Sunday, April 11, 2010

ಸುಡಲಿ ಬಿಡು


ನೀನು ಹಚ್ಚಿದ ಕಿಚ್ಚು
ಎದೆಯ ಒಡಲೊಳಗೆ ಸುಡುತಿರುವ
ನೋವು.

ನೀನು ಹುಟ್ಟಿಸಿದ ಮೋಹಕ್ಕೆ ಸಿಕ್ಕ
ಒಡಲಿಗೆ ನಿಟ್ಟುಸಿರ
ಭಾಗ್ಯ.

ನೀನು ಕೊಟ್ಟ ಮುತ್ತು
ಎದೆಯ ಕಾವಲಿ ಒಳಗೆ
ಹೂತಿಟ್ಟ ರಕ್ತದ
ಬೀಜ.

ನಿನ್ನ ನೆನಪುಗಳೆಲ್ಲ
ಬರದ ಭಾಗ್ಯವ ನೆನೆದು
ಮರುಗುವ
ಮುಳ್ಳು.

ನಿನ್ನ ಮಾಯದ ಮೋಡಿಗೆ
ಸಿಕ್ಕ ಜೀವಕ್ಕೆ, ನದಿಯ ಸುಳಿಗೆ
ಸಿಕ್ಕು ನಾಶವಾದ
ಭಾವ.

ನಿನ್ನ ನೆನಪುಗಳೆಲ್ಲ
ಎದೆಯೊಳಗೆ
ಕೆಂಪು ಕೆಂಪಾಗಿ
ರಕ್ತ ಸ್ತ್ರಾವ.

ನೀನೆ ಕಳಿಸಿದ್ದ ಪ್ರೀತಿಯ ಹಾಡಿಗೆ
ಯಾಕೆ ಬರಲಿಲ್ಲ
ಹೂ ಬಿಡುವ
ಕಾಲ.

ನಾವು ನಿಲ್ಲುತ್ತಿದ್ದ
ಕಾನನದ ಮರ ಕೂಡ
ಸತ್ತು ಹೋದ ಸುದ್ದಿ
ನಿನ್ನವರೆಗೂ
ಬಂತಾ.

ಇರಲಿ ಇರಲಿ ಬಿಡು
ಸುಡಲಿ ಸುಡಲಿ ಬಿಡು
ನನ್ನ ಬದುಕ ದಾರಿಯ ಗುಂಟಾ
ಕೆಂಡ.




6 comments:

  1. Its nice to see Gowda As a poet once again after a long time after "Harabekide". The presentation of ur inner pain is fine...You enveloped ur pain in a good way..keep writing poems. govinda

    ReplyDelete
  2. ಪ್ರತಿ ವಿರಹಿಯ ವೇದನೆಯ ಸಾರ ನಿನ್ನ ಕವನದ ಸಾಲುಗಳಲಿ ಜೀವಂತ ಮಗ...

    ReplyDelete
  3. ಏನ್ರೀ ಗೌಡ್ರೆ ನಿಮ್ಮ ನೋವು ತೋಡಿಕೊಂಡಿರೋ ಹಾಗಿದೆ.. ಒಳ್ಳೆ ಸಾಲುಗಳು ವಿಭಿನ್ನವಾಗಿದೆ..

    ReplyDelete
  4. ಬೆಟ್ಟದ ತಡಿಯ ಜ್ಡಾಲಾಮುಖಿ ತಹತಹಿಸಿ
    ಲಾವಾರಸ ಉಕ್ಕಿದಂತೆ/ನಿಮ್ಮೊಳಗಿನ ಭಾವದ
    ಒಡಲುರಿ ಚಿಮ್ಮಿ ಹರಿಯಲು ಇಷ್ಟು ದೀರ್ಘಾವಧಿ
    ಬೇಕಾಯಿತೇ?/ಹರ ಹರ ಶ್ರೀ ಚನ್ನಸೋಮೇಶ್ವರಾ/

    ReplyDelete
  5. Dear Gowda, It is surprising to know that the HOTTEST summer of Bangalore has IGNITED in you the poem than the COLDEST nights of Delhi. I thought the seasons play a lot in penning a poem. And certainly the feelings of dejection, separation and its painful reminiscence of the happier moments can come only after yet another great SHOT!!!!! a good one.

    ReplyDelete
  6. ಸರ್
    ಕವನದ ತುಂಬಾ ನೋವುಗಳ ನಿವೇದನೆ
    ತುಂಬಾ ಚೆನ್ನಾಗಿ ಹೇಳಿದ್ದಿರಿ
    ಒಳ್ಳೆಯ ಬ್ಲಾಗ್

    ReplyDelete