Wednesday, September 23, 2009

'ಅರ್ಧ ದೆಲ್ಲಿಯ ಮಾಲೀಕ'

ಖುಷ್ವಂತ್ ಸಿಂಗ್ ಗೊತ್ತಲ್ಲಾ ಅಂತ ನಾನೇನಾದರೂ ಕೇಳಿದರೇ ನೀವು, ಯಾಕಪ್ಪಾ, ಹೇಗಿದೆ ಮೈಗೆ ಅಂತ ಕೇಳುತ್ತೀರಿ. ಆದರೆ ಅವರಪ್ಪಾ ಯಾರೂ ಗೊತ್ತಾ ಅಂತ ಕೇಳಿದರೆ ಗೊತ್ತಿಲ್ಲಾ ಬಿಡ್ರಿ, ಅದೆಲ್ಲಾ ಯಾಕೆ ಅಂತ ಅನ್ನುತ್ತೀರೇನೋ...

ಪತ್ರಕರ್ತ, ಇತಿಹಾಸಕಾರ, ಸಾಹಿತಿ ಹೀಗೆ ಏನೆಲ್ಲಾ ಆಗಿರುವ ಖುಷ್ವಂತ್ ಸಿಂಗ್ ರ ಅಪ್ಪ ಶೋಭಾ ಸಿಂಗ್ ನ್ಯೂಡೆಲ್ಲಿ ಅಂತ ಕರೆಯಲ್ಪಡುವ ದೆಹಲಿಯ ಪ್ರಮುಖ ಆಕರ್ಷಣೆಗಳಾಗಿರುವ ರಾಷ್ಠ್ರಪತಿ ಭವನ(ಕೆಲವು ಭಾಗ), ಇಂಡಿಯಾಗೇಟ್, ಕನ್ನಾಟ್ ಪ್ಲೇಸ್ , ರೆಡ್ ಕ್ರಾಸ್ ಬಿಲ್ಡಿಂಗ್, ಸೌಥ್ ಬ್ಲಾಕ್ ಸೇರಿದಂತೆ ಹತ್ತಾರು ಹಲವು ಆಕರ್ಷಣೀಯ ಸ್ಮಾರಕಗಳು ಮತ್ತು ಕಟ್ಟಡ ನಿರ್ಮಾಣಗಳ ಕಂಟ್ರಾಕ್ಟರ್ ಆಗಿದ್ದವರು.

1911 ರಲ್ಲಿ ಆಗಿನ ವೈಸ್ ರಾಯ್ ಸರ್ಕಾರ ಕಲ್ಕತ್ತಾದಿಂದ ದೆಹಲಿಗೆ ರಾಜದಾನಿ ಸ್ಥಳಾಂತರ ಮಾಡುವ ತೀರ್ಮಾನ ಕೈಗೊಂಡಾಗ ಇಂಗ್ಲೇಂಡಿನಲ್ಲಿ ಹೆಸರುವಾಸಿಯಾಗಿದ್ದ, ಎಡ್ವಿನ್ ಲೂಟಿಯಾನ್, ಮತ್ತು ಹಬ್ಬರ್ ಬೇಕರ್ ಎಂಬ ಆರ್ಕಿಟೆಕ್ಚ್ ಗಳನ್ನು ಕರೆಸಿ ಹೊಚ್ಚ ಹೊಸ, ಅದ್ಬುತ ರಾಜಧಾನಿ ಕಟ್ಟುವ ಸೂಚನೆ ನೀಡಿದರು. ಅದರ ನಿರ್ಮಾಣದ ಗುತ್ತಿಗೆ ಸಿಕ್ಕಿದ್ದು ತಂದೆ ಮಕ್ಕಳಾದ ಸುಜಾನ್ ಸಿಂಗ್ ಮತ್ತು ಶೋಭಾ ಸಿಂಗ್ ಗೆ. ಸುಜಾನ್ ಸಿಂಗ್ ಹಿಂದಿನಿಂದಲೂ ಹೆಸರುವಾಸಿ ಕಂಟ್ರಾಕ್ಟರ್ ಆಗಿದ್ದರಂತೆ.

ಈಗಿನ ರಾಷ್ಠ್ರಪತಿ ಭವನ ಕಟ್ಟಿದ್ದು ಆಗಿನ ವೈಸ್ ರಾಯ್ ವಾಸಕ್ಕಾಗಿ, ಸೌಥ್ ಬ್ಲಾಕ್ ನಾರ್ಥ್ ಬ್ಲಾಕ್, ಎಲ್ಲವೂ ನಿರ್ಮಾಣವಾಗಿದ್ದು ಬ್ರಿಟೀಷರ ಸೌಖ್ಯಕ್ಕಾಗಿಯೇ, ರಾಷ್ಠ್ರಪತಿ ಭವನ ನಿರ್ಮಾಣಕ್ಕೆ 17 ವರ್ಷ ಹಿಡಿಯಿತು, ಬಹುಶ ಆಂಗ್ಲರಿಗೆ ತಾವು ಒಂದಲ್ಲಾ ಒಂದು ದಿನ ಭಾರತವನ್ನು ಬಿಟ್ಟು ಮನೆಗೆ ನಡೆಯಬೇಕು ಎಂಬ ಕಲ್ಪನೆಯೇ ಇರಲಿಲ್ಲ. ಗುಲಾಮಿ ಬಾರತದಲ್ಲಿ ತಮ್ಮ ಅಧಿಕಾರ ನಿರಂತರ ಎಂಬ ಕಲ್ಪನೆ ಇದ್ದಿದ್ದರಿಂದಲೇ ಬ್ರಿಟೀಷರು ಇಂತಹ ನಿರ್ಮಾಣಕ್ಕೆ ಕೈ ಹಾಕಿದ್ದರು ಎನ್ನಲಾಗುತ್ತದೆ.340 ವಿವಿಧ ಹಾಲ್ ಗಳುಳ್ಳ ರಾಷ್ಠ್ರಪತಿ ಭವನ ನಿರ್ಮಾಣಕ್ಕೆ ಆಗಿನ ಕಾಲಕ್ಕೆ ರಾಷ್ಟ್ರಪತಿ ಭವನ ನಿರ್ಮಾಣಕ್ಕೆ ತಗುಲಿದ ವೆಚ್ಚ 14 ಮಿಲಿಯನ್ ಪೌಂಡ್ ಗಳು. ರಾಷ್ಠ್ರಪತಿ ಭವನದ ಕ್ಲೀನಿಂಗ್ ನಿಂದ ಹಿಡಿದು ಉಸ್ತುವಾರಿ ತನಕ ಎಲ್ಲಕ್ಕೂ 2000 ಮಂದಿ ಕೆಲಸಕ್ಕೆ ಇದ್ದರಂತೆ.

ರಾಷ್ಠ್ರಪತಿ ಭವನ ಮತ್ತು ಹೊಸ ದೆಹಲಿಯ ಪ್ರಮುಖ ಪ್ಲಾನರ್ ಆಗಿದ್ದ ಎಡ್ವಿನ್ ಲೂಟಿಯಾನ್ ಗೆ ವೈಸ್ ರಾಯ್ ಭವನ ನಿರ್ಮಾಣಕ್ಕೆ ಭಾರತೀಯ ಶೈಲಿ ಬಳಸಲು ಕೊಂಚವೂ ಇಷ್ಟ ಇರಲಿಲ್ಲವಂತೆ ಆದರೆ ಆಗಿನ ವೈಸ್ ರಾಯ್ ಹಾರ್ಡಿಂಗ್ ಕನಿಷ್ಠ ವೈಸ್ ರಾಯ್ ಮನೆಯ ಹೊರ ವಿನ್ಯಾಸವಾದರೂ ಭಾರತೀಯ ಶೈಲಿಯಲ್ಲಿರಬೇಕು ಎಂದು ಪಾರ್ಮಾನು ಹೊರಡಿಸಿದ್ದರಿಂದ ಹೊರವಿನ್ಯಾಸ ದೇಸಿ, ಒಳವಿನ್ಯಾಸ ಬ್ರಿಟಿಷ್ ಶೈಲಿಯಲ್ಲಿದೆ.

ಖುಷ್ವಂತ್ ಸಿಂಗರ ಅಪ್ಪ ಶೋಭಾ ಸಿಂಗ್ ನನ್ನ(ಆದಾ ದಿಲ್ಲಿ ಕಾ ಮಾಲಿಕ್) ಅರ್ಧ ಡೆಲ್ಲಿಯ ಓಡೆಯ ಅಂತ ಕರೆಯುತ್ತಿದ್ದರಂತೆ, ಆಗಿನ ಕಾಲಕ್ಕೆ ದೇಶದಲ್ಲೇ ಶ್ರೀಮಂತನಾಗಿದ್ದ ಆತ ಪ್ರತಿ ಅಡಿ ಜಮೀನಿಗೆ 2 ರೂಪಾಯಿ ರೇಟಿಗೆ ಅರ್ಧ ದೆಹಲಿಯನ್ನೇ ಕೊಂಡುಕೊಂಡಿದ್ದನಂತೆ.

ನಾನು ದೆಹಲಿಗೆ ಬಂದು ಇನ್ನೇನು ಒಂದು ವರ್ಷ ಆಗುತ್ತಾ ಬರುತ್ತಿದೆ, ಬಂದ ದಿನದಿಂದ ಇಲ್ಲಿಯವರೆಗೆ ದೆಹಲಿ ಎಂಬ ಬೆಡಗನ್ನು ಬೆರಗಿನಿಂದ ನೋಡುತ್ತಾ ಇದ್ದೇನೆ, ಯಾಕಪ್ಪಾ ಇದೇ ಊರನ್ನು ಕ್ಯಾಫಿಟಲ್ ಸಿಟಿ ಮಾಡಿದರು ಅನ್ನುವುದರಿಂದ ಹಿಡಿದು. 10 ಜನಪತ್ ನ ವೈಶಿಷ್ಠ ಏನು, ಚಾಂದಿನಿ ಚೌಕ್ ನಲ್ಲಿ ವಿಶೇಷವಾಗಿ ಏನು ಸಿಗುತ್ತೆ ಅನ್ನುವ ತನಕ ಕುತೂಹಲದಿಂದ ಸಿಕ್ಕ ಸಿಕ್ಕವರಲ್ಲಿ ವಿಚಾರಿಸಿಕೊಂಡಿದ್ದೇನೆ. ಕೆಲವಕ್ಕೆ ಉತ್ತರ ಸಿಕ್ಕಿವೆ ಇನ್ನು ಕೆಲವಕ್ಕೆ ಸಿಕ್ಕಿಲ್ಲ
ಇಂತಹ ಹಲವು, ವೈಶಿಷ್ಠ್ಯಗಳನ್ನು, ವಿಚಾರಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳುವ ವಿಚಾರವಿದೆ.

11 comments:

  1. ನಿಜಾನಾ.....ಗೌಡ್ರೆ.......? ಅಬ್ಬಾ.....! ತುಂಬಾ ಒಳ್ಳೆ ಮತ್ತು ವಿಶೇಷ ವಿಷಯವನ್ನು ತಿಳಿಸಿದ್ದಕ್ಕೆ ಧನ್ಯವಾದಗಳು....:)

    ReplyDelete
  2. Maga nice to know about delhi secretes.. Keep writing many more this type of articles...

    ReplyDelete
  3. ಒಳ್ಳೆಯ ಗತ ಕಾಲದ ವೈಭದ ಬಾಗೆ ಹೇಳಿದ್ದಿಯ ಗೌಡ ಆ ದಿನಗಳ ಕಾರುಬಾರೆ ಬೇರೆ ಅಲ್ಲವ...ನಿಮ್ಮ ಕೂತುಹಲದ ಮೂಟೆ ನಮ್ಮ ದಾಹವನು ನೀಗಲಿ ಸದಾ..

    ReplyDelete
  4. interesting info .... keep writing from there............
    Sreeja

    ReplyDelete
  5. ಏನ್ ಗೌಡ್ರೇ, ನಿಮ್ಮ ಬ್ಲಾಗ್ ನ ಪಾಸ್ ವರ್ಡ್ ಮರೆತೀದ್ದೀರಾ ಹೇಗೆ?

    ReplyDelete
  6. What happend Sir? y u r stop the blogging? anything feel or busy schedule? I missed ur blog writings. keep blogging foreget if any disturbed else.. ok

    ReplyDelete
  7. Lo gowda...nanu ninge yavde comment baride ibahudu. Adre prathi dina ninna blogna open madthini kanalo...yake enu barithilla? Delhinalli antha yavdu developemnts iga agtha illa...But I know what kind of person you are antha...nan magane "agasa osadralli ethi......" Agle blog lokada bagge frustration shuru aitha?
    Yarnadru love adru mado enanadru barithirthiya....!!!!

    ReplyDelete
  8. anna...enadru swlpa bariyanna..........

    ReplyDelete
  9. ಅಯ್ಯಾ ಗೌಡರೇ, ತಾವು ಮಾನಸಿಕವಾಗಿ ದೈಹಿಕವಾಗಿ ಸದೃಢವಾಗಿರುವಿರೆಂದು ನಂಬಿದ್ದೇವೆ. ಯಾವುದೇ ಕನ್ಯೆಯ ಪ್ರೇಮಪಾಶದಲ್ಲಿ ಸಿಕ್ಕಿಲ್ಲವೆಂಬುದು ನಮ್ಮ ವಿಶ್ವಾಸ. ತಾವು ಬ್ಲಾಗ್ ಅನ್ನು ಅಪ್ ಡೇಟ್ ಮಾಡುತ್ತಿಲ್ಲವೆಂದು ಬೇಸರಿಸಿ, ತಮ್ಮ ಗೆಳೆಯರು ಹಾಗೂ ಹಿತೈಷಿಗಳು ಸರಣಿ ಆತ್ಮಹತ್ಯೆಯನ್ನು ಮಾಡಿಕೊಳ್ಳುವ ಮೊದಲು ತಾವು ಹೊಸ ಪೋಸ್ಟ್ ಹಾಕಬೇಕೆಂದು ಈ ಮೂಲಕ ಆಜ್ಞಾಪಿಸುತ್ತೇವೆ.

    ReplyDelete
  10. Do I know the reason behind stoping the blog in the nid-way even if u r giving us great goog information on Delhi and other political news....Do continue which peolple like us expect from you....

    ReplyDelete