Sunday, July 26, 2009

ರಿಯಾಕ್ಷನ್ ಪಾರ್ ರಿಯಾಕ್ಷನ್ ಜರ್ನಲಿಸಂ..!



ಆಗಿನ್ನೂ ಲೋಕಸಭಾ ಚುನಾವಣೆಗಳು ನಡೆಯುತ್ತಿದ್ದವು.ಡೆಲ್ಲಿ ಅನ್ನೊ ನಗರಿ ಚುನಾವಣಾ ಬಿಸಿಯಿಂದ ಕೊತ, ಕೊತ ಅಂತ ಕುದಿಯುತ್ತಿತ್ತು. ಅಧಿಕಾರ ಹಿಡಿಯುವ ಹಪಹಪಿಯಿಂದ ರಾಜಕೀಯ ನಾಯಕರು ಕೆಸರೆರಚಾಟ, ಮಾತಿನ ಧಾಳಿ (ಬೈಟ್ ದಾಳಿ) ಮಾಡುತ್ತಿದ್ದರು. ನಾರ್ಥ್ ಇಂಡಿಯಾದ (ನ್ಯಾಷನಲ್ ಮೀಡಿಯಾದವರು) ಮಾದ್ಯಮಗಳು ರಾಜಕೀಯ ನಾಯಕರ ಹೇಳಿಕೆಗಳನ್ನ ರಾಷ್ಟ್ರೀಯ ಸುದ್ದಿಮಾಡುತ್ತಿದ್ದರು. ತಮಗೆ ಸಿಕ್ಕಿದ್ದೆಲ್ಲವನ್ನು ಎಕ್ಸ್ಲೂಸಿವ್ ಅಂತ ತೋರಿಸೊರು. ನ್ಯಾಷನಲ್ ಮಿಡಿಯಾಗಳಲ್ಲಿ ಪಸ್ಟ್ ಇನ್ ಸಿಎನ್ಎನ್ ಐಬಿಎನ್, ಪಸ್ಟ್ ಇನ್ ಟೈಮ್ಸ್ ನೌ, ಪಸ್ಚ್ ಇನ್ ಆಜ್ ತಕ್ ,ಅಂತ ಪ್ರೋಮೋ ಹಾಕಿಕೊಂಡು ರಾಜಕೀಯ ನಾಯಕರ ಸಂದರ್ಶನಗಳು, ಸುದ್ದಿಗಳು ಬರುತ್ತಿದ್ದವು.

ರಾಜಕೀಯ ನಾಯಕರ ಸಂದರ್ಶನ ಸಿಕ್ಕಿದ್ದೆ ಜೀವಮಾನದ ಸಾಧನೆ ಅಂಥ ಟೆಲಿವಿಷನ್ ಪತ್ರಕರ್ತರು ರೋಮಾಂಚನಕ್ಕೆ ಒಳಗಾಗಿದ್ದರು. ದಿನ ಬೆಳಾಗಾದರೆ 'ಲಾಲೂ ಹೀಗೆ ಅಂದವ್ರೆ ನೀವು ಏನ್ ಹೇಳ್ತಿರಿ', 'ಅಮರ್ ಸಿಂಗ್ ಹಿಂಗೆ ಹೇಳವ್ರಲ್ಲಾ ನೀವು ಏನಂತೀರಿ', 'ವರುಣ್ ಗಾಂಧಿ ಹೇಳಿಕೆಗೆ ನಿಮ್ಮ ರಿಯಾಕ್ಷನ್ ಏನು', 'ಮಾಯಾವತಿ ಹಿಂಗೆ ಹೇಳವ್ರಲ್ಲಾ ಅದಕ್ಕೆ ನೀವೆಂಗೆ ಹೇಳ್ತೀರಿ', ಅಂತ ಬೈಟ್ ತೆಗೆದುಕೊಳ್ಳೊದು ಆಯಾ ಬೀಟ್ ನಲ್ಲಿರೋ ಕೆಲಸ. ಇದಕ್ಕೆ ರಾಜಕೀಯ ಪಕ್ಷಗಳ ಸಹಕಾರ ಹೇಗಿದೆಯಪ್ಪಾ ಅಂದರೆ, ದಿನಾ ಸಾಯಂಕಾಲ ಎಲ್ಲಾ ಪಕ್ಷಗಳ ಕಚೇರಿಯಲ್ಲೂ ಪ್ರೆಸ್ ಕಾನ್ಪರೆನ್ಸ್ ಕರೆಯುತ್ತಾರೆ. ಅವರು ಹೇಳಿದ್ದಕ್ಕೆ ಇವರು, ಇವರು ಹೇಳಿದ್ದಕ್ಕೆ ಅವರು ಉತ್ತರ ಕೊಡುತ್ತಾರೆ.

ನೇರವಾಗಿ ಯಾರೂ ಕಚ್ಚಾಡಲ್ಲಾ, ಮೀಡಿಯಾ ರಾಜಕೀಯ ಪಕ್ಷಗಳಿಗೆ ಮೀಡಿಯೇಟರ್ ಇದ್ದ ಹಾಗೆ. ಚಾನಲ್ ಗಳಿಗೆ ಬೇಕಾಗಿದ್ದು ಏನು ಅಂತ ಅವರಿಗೊ ಅರ್ಥ ಆಗಿಹೊಗಿದೆ. ಅದಕ್ಕಾಗಿಯೇ ರಾಜಕೀಯ ಪಕ್ಷಗಳೂ ವರ್ಣರಂಜಿತವಾಗಿ ಮಾತಾಡೋರನ್ನ ಪಕ್ಷದ ವಕ್ತಾರರನ್ನಾಗಿ ನೇಮಿಸಿದ್ದಾರೆ.
ಅವರಲ್ಲಿ ಬಹುತೇಕರು ಸುಪ್ರಿಂ ಕೋರ್ಟ್ ಲಾಯರ್ ಗಳು, ಇಲ್ಲಾ ಹಳೇ ಜರ್ನಲಿಸ್ಟ್ ಗಳು. ಪಾಟಿ ಸವಾಲಿಗೆ ಉತ್ತರಿಸಲು ಇವರಿಗೇ ಅಲ್ಲ ಗೊತ್ತಿರೋದು. ಅವರ ಕೆಲಸ ಏನಪ್ಪಾ ಅಂದರೆ ದಿನಪೂರ್ತಿ ಚಾನಲ್ ಗಳಿಗೆ ಬೈಟ್ ಕೋಡೋದು. ಪತ್ರಿಕೆಗಳಿಗೆ ಮಾತಾಡೋದು. ರಿಯಾಕ್ಷನ್ ಪಾರ್ ರಿಯಾಕ್ಷನ್ ಅದು ಅವರ ಕೆಲಸ ಯಾವ ಪಕ್ಷವೂ ಇದರಲ್ಲಿ ಹಿಂದೆ ಬಿದ್ದಿಲ್ಲ ಬಿಡಿ.

ಅವತ್ತು ಏನಾಯ್ತು ಅಂದರೆ ಬಿಜೆಪಿ ಕಚೇರಿಯಲ್ಲಿದ್ದೆವು. ಯಾರೋ ಎಲಕ್ಟ್ರಾನಿಕ್ ಮೀಡಿಯಾದ ವರದಿಗಾರ್ತಿ ಯೊಬ್ಬಳಿಗೆ ಅರುಣ್ ಶೌರಿ ಸಿಕ್ಕಾಪಟ್ಟೆ ರೇಗ್ತಾ ಇದ್ದರು. ನಾನು ಕುತೂಹಲಕ್ಕೆ ಅಂತ ಹತ್ತಿರ ಹೋದೆ.
'ಡೋಂಟ್ ಡೂ ದಿಸ್ ಬ್ಲಡಿ ಜರ್ನಲಿಸಂ, ದಿಸ್ ಈಸ್ ಕಾಲ್ಡ್ ಬೈಟ್ ಜರ್ನಲಿಜಂ. ವೈ ಶುಡ್ ಐ ರಿಯಾಕ್ಟ್ ಪಾರ್ ಸಂ ಒನ್ಸ್ ಸ್ಟೇಟ್ ಮೆಂಟ್. ಗೋ ಗೋ, ಲರ್ನ್ ವಾಟ್ ಈಸ್ ಜರ್ನಲಿಜಂ' ಅಂದರು .
ಒಂದು ರಿಯಾಕ್ಷನ್ ಬೈಟ್ ಕೇಳಿದ ಕಾರಣಕ್ಕೆ ಆ ರಿಪೋರ್ಟರ್ ಸಿಕ್ಕಾಪಟ್ಟೆ ಬೈಸಿಕೊಂಡು ಹ್ಯಾಪ ಮೊರೆ ಹಾಕಿಕೊಂಡು ಕಣ್ಣೀರಾಗುತ್ತಿದ್ದಳು. ಅಷ್ಟೇನು ಅನುಭವಿ ಅಲ್ಲದ ಆಕೆ ಸಿಎನ್ಇಬಿ ಎಂಬ ಹಿಂದಿ ಚಾನಲ್ಲಿನ ವರದಿಗಾರ್ತಿ, ಆಕೆ ಮಾಡಿದ ತಪ್ಪೇನಪ್ಪಾ ಅಂದರೆ, ಲಾಲೂ ಪ್ರಸಾದ್ ಯಾದವ್ ಅರುಣ್ ಗಾಂಧಿ ಕುರಿತು ಕೊಟ್ಟಿದ್ದ ಹೇಳಿಕೆಗೆ ಅರುಣ್ ಶೌರಿ ರಿಯಾಕ್ಷನ್ ಕೇಳಿ ಮೈಕ್ ಮುಂದಿಟ್ಟುಕೊಂಡಿದ್ದಳು. ಮೊದಲೇ ಪೈರ್ ಬ್ರಾಂಡ್ ಅರುಣ್ ಶೌರಿ, ಅವಳು ಚಿಕ್ಕ ಹುಡುಗಿ ಅನ್ನೊದನ್ನ ಮರೆತು ಝಾಡಿಸಿಬಿಟ್ಟಿದ್ದಾರೆ, ಹಿಂದೊಮ್ಮೆ ಪರ್ತಕರ್ತನಾಗಿದ್ದ ಶೌರಿ ಅವರಿಗೆ ಈಗಿನ ಎಲೆಕ್ಟ್ರಾನಿಕ್ ಮಾದ್ಯಮಗಳ ಕಾರ್ಯವೈಖರಿ ಬಗ್ಗೆ ಸಿಕ್ಕಾಪಟ್ಟೆ ಅಸಹನೆ ಇದ್ದ ಹಾಗೆ ಕಾಣುತ್ತಿತ್ತು. ಪಾಪ ಆ ಹುಡುಗಿ ದಿನಾ ಮಾಡೋದನ್ನೆ ಶೌರಿ ಮುಂದೆ ಮಾಡಿದಾಳೆ ಅವಳದೇನು ತಪ್ಪು....!

ಅವಳನ್ನು ನಿಯಂತ್ರಿಸೋ ಡೆಸ್ಕ್ ಇಂಚಾರ್ಜ್ ಅದನ್ನೇ ಬೇಕು ಅಂತ ಕೇಳಿರ್ತಾನೆ. 'ಗೆಟ್ ಸಮ್ ರಿಯಾಕ್ಷನ್ ಪಾರ್ ವರುಣ್ ಲಾಲೂ ಸ್ಟೇಟ್ ಮೆಂಟ್ 'ಅಂತ. ಅದಕ್ಕಂತ ಆಯಮ್ಮ ಸ್ವಲ್ಪಾನು ಯೋಚಿಸದೇ ಎದುರು ಸಿಕ್ಕ ಬೆಜೆಪಿ ನಾಯಕ ಅರುಣ್ ಶೌರಿ ಬೈಟ್ ಕೇಳಿದ್ದಾಳೆ.
ಅದೇ ರವಿಶಂಕರ್ ಪ್ರಸಾದ್, ಅರುಣ್ ಜೇಟ್ಲಿ, ವೆಂಕಯ್ಯನಾಯ್ಡು, ಅನಂತ್ ಕುಮಾರ್ ಅಂತ ಮೀಡಿಯಾ ಸೇವಿ ನಾಯಕರ ಹತ್ತಿರ ಬೈಟ್ ಕೇಳಿದ್ರೆ ಬರೇ ಬೈಟ್ ಯಾಕೆ ಸಂದರ್ಶನವೇ ಸಿಕ್ಕಿರೋದು...!

ಆದರೆ ವಾಸ್ತವ ಏನಪ್ಪಾದನ್ನ ಅರುಣ್ ಶೌರಿ ಸಿಟ್ಟಿನಲ್ಲಿ ಗಂಬೀರವಾದ ಅರ್ಥ ಇದೆ. ಇಂಡಿಯಾದ ಎಲೆಕ್ಟ್ರಾನಿಕ್ ಮಾದ್ಯಮ ಪ್ರಾಕ್ಟೀಸ್ ಮಾಡ್ತಾ ಇರೋ ವರದಿಗಾರಿಕೆ ಸರೀನಾ ಅನ್ನೊದು. ಯಾಕಂದರೆ ಇವತ್ತು ಪೊಲಟಿಕಲ್ ವರದಿಗಾರಿಕೆ ಅಂದರೆ ಏನು..? ರಾಜಕೀಯ ನಾಯಕರಿಂದ ಬೈಟ್ ತೆಗೆದುಕೊಂಡು ಬರೋದು, ಅದು ಎಂತಾ ಬೈಟು ಬೇಕು ಅಂದರೆ, ಅದಕ್ಕೆ ವಿರೋಧಿಪಕ್ಷದವನು ಕೆರಳಿ ಪ್ರತಿಕ್ರಿಯೆ ನೀಡುವಸ್ಟು ಸ್ಟ್ರಾಂಗ್ ಆಗಿರಬೇಕು. ಇಲ್ಲಾ ಅಂದರೆ ಅದು ಉಪಯೋಗಕ್ಕೆ ಬರಲ್ಲ ಅನ್ನೊದು ಈಗಿನ ನ್ಯೂ ಜರ್ನಲಿಸಂ.

ಬೈಟ್ ನಲ್ಲಿ ಏನಿರಬೇಕು ಬೈಗುಳ ಬೇಕು, ಮತ್ತೊಬ್ಬರನ್ನ ಅವಮಾನಿಸಬೇಕು, ಕೆರಳಿಸಬೇಕು, ಇಲ್ಲಾ ತೆಗಳಬೇಕು, 'ಇಲ್ಲಾರಿ ನಾನು ಮತ್ತೊಬ್ಬರ ಬಗ್ಗೆ ಮಾತಾಡಲ್ಲಾ ರೀ ಅಂದರೆ' ಆ ನಾಯಕ ವೇಸ್ಟ್, ಟಿಆರ್ ಪಿ ತಂದುಕೊಡದ ಪುರಾಣ, ಹರಿಕತೆ. ಒಳ್ಳೇ ಯೋಚನೆ, ಅಭಿವೃದ್ದಿ ಕೆಲಸ ಯಾವುದೂ ಬೇಡ ಬೇಕಿರೋದು ಸ್ಪೈಸಿ ಬೈಟ್ .
.
ಬೈಟ್ ಯಾವಾಗಲೂ ಸಮ್ ಥಿಂಗ್ ಸ್ಪೈಸಿ ಇರಬೇಕು...

ಪತ್ರಕರ್ತರನ್ನ ಅರ್ಥ ಮಾಡಿಕೊಂಡು ಸಿಕ್ಕಾಪಟ್ಟೆ ಕಾಂಟ್ರೋವಸಿ ಬೈಟ್ ಕೊಡುವ ರಾಜಕೀಯ ವ್ಯಕ್ತಿ ಗಳು ಅಂದ್ರೆ ಜರ್ನಲಿಸ್ಟ್ ಗಳಿಗೂ ಖುಷಿ. ಅವರ ಹಿಂದೆ ದಿನಾಲೂ ಬೀಟ್, ಅವರು ಹೇಳಿದ್ದೆಲ್ಲಾ ನ್ಯೂಸ್.
ಅದೇ ಬೈಟ್ ಕೊಟ್ಟ ವ್ಯಕ್ತಿ, ನಾಳೆ ನಾನು ಹಾಗೆ ಹೇಳಿಲ್ಲಾ ಅದೆಲ್ಲಾ ಮಾದ್ಯಮದವರ ಸೃಷ್ಠಿ ಅಂದರೂ ಬೇಜಾರಿಲ್ಲಾ. ಹಳೇ ಬೈಟ್ ಮತ್ತು ಹೊಸ ಬೈಟ್ ಸೇರಿಸಿ ಮಾಸಾಲ ಅರೆದರೆ ಒಳ್ಳೇ ಟಿಆರ್ ಪಿ ಬರುತ್ತೆ ಚಾನಲ್ಲಿಗೆ. ಬೈಟ್ ಜರ್ನಲಿಸಂ ಅಂದ್ರೆ ಸುಳಿವು ಸಿಕ್ಕಿತಲ್ಲಾ.

ಅದು ಬಿಡಿ ಸದ್ಯಕ್ಕೆ ಚಾಲ್ತಿಯಲ್ಲಿರೊ ಇನ್ನೊಂದು ಜರ್ನಲಿಸಂ ಇದೆ ಅದು ಇನ್ವಸ್ಟಿಗೇಟೀವ್ ಜರ್ನಲಿಸಂ. ಹಾಗಂದ್ರೆ ಹೊಸ ಅರ್ಥನೇ ಇದೆ.
ಈಗ ಇನ್ವೆಸ್ಚಿಗೇಟೀವ್ ಜರ್ನಲಿಸಂ ಅಂದರೆ ಏನಪ್ಪಾ ಅಂದರೆ ರಾಜಕಾರಣಿಗಳು, ಉದ್ಯಮಿಗಳು, ಮತ್ತಿತರ ಒತ್ತಡ ಗುಂಪುಗಳು ತಮಗೆ ಆಗದವರ, ತಮ್ಮ ವಿರೋಧಿಗಳ ಬಗ್ಗೆ ಖುದ್ದು ಮಾಹಿತಿ, ಸಿಡಿ, ದಾಖಲೆ, ಕಡೆಗೆ ಒಂದು ಬೈಟು ಎಲ್ಲಾ ಅವರೇ ಒದಗಿಸಿದರೆ. ಅದು ಇನ್ವೆಸ್ಟಿಗೇಶನ್ ರಿಪೋರ್ಟ್.

ಬಹುಶ ಅರುಣ್ ಶೌರಿ ಆರ್ಕೋಶ ಎಲಕ್ಟಾನಿಕ್ ಮಾದ್ಯಮ ತೀರಾ ದಾರಿತಪ್ಪಿದ ಸ್ಥಿತಿಗೆ ತಲುಪಿದ್ದಕ್ಕೆ ಸಿಕ್ಕ ಪ್ರತಿರಕ್ರಿಯೆ . ಮಿಡಿಯಾಗಳು ದಾರಿತಪ್ಪಿವೆ ಅನ್ನೊದು ಗೋಚರಿಸ್ತಾ ಇದೆ, ಆದರೂ ಕೆಲವು ಚಾನಲ್ ಗಳು ಕಾಲನ ಹೊಡೆತಕ್ಕೆ ಸಿಕ್ಕಿಯೂ ಬದುಕಿವೆ. ಮಾದ್ಯಮ ಬೀಡುಬೀಸಾಗಿ ಬೆಳೆಯುತ್ತಿದೆ ಯಾರ್ಯಾರ ಕೈಲೋ ಸಿಕ್ಕಿ ನಲುಗುತ್ತಿವೆ. ಅದಕ್ಕೆ ಸದ್ಯಕ್ಕೆ ಅಂತ್ಯ ಇದ್ದಂತೆ ಕಾಣುತ್ತಾ ಇಲ್ಲ. ಕನ್ಟ್ರಕ್ಚೀವ್ ಮಾದ್ಯಮ ಅನ್ನೊ ಕಲ್ಪನೆ ಇಲ್ಲಿಗೆ ಇಲ್ಲಿಗೆ ಇನ್ನೂ ಬಂದಂತೆ ಕಾಣೊಲ್ಲ.
ಬೇರೆ ಬೇರೆ ದೇಶಗಳ ಮಾದ್ಯಮಗಳು ಈಗಾಗಲೇ ಆ ಸ್ಥಿತಿ ತಲುಪಿ ಆಚೆ ಬಂದಿವೆ ಈಗ ಬಿಬಿಸಿಯನ್ನಾಗಲಿ, ಸಿಎನ್ಎನ್ ಆಗಲಿ, ಆಸ್ಟ್ರೇಲಿಯಾ ನ್ಯೂಸ್ ಆಗಲಿ ನೋಡಿದರೆ ಅಲ್ಲಿ ನಮ್ಮಂತೆ ಇಲ್ಲ, ಅಲ್ಲಿ ಟೀವಿ ಅ್ಯಂಕರ್ ಗಳು ನಮ್ಮವರ ಹಾಗೆ ಕಿರುಚುವುದಿಲ್ಲ, ಸಂದರ್ಶನಗಳಲ್ಲಿ ಗಲಾಟೆ ಇರಲ್ಲ.

ಕಾರ್ಯಕ್ರಮಕ್ಕೆ ರೋಚಕತೆ ಬೇಕಿಲ್ಲ, ಸೀರಿಯಸ್ ನೆಸ್ ಬೇಕು ಅಲ್ಲಿನ ರಾಜಕೀಯ ನಾಯಕರೂ ಯಾರೂ ನಮ್ಮವರಂತೆ ಬೈಟ್ ಕೊಡಲ್ಲ. ನಾವೆಲ್ಲ ಈಗ ಅದನ್ನೆಲ್ಲಾ ಯೋಚಿಸಬೇಕಿದೆ, ಜನಕ್ಕೆ ಟಿವಿ ನ್ಯೂಸ್ ನಲ್ಲಿ ಸೆಕ್ಸ್ ಪಿಲ್ಂ ಬೇಕು ಅಂತ ಅನ್ನಿಸಿದರೆ ಕೊಡೋಕೆ ಸಾದ್ಯನಾ. ಅದರಿಂದ ಟಿಆರ್ ಪಿ ಬರುತ್ತಲ್ಲಾ.

ಜನಕ್ಕೆ ಏನು ಬೇಕೋ ಅದನ್ನ ಕೊಡ್ತಿವಿ ಅನ್ನೊ ವಾಧದಲ್ಲಿ ಹುರುಳಿಲ್ಲ, ಜನ ಅದನ್ನೇ ನೊಡ್ತಾರಲ್ರೀ ಅದಕ್ಕೆ ಬೆಲೆ ಇರೋದು ಅಂದ್ರೆ ತಪ್ಪಾಗುತ್ತೆ, ಜನಕ್ಕೂ ಒಂದು ದಿನ ಎಲ್ಲಾ ಅರ್ಥ ಆಗುತ್ತೆ. ಕಾಯಬೇಕು ಅಷ್ಟೇ...




13 comments:

  1. ಇವತ್ತಿನ ಪತ್ರಿಕಾ ಮಾಧ್ಯಮದ ಬಗ್ಗೆ ಬಹಳ ಚೆನ್ನಾಗಿ,ಅದರ ವಸ್ತು ಸ್ತಿತ್ತಿಯನ್ನ ಎಲೆ ಎಳೆಯಾಗಿ ಬಿಡಿಸಿ ಹೇಳಿದ್ದಿಯ.ನ್ಯೂಸ್ ಚಾನ್ನೆಲ್ಗಳಿಗೆ ಉತ್ತಮ ವರದಿ ನೀಡೋದಕಿಂತ ಜಾಹಿರಾತು ದಾರರನ್ನ ಸೆಳೆಯೋ ಚಪಲ ಹತ್ತಿರೋದು ಯಾವ ಬದಲಾವಣೆಯೋ,ಬೆಳವಣಿಗೆಯೂ ತಿಳಿಯೋದು ಕಷ್ಟಕರವಾಗಿದೆ.

    ReplyDelete
  2. ಗೌಡ್ರೆ,
    ಇದನ್ನು ಕಡೆ ಪಕ್ಷದ ಕನ್ನಡದ ಎಲ್ಲ ವಿಸ್ಯುಯಲ್ ಮೀಡಿಯಾ ಮಿತ್ರರು ಓದಬೇಕು. ರೋಚಕತೆಯನ್ನೇ ಸರಕು ಮಾಡಿಕೊಂಡು ಜರ್ನಲಿಸಂ ಬಗ್ಗೆ ಗೌರವವೇ ಇಲ್ಲದ ಹಾಗೇ ಮಾಡೋ ಚಾನೆಲ್ ಗಳವರು ಇದನ್ನು ಓದಬೇಕು.
    -ಮಾಧ್ಯಮಮಿತ್ರ

    ReplyDelete
  3. ತುಂಬ ಇದೆ ಬಿಡಪ್ಪ ಇದರಲ್ಲಿ... [:)]..

    ReplyDelete
  4. I personally suggest you to at least mail this article to those of you friends who work in electronice media as they perticularly should know all thse things to give best to the viewers...

    ReplyDelete
  5. ನಮಸ್ಕಾರ ಗೌಡರೇ,
    ಪ್ರಜಾವಾಣಿಯಲ್ಲಿ ಕುಲದೀಪ್‌‌ ನಯ್ಯರ್‌ ಅವರ ‘ಅಧಃ ಪತನದ ಹಾದಿಯಲ್ಲಿ ಪತ್ರಿಕೋದ್ಯಮ?’ ಎಂಬ ಲೇಖನ ಓದಿ, ಬೇಜಾರು ಮಾಡಿಕೊಂಡು ಬ್ಲಾಗ್‌ಲೋಕ ಹೊಕ್ಕರೆ, ನಿಮ್ಮ ಈ ಲೇಖನ ಕಂಡು ಬಂತು. ನಯ್ಯರ್‌ ಲೇಖನಕ್ಕೆ ಪೂರಕವಾಗಿ ನೀವು ಬರೆದಂತಿದೆ. ಒಟ್ಟಾರೆ ಪತ್ರಕರ್ತರು ಆತ್ಮವಿಮರ್ಶೆ ಮಾಡಿಕೊಳ್ಳಲು ಇದು ಸಕಾಲ.
    - ರಾಮಸ್ವಾಮಿ ಹುಲಕೋಡು

    ReplyDelete
  6. gowdre, lekhana chennagide... evatthina journalism bagge teera gambhiravagiye yochne madtha eddira ansutte... olledu... delhi (national or north inda) patrakartharella e reethine yochisidre chennagirutthe...

    ReplyDelete
  7. ಶ್ರೀಧರ್July 29, 2009 at 7:56 AM

    ವೆರಿಗುಡ್ ರಿಪೋರ್ಟ್!

    ReplyDelete
  8. ಮೋಹನ್ ಕುಮಾರ್July 31, 2009 at 9:06 AM

    ಗೌಡಾ, ನಿನ್ನಂತ ಹಿಪೋಕ್ರಿಟ್ ಇಲ್ಲ ಬಿಡೋ! ನೀನು ಹಾಸನದಲ್ಲಿ ಏನೇನು ಮಾಡಿ ಹೋಗಿದ್ದೀ ಅಂತ ಬರೆಯೋಕೆ ಒಂದು ಲೋಕಲ್ ಪೇಪರ್ ಆರಂಭಿಸಬಹುದು. ಇಲ್ಲಿದ್ದಾಗ ರೇವಣ್ಣನ ಪ್ರಸಾದ ತಿಂದು, ತೀರ್ಥ ಕುಡಿದು, ಅವರಿಗೆ ಬಕೆಟ್ ಹಿಡಿಯೋ ಸುದ್ದಿ, ಕುಮಾರಣ್ಣನ ಸುದ್ದಿ ಕೊಡೋ ಬಿಟ್ರೆ ಬೇರೆ ಯಾವ ಘನಂದಾರಿ ಜರ್ನಲಿಸಂ ಮಾಡಿದ್ದೀ? ಅದೇನು ಬೈಟ್ ಜರ್ನಲಿಸಂ ಅಲ್ವಾ? ಈ ಬೈಟ್ ಜರ್ನಲಿಸಂ ಮಾಡಿಯೇ ನೀನು ಏನೇನು ಮಡಿಕೊಂಡಿದ್ದಿ? ಇದರಿಂದಲೇ ನಿನ್ನ ಬ್ರದರ್ ಫೈನಾನ್ಸ್ ಮೂಲಕ ಏನೇನು ಮಾಡಿದ್ದೀರಿ ಎಂದು ಎಕ್ಸ್ ಪೋಸ್ ಆಗೋ ದಿನಗಳು ದೂರವಿಲ್ಲ. ನಿನ್ನ ಬೈಟ್ ಜರ್ನಲಿಸಂಗೆ ಧಿಕ್ಕಾರವಿರಲಿ. ನೆಟ್ಟಗೆ ಪತ್ರಿಕೋದ್ಯಮ ಅಂದ್ರೆ ಏನು ಅಂತ ಮೊದ್ಲು ತಿಳ್ಕೋ. ನಂತ್ರ ಅದ್ರ ಬಗ್ಗೆ ಕಾಮೆಂಟ್ ಮಾಡು. ಪತ್ರಿಕೋದ್ಯಮಕ್ಕೆ ನಿನ್ನಂಥವರೆಲ್ಲಾ ಬಂದು ಏನು ದುರ್ಗತಿ ಬಂತಪ್ಪಾ.

    ReplyDelete
  9. ನನ್ನ ಬಗ್ಗೆ ಈ ಮೊಹನ್ ಕುಮಾರ್ ಎಂಬ ಅಡ್ಡನಾಮದ ಅನಾನಿಮಸ್ ಗೆಳೆಯ ಅದೇನೇನೋ ರೋಚಕ ಮಾಹಿತಿಗಳನ್ನು ಸಂಗ್ರಹಿಸಿದ ಹಾಗೆ ಕಾಣ್ತಾ ಇದೆ. ನನ್ನ ಬಗ್ಗೆ ನನಗೂ ತಿಳಿಯದ ಹಲವು ಮಾಹಿತಿಗಳು ಅವರಿಗೆ ಗೊತ್ತಿರುವ ಹಾಗೆ ಕಾಣುತ್ತೇ, ಮೊಹನ್ ಕುಮಾರ್ ಗೆ ಮಾತ್ರ ತಿಳಿದಿರುವ ಮಾಹಿತಿ. ಖಾಸಗಿ ಡೈರಿ ಓದುವವಗೆಲ್ಲರಿಗೂ ತಿಳಿದಿರಲಿ ಅಂತ ಮೇಲಿನ ಕಾಂಮೆಂಟ್ ಹಾಕಿದ್ದೇನೆ, ನನ್ನ ಬಗ್ಗೆ ತಿಳಿದುಕೊಳ್ಳಿ ಮತ್ತು ಹುಶಾರಾಗಿರಿ....!!!
    ಕಡೇದಾಗಿ ಒಂದು ಮಾತು ಮೋಹನ್ ಕುಮಾರ್ ಅವರಿಂದಾಗಿ ನಂಗೆ ಒಂದು ಹೊಸ ಐಡಿಯಾ ಹೊಳೆದಿದೆ, ಅದನ್ನ ಮುಂದೆ ಒಂದು ದಿನ ಬ್ಲಾಗ್ ನಲ್ಲಿ ಬರೀತೀನಿ.
    ಆ ಮೋಹನ್ ಕುಮಾರ್ ನಿಮ್ಮ ಪ್ರತಿಕ್ರಿಯೆ ಮುಂದುವರೆಯಲಿ.

    ReplyDelete
  10. ನಾನ್ಯಾರು ಅಂತ ಗೊತ್ತಾಗಿರ್ಬೇಕಲ್ಲ..August 4, 2009 at 4:18 AM

    ಏನ್ರೀ ಗೌಡ್ರೆ.. ಖಾಸಗಿ ಡೈರಿ ಅಂತ ರಾಷ್ಟ್ರೀಯ ಚಾನೆಲ್ ಗಳ ಬಗ್ಗೆ ಬರ್ದಿದಿರಿ? ಅಲ್ಲ ರೀ ಬೈಟ್ ಬಗ್ಗೆ ಅಷ್ಟೋಂದು ಬರೆದಿದಿರಲ್ಲ.. ನೀವ್ ದೆಹಲಿ ಕನ್ನಡ ಶಾಲೆಯಲ್ಲಿ ಮುಂಖ್ಯಮಂತ್ರಿಚಂದ್ರು ಬಂದಾಗ ಸಾರ್ ಒಂದೇ ಒಂದು ಬೈಟ್ ಅಂತ ಸೈಡಿಗೆ ಕರ್ಕೊಂಡು ಹೋದ್ರಿ ನೆನಪಿದೆಯ?

    ReplyDelete
  11. ನೀವ್ಯಾರು ಅಂತ ಸತ್ಯವಾಗಲೂ ಗೊತ್ತಿಲ್ಲ ಕಣ್ರೀ. ಯಾಕಂದ್ರೆ ನಿಮಗೆ ಗೊತ್ತಾಗೋದು ಬೇಡ ಅಲ್ವಾ. ಇರಲಿ ನೀವು ಮುಖ್ಯಮಂತ್ರಿ ಚಂದ್ರು ಬೈಟ್ ತೆಗೆದದ್ದು ನೆನಪಿದೆಯಾ ಕೇಳಿದಿರಿ. ನಾನು ಪ್ರಸ್ತಾಪಿಸಿರೋ ಬೈಟ್ ಜರ್ನಲಿಸಂ ಗೂ ಇದಕ್ಕೂ ಸಂಭಂದ ಬೇರೆ.
    ನೀವು ಇದನ್ನ ಬೇರೆ ಅರ್ಥದಲ್ಲಿ ಗ್ರಹಿಸಬೇಕಿತ್ತು, ನಿಮ್ಮ ಗ್ರಹಿಕೆ ತಪ್ಪು. ಯಾಕಂದರೆ ನೀವು ಹೇಳೋ ಅರ್ಥ ಟಿವಿ ಮಾದ್ಯಮದಲ್ಲಿ ಬೈಟ್ ಇಲ್ಲದೇ ಏನು ಮಾಡೋಕು ಆಗಲ್ಲ, ಬೈಟ್ ತೆಗೆದುಕೊಳ್ಳಲೇಬಾರದು ಅಂತ ಹೇಳಿದರೇ ತಪ್ಪಾಗುತ್ತೆ.
    ಇನ್ನೊಂದು ವಿಶಯ ರಿಯಾಕ್ಷನ್ ಜರ್ನಲಿಸಂ ಗೆ ನಾನೇನು ಹೊರತು ಅಂತ ತಿಳಿಬೇಡಿ ನಾನು ಸಾಕಷ್ಠು ಬಾರಿ ಅದನ್ನೇ ಮಾಡಿರುತ್ತೇನೆ. ನನ್ನ ನಾನು ಶ್ರೇಷ್ಠ ಮಾಡಿಕೊಳ್ಳೊ ಯತ್ನ ನನ್ನದಲ್ಲ. ಎಲಕ್ಟಾನಿಕ್ ಮಾದ್ಯಮದಲ್ಲಿ ನಡೆಯುತ್ತಿರುವ ವಿದ್ಯಮಾನದ ಕುರಿತು ನನ್ನ ತಿಳುವಳಿಕೆ ಚರ್ಚೆಗೆ ಬರಲಿ ಅನ್ನೊದು ನನ್ನ ಕಳಕಿಳಿ.
    ಈ ಅರ್ಥ ಆಯ್ತಲ್ಲಾ ಸಂಡೇ ಇಂಡಿಯನ್,.....

    ReplyDelete
  12. Gowdre, tumba chennagi baredideera. Eegina maadhyama (adaralloo video) tumba kulagettu hogide. Neevu saakastu vichara illi tilisiddeera. Dhanyavada. Idannu namma madhyama mitraru odi swalpavadaroo sudhaarane aadre janagalu dhanya aste! - girikula, bengaluru

    ReplyDelete