ಸದಾನಂದಗೌಡರು ಅವರ ಹೆಸರಿನಲ್ಲಿರುವಂತೆಯೆ ಸದಾ ನಗುತ್ತಲೇ ಇದ್ದರು, ಬಿಜೆಪಿ ಪಕ್ಷ ಇನ್ನಿಲ್ಲದ ಸಂಕಷ್ಠದಲ್ಲಿ ಸಿಕ್ಕಿಕೊಂಡು ಒದ್ದಾಡುತ್ತಿತ್ತು. ದೆಹಲಿಯ ಮೀಡಿಯಾದವರಿಗೆ ಸದಾನಂದಗೌಡ ಯಾರೆಂದು ತಿಳಿಯದ ಕಾರಣ ವಿ.ಎಸ್. ಆಚಾರ್ಯ ಬೈಟ್ ತೆಗೆದುಕೊಳ್ಳುವ ಬರದಲ್ಲಿ ಅವರನ್ನು ಬದಿಗೆ ತಳ್ಳಿಬಿಟ್ಟರು. ತಕ್ಷಣ ಸಿಟ್ಟಿಗೆದ್ದ ಅವರು ವಾಟ್ ಈಸ್ ದಿಸ್, ಇಟ್ ಈಸ್ ವಿರಿ ಬ್ಯಾಡ್. ಐ ಯಾಮ್ ಬಿಜೆಪಿ ಪ್ರೆಸಿಡೆಂಟ್ ಸದಾನಂದ ಗೌಡ. ಯು ಆರ್ ಪೂರ್ಸಿಂಗ್ ಮಿ ಟು ಬಿಕಂಮ್ 'ಸ್ಯಾಡ್ ಆನಂದ್....! ಅಂದರು.
ನಂಬಿದವರಿಗೆ ಕೈಕೊಟ್ಟೆ, ನನ್ನ ಸ್ವಾರ್ಥಕ್ಕೆ ಅವರಿಗೆ ಅನ್ಯಾಯ ಮಾಡಿದೆ ಅಂತ ಮುಖ್ಯ ಮಂತ್ರಿಗಳು ಅವಕಾಶ ಸಿಕ್ಕಾಗಲೆಲ್ಲ ಬಿಕ್ಕುತ್ತಿದ್ದರು. ಕೆನ್ನೆಗಳು ಕೆಂಪಾಗಿದ್ದವು ಕೋಪ, ಅಸಹನೆ, ಸಿಟ್ಟಿನಿಂದ ಎದುರಿಗೆ ಸಿಕ್ಕ ಆಪ್ತ ಸಹಾಯಕರ ಮೇಲೆಲ್ಲ ಯಡಿಯೂರಪ್ಪ ರೇಗುತ್ತಿದ್ದರು, ಮೊಬೈಲ್ ಪೋನ್ ಅನ್ನು ಬಿಸಾಕುತ್ತಿದ್ದರು. ಅದೇ ಮರು ಕ್ಷಣ ನನ್ನ ಕಾರ್ಯ ಶೈಲಿ ಬದಲಿಸಿಕೊಳ್ಳುತ್ತೇನೆ ಎಲ್ಲರನ್ನು ಒಟ್ಟಿಗೆ ಕರೆದುಕೊಂಡು ಹೊಗುತ್ತೇನೆ ಎಂದು ಮೀಡಿಯಾ ಮೂಲಕ ರಾಜ್ಯದ ಜನತೆಗೆ ತಿಳಿಸಿದರು.
ಇನ್ನೇನು ಪ್ರಕರಣ ಮುಗಿದು ಬೆಂಗಳೂರು ಕಡೆಗೆ ಪ್ರಯಾಣ ಬೆಳೆಸುವ ಹೊತ್ತಿಗೆ ಗೃಹ ಸಚಿವ ವಿ.ಎಸ್. ಆಚಾರ್ಯ ಕರ್ಚೀಪು ತೆಗೆದುಕೊಂಡು ಕಣ್ಣಿನಲ್ಲಿ ಮೂಡಿಬಂದ ಹನಿಗಳನ್ನು ಒರೆಸಿ ಕೊಂಡದ್ದು ಕಾಣಿಸಿತು.
ಯಾರ ಮಾತಿಗೂ ಜಗ್ಗದ, ಬಗ್ಗದ ರೆಡ್ಡಿಗಳನ್ನು ಸುಷ್ಮಾ ಸ್ವರಾಜ್ 'ನನ್ನನ್ನು ನೀವು ತಾಯಿ, ತಾಯಿ ಅಂತೀರಿ. ತಾಯಿಯ ಮಾನ ಉಳಿಸೊಲ್ಲವಾ' ಅಂತ ಗಳ ಗಳ ಅತ್ತರು,'ನನ್ನ ಮಾನ ಉಳಿಸಿ' ಅಂತ ರೆಡ್ಡಿ ಕೈಹಿಡಿದರು, ತಾಯಿಯ ಕಣ್ಣೀರಿಗೆ ಬೆಲೆಕೊಟ್ಟ ರೆಡ್ಡಿ 'ಆಯ್ತು' ಅಂದರು.
ಮುಖ ನೋಡಲ್ಲ ಅಂತಾ ಅವಮಾನಿಸಿದ್ದ ರೆಡ್ಡಿಗಳನ್ನು ಯಡ್ಡಿ, 'ಸಹೋದರರು' ಅಂದರು, ಮುಖದಲ್ಲಿ ನಗುvಸಿಕ್ಕಿಸಿಕೊಂಡು ಪಕ್ಕದಲ್ಲಿ ನಿಂತಿದ್ದ ರೆಡ್ಡಿ ಮತ್ತು ರಾಮುಲು ಕೈಗಳನ್ನು ಪ್ರಯತ್ನ ಪೂರ್ವಕವಾಗಿ ಮೇಲೆತ್ತಿ 'ನಾವೆಲ್ಲಾ ಒಂದು' ಅಂದರು.
ಆ ಕಡೆ ನಿಂತಿದ್ದ ಅನಂತ ಕುಮಾರ್ ತಮ್ಮ ಅಪೂರ್ವ ದಂತ ಪಂಕ್ತಿಯನ್ನು ವಿಶೇಷ ರೀತಿಯಲ್ಲಿ ಪ್ರದರ್ಶಿಸಿದರು.
ಬಿಜಿಪಿಯ ಕ್ರೈಸಿಸ್ ಮ್ಯಾನೇಜರ್ ಅಗಿದ್ದ ಅರುಣ್ ಜೇಟ್ಲಿ ಸದರಿ ಪ್ರಕರಣ ಯಾಕೋ ತನಗೆ ಕೈಗೆಟಕದೇ ಹೋದನ್ನು ಗಮನಿಸಿ ಕಡೆ ಕಡೆಗೆ ಕಾಣಿಸಿಕೊಳ್ಳದೇ ಮಾಯವಾಗಿದ್ದರು.
ಪ್ರಕರಣಕ್ಕೆ ಸಿಕ್ಕ ಮದ್ಯಂತರ ಪರಿಹಾರವನ್ನೇ ಬರ್ಥ್ ಡೇ ಬಾಯ್ ಆಡ್ವಾಣಿಗೆ ಕರ್ನಾಟಕ ಕೊಟ್ಟ ವಿಶೇಷ ಉಡುಗೊರೆ ಅಂತ ಕರೆಯಲಾಯಿತು. ಅದರ ನೆನಪಿಗೆ ಕತ್ತರಿಸಿದ ಕೇಕ್ ಅನ್ನು ಎಲ್ಲರಿಗೂ ತಿನ್ನಸಲಾಯಿತು. ಅದು ಜೀರ್ಣವಾಯಿತಾ... ಅಜೀರ್ಣವಾಗಿದೆಯಾ ಕಾದು ನೋಡಬೇಕು.
ಇನ್ನೊಂದು ಕಡೆ ಜಿನ್ನಾ ಬಗ್ಗೆ ಪುಸ್ತಕ ಬರೆದ ಒಂದೆ ಅಫರಾದಕ್ಕೆ ಪಕ್ಷದಿಂದ ಉಚ್ಚಾಟನೆ ಗೊಂಡ ಜಸ್ವಂತ್ ಸಿಂಗ್ ಸಿಕ್ಕ ಶಿಕ್ಷೆ ಮತ್ತು ಗಣಿ ರೆಡ್ಡಿಗಳು ಪಕ್ಷವನ್ನೇ ಹೈಜಾಕ್ ಮಾಡಿ ಹೈಕಮಾಂಡ್ ಬಂಡವಾಳ ಬಯಲಾಗಿಸಿ ನಂಗಾ ಮಾಡಿದ ಪ್ರಕರಣದಲ್ಲಿ ಸಿಕ್ಕ ಉಡುಗೊರೆ ಬಗ್ಗೆ ಯೋಚಿಸುತ್ತಾ ಏನೂ ಅರ್ಥವಾಗದೇ ನಾನು ದಂಗಾಗಿದ್ದೇನೆ.
ಜೈ ಬಿಜೆಪಿ.
ಗೌಡ್ರೆ ನಿಮ್ಮದು ಶವದ ಪೆಟ್ಟಿಗೆಗೆ ಎಷ್ಟನೆಯ ಮೊಳೆ?
ReplyDeleteಇಂತಹದ್ದೊಂದು ವಾಸ್ತವ ಮಾಹಿತಿಯನ್ನು ಮಾಧ್ಯಮಗಳಲ್ಲಿ ನಿರೀಕ್ಷಿಸಿದ್ದೆವು ಆದರೆ ಎಲ್ಲೂ ಸಿಗದಿದ್ದದು ಖಾಸಗಿ ಡೈರಿಯಲ್ಲಿ ಸಿಕ್ಕಿತು, ತೆರೆಮರೆಯ ವಿಚಾರಗಳನ್ನು ತುಂಬಾ ಚೆನ್ನಾಗಿ ಬಿಡಿಸಿಟ್ಟಿದ್ದೀರಿ ಸಾರ್. ಈ ರೆಡ್ಡಿ-ಯಡ್ಡಿ ಸರ್ಕಾರ ಹೆಚ್ಚು ದಿನ ಬಾಳಿಕೆ ಬರದು, ಇಲ್ಲಿ ರಾಜ್ಯದ ಜನ ಕರೆಂಟು ,ಪಡಿತರ ಚೀಟಿಯ ಪಡಿಪಾಟಲು,ನೆರೆ ಸಂಕಷ್ಟ,ಅಭಿವೃದ್ದಿ ಕಾರ್ಯಗಳ ಸ್ಥಗಿತದಿಂದ ಸಂಕಟ ಅನುಭವಿಸುತ್ತಿದ್ದರೆ ಈ ರಾಸ್ಕಲ್ ಗಳು ಹೈದರಾಬಾದ್ ಮತ್ತು ಗೋವಾದ ರೆಸಾರ್ಟ್ ನಲ್ಲಿ ಮಜಾ ಉಡಾಯಿಸುತ್ತಿದ್ದರು.. ಇಂತಹದ್ದೊಂದು ದುರ್ಗತಿ ನಮ್ಮ ನಾಡಿನ ಜನಕ್ಕೆ ಬರಬಾರದಿತ್ತು.
ReplyDeleteಹಳ್ಳಿಕನ್ನಡದವರೇ.
ReplyDeleteಶವಪೆಟ್ಟಿಗೆಗೆ ಮೊಳೆಗಳು ಬಿದ್ದು ಬಿದ್ದು, ಅದು ಮೊಳೆ ಪೆಟ್ಟಿಗೆಯಾಗಿ ಹೋಗಿದೆ.
ಸ್ವಲ್ಪ ದಿನ ಹೋದರೆ ಶವ ಯಾವುದು, ಮೊಳೆ ಯಾವುದು, ಪೆಟ್ಟಿಗೆ ಯಾವುದು ಎಂಬುದು ಗೊತ್ತಾಗದಷ್ಟು ಎಲ್ಲವೂ ಕೊಳೆತು, ಗಬ್ಬುನಾತ ಬೀರಿ.....
ತುಂಬ ದಿನದಿಂದ ಮಲಗಿದ್ದ ಖಾಸಗಿ ಡೈರಿ ಎಚ್ಚರವಾಗಿದೆ... ಮಗ ಬಿಜೆಪಿಯಾ ಒಳಮರ್ಮ ಚೆನ್ನಾಗಿ ಹೆಳಿದ್ದಿಯ... ಆದರೆ ಇಷ್ಟು ಸಾಲದು ಅನ್ನಿಸುತ್ತಿದೆ.. ಇನ್ನು ಬರೆಯಬಹುದು.. ನೀನು ನೋಡಿದ್ದನ್ನು ಅನುಬವಿಸದ್ದನ್ನು ಬರೆದು ಹಾಕು...
ReplyDeleteಫೋನ್ ಗೆ ಸಿಕ್ಕ್ಕಿ ಬಹಳ ದಿನಗಲ್ಲದವು..ಮಾತು ಬೇಕೆನಿಸುವ ವೇಳೆಗಾಗಲೇ ನೀನು ಕ್ಖಾಸಾಗಿ ಯಾಗೆ ನಿನ್ನ ಡೈರಿ ಯಲ್ಲಿ ಮಾತು ಶುರು ಮಾಡಿಕೊಂಡೆ...ನಿನ್ನ ಬರೆಹ ಶಿಸ್ತಿನ ಪಕ್ಷ ಎಂದೇ ಕರೆದುಕೊಂಡ ಬಿಜೆಪ ಯಾ ಕೆರೆದಾತವನ್ನು ಕಾನಡಿ ಹಿಡಿಧು ತೋರಿಸುತ್ತಿದೆ
ReplyDelete