ಈಗ ಎಲ್ಲೆಲ್ಲೂ ಬಿಜೆಪಿಯದೇ ಸುದ್ದಿ, ಹೇಗಿದ್ದ ಪಕ್ಷಕ್ಕೆ ಏನಾಯ್ತಪ್ಪ ಅನ್ನೋ ಚರ್ಚೆ.
ಚುನಾವಣೆಗಳಲ್ಲಿ ಸೋತ ಪಕ್ಷದಲ್ಲಿ ಇಂತ ಪ್ರಕ್ರಿಯೆಗಳು ಆಗೋದು ಸಹಜ. ಸೋತಾಗಲೇ ವಾಸ್ತವ ಗೊತ್ತಾಗೋದು ಅನ್ನೊದಕ್ಕೆ ಈಗಿನ ಬಿಜೆಪಿಯೇ ಉದಾಹರಣೆ, ಹೊಟ್ಟೆ ಒಳಗಿನ ಕ್ಯಾನ್ಸರ್ ಎಷ್ಠು ದಿನಾ ಅಂಥ ಗೊತ್ತಾಗದೇ ಇರುತ್ತೇ ಹೇಳಿ.
ಮೊದಲೇ ಮಸಾಲ ಸುದ್ದಿಯೇ ಇಲ್ಲದೆ ಬೇಜಾರಾಗಿದ್ದ ಮೀಡಿಯಾಗಳಿಗೆ ಈಗ ಬಿಜೆಪಿ ಒಳ್ಳೇ ಅಹಾರ ಒದಗಿಸುತ್ತಿದೆ. ಸ್ವೈನ್ ಪ್ಲೂ ಭೂತವನ್ನು ಸಿಕ್ಕಾಪಟ್ಟೆ ದುರುಪಯೋಗ ಮಾಡುತ್ತಿದ್ದ ಮಾದ್ಯಮಗಳ ಕಣ್ಣು, ಜಸ್ವಂತ್ ಸಿಂಗ್ ಬಿಟ್ಟ ಜಿನ್ನಾ ಭೂತದ ಕಡೆಗೆ ಹೊರಳಿದ್ದು ಒಳ್ಳೆಯದೇ ಆಯ್ತು ಅನ್ನಿ.
ಬಿಜೆಪಿ ಚುನಾವಣೆಗಳಲ್ಲಿ ಅಕರಾಳ ವಿಕರಾಳವಾಗಿ ಸೋತಾಗಲೇ, ಇನ್ನು ಮುಂದೆ ರಾಷ್ಟ್ರೀಯ ಸ್ವಯಂ ಸೇವಕ ಸಂಘ ಬಿಜೆಪಿಯನ್ನ ಟೇಕ್ ಓವರ್ ಮಾಡುತ್ತೆ ಅನ್ನೊ ಚರ್ಚೆ ಎದ್ದಿತ್ತು. ಆದರೆ ಅದನ್ನ ಈಗ ಆರ್ ಎಸ್ ಎಸ್ ಈಗ ಮಾಡುತ್ತಿದೆ. ಹಾಗೆ ಮಾಡೋದರಲ್ಲಿ ತಪ್ಪೇನು ಇರಲಾರದು. ಆದರೆ ಎಲ್ಲವನ್ನೂ ಜಗತ್ತಿಗೆ ಗೊತ್ತಾಗುವಂತೆ ಮಾಡುತ್ತಲೇ, 'ಸಂಘಕ್ಕೊ ಬಿಜೆಪಿಗೂ ಸಂಭಂದವಿಲ್ಲ', 'ಆರ್ ಎಸ್ ಎಸ್ ಸಾಂಸ್ಕೃತಿಕ ಸಂಘಟನೆ ರಾಜಕೀಯ ಮಾಡೋಲ್ಲ' ಅಂತೆಲ್ಲಾ ಪುಂಗಿ ಊದಿದರೇ ಆಗೋ ಲಾಭ ಅದೇನೋ ನನಗೆ ತಿಳಿಯೋಲ್ಲ.
ಹಾಗೆ ನೋಡಿದರೆ ಬಿಜೆಪಿಯಲ್ಲಿ ಚುನಾವಣೆಗಳು ಮುಗಿದ ಮೂರು ತಿಂಗಳಿಗೆ ಪಕ್ಷದಲ್ಲಿ ಅಂತರಿಕ ಕಲಹ ಬೀದಿಗೆ ಬಂದಿರೋದು ಕಾಂಗ್ರೆಸ್ ಪಾಲಿಗೆ ಕೆಟ್ಟ ಬೆಳವಣಿಗೆಯೇ ಸರಿ. ಮುಂದೆ ಚುನಾವಣೆಗಳು ಬರೋದು ಐದು ವರ್ಷಕ್ಕೆ ಆದರಿಂದ ಈಗಲೇ ಅಂತರಿಕ ಬಿಕ್ಕಟ್ಟು ಶಮನವಾಗಿ ಬಿಜೆಪಿ ಪಕ್ಷ ಚೇತರಿಸಿಕೊಂಡು ಮತ್ತೆ ಪ್ರಭಲ ಆಗಬಹುದು.
ಅದೆಲ್ಲ ಒತ್ತಟ್ಟಿಗೆ ಇರಲಿ, ಬಿಜೆಪಿ ಪಕ್ಷ ಮೀಡಿಯಾ ಕ್ರಿಯೇಟೆಡ್ ಪಕ್ಷ ಅದನ್ನ ಮೀಡಿಯಾದವರೇ ಹಾಳುಮಾಡುತ್ತಾರೆ ಅಂತ ಹೇಳುತ್ತಾರೆ. ಹಿಂದೊಮ್ಮೆ ಅರುಣ್ ಶೌರಿಯೇ ಬಿಜೆಪಿ ಪಕ್ಷ ಆರು ಜನ ಪತ್ರಕರ್ತರಿಂದ ನಿಯಂತ್ರಿಸಲ್ಪಡುತ್ತಿದೆ ಅಂತ ಟೀಕೆ ಮಾಡಿದ್ದರು. ಹಾಗೆ ನೊಡಿದರೆ ಬಿಜೆಪಿಯಲ್ಲಿದ್ದಷ್ಟು ಮಾಜಿ ಪತ್ರಕರ್ತರು, ಅಥವಾ ನ್ಯೂಸ್ ರೂಂಗಳಲ್ಲಿ ಕುಳಿತೇ ಬಿಜೆಪಿಯನ್ನು ಅಂತರಸಾಕ್ಷಿಯಿಂದ ಬೆಂಬಲಿಸುವ ಪತ್ರಕರ್ತರು ದೇಶದ ಯಾವ ಪಕ್ಷಕ್ಕೂ ಇರಲಿಕ್ಕಿಲ್ಲ. ಆರ್ ಎಸ್ ಎಸ್ ಮೂಲದಿಂದ ಬಂದ ಸಾವಿರಾರು ಮಂದಿ ಸುದ್ದಿ ಮನೆಗಳಲ್ಲಿ ಕುಳಿತು ಸದ್ದಿಲ್ಲದೆ ಸುದ್ದಿ ಮಾಡುತ್ತಾರೆ.
ಅದಕ್ಕೆ ನನಗೆ ಸಿಕ್ಕ ಸಾಕ್ಷ ಏನಪ್ಪಾ ಅಂದರೆ, ಮೊನ್ನೆ ಬಿಜೆಪಿಯಲ್ಲಿ ಗದ್ದಲ ತೀರ್ವಗೊಂಡಿದ್ದಾಗ ಪತ್ರಕರ್ತ ಮಿತ್ರನೊಬ್ಬನ ಮೊಬೈಲ್ ಗೆ ಆರ್ ಎಸ್ ಎಸ್ ಕೇಂದ್ರ ಕಚೇರಿಯಿಂದ ಒಂದು ತುರ್ತು ಸಂದೇಶ ಬಂತು.
ಸಂದೇಶ ಏನಪ್ಪಾ ಅಂದರೆ. 'ಎಲ್ಲಾ ಸ್ವಯಂ ಸೇವಕ ಪತ್ರಕರ್ತರೂ ಸಂಜೆ 3 ಗಂಟೆಗೆ ಸಂಘದ ಕಚೇರಿಗೆ ಬನ್ನಿ ಬಹುಮುಖ್ಯವಾದ ವಿಷಯ ಚರ್ಚಿಸಬೇಕಿದೆ' ಅಂತ.
ನನಗಂತೂ ಸಂದೇಶ ನೋಡಿ ಅಚ್ಚರಿಯಾಯ್ತು, ಹೇಗೆ ಆರ್ ಎಸ್ ಎಸ್ ಕಬಂದಬಾಹುಗಳು ಹರಡಿವೆ ಅಂತ ಯೋಚಿಸುವಂತಾಯಿತು. 'ಸ್ವಯಂ ಸೇವಕ' ಪತ್ರಕರ್ತರಿಗೆ ಆರ್ ಎಸ್ ಎಸ್ ಪಂಡಿತರು ಏನೇನು ಹೇಳಿದರು, ಕಲಿಸಿಕೊಟ್ಟರು ಅನ್ನೊ ಕುತೂಹಲ ಈಗ ನನಗೆ ಹೆಚ್ಚಾಗಿದೆ. ಸ್ವಯಂ ಸೇವಕರು ಅದನ್ನೆಲ್ಲಾ ಬಿಚ್ಚಿ ಹೇಳುತ್ತಾರಾ ಗೊತ್ತಿಲ್ಲ.
ಕಡೇ ಗುಳಿಗಿ.
ಕೆಲವರು ಬೆಳೆಯುತ್ತಾ ಬೆಳೆಯುತ್ತಾ ಚಡ್ಡಿ ಹಾಕಿಕೊಳ್ಳುತ್ತಾರೆ, ಮತ್ತೆ ಕೆಲವರು ಹುಟ್ಟುವಾಗಲೇ ಚಡ್ಡಿ ಹಾಕಿಕೊಂಡೇ ಹುಟ್ಟಿರುತ್ತಾರೆ...!!
ಬಿಜೆಪಿಯಲ್ಲಿ ಭಿನ್ನಮತ ಇಲ್ಲಿವರಗೆ ಬಂದು ತಲುಪಿದೆ... ಜಸ್ವಂತ್ ಸಿಂಗ್ ಪುಸ್ತಕಕ್ಕಾಗಿ ಅವರನ್ನ ಉಚಟಿಸಿದ್ದು ಸರಿಯಲ್ಲ.. ಮುಂದೆ ಏನು ಆಗುತ್ತೆ ಆದಾಗ ಮತ್ತೆ ಬರಿಯಪ್ಪ...
ReplyDeleteಶಿವ ಶಿವಾ ರಾಜಕೀಯ ಅತ್ಲಾಗ್ ಇರ್ಲಿ .ಇಲ್ಲಿ ನಮ್ಮ ಕೆಲವು ವೀರರು ತಾವೇ ಚೆಡ್ಡಿ ಹಾಕ್ಕೊಳ್ಳೋಲ್ಲ, ಬೇರೆಯವರ ಚಡ್ಡಿ ಎಳೆದು ಗಬ್ಬು ಅಂತಾರಲ್ಲ. ಇದ್ಯಾವ ದೇವರ ಪ್ರಸಾದ ಶಿವ
ReplyDeleteಪತ್ರಕರ್ತನಾದವನಿಗೆ ತನ್ನ ವೃತ್ತಿಗೆ ತಕ್ಕ ಘನತೆ, ಗಾಂಭೀರ್ಯ, ಹೊಣೆಗಾರಿಕೆ ಇರಬೇಕಾಗುತ್ತದೆ, ಆದರೆ ಇತ್ತೀಚಿನ ದಿನಗಳಲ್ಲಿ ಇಂತಹದ್ದನ್ನೆಲ್ಲ ನಿರೀಕ್ಷಿಸಲು ಸಾಧ್ಯವಾಗುತ್ತಿಲ್ಲ ಯಾಕೆ? ಒಬ್ಬೊಬ್ಬ ಪತ್ರಕರ್ತನೂ ಒಂದೊಂದು ರಾಜಕೀಯ ಪಕ್ಷಕ್ಕೆ, ಒಂದೊಂದು ಸಂಘಟನೆಗೆ, ಒಬ್ಬೊಬ್ಬ ರಾಜಕಾರಣಿಯ ಜೊತೆ ಗುರುತಿಸಿಕೊಂಡರೆ ಮಾಧ್ಯಮಗಳ ಮಾನ ಉಳಿದೀತೆ? ಓದುಗರ/ವೀಕ್ಷಕರ ವಿಶ್ವಾಸವಾದರೂ ಎಲ್ಲಿ ಉಳಿದೀತು? ಅದರಲ್ಲೂ ಈ ಚಡ್ಡಿ ಪತ್ರಕರ್ತರಿದ್ದಾರಲ್ಲ ಅವರಿಂದ ಕೆಲವು ಸುದ್ದಿಗಳಿಗೆ ಸಿಗಬೇಕಾದ ಆದ್ಯತೆಗಳೇ ಸಿಗುತ್ತಿಲ್ಲ.. ಮಿತ್ರ ಶ್ರೀನಿವಾಸ್ ಗೌಡರೇ ಮಿಡಿಯಾ ಮಿತ್ರರ ಮೇಲಿನ ಹದ್ದಿನ ಕಣ್ಣಿಗೆ ಮತ್ತು ಸಂವೇನಾತ್ಮಕ ಬರಹಕ್ಕೆ ಧನ್ಯವಾದಗಳು
ReplyDelete